AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಹಾಸನ ಕ್ಷೇತ್ರದ ಟಿಕೆಟ್​ ತಪ್ಪುವ ಭೀತಿ: ಆತಂಕದ ಜೊತೆ ಅಚ್ಚರಿ ಹೇಳಿಕೆ ಕೊಟ್ಟ ಪ್ರೀತಂಗೌಡ

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್ ಕೈತಪ್ಪು ಭೀತಿಯಲ್ಲಿದ್ದಾರೆ. ಈ ಬಗ್ಗೆ ಅವರೇ ಬಹಿರಂಗವಾಗಿ ಟಿಕೆಟ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಹಾಸನ ಕ್ಷೇತ್ರದ ಟಿಕೆಟ್​ ತಪ್ಪುವ ಭೀತಿ: ಆತಂಕದ ಜೊತೆ ಅಚ್ಚರಿ ಹೇಳಿಕೆ ಕೊಟ್ಟ ಪ್ರೀತಂಗೌಡ
ಪ್ರೀತಂಗೌಡ,
TV9 Web
| Edited By: |

Updated on:Jan 17, 2023 | 3:36 PM

Share

ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Election 2023) ಇನ್ನೇನು ಕೆಲವೇ ತಿಂಗಳು ಬಾಕಿ ಇದ್ದು, ಆಗಲೇ ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟು ಮುಂದಿನ ಚುನಾವಣೆಗೆ ಭರ್ಜರಿ ಸಿದ್ಧತೆ ಕೈಗೊಂಡಿದ್ದಾರೆ. ಇದರ ಮಧ್ಯೆ ಹಾಸನ(Hassan) ಜಿಲ್ಲೆಯಲ್ಲಿ  ಕೇಸರಿ ಬಾವುಟ ಹಾರಿಸಿರುವ ಏಕೈಕ ಶಾಸಕ ಪ್ರೀತಂಗೌಡ(preetam gowda) ಅವರಿಗೆ 2023ರ ಚುನಾವಣೆಯ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದೆ. ಈ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯಿಸಿ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಹಾಸನದಲ್ಲಿ ಇಂದು(ಜನವರಿ 17) ಮಾತನಾಡಿರುವ ಪ್ರೀತಂಗೌಡ, ಆಪ್​, ಕಾಂಗ್ರೆಸ್, ಜನತಾದಳದವರೆಲ್ಲರೂ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಮ್ಮ ಪಕ್ಷದಿಂದ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟ ಮಾಡಿಲ್ಲ. ಆದರೆ ಬಿಜೆಪಿಯಿಂದ ಇನ್ಯಾರಿಗೋ ಟಿಕೆಟ್ ಕೊಡುತ್ತಾರೆ. ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎನ್ನುವುದನ್ನು ಕಾದುನೋಡಬೇಕಿದೆ ಎಂದು ಆತಂಕದ ಜೊತೆ ಅಚ್ಚರಿ ಹೇಳಿಕೆ ನೀಡಿದ್ದು ಬಾರೀ ಸಂಚಲನ ಮೂಡಿಸಿದೆ.

ಇದನ್ನೂ ಓದಿ: Karnataka Politics: ಯಡಿಯೂರಪ್ಪ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕ ಮಾತುಕತೆ; ಕರ್ನಾಟಕದ ಬಿಜೆಪಿ ಪ್ಲಾನ್ ಬಗ್ಗೆ ಗರಿಗೆದರಿದ ನಿರೀಕ್ಷೆ

ಹಾಸನ ಕ್ಷೇತ್ರದ್ದು 196 ಕೋಡ್ ನಂಬರ್. 196ಕ್ಕೆ ಯಾವ ಪಕ್ಷದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ಆ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ಪಕ್ಷದಿಂದ ಇನ್ನೂ ಅಭ್ಯರ್ಥಿ ಹೆಸರು ಪ್ರಕಟ ಮಾಡಿಲ್ಲ. ಈಗ ನಾನು ಹಾಲಿ ಶಾಸಕನಿದ್ದೇನೆ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತೆ ಆ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಆಮ್ ಆದ್ಮಿ, ಕಾಂಗ್ರೆಸ್, ಜನತಾದಳವರು, ಅದಲ್ಲದೇ ಎಸ್‌ಡಿಪಿಐ, ಬಿಎಸ್‌ಪಿ ಅವರು ಇದ್ದಾರೆ. ಎಲ್ಲರೂ ಓಡಾಟ ಮಾಡ್ತಿದ್ದಾರೆ. ಬಿಜೆಪಿಯಿಂದ ಇನ್ಯಾರಿಗೆ ಟಿಕೆಟ್ ಕೊಡುತ್ತಾರೆ ಎನ್ನುವುದನ್ನು ನಮ್ಮ‌ ಚುನಾವಣೆ ನಿರ್ವಹಣಾ ಸಮಿತಿ ದೆಹಲಿಯಲ್ಲಿ ತೀರ್ಮಾನ ಮಾಡುತ್ತೆ ಎಂದು ಅಚ್ಚರಿ ಹೇಳಿಕೆ ನೀಡಿದರು. ಈ ಮೂಲಕ ಹಾಸನ ಕ್ಷೇತ್ರದ ಟಿಕೇಟ್ ಯಾರಿಗೆ ಸಿಗುತ್ತೋ ಏನೋ ಎಂಬ ಅನುಮಾನ ವ್ಯಕ್ತಪಡಿಸಿದರು.

ಅಚ್ಚರಿಗೆ ಕಾರಣವಾಯ್ತು ಪ್ರೀತಂಗೌಡ ಹೇಳಿಕೆ

2018ರಲ್ಲಿ ಹಾಸನದಲ್ಲಿ ಗೆದ್ದು ಜೆಡಿಎಸ್ ಭದ್ರಕೋಟೆಯನ್ನೇ ಭೇದಿಸಿದ ಶಾಸಕ ಪ್ರೀತಂಗೌಡ, ಪ್ರತಿ ಹಂತದಲ್ಲೂ ಜೆಡಿಎಸ್​ಗೆ ತಿರುಗೇಟು ನೀಡುತ್ತಲ್ಲೇ ಹಾಸನ ಕ್ಷೇತ್ರದಲ್ಲಿ ರಾಜಕೀಯ ನೆಲೆ ಭದ್ರಪಡಿಸಿಕೊಳ್ಳುತ್ತಾ ಬಂದಿದ್ದಾರೆ. ಆದ್ರೆ, ಪ್ರೀತಂಗೌಡ ಅವರು ಮುಂದಿನ ಚುನಾವಣೆ ಟಿಕೆಟ್​ ಕೈತಪ್ಪು ಆತಂಕ ವ್ಯಕ್ತಪಡಿಸಿದ್ದು ಮಾತ್ರ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: ದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಮಹತ್ವದ ಚರ್ಚೆ

ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಜಿಲ್ಲೆಯಲ್ಲಿ ಕಮಲದ ಬಾವುಟ ಹಾರಿಸಿ ಹಾಸನ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಪ್ರೀತಂ ಜೆ. ಗೌಡ ಒಬ್ಬರೆ. ಪ್ರೀತಂಗೌಡ ರಾಜಕೀಯ ಚಾಣಕ್ಷ್ಯ ನಡೆಯಿಂದ ಹಾಸನ ಹಾಸನದ ನಗರಸಭೆ ಐತಿಹಾಸಿಕ ಎಂಬಂತೆ ಬಿಜೆಪಿ ಪಾಲಾಗಿದೆ. ಹೀಗೆ ಹಾಸನದಲ್ಲಿ ದಳಪತಿಗಳಿಗೆ ಟಕ್ಕರ್ ನೀಡುತ್ತಲೇ ಹಂತ-ಹಂತವಗಿ ಜೆಡಿಎಸ್ ಭದ್ರಕೋಟೆಯನ್ನು ಕೆಡವುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದ್ರೂ ಪ್ರೀತಂಗೌಡ ಅವರಿಗೆ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದ್ಯಾ? ಪ್ರೀತಂ ಗೌಡ ಅವರೇ ಟಿಕೆಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ಯಾಕೆ? ಪ್ರೀತಂಗೌಡ ಬಿಟ್ಟು ಹಾಸನದಲ್ಲಿ ಇನ್ಯಾರು ಇದ್ದಾರೆ? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:17 pm, Tue, 17 January 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು