Chintamani Election Results: ಚಿಂತಾಮಣಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎಂ.ಸಿ. ಸುಧಾಕರ್ ಗೆ ಭಾರೀ ಗೆಲುವು
Chintamani Assembly Election Result 2023 Live Counting Updates: ಚಿಂತಾಮಣಿ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎಂ.ಸಿ. ಸುಧಾಕರ್ ಗೆ ಭಾರೀ ಗೆಲುವು ಸಿಕ್ಕಿದ್ದು 97324 ಮತ ಪಡೆದಿದ್ದಾರೆ. ಗೆಲುವಿನ ಅಂತರ 97324 ಮತಗಳು.

Chintamani Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದೆ. ಮೇ 10 ರಂದು ನಡೆದ ಮತದಾನದಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ (Chintamani Assembly Elections 2023) ಶೇ. 83.37ರಷ್ಟು ಮತದಾನವಾಗಿತ್ತು. ಚಿಂತಾಮಣಿ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎಂ.ಸಿ. ಸುಧಾಕರ್ ಗೆ ಭಾರೀ ಗೆಲುವು ಸಿಕ್ಕಿದ್ದು 97324 ಮತ ಪಡೆದಿದ್ದಾರೆ. ಗೆಲುವಿನ ಅಂತರ 97324 ಮತಗಳು. ಸೋತ ಹುರಿಯಾಳುಗಳು ಜೆ.ಡಿ.ಎಸ್ ಜೆ.ಕೆ ಕೃಷ್ಣಾರೆಡ್ಡಿ -68272, ಬಿಜೆಪಿ ಅಭ್ಯರ್ಥಿ ಜಿ.ಎನ್ ವೇಣುಗೋಪಾಲ 21711 ಮತ ಪಡೆದಿದ್ದಾರೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರವು ರಾಜಧಾನಿ ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿದೆ. ಚಿಂತಾಮಣಿ ವ್ಯಾಪಾರ ವಹಿವಾಟಿಗೆ ಪ್ರಮುಖವಾಗಿದ್ದು, ಕ್ಷೇತ್ರದಲ್ಲಿ ಆಲಂಬಗಿರಿ, ಕೈಲಾಸಗಿರಿ, ಮುರಗಮಲ್ಲಾ, ಕೈವಾರದ ಯೋಗಿನಾರಾಯಣ ಯತೀಂದ್ರರ ದೇವಸ್ಥಾನ ಇದ್ದು, ಕ್ಷೇತ್ರವು ಮಾವು ಮತ್ತು ಕಡಲೇಬೀಜಗೆ ಖ್ಯಾತಿಯಾಗಿದೆ.
ಚಿಂತಾಮಣಿ ಕ್ಷೇತ್ರದಲ್ಲಿ ಆಂಜನೇಯರೆಡ್ಡಿರವರ ಕುಟುಂಬವು ರಾಜಕೀಯ ಹಿನ್ನೆಲೆ ಹೊಂದಿದ್ದು, ದಿವಂಗತ ಆಂಜನೇಯರೆಡ್ಡಿ ಶಾಸಕರಾಗಿ, ಅವರ ಮಗ ಚೌಡರೆಡ್ಡಿರವರು ರಾಜ್ಯ ಸರ್ಕಾರದ ಮಾಜಿ ಗೃಹಸಚಿವರಾಗಿ ಹಾಗೂ ಈಗ ಇವರ ಮಗ ಡಾ. ಎಂ.ಸಿ. ಸುಧಾಕರ್‌ರವರು ಈ ಹಿಂದೆ 2 ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿ, ನಂತರ 2 ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪಮತಗಳಿಂದ ಪರಾಭವಗೊಂಡಿದ್ದು, ಈಗ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ.
ಇವರ ವಿರುದ್ದ ಎದುರಾಳಿ ಕೃಷ್ಣಾರೆಡ್ಡಿರವರು ಜೆಡಿಎಸ್‌ನಿಂದ ಸತತ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಈ ಬಾರಿಯೂ ಜೆಡಿಎಸ್‌ನಿಂದ ಸ್ಪರ್ಧೆಗಳಿದಿದ್ದಾರೆ ಹಾಗೂ ಬಿಜೆಪಿಯಿಂದ ಜಿ.ಎನ್.ವೇಣುಗೋಪಾಲ್‌ರವರು ಕಣಕ್ಕೆ ಇಳಿದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇದೆ.
ಇನ್ನು 2018ರಲ್ಲಿ ಜೆಡಿಎಸ್‌ನಿಂದ ಜೆ.ಕೆ.ಕೃಷ್ಣಾರೆಡ್ಡಿ 87753 ಮತಗಳು, ಕಾಂಗ್ರೆಸ್‌ನಿಂದ ವಾಣಿ ಕೃಷ್ಣಾರೆಡ್ಡಿ 2233 ಮತಗಳು, ಭಾರತೀಯ ಪ್ರಜಾಪಕ್ಷದ ಅಭ್ಯರ್ಥಿ ಡಾ. ಎಂ.ಸಿ.ಸುಧಾಕರ್ 82510 ಮತಗಳನ್ನು ಪಡೆದಿದ್ದರು. ಜೆ.ಕೆ.ಕೃಷ್ಣಾರೆಡ್ಡಿರವರು ಶಾಸಕರಾಗಿ ಆಯ್ಕೆಯಾಗಿದ್ದರು.
ದಿನಾಂಕ 20-04-2023 ರಂತೆ ಪುರುಷ ಮತದಾರರು 111191, ಮಹಿಳಾ ಮತದಾರರು 114171, ಇತರೆ 42 ಜನ ಸೇರಿ ಒಟ್ಟು 225404 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಅಂದಾಜು ಜಾತಿವಾರು ಮತಗಳ ವಿವರ ಹೀಗಿದೆ. ಎಸ್‌ಸಿ 50 ಸಾವಿರ, ಎಸ್‌ಟಿ 20 ಸಾವಿರ, ರೆಡ್ಡಿ/ಒಕ್ಕಲಿಗ 45 ಸಾವಿರ, ಬಲಜಿಗ 15 ಸಾವಿರ, ಮುಸ್ಲಿಂ 22 ಸಾವಿರ, ಕುರುಬ 10 ಸಾವಿರ, ರ‍್ಯವೈಶ್ಯ 10 ಸಾವಿರ, ಇತರೆ 20 ಸಾವಿರಕ್ಕೂ ಹೆಚ್ಚು ಎಂಬ ಮಾಹಿತಿ ಇದೆ.
Published On - 2:56 am, Sat, 13 May 23