50-50 ಸ್ಥಾನ ಬಾಚಿಕೊಂಡ ಕಾಂಗ್ರೆಸ್​-ಬಿಜೆಪಿ: ಗದಗ ನಾಲ್ಕು ಕ್ಷೇತ್ರಗಳ ಸಂಪೂರ್ಣ ಚಿತ್ರಣ ಇಲ್ಲಿದೆ

|

Updated on: May 15, 2023 | 7:04 PM

ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ 50-50 ಬಾಚಿಕೊಂಡಿವೆ. ನಾಲ್ಕು ಕ್ಷೇತ್ರಗಳಲ್ಲಿ ಎರಡು ಕಾಂಗ್ರೆಸ್​ ಪಾಲಾದರೆ, ಇನ್ನೆರಡು ಬಿಜೆಪಿ ಪಾಲಾಗಿವೆ. ಮಾಜಿ ಸಚಿವ ಎಚ್​​.ಕೆ ಪಾಟೀಲ್ ಭರ್ಜರಿ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, ಸಚಿವ ಸಿ ಸಿ ಪಾಟೀಲ್ ತಿನುಕಾಡಿ ಗೆಲವು ಸಾಧಿಸಿದ್ದಾರೆ.

50-50 ಸ್ಥಾನ ಬಾಚಿಕೊಂಡ ಕಾಂಗ್ರೆಸ್​-ಬಿಜೆಪಿ: ಗದಗ ನಾಲ್ಕು ಕ್ಷೇತ್ರಗಳ ಸಂಪೂರ್ಣ ಚಿತ್ರಣ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಗದಗ: ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ 50-50 ಬಾಚಿಕೊಂಡಿವೆ. ನಾಲ್ಕು ಕ್ಷೇತ್ರಗಳಲ್ಲಿ ಎರಡು ಕಾಂಗ್ರೆಸ್ (Congress)​ ಪಾಲಾದರೆ, ಇನ್ನೆರಡು ಬಿಜೆಪಿ ಪಾಲಾಗಿವೆ. ಮಾಜಿ ಸಚಿವ ಎಚ್​​.ಕೆ ಪಾಟೀಲ್ ಭರ್ಜರಿ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, ಸಚಿವ ಸಿ ಸಿ ಪಾಟೀಲ್ ತಿನುಕಾಡಿ ಗೆಲವು ಸಾಧಿಸಿದ್ದಾರೆ. ಇನ್ನೆರಡು ಕ್ಷೇತ್ರಗಳಲ್ಲೂ ಕೈ-ಕಮಲ ಭರ್ಜರಿ ಜಯಭೇರಿ ಭಾರಿಸಿದ್ದು, ಈ ಬಾರಿ ಜಿಲ್ಲೆಯಲ್ಲಿ ರಾಜಕೀಯ ಚಿತ್ರಣವೇ ಬದಲಾಗಿದೆ. ಶಿರಹಟ್ಟಿ ಕ್ಷೇತ್ರದಲ್ಲಿ ಗೆದ್ದ ಪಕ್ಷ ಸರ್ಕಾರ ಸ್ಥಾಪನೆ ಮಾಡುತ್ತೆ ಅನ್ನೋ ಮಾತು ಈ ಬಾರಿ ಸುಳ್ಳಾಗಿದೆ. ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಗೆಲುವಿನ ಸಂಭ್ರದಲ್ಲಿದ್ದಾರೆ.

ಕಳೆದು ಬಾರಿ ಮೂರು ಕ್ಷೇತ್ರದಲ್ಲಿ ಅರಳಿ ಕಮಲ ಈ ಬಾರಿ ಒಂದು ಕ್ಷೇತ್ರದಲ್ಲಿ ಮುದುಡಿ ಎರಡು ಕ್ಷೇತ್ರದಲ್ಲಿ ಅರಳಿದೆ. ಕಾಂಗ್ರೆಸ್​ ಪಡೆ ಎರಡು ಕ್ಷೇತ್ರದಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ತೀವ್ರ ಪ್ರಯಾಸದ ಗೆಲವು ಸಾಧಿಸಿದ್ರೆ, ಮಾಜಿ ಸಚಿವ ಗದಗ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್​ಕೆ ಪಾಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿಸುವ ಮೂಲಕ ಭರ್ಜರಿ ಗೆಲವು ಸಾಧಿಸಿದ್ದಾರೆ.

9ನೇ ಸುತ್ತಿನಲ್ಲಿ ಬಿಜೆಪಿ ಸ್ವಲ್ಪ ಮುನ್ನಡೆ

ಆರಂಭದಿಂದಲೂ ಎಚ್​ಕೆ ಪಾಟೀಲ್ ಮುನ್ನಡೆ ಸಾದಿಸಿದ್ರು. 9ನೇ ಸುತ್ತಿನಲ್ಲಿ ಬಿಜೆಪಿ ಸ್ವಲ್ಪ ಮುನ್ನಡೆ ಸಾಧಿಸಿದ್ರು. ಬಳಿಕ ಮತ್ತೆ ಎಚ್​ಕೆ ಪಾಟೀಲ್ ಮುನ್ನಡೆ ಸಾಧಿಸುವ ಮೂಲಕ ಕೊನೆಗ ಗೆಲುವಿನ ನಗೆ ಬಿರಿದ್ದರು.
ಗದಗ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಂದು ಎಚ್​ಕೆ ಪಾಟೀಲ್ 1846 ಮತಗಳು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಅಲರ್ಟ್ ಆದ ಎಚ್​​ಕೆ ಪಾಟೀಲ್ ಚಾಣಾಕ್ಷತನದಿಂದ ಚುನಾವಣೆ ಮಾಡುವ ಮೂಲಕ ಭರ್ಜರಿ ಗೆಲವು ಸಾಧಿಸಿದ್ದಾರೆ.

ಇದನ್ನೂ ಓದಿ: DK Shivakumar: ಮತ್ತೆ ನೊಣವಿನಕೆರೆ ಅಜ್ಜಯ್ಯನ ಮೊರೆ ಹೋದ ಡಿಕೆ ಶಿವಕುಮಾರ್

ಬಿಜೆಪಿ ಅನಿಲ್ ಮೆಣಸಿನಕಾಯಿ ವಿರುದ್ಧ 15166 ಅಂತರದಲ್ಲಿ ಜಯಭೇರಿ ಸಾಧಿಸಿದ್ದಾರೆ. ಬಿಜೆಪಿ ಈ ಬಾರಿ ಗದಗ ಕ್ಷೇತ್ರದಲ್ಲಿ ಹೀನಾಯ ಸೋಲು ಅನುಭವಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಎಚ್​ಕೆ ಪಾಟೀಲ್ 89958 ಮತ ಪಡೆದ್ರೆ, ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ 74828 ಮತಗಳು ಪಡೆದು ಸೋಲು ಅನುಭವಿಸಿದ್ದರು.

ಪ್ರಭಾವಿ ಸಚಿವ ಸಿಸಿ ಪಾಟೀಲ್​ಗೆ ಮಾಜಿ ಸಚಿವ ಬಿಆರ್ ಯಾವಗಲ್ ತೀವ್ರ ಪೈಪೋಟಿ ನೀಡಿದರು. ಪ್ರತಿಯೊಂದು ಸುತ್ತಿನಲ್ಲೂ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದ ಏರ್ಪಟ್ಟಿತ್ತು. 300-400 ಕಾಂಗ್ರೆಸ್ ಮುನ್ನಡೆ ಸಾಧಿಸಿದ್ರೆ. ಮತ್ತೊಂದು ಸುತ್ತಿನಲ್ಲಿ ಬಿಜೆಪಿ ಸ್ವಲ್ಪ ಮತಗಳ ಮುನ್ನಡೆ ಸಾಧಿಸಿತ್ತು. ಇಬ್ಬರ ನಡುವೆ ಹಾವು ಏಣಿ ಆಟ ತೀವ್ರ ಕೂತುಹಲ ಕೆರಳಿಸಿತ್ತು.

ಕೊನೆಯ ಸುತ್ತಿನವರೆಗೂ ಸಚಿವ ಸಿಸಿ ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿಆರ್ ಯಾವಗಲ್ ಎದೆಯಲ್ಲಿ ಢವಢವ ಶುರುವಾಗಿತ್ತು. ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್ 1791 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್ 72835 ಮತ ಪಡೆದ್ರೆ, ಕಾಂಗ್ರೆಸ್ ಅಭ್ಯರ್ಥಿ ಬಿಆರ್ ಯಾವಗಲ್ 71044 ಮತಗಳು ಪಡೆದು ಸೋಲು ಒಪ್ಪಿಕೊಂಡಿದ್ದರು.

ಇದನ್ನೂ ಓದಿ: Gadaga Election Result: ಗದಗ ವಿಧಾನಸಭಾ ಎಲೆಕ್ಷನ್​ 2023 ರಿಸಲ್ಟ್: ಹ್ಯಾಟ್ರಿಕ್ ಗೆಲವು ಸಾಧಿಸಿದ ಎಚ್​ಕೆ ಪಾಟೀಲ್​

ಇನ್ನೂ ರೋಣ ಕ್ಷೇತ್ರದಲ್ಲಿ ಮತದಾರರು ಬಿಜೆಪಿ ಧೂಳಿಪಟ ಮಾಡಿದ್ದಾರೆ. ರೋಣ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಿಎಸ್ ಪಾಟೀಲ್ ಭಾರಿ ಅಂತರ ಗೆಲವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಜಿಎಸ್ ಪಾಟೀಲ್ 94865 ಬಾರಿ ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಕಳಕಪ್ಪ ಬಂಡಿ 70175 ಮತ ಪಡೆದು ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್ 24690 ಅಂತರ ಭಾರಿ ಗೆಲವು ಸಾಧಿಸಿದೆ.

ಎಲ್ಲರ ಗಮನ ಸೆಳೆದ ಶಿರಹಟ್ಟಿ ಕ್ಷೇತ್ರ  

ಈ ಬಾರಿ ಶಿರಹಟ್ಟಿ ಕ್ಷೇತ್ರ ರಾಜ್ಯದಲ್ಲಿ ಗಮನ ಸೆಳೆದಿತ್ತು. ಕಾಂಗ್ರೆಸ್, ಬಿಜೆಪಿ ಎರಡು ಪಕ್ಷದಲ್ಲಿ ಆಕಾಂಕ್ಷಿಗಳು ಬಂಡಾಯ ಬಾವುಟ ಹಾರಿಸಿದ್ರು. ಹೀಗಾಗಿ ಎರಡು ಪಕ್ಷಗಳಿಗೆ ತೀವ್ರ ತಲೆನೋವಾಗಿತ್ತು. ಆದರೆ ಬಿಜೆಪಿ ನಾಯಕರು ಬಂಡಾಯ ಶಮನ ಮಾಡಿದ್ರು. ಆದರೆ ಕಾಂಗ್ರೆಸ್​ನಲ್ಲಿ ಬಂಡಾಯ ಅಭ್ಯರ್ಥಿಯಾಗಿ ರಾಮಕೃಷ್ಣ ದೊಡ್ಡಮನಿ ಕಣಕ್ಕೆ ಇಳಿದರೆ ಕಾಂಗ್ರೆಸ್​ನಿಂದ ಸುಜಾತಾ ದೊಡ್ಡಮನಿ ಅಖಾಡಕ್ಕೆ ಇಳಿದಿದ್ದರು.

ಹೀಗಾಗಿ ಇಲ್ಲಿ ಹೊಸ ಮುಖ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ 22963 ಮತಗಳಿಂದ ಭರ್ಜರಿ ಜಯ ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ 73600 ಮತ ಪಡೆದ್ರೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ 45637 ಮತಗಳು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ 34550 ಮತ ಪಡದು ಮೂರನೇ ಸ್ಥಾನಕ್ಕೆ ತೃಪ್ತಿಗೊಂಡಿದ್ದರು.

ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್- ಬಿಜೆಪಿ ಸಮಬಲ ಸಾಧಿಸಿವೆ. ನಾಲ್ಕು ಕ್ಷೇತ್ರಗಳ ಪೈಕಿ ಎರಡರಲ್ಲಿ ಕೈ ಮೇಲುಗೈ ಸಾಧಿಸಿದ್ರೆ. ಎರಡು ಕ್ಷೇತ್ರಗಳಲ್ಲಿ ಕಮಲ ಕಿಲಕಿಲ ಅಂತಿದೆ. ಗದಗ ಜಿಲ್ಲೆಯ ಮತದಾರರು ಎರಡು ಪಕ್ಷಗಳಿಗೆ ಆಶೀರ್ವಾದ ಮಾಡಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ