Kolar: ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ -ಚುನಾವಣಾ ಸಭೆಗಳ ನಡೆಸಲು ಕಚೇರಿ ಸಿಕ್ತು, ಮನೆ ಹುಡುಕಾಟ ಬಹುತೇಕ ಅಂತಿಮ

Siddaramaiah: ಸಿದ್ದರಾಮಯ್ಯ ಅವರನ್ನ ಜಿಲ್ಲೆಯ ವಿರೋಧಿಗಳು ಟೀಕಿಸಿದ ಬೆನ್ನಲೇ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾಂಗ್ರೆಸ್ (Congress)​ ಪಕ್ಷದ ಸ್ಥಳೀಯ ಮುಖಂಡರು ನಗರದ ಬೈಪಾಸ್ ರಸ್ತೆಯಲ್ಲಿಯೇ ಮನೆ, ಕಚೇರಿಗಾಗಿ ಶೋಧ ನಡೆಸಿದ್ದಾರೆ.

Kolar: ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ -ಚುನಾವಣಾ ಸಭೆಗಳ ನಡೆಸಲು ಕಚೇರಿ ಸಿಕ್ತು, ಮನೆ ಹುಡುಕಾಟ ಬಹುತೇಕ ಅಂತಿಮ
ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಚುನಾವಣಾ ಸಭೆಗಳ ನಡೆಸಲು ಕಚೇರಿ ಸಿಕ್ತು, ಮನೆ ಹುಡುಕಾಟ ಬಹುತೇಕ ಅಂತಿಮ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 23, 2023 | 2:44 PM

ಈ ನಡುವೆ ಕೋಲಾರ ಕ್ಷೇತ್ರದಿಂದ (Kolar ) ಗೆದ್ದು ಶಾಸಕರಾದರೆ ಜನರ ಕೈಗೆ ಸಿದ್ದರಾಮಯ್ಯ ( Siddaramaiah) ಸಿಗುವುದಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅಪಪ್ರಚಾರ ಮಾಡುತ್ತಿದ್ದರು. ಸಿದ್ದರಾಮಯ್ಯ ರಾಜ್ಯ ನಾಯಕರು ಅವರನ್ನ ಭೇಟಿಯಾಗಬೇಕಾದ್ರೆ ನಾಯಕರು, ಮುಖಂಡರು ಮಾತ್ರ ಆಗಿರಬೇಕು ಎಂದು ಪದೇ ಪದೇ ಹೇಳಲಾಗುತ್ತಿತ್ತು. ಈ ರೀತಿ ಸಿದ್ದರಾಮಯ್ಯ ಅವರನ್ನ ಜಿಲ್ಲೆಯ ವಿರೋಧಿಗಳು ಟೀಕಿಸಿದ ಬೆನ್ನಲೇ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾಂಗ್ರೆಸ್ (Congress)​ ಪಕ್ಷದ ಸ್ಥಳೀಯ ಮುಖಂಡರು ನಗರದ ಬೈಪಾಸ್ ರಸ್ತೆಯಲ್ಲಿಯೇ ಮನೆ (House), ಕಚೇರಿಗಾಗಿ (Office) ಶೋಧ ನಡೆಸಿದ್ದಾರೆ.

ಸಿದ್ದುಗಾಗಿ ಮನೆ ಹುಡುಕಾಟ..!

ಸಿದ್ದರಾಮಯ್ಯ 2023ರ ಚುನಾವಣೆಯಲ್ಲಿ ತಾನು ಕೋಲಾರದಿಂದಲೇ ಅಭ್ಯರ್ಥಿಯಾಗುತ್ತೇನೆಂದು ಘೋಷಣೆ ಮಾಡಿದ ನಂತರ ನಾನು ಚಡ್ಡಿ ಹಾಕಿರುವ ಸಾಮಾನ್ಯ ಜನರ ಕೈಗೆ ಸಿಗುತ್ತೇನೆ ಎಂದಿದ್ದರು. ಅದಕ್ಕೆ ಪೂರಕ ಎಂಬಂತೆ ಸದ್ಯ ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗಾಗಿ ಮನೆ ಹಾಗೂ ಕಚೇರಿ ಹುಡುಕಾಟ ನಡೆಯುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದಲೇ ತಾನು ಕಣಕ್ಕೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಅವರು ಕೋಲಾರದಲ್ಲಿ ಬಂದರೆ ಉಳಿದುಕೊಳ್ಳಲು ಜನರನ್ನು ಭೇಟಿ ಮಾಡಲು ಕೋಲಾರ ಕಾಂಗ್ರೆಸ್ ನಾಯಕರು ಬಾಡಿಗೆ ಮನೆ, ಕಚೇರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೆ ಜನವರಿ ತಿಂಗಳ 9 ರಂದು ಕೋಲಾರಕ್ಕೆ ಆಗಮಿಸಿ ಹೈ ಕಮಾಂಡ್ ಒಪ್ಪಿದರೆ ಕೋಲಾರದಿಂದಲೇ ಸ್ಪರ್ಧೆ ಮಾಡುವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಈ ನಡುವೆ ಕೋಲಾರ ಕ್ಷೇತ್ರದಿಂದ ಗೆದ್ದು ಶಾಸಕರಾದರೆ ಜನರ ಕೈಗೆ ಸಿದ್ದರಾಮಯ್ಯ ಸಿಗುವುದಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅಪಪ್ರಚಾರ ಮಾಡುತ್ತಿದ್ದರು. ಸಿದ್ದರಾಮಯ್ಯ ರಾಜ್ಯ ನಾಯಕರು ಅವರನ್ನ ಭೇಟಿಯಾಗಬೇಕಾದ್ರೆ ನಾಯಕರು, ಮುಖಂಡರು ಮಾತ್ರ ಆಗಿರಬೇಕು ಎಂದು ಪದೇ ಪದೇ ಹೇಳಲಾಗುತ್ತಿತ್ತು.

ಈ ರೀತಿ ಸಿದ್ದರಾಮಯ್ಯ ಅವರನ್ನ ಜಿಲ್ಲೆಯ ವಿರೋಧಿಗಳು ಟೀಕಿಸಿದ ಬೆನ್ನಲೇ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪಕ್ಷದ ಸ್ಥಳೀಯ ಮುಖಂಡರು ನಗರದ ಬೈಪಾಸ್ ರಸ್ತೆಯಲ್ಲಿಯೇ ಮನೆ, ಕಚೇರಿಗಾಗಿ ಶೋಧ ನಡೆಸಿದ್ದಾರೆ. ಇನ್ನು ವಾರಕ್ಕೊಮ್ಮೆ ಕೋಲಾರಕ್ಕೆ ಬರುವೆ, ಚಡ್ಡಿ ಹಾಕಿರುವ ಜನ ಸಾಮಾನ್ಯರು ನನ್ನನ್ನು ನೇರವಾಗಿ ಸಂಪರ್ಕ ಮಾಡಬಹುದು ಎಂದು ಸಿದ್ದರಾಮಯ್ಯ ಕೂಡಾ ಹೇಳಿದ್ದರು. ಅದೇ ಕಾರಣಕ್ಕಾಗಿಯೇ ಮನೆ ಹುಡುಕಾಟ ಮಾಡಲಾಗುತ್ತಿದೆ ಎನ್ನುತ್ತಾರೆ ವಿಧಾನಪರಿಷತ್​ ಸದಸ್ಯ ಅನಿಲ್​ ಕುಮಾರ್​.

ಕೋಲಾರ ಸದ್ಯ ರಾಜ್ಯ ರಾಜಕಾರಣದ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದ್ದು, ಒಂದು ವೇಳೆ ಕೋಲಾರಕ್ಕೆ ಸಿದ್ದರಾಮಯ್ಯ ಬರುವುದಾದ್ರೆ ಇರೋದಕ್ಕೆ ಒಂದು ಸೂರು ಬೇಕು, ಅದಕ್ಕಾಗಿ ಒಂದು ಮನೆ ಹಾಗೂ ಕಚೇರಿ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು ಬಿಸಿಯಾಗಿದ್ದಾರೆ. ಇನ್ನು ಸಿದ್ದುಗಾಗಿ ಕೋಲಾರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಯನ್ನು ಹುಡುಕಾಟ ಮಾಡಲಾಗುತ್ತಿದೆ.

ಸಿದ್ದರಾಮಯ್ಯ ಅವರ ವರ್ಚಸ್ಸಿಗೆ, ಅವರಿಗೆ ತಕ್ಕ ಮನೆ ಬೇಕು, ಎಲ್ಲಾ ರೀತಿಯಲ್ಲೂ ಅನುಕೂಲವಿರುವ, ಹೆಚ್ಚಿನ ಜನರು ಬಂದರೂ ಉಳಿದುಕೊಳ್ಳಲು, ಸಣ್ಣಪುಟ್ಟ ಸಭೆಗಳನ್ನು ಮಾಡಲು, ಹೆದ್ದಾರಿಗೆ ಹತ್ತಿರ ಇರುವಂತಹ ಮನೆಯ ಹುಡುಕಾಟ ಮಾಡಲಾಗಿದೆ. ಈಗಾಗಲೇ ಸುಮಾರು ಐದಾರು ಮನೆಗಳನ್ನು ನೋಡಲಾಗಿದೆ.

ಜೊತೆಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ ಸಭೆಗಳನ್ನು ಮಾಡಲು ನಗರದ ಚೊಕ್ಕ ಕನ್ವೆನ್ಷನ್​ ಹಾಲ್​ ಅನ್ನು ಚುನಾವಣೆ ಮುಗಿಯುವವರೆಗೆ ಬುಕ್​ ಮಾಡಲಾಗಿದೆ ಅನ್ನೋದು ಕೋಲಾರ ಕಾಂಗ್ರೆಸ್​ ಮುಖಂಡರ ಮಾತು. ಇಂದು ಸೋಮವಾರ ಕೋಲಾರದಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಕಚೇರಿ, ಮನೆಯನ್ನು ಸಿದ್ದುರಾಮಯ್ಯ ಅವರೇ ಖುದ್ದು ನೋಡಿ ಅಂತಿಮ ಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಗೋಪಾಲಗೌಡ.

ಒಟ್ಟಾರೆ ಸಿದ್ದರಾಮಯ್ಯ ಕ್ಷೇತ್ರ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಬಾಡಿಗೆ ಮನೆ ಹಾಗೂ ಕಚೇರಿ ಮಾಡುವ ಮೂಲಕ ಇರುವ ಇನ್ನು ಹಲವು ಅನುಮಾನಗಳಿಗೆ ಹಾಗೂ ಗೊಂದಲಗಳಿಗೂ ಸಿದ್ದರಾಮಯ್ಯ ತೆರೆ ಎಳೆಯಲಿದ್ದಾರೆ.

ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ 

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ