ಸೋಮಣ್ಣ ಬೆಂಬಲಿಗರ ಮೇಲೆ ಕಾಂಗ್ರೆಸ್ ಮುಖಂಡರ ಹಲ್ಲೆ ಪ್ರಕರಣ: ಸಿದ್ದರಾಮಯ್ಯ ಅಣ್ಣನ ಮಕ್ಕಳ ವಿರುದ್ಧ ಕೇಸ್ ದಾಖಲು

ವಿ. ಸೋಮಣ್ಣ ಬೆಂಬಲಿಗರ ಮೇಲೆ ಕಾಂಗ್ರೆಸ್ ಮುಖಂಡರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅಣ್ಣನ ಮಕ್ಕಳ ವಿರುದ್ಧ ವರುಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಸೋಮಣ್ಣ ಬೆಂಬಲಿಗರ ಮೇಲೆ ಕಾಂಗ್ರೆಸ್ ಮುಖಂಡರ ಹಲ್ಲೆ ಪ್ರಕರಣ: ಸಿದ್ದರಾಮಯ್ಯ ಅಣ್ಣನ ಮಕ್ಕಳ ವಿರುದ್ಧ ಕೇಸ್ ದಾಖಲು
ಸೋಮಣ್ಣ, ಸಿದ್ದರಾಮಯ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 27, 2023 | 10:46 PM

ಮೈಸೂರು: ವಿ. ಸೋಮಣ್ಣ ಬೆಂಬಲಿಗರ ಮೇಲೆ ಕಾಂಗ್ರೆಸ್ ಮುಖಂಡರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಣ್ಣನ ಮಕ್ಕಳ ವಿರುದ್ಧ ವರುಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಕಾರ್ಯಕರ್ತ ನಾಗೇಶ್ ಅವರ ತಂದೆ ಚಂದ್ರಪ್ಪ‌ರಿಂದ ದೂರು ನೀಡಿದ್ದಾರೆ. ನಾಗೇಶ್‌ಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಯಾರ ಹೆಸರನ್ನು ಉಲ್ಲೇಖ ಮಾಡದೆ ಸಿದ್ದರಾಮಯ್ಯ ಅಣ್ಣನ ಮಕ್ಕಳಿಂದ ಹಲ್ಲೆ ಎಂದು ನಾಗೇಶ್ ತಂದೆ ದೂರು ನೀಡಿದ್ದಾರೆ. ಹಲ್ಲೆಗೊಳಗಾದ ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ದೂರಿನಲ್ಲಿ‌ ಉಲ್ಲೇಖಿಸಲಾಗಿದೆ. ನನ್ನ ಮಗ ಸೋಮಣ್ಣ ಅವರ ಜೊತೆ ಪ್ರಚಾರಕ್ಕೆ ಹೋಗಿದ್ದಾಗ ಘಟನೆ ನಡೆದಿದ್ದು, ನನ್ನ ಮಗನಿಗೆ ನ್ಯಾಯ ಕೊಡಿಸಿ ಚಂದ್ರಪ್ಪ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಕೇಸ್ ದಾಖಲಿಸಿ ವರುಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾರೇ ಚುನಾವಣಾ ಪ್ರಚಾರ ಮಾಡಿದರು ಅಡ್ಡಿಪಡಿಸಬಾರದು: ಸಿದ್ದರಾಮಯ್ಯ 

ಗಲಾಟೆ ವಿಚಾರವಾಗಿ ರಾಯಚೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಯಾರೇ ಚುನಾವಣಾ ಪ್ರಚಾರ ಮಾಡಿದರು ಅಡ್ಡಿಪಡಿಸಬಾರದು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್​ನವರ ಪ್ರಚಾರಕ್ಕೆ ಅಡ್ಡಿಪಡಿಸಬಾರದು. ಕಲ್ಲು ತೂರಾಟದಿಂದ ಬಿಜೆಪಿ ಕಾರ್ಯಕರ್ತನಿಗೆ ಗಾಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಗೊತ್ತಿಲ್ಲ, ಕೇಳಿ ಹೇಳುತ್ತೇನೆ. ಬಿಜೆಪಿ ನಾಯಕರ ಆರೋಪಗಳಿಗೆಲ್ಲ ನಾನು ಉತ್ತರಿಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಸಂಬಂಧಿಕರು ನಮ್ಮ ಜೊತೆ ಗಲಾಟೆ ಮಾಡಿದರು: ಬಿಜೆಪಿ ಕಾರ್ಯಕರ್ತ​ ಆರೋಪ

ನಮಗೂ ಪುಂಡಾಟಿಕೆ ಮಾಡಲು ಬರುತ್ತೆ ಎಂದ ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಮಗೂ ಪುಂಡಾಟಿಕೆ ಮಾಡಲು ಬರುತ್ತದೆ ಹುಷಾರು ಎಂದು ಎಚ್ಚರಿಕೆ ನೀಡಿದರು. ನಾವು ಪುಂಡಾಟಿಕೆ ಮಾಡಿಲ್ಲ, ಪುಂಡಾಟಿಕೆ ಮಾಡಲು ನಮಗೂ ಬರುತ್ತೇ. ನಿಮ್ಮ ಊರಿಗೆ ಒಬ್ಬನೇ ಬರುತ್ತೇನೆ, ಪುಂಡಾಟಿಕೆ ಮಾಡಿ ನೋಡೋಣ ಎಂದು ಕಾಂಗ್ರೆಸ್​ ಕಾರ್ಯಕರ್ತರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಸಿದ್ದರಾಮನಹುಂಡಿ ಹೆಸರಲ್ಲೇ ರಾಮ ಇದೆ. ಆಂಜನೇಯ ಎಲ್ಲಿ ಹುಟ್ಟಿದ ಅನ್ನುವವರಿಗೆ ಇಲ್ಲಿ ಸ್ಥಾನ ಇರಬಾರದು. ಮತ ಕೇಳುವ ಹಕ್ಕು, ಎಲ್ಲಾ ಊರಿಗೆ ಬರುವ ಹಕ್ಕು ನಮಗೂ ಇದೆ. ಸಿದ್ದರಾಮನಹುಂಡಿಯಲ್ಲಿ ಬಿಜೆಪಿ, ಸೋಮಣ್ಣ ಅಭಿಮಾನಿಗಳಿದ್ದಾರೆ. ಪುಂಡಾಟಿಕೆ ಮಾಡುವವರು ಗೌರವಯುತವಾಗಿ ನಡೆದುಕೊಳ್ಳಬೇಕು. ನಿಮ್ಮ ಪುಂಡಾಟಿಕೆ ನಿಲ್ಲಿಸುವ ಶಕ್ತಿ ನಮಗೂ ಇದೆ ಎಂದು ಕಿಡಿಕಾರಿದರು.

ಕಾಂಗ್ರೆಸ್​ ಗೂಂಡಾಗಿರಿ ನಡೆಸಿದೆ: ಈಶ್ವರಪ್ಪ 

ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​ ಗೂಂಡಾಗಿರಿ ನಡೆಸಿದೆ. ಸಿದ್ದರಾಮನಹುಂಡಿಯಲ್ಲಿ ಗೂಂಡಾಗಿರಿ ನಡೆದಿದೆ. ರಾಜ್ಯದಲ್ಲಿ ಗೂಂಡಾ ಸರಕಾರ ಬರಬೇಕಾ ಬೇಡ್ವಾ ಅಂತಾ ಜನ ತೀರ್ಮಾನಿಸಬೇಕಿದೆ. ಸಿದ್ದರಾಮಯ್ಯ ಗೂಂಡಾಗಿರಿ‌ ನಿಲ್ಲಿಸಿದರೆ ಸರಿ, ಇಲ್ಲದಿದ್ದರೆ ನಿಮ್ಮ ವಿರುದ್ದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್​ ಕಾರ್ಯಕರ್ತರಿಂದ ಕಲ್ಲೆಸೆತ ಆರೋಪ: ಸ್ವಲ್ಪದರಲ್ಲೇ ಪಾರಾದ ವಿ ಸೋಮಣ್ಣ, ಪ್ರತಾಪ್​ ಸಿಂಹ

ಘಟನೆ ಹಿನ್ನೆಲೆ

ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿ, ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್​ ಕಾರ್ಯಕರ್ತರು ಕಲ್ಲೆಸೆದ ಆರೋಪ ಮಾಡಲಾಗಿದೆ. ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಘಟನೆ ನಡೆದಿದೆ. ಅಭ್ಯರ್ಥಿ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಪ್ರಚಾರ ರಥದಲ್ಲಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ನಾಗೇಶ್ ಕಾಲಿಗೆ ಪೆಟ್ಟಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗಿದೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:36 pm, Thu, 27 April 23