ಬೆಂಗಳೂರು: ವಿಧಾನಸಭೆ ಚುನಾವಣೆ(Karnataka Assembly Election 2023)ಗೆ ಇನ್ನೇನು ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಪ್ರಧಾನಿ ಮೋದಿ(Narendra Modi) ಮೇ.6 ಮತ್ತು 7ರಂದು ಬೆಂಗಳೂರಿನಲ್ಲಿ ರೋಡ್ಶೋ ನಡೆಸಲಿರುವ ಕುರಿತು ‘ ಮೋದಿ ರೋಡ್ ಶೋ ವೇಳೆ ಕಾಂಗ್ರೆಸ್ ಷಡ್ಯಂತ್ರ ಮಾಡಿದ್ದು, ಈ ವೇಳೆ ಆಂಬುಲೆನ್ಸ್ಗಳನ್ನ ತರೋದಕ್ಕೆ ಕಾಂಗ್ರೆಸ್ ಸಂಚು ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaj) ಆರೋಪಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಯಾವುದೇ ಆಂಬುಲೆನ್ಸ್ಗೂ ರೋಡ್ ಶೋ ವೇಳೆ ಭಂಗ ಮಾಡದೇ ಹೋಗಲು ಅವಕಾಶ ಇದೆ. ಆದ್ರೆ, ಆಂಬುಲೆನ್ಸ್ ಗಳಲ್ಲಿ ರೋಗಿ ಇದಾರಾ? ಇಲ್ವಾ. ಎಂದು ತಪಾಸಣೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದ್ದು, ಕಾಂಗ್ರೆಸ್ ಮೋದಿ ರೋಡ್ ಶೋ ಬಗ್ಗೆ ಅಪಪ್ರಚಾರ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇದೇ ವೇಳೆ ಮೇ 7ಕ್ಕೆ ನೀಟ್ ಪರೀಕ್ಷೆ ಇರುವ ಕುರಿತು ‘ಮೇ 7ಕ್ಕೆ ನೀಟ್ ಪರೀಕ್ಷೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಹೌದು ನೀಟ್ ಪರೀಕ್ಷೆ ಬಗ್ಗೆ ಪ್ರಧಾನಮಂತ್ರಿ ಮೋದಿ ಗಮನಕ್ಕೆ ತಂದಿದ್ದೆವು. ಪ್ರಧಾನಿ ಮೋದಿಗೆ ವಿದ್ಯಾರ್ಥಿಗಳ ಮೇಲೆ ವಿಶೇಷ ಕಾಳಜಿ ಇದೆ. ಇದೇ ಕಾರಣಕ್ಕೆ ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆ ಆಗಬಾರದು ಎಂದರು. ಮೋದಿ ಅಪೇಕ್ಷೆಯಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಆಗಿದ್ದು, ಶನಿವಾರ ಮೋದಿ 26.5 ಕಿ.ಮೀ ರೋಡ್ ಶೋ ನಡೆಸಲಿದ್ದು, ಮತ್ತು ಭಾನುವಾರ ಚಿಕ್ಕ ರೋಡ್ ಶೋ ಇರುತ್ತದೆ. ಜೊತೆಗೆ ಮೋದಿ ರೋಡ್ ಶೋ ಮಾರ್ಗದಲ್ಲಿ ಕಡಿಮೆ ಪರೀಕ್ಷಾ ಕೇಂದ್ರಗಳಿವೆ. ಹಾಲ್ ಟಿಕೆಟ್ ತೋರಿಸಿದರೆ ಪರೀಕ್ಷಾ ಕೇಂದ್ರಕ್ಕೆ ತೆರಳಬಹುದು. ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ಕೊಡಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ಗೆ ಹಿನ್ನಡೆ; ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಚುನಾವಣಾ ಆಯೋಗ ಅನುಮತಿ
ಇನ್ನು ಪ್ರಧಾನಿ ಮೋದಿಯವರ ಎರಡು ದಿನಗಳ ರೋಡ್ ಶೋ ಮಾರ್ಗಗಳು ಹೀಗಿವೆ.
ಶನಿವಾರ ಮೋದಿ ರೋಡ್ ಶೋ ಮಾರ್ಗ
ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂ->ಸಾರಕ್ಕಿ ಜಂಕ್ಷನ್-> ಸೌತ್ ಎಂಡ್ ಸರ್ಕಲ್->ಕೃಷ್ಣರಾವ್ ಪಾರ್ಕ್->ರಾಮಕೃಷ್ಣ ಆಶ್ರಮ-> ಮಕ್ಕಳ ಕೂಟ->ಟೌನ್ ಹಾಲ್->ಕಾವೇರಿ ಭವನ->ಮೆಜೆಸ್ಟಿಕ್-> ಮಾಗಡಿ ರೋಡ್->GT ವರ್ಲ್ಡ್ ಮಾಲ್->ಹೌಸಿಂಗ್ ಬೋರ್ಡ್->ಬಸವೇಶ್ವರ ನಗರ->ಶಂಕರ ಮಠ ಸರ್ಕಲ್-> ಮೋದಿ ಆಸ್ಪತ್ರೆ ರಸ್ತೆ->ನವರಂಗ್ ಸರ್ಕಲ್->ಮಹಾಕವಿ ಕುವೆಂಪು ರಸ್ತೆ->ಮಲ್ಲೇಶ್ವರಂ ಸರ್ಕಲ್ ->ಸಂಪಿಗೆ ರಸ್ತೆ-> ಸರ್ಕಲ್ ಮಾರಮ್ಮ ದೇವಸ್ಥಾನ.
ರೋಡ್ ಶೋನಲ್ಲಿ 4 ಕಿ.ಮೀ ಕಡಿತ!
ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಸುರಂಜನ್‌ದಾಸ್ ಸರ್ಕಲ್‌ನಿಂದ ಟ್ರಿನಿಟಿ ಸರ್ಕಲ್‌ವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರ ನಡೆಯುವ ಪ್ರಧಾನಿ ರೋಡ್ ಶೋ 4 ಕಿ.ಮೀ. ಕಡಿತ ಮಾಡಲಾಗಿದೆ. ನೀಟ್ ಪರೀಕ್ಷೆ ಹಿನ್ನೆಲೆ ರೋಡ್ ಶೋ ರೂಟ್‌ನಲ್ಲಿ ಬದಲಾವಣೆ ಮಾಡಲಾಗಿದ್ದು, ಟ್ರಾಫಿಕ್ ಸಮಸ್ಯೆ ಆಗಬಹುದು ಅನ್ನೋ ಕಾರಣಕ್ಕೆ ಪ್ರಧಾನಿ ಕಚೇರಿ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ಗೆ ಹಿನ್ನಡೆ; ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಚುನಾವಣಾ ಆಯೋಗ ಅನುಮತಿ
ಭಾನುವಾರದ ರೋಡ್ ಶೋ ರೂಟ್ ಮ್ಯಾಪ್
ಬೆಮೆಲ್ ಸರ್ಕಲ್->ತಿಪ್ಪಸಂದ್ರ ಮುಖ್ಯರಸ್ತೆ->ಇಎಸ್ಐ ಆಸ್ಪತ್ರೆ, CMH ರೋಡ್->ಇಂದಿರಾನಗರ->ಹಲಸೂರು ಪೊಲೀಸ್ ಸ್ಟೇಷನ್- ಎಂ.ಜಿ ರಸ್ತೆ->ಬ್ರಿಗೇಡ್ ರೋಡ್
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ