ಮತಗಟ್ಟೆ ಎದುರೇ ಮಾರಾಮಾರಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ: FIR ದಾಖಲು

|

Updated on: May 10, 2023 | 3:29 PM

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪುಂಡರ ಗುಂಪಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಪಾಪಯ್ಯ ಗಾರ್ಡನ್ ಮತಗಟ್ಟೆ ಸಂಖ್ಯೆ 28, 29ರ ಎದುರೇ ಮಾರಾಮಾರಿ ನಡೆದಿದೆ.

ಮತಗಟ್ಟೆ ಎದುರೇ ಮಾರಾಮಾರಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ: FIR ದಾಖಲು
ಮತಗಟ್ಟೆ ಎದುರೇ ಮಾರಾಮಾರಿ
Follow us on

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರ (Congress workers) ಮೇಲೆ ಪುಂಡರ ಗುಂಪಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಪಾಪಯ್ಯ ಗಾರ್ಡನ್ ಮತಗಟ್ಟೆ ಸಂಖ್ಯೆ 28, 29ರ ಎದುರೇ ಮಾರಾಮಾರಿ ನಡೆದಿದೆ. ಗಾಂಜಾ ಮತ್ತಿನಲ್ಲಿದ್ದ ಸುಮಾರು 30 ಯುವಕರ ಗುಂಪಿನಿಂದ ಮಹಿಳೆಯರು ಸೇರಿ ಹಲವರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಮಾಜಿ ಕಾರ್ಪೊರೇಟರ್​ ಲಕ್ಷ್ಮೀ ಪತಿಯಾಗಿರುವ ಕಬ್ಬಾಳ್​ ಉಮೇಶ್​ ಹುಡುಗರನ್ನು ಕರೆಸಿ ​​ಹಲ್ಲೆ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಸದ್ಯ ಮೀನಮ್ಮ, ಚನ್ನಪ್ಪ ಎಂಬುವರಿಂದ ದೂರು ದಾಖಲು ಮಾಡಿದ್ದು, ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ವಿಡಿಯೋ ಫೋಟೇಜ್ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವಂತಹ ಘಟನೆ ಬಿಟಿಎಂ ಲೇಔಟ್ ಕ್ಷೇತ್ರದ ಲಕ್ಕಸಂದ್ರ ವಾರ್ಡ್​ನಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ರಾಜಾ ಎಂಬುವರ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಮತದಾನದ ಚೀಟಿ ಬರೆದು ಕೊಡುವ ವಿಚಾರವಾಗಿ ಹಲ್ಲೆ ಆರೋಪ ಕೇಳಿಬಂದಿದೆ. ಮಂಜು ಅಲಿಯಾಸ್ ಗಾರ್ಬೇಜ್​ ಮತ್ತು ಗ್ಯಾಂಗ್​ನಿಂದ ಹಲ್ಲೆ ಮಾಡಿದ್ದು ಎನ್ನಲಾಗುತ್ತಿದ್ದು, ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಕಾಯ್ದಿರಿಸಲಾಗಿದ್ದ ಇವಿಎಂ, ವಿವಿಪ್ಯಾಟ್ ಮಷಿನ್‌ಗಳನ್ನು ಒಡೆದು ಹಾಕಿದ ಗ್ರಾಮಸ್ಥರು

ಮತದಾನಕ್ಕೆ ಬಂದ ಮಹಿಳೆಗೆ ಲಾಠಿ ಏಟು ಆರೋಪ: ಕ್ರಮಕ್ಕೆ ಆಗ್ರಹ 

ಗದಗ: ಮತದಾನಕ್ಕೆ ಬಂದ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216ರಲ್ಲಿ ಘಟನೆ ನಡೆದಿದೆ. ಲಾಠಿಯಿಂದ ಹಲ್ಲೆ ನಡೆಸಿದ್ದಾರೆಂದು ಗ್ರಾಮಸ್ಥೆ ಹುಲಗೆಮ್ಮ ಆರೋಪಿಸಿದ್ದಾರೆ. ಚುನಾವಣಾಧಿಕಾರಿಗಳು, ಸ್ಥಳೀಯರ ನಡುವೆ ವಾಗ್ವಾದ, ನೂಕಾಟ ತಳ್ಳಾಟ ಉಂಟಾಗಿದೆ.

ಇದನ್ನೂ ಓದಿ: ಹಾಸನ: ಮತದಾನ ಮಾಡಿ ಹೊರ ಬರುತ್ತಿದ್ದಂತೆ ಹೃದಯಾಘಾತದಿಂದ ವ್ಯಕ್ತಿ ಸಾವು

ಲಾಠಿಯಿಂದ ಹೊಡೆದ ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳಿ ಎಂದು  ಸ್ಥಳೀಯರು ಒತ್ತಾಯಿಸಿದ್ದಾರೆ. ಮತಗಟ್ಟೆಗೆ ತಹಶೀಲ್ದಾರ್​​ ಶ್ರುತಿ ಮಳ್ಳಪ್ಪಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ​​

ಕೇಸರಿ ಶಾಲು ಧರಿಸಿ ಮತದಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ

ಬೆಳಗಾವಿ: ಕೇಸರಿ ಶಾಲು ಧರಿಸಿ ಮತದಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ಮಾಡಿರುವಂತಹ ಘಟನೆ ಜಿಲ್ಲೆ ಕುಡಚಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಗಳಖೋಡನಲ್ಲಿ ನಡೆದಿದೆ. ಮುಗಳಖೋಡ ಗ್ರಾಮದ ಬಿಜೆಪಿ ಕಾರ್ಯಕರ್ತರ ನಡೆಗೆ ವಿರೋಧ ವ್ಯಕ್ತವಾಗಿದೆ. ಸರ್ಕಾರಿ ಶಾಲೆ ಎದುರು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸ್ ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ. ಈ ವೇಳೆ ಪೊಲೀಸರ ಜತೆ ಕಾಂಗ್ರೆಸ್ ಕಾರ್ಯಕರ್ತರ ಮಾತಿನ ಚಕಮಕಿ ಉಂಟಾಗಿದೆ.

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published On - 3:28 pm, Wed, 10 May 23