AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈತಪ್ಪಿದ ಕಾಂಗ್ರೆಸ್ ಟಿಕೆಟ್: ರಾಜೀನಾಮೆ ನೀಡಲು ಮುಂದಾದ ಡಿಬಿ ಇನಾಮದಾರ್​ ಕುಟುಂಬಸ್ಥರು

ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯನ್ನಾಗಿ ಬಾಬಾಸಾಹೇಬ್​ ಪಾಟೀಲ ಅವರನ್ನು ಕಣಕ್ಕಿಳಿಸುವ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಇತ್ತ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ‌ನೀಡಲು ಡಿ.ಬಿ ಇನಾಮದಾರ್ ಕುಟುಂಬ ತೀರ್ಮಾನ ಮಾಡಲಾಗಿದೆ.

ಕೈತಪ್ಪಿದ ಕಾಂಗ್ರೆಸ್ ಟಿಕೆಟ್: ರಾಜೀನಾಮೆ ನೀಡಲು ಮುಂದಾದ ಡಿಬಿ ಇನಾಮದಾರ್​ ಕುಟುಂಬಸ್ಥರು
ಡಿ.ಬಿ.ಇನಾಮದಾರ್, ಸೊಸೆ ಲಕ್ಷ್ಮೀ ಇನಾಮದಾರ್
ಗಂಗಾಧರ​ ಬ. ಸಾಬೋಜಿ
|

Updated on:Apr 07, 2023 | 5:03 PM

Share

ಬೆಳಗಾವಿ: ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯನ್ನಾಗಿ ಬಾಬಾಸಾಹೇಬ್​ ಪಾಟೀಲ ಅವರನ್ನು ಕಣಕ್ಕಿಳಿಸುವ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಇತ್ತ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ‌ನೀಡಲು ಡಿ.ಬಿ ಇನಾಮದಾರ್ (DB Inamdar) ಕುಟುಂಬ ತೀರ್ಮಾನ ಮಾಡಲಾಗಿದೆ. ಈ ಕುರಿತಾಗಿ ಬೆಳಗಾವಿಯಲ್ಲಿ ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, 40 ವರ್ಷಗಳಿಂದ ಡಿ.ಬಿ.ಇನಾಮದಾರ್ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಅವರಿಗೆ ಹುಷಾರಿಲ್ಲ, ಇಂತಹ ಕಷ್ಟದ ಸಮಯದಲ್ಲಿ ಪಕ್ಷ ಕೈಬಿಟ್ಟಿದೆ. ಈಗ ಯಾರು ನಮಗೆ ಕೈಹಿಡಿತಾರೆ ಅಂಥವರು ದೇವರಾಗುತ್ತಾರೆ. ಡಿ.ಬಿ.ಇನಾಮದಾರ್ ಬಿಟ್ಟು ಕುಟುಂಬಸ್ಥರು ರಾಜೀನಾಮೆ ನೀಡುತ್ತಿವೆ. ಸದ್ಯದಲ್ಲೇ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವ ನೀಡಿದೆ. ಡಿ.ಬಿ ಇನಾಮದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಲಾಯಲಿಸ್ಟ್ ಆಗಿದ್ದರು ಎಂದು ಹೇಳಿದರು.

ಮೊದಲ ಲಿಸ್ಟ್​ನಲ್ಲಿಯೇ ಅವರ ಹೆಸರು ಬರಬೇಕಾಗಿತ್ತು

ಎಲ್ಲಾ ರಾಜ್ಯ ನಾಯಕರಿಗೆ ಭೇಟಿ ಆದಾಗ ಸರ್ವೇನಲ್ಲಿ ಚೆನ್ನಾಗಿತ್ತು ಅಂದರು. ಮೊದಲ ಲಿಸ್ಟ್​ನಲ್ಲಿಯೇ ಅವರ ಹೆಸರು ಬರಬೇಕಾಗಿತ್ತು. ಅವರಿಗೆ ಅನಾರೋಗ್ಯದ ಕಾರಣದಿಂದ ಟಿಕೆಟ್​ ಮೊದಲ ಲಿಸ್ಟ್​ನಲ್ಲಿ ಬರಲಿಲ್ಲ ಅಂದರು. ಡಿ.ಬಿ ಇನಾಮದಾರ್ ಅವರ ಪರಿಸ್ಥಿತಿ ಎಲ್ಲ ನಾಯಕರ ಮುಂದೆಯೂ ಹೇಳಿದ್ದೇವೆ. ಬೆಂಗಳೂರಿಗೆ ಹೋಗಿ ನಮ್ಮನ್ನೂ ಸಹ ಟಿಕೆಟ್​ಗೆ ಪರಿಗಣಿಸಿ ಅಂತ ಹೇಳಿದ್ದೇವೆ. ಹೊಸ ಸರ್ವೇ ಮಾಡಿಸಿ ಅದರಲ್ಲಿ ನಮ್ಮ ಹೆಸರು ಬಂದರೆ ಟಿಕೆಟ್ ಕೊಡಿ ಇಲ್ಲವಾದರೆ ಬೇಡ ಎಂದಿದ್ದೇವು. ಅದಕ್ಕೆ ರಾಜ್ಯ ನಾಯಕರು ಸಹ ಸಮ್ಮತಿ ಸೂಚಿಸಿದರು.

ಇದನ್ನೂ ಓದಿ: ಚಿತ್ರದುರ್ಗ: ತಪ್ಪಿದ ಕಾಂಗ್ರೆಸ್ ಟಿಕೆಟ್, ರಘು ಆಚಾರ್ ಜೆಡಿಎಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್

ಕಾರ್ಯಕರ್ತರ ಸಭೆ ಬಳಿಕ ಅಂತಿಮ ನಿರ್ಧಾರ

ಹೈಕಮಾಂಡ್​ನಿಂದ ಪೋನ್ ಬಂತು ನನ್ನ ಕನ್ವಿನ್ಸ್ ಮಾಡಿದರು. ಆಗ ನಾನು ಕಾರ್ಯಕರ್ತರು ಏನು ತೀರ್ಮಾನ ತಗೋತಾರೆ ಅದಕ್ಕೆ ನಾನು ಬದ್ಧವಾಗಿದ್ದೆನೆ ಎಂದು ಹೇಳಿದರು. ಏನೇ ನಿರ್ಧಾರ‌ ಮಾಡಿರು ಸಹ ಫ್ಯಾಮಿಲಿ ಕಾರ್ಯಕರ್ತರ ನಿರ್ಧಾರ‌ ಮಾಡುತ್ತಾರೆ. ಕಿತ್ತೂರು ಗ್ರೌಂಡ್ ರಿಯಾಲಿಟಿಯೇ ಬೇರೆ ಇದೆ, ಆದರೆ ಹೈಕಮಾಂಡ್​ಗೆ ತೋರಿಸಿದ್ದೆ ಬೇರೆ ಇದೆ. ಕಾರ್ಯಕರ್ತರ ಸಭೆ ಮಾಡಿ ಅಂತಿಮ ನಿರ್ಧಾರ ಘೋಷಣೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: Pralhad Joshi: ಕರ್ನಾಟಕದಲ್ಲಿ ಬಿಜೆಪಿಯ ಈ ಬಾರಿಯ ಚುನಾವಣಾ ವಿಷಯವೇನು? ಪ್ರಹ್ಲಾದ್ ಜೋಶಿ ಹೇಳಿದ್ದಿಷ್ಟು

ಕಾರ್ಯಕರ್ತರು ಹೇಳಿದರೆ ಬಂಡಾಯ ಸ್ಪರ್ಧೆ‌ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಅದನ್ನು ನಾವು ಇನ್ನೂ ಡಿಸೈಡ್ ಮಾಡಿಲ್ಲ, ಆದರೆ ಆದಷ್ಟು ಬೇಗ ನಿರ್ಧಾರ ಮಾಡುತ್ತೇವೆ. ಸದ್ಯದಲ್ಲೇ ಕಾರ್ಯಕರ್ತರನ್ನು ಕೂಡಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭಾ ಚುನಾವಣೆಯ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:03 pm, Fri, 7 April 23