ಈ ಬಾರಿ ಟಿಪ್ಪು ವರ್ಸಸ್ ಸಾವರ್ಕರ್ ಚುನಾವಣೆ ಎನ್ನುವ ಕಟೀಲ್​​ ಹೇಳಿಕೆಗೆ ನನ್ನ ಒಪ್ಪಿಗೆ ಇಲ್ಲ: ಯಡಿಯೂರಪ್ಪ

| Updated By: ರಮೇಶ್ ಬಿ. ಜವಳಗೇರಾ

Updated on: Feb 27, 2023 | 11:00 AM

ಟಿಪ್ಪು ಹಾಗೂ ಸಾವರ್ಕರ್ ಹೆಸರಿನಲ್ಲೇ ಚುನಾವಣೆ ನಡೆಯಲಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಕೆಯನ್ನು ಬಿಎಸ್ ಯಡಿಯೂರಪ್ಪ ಒಪ್ಪುವುದಿಲ್ಲ ಎಂದಿದ್ದಾರೆ.

ಈ ಬಾರಿ ಟಿಪ್ಪು ವರ್ಸಸ್ ಸಾವರ್ಕರ್ ಚುನಾವಣೆ ಎನ್ನುವ ಕಟೀಲ್​​ ಹೇಳಿಕೆಗೆ ನನ್ನ ಒಪ್ಪಿಗೆ ಇಲ್ಲ: ಯಡಿಯೂರಪ್ಪ
Follow us on

ಬೆಂಗಳೂರು: ಈ ಬಾರಿ ಕಾಂಗ್ರೆಸ್​ ಮತ್ತು ಬಿಜೆಪಿಯ ಬದಲಾಗಿ ಸಾವರ್ಕರ್ (veer savarkar) ಹಾಗೂ ಟಿಪ್ಪುವಿನ (tipu sultan) ಸಿದ್ಧಾಂತಗಳ ನಡುವೆ ಚುನಾವಣೆ (Karnataka Assembly Elections 2023)ನಡೆಯಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​  (Nalin Kumar Kateel) ಹೇಳಿದ್ದಾರೆ. ಈ ಹೇಳಿಕೆಯನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಇನ್ನೂ ಕೆಲ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಆದ್ರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಒಪ್ಪಿಗೆ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಈ ಬಾರಿ ಸಾವರ್ಕರ್- ಟಿಪ್ಪು ಹೆಸರಿನಲ್ಲೇ ಚುನಾವಣೆ ನಡೆಯಲಿ: ರೇಣುಕಾಚಾರ್ಯ

ಎನ್‌ಡಿಟಿವಿ ಜೊತೆಯಲ್ಲಿ ಮಾತನಾಡಿರುವ ಅವರು, ಟಿಪ್ಪು ವರ್ಸಸ್ ಸಾವರ್ಕರ್ ಎಂಬ ಕಟೀಲ್​ ಹೇಳಿಕೆಗೆ ನನ್ನ ಒಪ್ಪಿಗೆ ಇಲ್ಲ. ಆದ್ರೆ, ಅದಕ್ಕಿಂತ ಮುಖ್ಯವಾಗಿ ಹೆಚ್ಚು ಪರಿಶ್ರಮಪಡಬೇಕು. ಈ ಚುನಾವಣೆಯು ಬಿಜೆಪಿಯ ನೀತಿಗಳು ಮತ್ತು ಯೋಜನೆಗಳು ನಿರೂಪಣೆಯಾಗಿರುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನಪ್ರಿಯ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವುದೇ ಮುಂದಿನ ಚುನಾವಣೆಯ ಮಂತ್ರ . ಇನ್ನು ಜೆಡಿಎಸ್​ಗೆ ಫೈಟ್ ಕೊಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕಸರತ್ತು ನಡೆಸಿವೆ. ಆದರೂ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಟ್ಕಳ ತಾಲೂಕಿನ ಶರಾಲಿಯ ಜನತಾ ವಿದ್ಯಾಲಯದಲ್ಲಿ ಮಂಗಳವಾರ ಭಟ್ಕಳ ಹಾಗೂ ಹೊನ್ನಾವರ ವಿಧಾಸಭೆ ಕ್ಷೇತ್ರದ ಪೇಜ್ ಪ್ರಮುಖ ಸಮಾವೇಶ ಉದ್ಗಾಟಿಸಿ ಮಾತನಾಡಿದ್ದ ಕಟೀಲ್, ಸಾವರ್ಕರ್ ಹಾಗೂ ಟಿಪ್ಪುವಿನ ಸಿದ್ಧಾಂತಗಳ ನಡುವೆ ಚುನಾವಣೆ ನಡೆಯಲಿದೆ ಎಂದು ಹೇಳಿದ್ದರು.

ಈ ಬಾರಿ 2023ರ ವಿಧಾನಸಭೆ ಚುನಾವಣೆ ವಿವಾದಿತ ವ್ಯಕ್ತಿಗಳಾಗಿರುವ ಟಿಪ್ಪು ಸುಲ್ತಾನ್ ಹಾಗೂ ಸಾವರ್ಕರ್ ಮೇಲೆಯೇ ನಡೆಯಲಿದೆ ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿರುವ ಹೇಳಿಕೆ ಸರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿರುವ ಹೇಳಿಕೆಯನ್ನ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ ಪಿ ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದರು.

ದೇಶಪ್ರೇಮಿ ಸಾವರ್ಕರ್ ಆದರೆ ಟಿಪ್ಪು ಓರ್ವ ಮತಾಂಧ. ಕಾಂಗ್ರೆಸ್‌ನವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಟಿಪ್ಪು ಜಯಂತಿ ಮಾಡಿದ್ದಾರೆ. ಇದರಿಂದಲೇ ಕೊಡಗಿನಲ್ಲಿ ಕುಟ್ಟಪ್ಪ ಸೇರಿ ರಾಜ್ಯದಲ್ಲಿ 25 ರಿಂದ 30 ಜನ ಹಿಂದು ಯುವಕರ ಹತ್ಯೆಯಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಲೂ ಹತ್ಯೆಯಾಗಿವೆ. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳು ಕಾಂಗ್ರೆಸ್‌ನಿಂದ ಸಂಪೂರ್ಣ ದೂರವಾಗುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ. ಈ ಹಿನ್ನಲೆಯಲ್ಲಿ ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದು ಸರಿಯಿದೆ ಎಂದಿದ್ದರು.