Arali Nagaraj: ಕ್ಷಣಿಕ ಲಾಭಕ್ಕಾಗಿ ಅತ್ಯಮೂಲ್ಯ ಮತ ಮಾರಿಕೊಳ್ಳಬೇಡಿ: ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಕರೆ

ಆಮಿಷಕ್ಕೆ ಒಳಗಾಗಿ ಕ್ಷಣಿಕ ಲಾಭಕ್ಕಾಗಿ ನಿಮ್ಮ ಅತ್ಯಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ ಎಂದು ಕನ್ನಡದಲ್ಲಿ ಮೊದಲ ತೀರ್ಪು ನೀಡಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಕರೆ ನೀಡಿದ್ದಾರೆ.

Arali Nagaraj: ಕ್ಷಣಿಕ ಲಾಭಕ್ಕಾಗಿ ಅತ್ಯಮೂಲ್ಯ ಮತ ಮಾರಿಕೊಳ್ಳಬೇಡಿ: ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಕರೆ
ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಲೇಖಕಿ ಗೊರೂರು ಪಂಕಜ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 26, 2023 | 9:39 PM

ಬೆಂಗಳೂರು: ಆಮಿಷಕ್ಕೆ ಒಳಗಾಗಿ ಕ್ಷಣಿಕ ಲಾಭಕ್ಕಾಗಿ ನಿಮ್ಮ ಅತ್ಯಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ ಎಂದು ಕನ್ನಡದಲ್ಲಿ ಮೊದಲ ತೀರ್ಪು ನೀಡಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ (Retired Justice Arali Nagaraj) ಕರೆ ನೀಡಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಮ್ಮ ರಾಷ್ಟ್ರದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ವಿವಿಧ ಮಟ್ಟದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಆಗಾಗ ಅನಿವಾರ್ಯವಾಗಿ ಒಂದರ ನಂತರದ ಮತ್ತೊಂದರಲ್ಲಿ ಧನಬಲ, ಜಾತಿಬಲ, ತೋಳ್ಬಲ, ಅನೈತಿಕತೆ ಮುಂತಾದ ಅಪಮೌಲ್ಯಗಳ (ಪಿಡುಗುಗಳ) ಹಾಗೂ ಕೇವಲ ಅಧಿಕಾರದಾಹದಿಂದ ಪಕ್ಷಾಂತರ ಮಾಡುವ ತತ್ವರಹಿತ ಪಕ್ಷಾಂತರಿಗಳ ಪ್ರಭಾವ ಹೆಚ್ಚಾಗುತ್ತಾ ಬಂದಿರುವುದು ಯಾವ ಪ್ರಜ್ಞಾವಂತ ನಾಗರಿಕನೂ ಅಲ್ಲಗಳೆಯಲಾಗದ ಸತ್ಯ ಸಂಗತಿ ಆಗಿದೆ.

ಸದ್ಯದಲ್ಲಿಯೇ ಜರುಗಲಿರುವ ಕರ್ನಾಟಕ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಈ ಪಿಡುಗಳನ್ನು ನಿಯಂತ್ರಿಸಿ ಅವುಗಳಿಂದ ಮುಕ್ತವಾದ ಚುನಾವಣೆಗಳು ಜರುಗುವಂತೆ ಮಾಡುವ ಸಾಮರ್ಥ್ಯ ನಮ್ಮ ದೇಶದ ಎಲ್ಲ ವರ್ಗಗಳ ಪ್ರಜ್ಞಾವಂತ ಪ್ರಬುದ್ಧ ದೇಶಾಭಿಮಾನಿ, ಭ್ರಷ್ಟ ರಾಜಕಾರಣಿಯ ಋಣಭಾರದಲ್ಲಿಲ್ಲದ, ಆಮಿಷಕ್ಕೊಳಗಾಗದ ಮತದಾರರಿಗೆ ಮಾತ್ರ ಇರುವುದು.

ಇದನ್ನೂ ಓದಿ: Karnataka polls: ಕಾಂಗ್ರೆಸ್​ ಅಧಿಕಾರಿಕ್ಕೆ ಬಂದರೆ ಮೀಸಲಾತಿ ಮಿತಿ ಶೇ 75ಕ್ಕೆ ಹೆಚ್ಚಳ: ಸಿದ್ಧರಾಮಯ್ಯ ಭರವಸೆ

ಇದು ಅವರ ಆದ್ಯ ಅನಿವಾರ್ಯ, ಗುರುತರ ಕರ್ತವ್ಯವಾಗಿದೆ. ಇದನ್ನು ಅವರು ಪ್ರಾಮಾಣಿಕವಾಗಿ ನಿರ್ವಹಿಸದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆಯವರ ಜೀವನ ನರಕ ಸದೃಶವಾಗುವುದರಲ್ಲಿ ಸಂದೇಹವೇ ಇಲ್ಲ. ಈ ಕರ್ತವ್ಯ ನಿರ್ವಹಿಸದ ಮತದಾರರನ್ನು ದೇವರು ಹಾಗೂ ಮುಂದಿನ ಪೀಳಿಗೆಯವರು ಖಂಡಿತ ಕ್ಷಮಿಸುವುದಿಲ್ಲ.

ಮತದಾರರಲ್ಲಿ ವಿನಂತಿ:

  • ಆಮಿಷಕ್ಕೆ ಒಳಗಾಗಿ ಕ್ಷಣಿಕ ಲಾಭಕ್ಕಾಗಿ ನಿಮ್ಮ ಅತ್ಯಮೂಲ್ಯಯವಾದ ಮತವನ್ನು ಮಾರಿಕೊಳ್ಳದಿರಿ
  • ಋಣಮುಕ್ತತೆಯ ಪರಿಕಲ್ಪನೆಗೊಳಗಾಗಿ ಅನರ್ಹರಿಗೆ ಮತ ನೀಡಬೇಡಿ.
  • ಮತದಾನ ಶೇ 20 ರಷ್ಟು ನಿಮ್ಮ ಹಕ್ಕು. ಆದರೆ ಅದು ಶೇ 80 ರಷ್ಟು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕರ್ತವ್ಯ (ಜವಾಬ್ದಾರಿ) ಆಗಿರುತ್ತದೆ.
  • ಒಂದು ಸಾರ್ವಜನಿಕ ಸ್ಥಾನಕ್ಕೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವ ಅವಕಾಶ, ಸ್ವಾತಂತ್ರ್ಯ ನಿಮಗೆ ಲಭಿಸಿದಾಗ ಅತ್ಯುತ್ತಮ ಮತ್ತು ಅರ್ಹ ವ್ಯಕ್ತಿಯನ್ನೇ ಆಯ್ಕೆ ಮಾಡುವುದು ನಿಮ್ಮ ಕರ್ತವ್ಯವಾಗಬೇಕು.
  • ನಿಮ್ಮ ಮತದಾನಕ್ಕೆ ಉಮೇದುವಾರನ (ಸ್ಪರ್ಧಿಯ) ಅರ್ಹತೆಯೊಂದೇ ಮಾನದಂಡವಾಗಿರಲಿ. ಜಾತಿ, ಮತ, ಪಂಥ, ಧರ್ಮ, ಪ್ರಾದೇಶಿಕತೆ, ಆತನ ಸುಳ್ಳು ಭರವಸೆ ಅಥವಾ ಆತನ ಪಕ್ಷದ ಪುಕ್ಕಟೆ ಆಮಿಷ ಮುಂತಾದವುಗಳಲ್ಲಿ ಯಾವುದೂ ಅರ್ಹತೆಯ ಮಾನದಂಡವಾಗದಿರಲಿ.
  • ಅಭ್ಯರ್ಥಿಯ ಅರ್ಹತೆ ಎಂದರೆ: ಆತನಿಗೆ ಕ್ಷೇತ್ರದ ಸಂಪೂರ್ಣ ಮಾಹಿತಿ ಇರುವುದು. ಕ್ಷೇತ್ರದ ಅಭಿವೃದ್ಧಿಯ ಸಂಬಂಧ ತನ್ನ ಯೋಜನೆಗಳನ್ನು ಮತದಾರರಿಗೆ ತಿಳಿಯಪಡಿಸಿ ಅವುಗಳ ಜಾರಿಗೆ ಬದ್ಧನಾಗಿರುವುದು. ಆತನ ನಡೆ-ನುಡಿ ಒಂದೇ ಆಗಿದ್ದು ಕಾಯಕದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ, ಪ್ರಬುದ್ಧತೆ, ಪ್ರಜ್ಞಾವಂತಿಕೆ ಹಾಗೂ ದೇಶಾಭಿಮಾನ ಹೊಂದಿರುವುದು ಇತರೆ.
  • ನಿಯಮಿತವಾಗಿ ನನ್ನ ಕ್ಷೇತ್ರದ ಮತದಾರರ ಸಂಪರ್ಕದಲ್ಲಿರುತ್ತೇನೆ ಎಂಬುದಾಗಿ ಮತದಾರರಿಗೆ ಭರವಸೆ ಕೊಡುವುದಲ್ಲದೇ ಸ್ವಘೋಷಣೆ ಪ್ರಮಾಣ ಪತ್ರದಲ್ಲಿಯ ಭರವಸೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ತನ್ನ ರಾಜೀನಾಮೆಗೆ ಒತ್ತಾಯಿಸುವ ಹಕ್ಕು ಮತದಾರರಿಗೆ ಇರುತ್ತದೆ ಎಂಬುದಾಗಿಯೂ ಭರವಸೆ ನೀಡುವುದು.
  • ಓಟಿಗಾಗಿ ನೋಟು ಅಥವಾ ವಸ್ತುಗಳನ್ನು ಕೊಡುವವರೆಲ್ಲರೂ ಭ್ರಷ್ಟರೇ ಆದ್ದರಿಂದ ಅಂಥವರಿಗೆ ನಿಮ್ಮ ಮತ ಖಂಡಿತ ಬೇಡ. ಉಳಿದ ಅಭ್ಯರ್ಥಿಗಳಲ್ಲಿ ಅರ್ಹರು ಯಾರೂ ಇಲ್ಲದಿದ್ದಲ್ಲಿ ನಿಮ್ಮ ಮತವನ್ನು ನೋಟಾಕ್ಕೆ ಹಾಕಿ.

ಇದನ್ನೂ ಓದಿ: Mallikarjun Kharge; ಮಲ್ಲಿಕಾರ್ಜುನ ಖರ್ಗೆ ಹಣೆಗೆ ಹಚ್ಚಿದ ಕುಂಕುಮವನ್ನು ಬಾಡಿಗಾರ್ಡ್ ಒರೆಸಿದ್ಯಾಕೆ?

ಚುನಾವಣಾ ಸಂಬಂಧ ಕಾನೂನುಗಳಲ್ಲಿ ಆಗಬೇಕಾದ ಬದಲಾವಣೆ/ಹೊಸ ಕಾನೂನುಗಳ ರಚನೆ

  • ಯಾವುದೇ ವ್ಯಕ್ತಿಯು ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸತಕ್ಕದಲ್ಲ.
  • ಒಂದು ಸ್ಥಾನದಲ್ಲಿರುವ ವ್ಯಕ್ತಿ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದೆ ಬೇರೊಂದು ಸ್ಥಾನಕ್ಕೆ ಸ್ಪರ್ಧಿಸಲು ಅರ್ಹನಲ್ಲ.
  • ನೋಟಾ ಮತಕ್ಕೆ ಮೌಲ್ಯವನ್ನು ಒದಗಿಸತಕ್ಕದ್ದು. ಇತರ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯ ಒಟ್ಟು ಮತಗಳಲ್ಲಿ ನೋಟಾ ಮತಗಳನ್ನು ಕಳೆದು ಆತನ ಆಯ್ಕೆಯನ್ನು ನಿರ್ಧರಿಸತಕ್ಕದ್ದು.
  • ಒಂದು ಪಕ್ಷದಿಂದ ಆಯ್ಕೆಯಾಗಿ ಸದಸ್ಯನಾದ ವ್ಯಕ್ತಿ ಪಕ್ಷಾಂತರ ಮಾಡಿ ಸ್ಥಾನ ಕಳೆದುಕೊಂಡು ಆನಂತರ ಅದೇ ಸ್ಥಾನಕ್ಕೆ ಬೇರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅರ್ಹನಾಗತಕ್ಕದ್ದಲ್ಲ.
  • ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಜೈಲುವಾಸದ ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧವನ್ನು ಎಸಗಿದ್ದಾಗಿ ಆರೋಪಿಸಲ್ಪಟ್ಟು ದಸ್ತಗಿರಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಕ್ತಿ ಮತ್ತು ಶಿಕ್ಷೆಯನ್ನು ಅನುಭವಿಸಿದ ವ್ಯಕ್ತಿ ಯಾವುದೇ ಸಾರ್ವಜನಿಕ ಚುನಾವಣೆಗೆ ಸ್ಪರ್ಧಿಸಲು ಅರ್ಹನಾಗತಕ್ಕದ್ದಲ್ಲ.
  • ಒಬ್ಬ ಸದಸ್ಯನು ಒಂದೇ ನಿವೃತ್ತಿ ವೇತನಕ್ಕೆ ಮಾತ್ರ ಅರ್ಹನಾಗತಕ್ಕದ್ದು.
  • ಜನಪ್ರತಿನಿಧಿಗಳಾದವರು ಸಾಮಾನ್ಯ ನಾಗರಿಕರಂತೆಯೇ ತೆರಿಗೆ ಕಾನೂನುಗಳ ವ್ಯಾಪ್ತಿಗೆ ಒಳಪಡತಕ್ಕದ್ದು. ಅವರಿಗೆ ಯಾವುದೇ ವಿಶೇಷ ರಿಯಾಯಿತಿ ಇರತಕ್ಕದ್ದಲ್ಲ.
  • ಜನಪ್ರತಿನಿಧಿಗಳ ನಿವೃತ್ತಿವೇತನ ನಿಧರಿಸುವಾಗ ಅವರ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸತಕ್ಕದ್ದು. ಕೋಟ್ಯಾಂತರ ರೂಪಾಯಿಗಳ ಮೌಲ್ಯದ ಸಂಪತ್ತು ಹೊಂದಿದವರಿಗೆ ನಿವೃತ್ತಿವೇತನ ಮತ್ತು ಯಾವುದೇ ಸರಕಾರಿ ಸೌಲಭ್ಯ ನೀಡತಕ್ಕದ್ದಲ್ಲ.
  • ಎಪ್ಪತ್ತು ವರ್ಷಗಳ ವಯಸ್ಸನ್ನು ಪೂರೈಸಿದ ವ್ಯಕ್ತಿ ಯಾವುದೇ ಸಾರ್ವಜನಿಕ ಸ್ಥಾನಕ್ಕೆ/ಹುದ್ದೆಗೆ ಅರ್ಹನಾಗತಕ್ಕದ್ದಲ್ಲ.
  • ಯಾವುದೇ ವ್ಯಕ್ತಿ ಯಾವುದೇ ಸಂದರ್ಭದಲ್ಲಿ ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ಹೊಂದಿರುವುದು ದಂಡನೀಯ ಅಪರಾಧವಾಗತಕ್ಕದ್ದು.
  • ಮತದಾನ ಮಾಡುವುದು ಕಡ್ಡಾಯವಾಗಬೇಕು. ಸಕಾರಣವಿಲ್ಲದೆ ಮತದಾನ ಮಾಡದ ವ್ಯಕ್ತಿ ಜೈಲುವಾಸದ/ದಂಡದ ಶಿಕ್ಷೆಗೆ ಒಳಪಡುವಂತಾಗಬೇಕು.
  • ಚುನಾವಣಾ ಪೂರ್ವದ 6 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಪಕ್ಷಾಂತರ ಮಾಡಿದ ವ್ಯಕ್ತಿ ತಾನು ಸೇರಿದ ಪಕ್ಷದ ಅಭ್ಯರ್ಥಿಯಾಗಿ ಆ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹನಾಗತಕ್ಕದ್ದಲ್ಲ. ಒಂದು ವೇಳೆ ಅಂತಹ ವ್ಯಕ್ತಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದಲ್ಲಿ ತನ್ನ ಸದಸ್ಯತ್ವದ ಅವಧಿ ಪೂರ್ತಿ ಸ್ವತಂತ್ರನಾಗಿಯೇ ಉಳಿಸಬೇಕಲ್ಲದೆ ಅವಧಿಯಲ್ಲಿ ಯಾವುದೇ ಪಕ್ಷವನ್ನು ಸೇರತಕ್ಕದ್ದಲ್ಲ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:38 pm, Wed, 26 April 23

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್