AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Election Time: ಉಚಿತ ಸೀರೆಗಳ ಪಡೆಯಲು ಮುಗಿಬಿದ್ದ ಮಹಿಳೆಯರು! ಬಿಜೆಪಿ ಮುಖಂಡನಿಂದ ಭರ್ಜರಿ ಬಾಡೂಟ, ಸೀರೆ ವಿತರಣೆ!

ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಜೆಪಿ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಶಿವಕುಮಾರ್ ರೇಷ್ಮೆ ಸೀರೆಗಳನ್ನು ವಿತರಣೆ ಮಾಡ್ತಿದ್ದಾರೆ ಎನ್ನುವುದನ್ನು ಅರಿತ ಮಹಿಳೆಯರು, ಸೀರೆ ಸಿಗುತ್ತೊ.. ಇಲ್ವೊ.. ಅಂತ ಒಂದೆ ಸಮಯದಲ್ಲಿ ಸೀರೆಗಳನ್ನು ಪಡೆಯಲು ಮುಗಿಬಿದ್ರು.

TV9 Web
| Edited By: |

Updated on:Feb 09, 2023 | 3:22 PM

Share

ಚಿಕ್ಕಬಳ್ಳಾಪುರ: ಮುಂಬರುವ ವಿಧಾನಸಭೆ ಚುನಾವಣೆ (Karnataka Assembly Elections 2023) ಹತ್ತಿರವಾಗ್ತಿದ್ದಂತೆ ರಾಜಕೀಯ ಮುಖಂಡರುಗಳು ತಮ್ಮ ತಮ್ಮ ಶಕ್ತಿ ಪ್ರದರ್ಶನ ಹಾಗೂ ಸಾಮಾರ್ಥ್ಯ ತೋರಿಸಿಕೊಳ್ಳಲು ಮುಂದಾಗಿದ್ದಾರೆ. ಕ್ಷೇತ್ರದ (Chikkaballapur) ಮತದಾರರ ಮೇಲೆ ಎಲ್ಲಿಲ್ಲದ ಪ್ರೀತಿ ಕರುಣೆ ಉಕ್ಕಿ ಬಂದಿದ್ದು ಭರ್ಜರಿ ಬಾಡೂಟ ಒಂದೆಡೆಯಾದ್ರೆ ಮತ್ತೊಂದೆಡೆ ಮಹಿಳಾ ಮತದಾರರನ್ನು ಸೇಳೆಯಲು ಅರಿಸಿನ ಕುಂಕುಮ ನೇಪದಲ್ಲಿ ಉಚಿತ ಸೀರೆಗಳ (Sarees) ವಿತರಣೆಗೆ ಮುಂದಾಗಿದ್ದಾರೆ. ಇನ್ನೂ ಉಚಿತ ಸೀರೆಗಳನ್ನು (sarry) ಪಡೆಯಲು ಮಹಿಳೆಯರು ನಾಮುಂದು ತಾಮುಂದು ಅಂತ ಚಿಕ್ಕ ಚಿಕ್ಕ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ನೂಕು ನೂಗ್ಗಲು ಮಾಡಿಕೊಂಡು ಹರಸಾಹಸ ಪಟ್ಟ ಘಟನೆ ನಡೆಯಿತು.

ಉಚಿತ ಸೀರೆ ವಿತರಣೆ ಯಾರು ಎಲ್ಲಿ ಮಾಡಿದ್ರು:

ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಜೆಪಿ (BJP ) ಮುಖಂಡ ಹಾಗೂ ರಿಯಲಗ್ ಎಸ್ಟೇಟ್ ಉದ್ಯಮಿ ಶಿವಕುಮಾರ್ ಎನ್ನುವವರು ತಾಲೂಕಿನ ಗಂಟೇಗಾನಹಳ್ಳಿ ಗ್ರಾಮದಲ್ಲಿ ಭರ್ಜರಿ ಬಾಡೂಟ ಹಾಗೂ ಸೀರೆಗಳ ವಿತರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಕಾರ್ಯಕ್ರಮಕ್ಕೆ ಸಾವಿರಾರು ಜನ ಮಹಿಳೆಯರು ಆಗಮಿಸಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಟೋಕನ್ ನೀಡಲಾಗಿತ್ತು. ಟೋಕನ್ ಪಡೆದ ಮಹಿಳೆಯರಿಗೆ ಸೀರೆ ನೀಡಲಾಯಿತು.

ಸೀರೆಗಳನ್ನು ಪಡೆಯಲು ನೂಕುನುಗ್ಗಲು:

ಶಿವಕುಮಾರ್ ಒಳ್ಳೆ ರೇಷ್ಮೆ ಸೀರೆಗಳನ್ನು ವಿತರಣೆ ಮಾಡ್ತಿದ್ದಾರೆ ಎನ್ನುವುದನ್ನು ಅರಿತ ಮಹಿಳೆಯರು, ಸೀರೆ ಸಿಗುತ್ತೊ.. ಇಲ್ವೊ.. ಅಂತ ಒಂದೆ ಸಮಯದಲ್ಲಿ ಸೀರೆಗಳನ್ನು ಪಡೆಯಲು ಮುಗಿಬಿದ್ರು. ಎರಡು ವಾಹನಗಳಲ್ಲಿ ಸೀರೆ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಮಹಿಳೆಯರು ಸೀರೆಗಳನ್ನು ಪಡೆಯಲು ಸೂಕ್ತ ವ್ಯವಸ್ಥೆ ಹಾಗೂ ಪೊಲೀಸ್ ಬಂದೋಬಸ್ತ್ ಮಾಡಿರಲಿಲ್ಲ. ಇದ್ರಿಂದ ಯುವತಿಯರಿಂದ ಹಿಡಿದು ವೃದ್ದೆಯವರೆ ವರೆಗೂ ಒಂದೆ ಸಮಯದಲ್ಲಿ ಸೀರೆಗಳನ್ನು ಪಡೆಯಲು ಮುಗಿಬಿದ್ರು. ಇದ್ರಿಂದ ಸೀರೆ ವಿತರಣೆ ಮಾಡ್ತಿದ್ದವರು ಯಾರಿಗೆ ಸೀರೆ ಕೊಡಬೇಕು ಯಾರಿಗೆ ಕೊಡಬಾರದು ಯಾರ ಬಳಿ ಟೋಕನ್ ಇದೆ ಇಲ್ವ ಅನ್ನೊದನ್ನು ಮರೆತು ಮುಂದೆ ಬಂದವರಿಗೆ ಸೀರೆ ವಿತರಣೆ ಮಾಡಿದ್ರು. ಇದ್ರಿಂದ ಟೋಕನ್ ಇದ್ರೂ ಸೀರೆ ಸಿಗಲ್ಲ ಎಂದುಕೊಮಡ ಮಹಿಳೆಯರು ತಳ್ಳಾಟ ನೂಕಾಟ ಮಾಡಿ ಹರಸಾಹಸ ಪಟ್ಟು ಸೀರೆಗಳನ್ನು ಪಡೆದುಕೊಂಡರು.

ಮಹಿಳೆಯರಿಗೆ ಸೀರೆ ಪುರುಷರಿಗೆ ಭರ್ಜರಿ ಬಾಡೂಟ:

ಅರಿಶಿನ ಕುಂಕುಮ ಕಾರ್ಯಕ್ರಮ್ಕಕೆ ಆಗಮಿಸಿದ ಮಹಿಳೆಯರಿಗೆ ಉಚಿತ ಸೀರೆ ವಿತರಣೆ ಮಾಡಿದ್ರೆ ಇತ್ತ ಪುರುಷ ಮತದಾರರನ್ನು ಸೆಳೆಯಲು ಮುಂದಾಗಿದ್ದ ಮುಖಂಡ ಶಿವಕುಮಾರ್, ಭರ್ಜರಿಯಾಗಿ ಬಾಡೂಟ ಏರ್ಪಡಿಸಿದ್ರು. ಬಿಸಿ ಬಿಸಿ ಮುದ್ದೆ ಮಟನ್ ಚಿಕನ್ ಪ್ರೈ, ಬೋಟಿ ಪ್ರೈ, ಚಿಕನ್ ಹಾಗೂ ಮಟನ್ ಬಿರಿಯಾನಿ ಸೇರಿದಂತೆ ಪಾಯಿಸ ಮಾಡಿಸಿದ್ದಾಗಿ ಪ್ರಚಾರ ಮಾಡಿಸಿದ್ದರು. ಜನ ಅದೇಲ್ಲಿದ್ದರೊ ಏನೊ… ಊಟದ ಸಮಯಕ್ಕೆ ಸಾವಿರಾರು ಜನ ನೆರೆದಿದ್ದರು. ಇದ್ರಿಂದ ಚುನಾವಣೆಗೆ ಬಂದಾಗ ನೋಡಿಕೊಂಡರಾಯಿತು ಸದ್ಯ ಬಿಸಿ ಬಿಸಿ ಮುದ್ದೆ ಮಟನ್ ಚಿಕನ್ ಪ್ರೈ, ಬೋಟಿ ಪ್ರೈ, ಚಿಕನ್ ಹಾಗೂ ಮಟನ್ ಬಿರಿಯಾನಿ ತಿನ್ನೋಣ ಅಂತ ಅದಕ್ಕೂ ಕ್ಯೂ ನಲ್ಲಿ ನಿಮತುಕೊಂಡ ಜನ ಬಾಡೂಟ ಸವಿದ್ರು.

ಶಿವಕುಮಾರ್ ಯಾಕೆ ಸೀರೆ ಹಾಗೂ ಬಾಡೂಟ ಹಾಕಿಸಿದ್ರು:

ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಜೆಪಿ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಶಿವಕುಮಾರ್, ಪ್ರಸ್ತುತ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗನಾಗಿದ್ದು, ಸಚಿವರ ಮುಂದೆ ಶಕ್ತಿ ಪ್ರದರ್ಶನ ಹಾಗೂ ಬಾಯಕೊಂಡ ಗಂಗಮ್ಮದೇವಿಗೆ ಹರಕೆ ನೇಪದಲ್ಲಿ ನಂದಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಮತದಾರರು ಹಾಗೂ ಮುಖಂಡರುಗಳನ್ನ ಗಮನ ಸೆಳೆಯಲು ಬಾಡೂಟ ಹಾಗೂ ಉಚಿತ ಸೀರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

Published On - 1:18 pm, Thu, 9 February 23

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ