Karnataka Results 2023: ಸುರೇಶ್​ ಕುಮಾರ್​ಗೆ ಗೆಲುವು ತಂದ ಮನೆ ಮನೆ ಭೇಟಿ

ಬೆಂಗಳೂರಿನ ರಾಜಾಜಿನಗರದ ಶಾಸಕರಾಗಿ ಸುರೇಶ್ ಕುಮಾರ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಸುಮಾರು ಎಂಟು ಸಾವಿರಕ್ಕೂ ಅಧಿಕ ಅಂತರದಿಂದ ಗೆಲುವು ಕಂಡಿದ್ದಾರೆ.

Karnataka Results 2023: ಸುರೇಶ್​ ಕುಮಾರ್​ಗೆ ಗೆಲುವು ತಂದ ಮನೆ ಮನೆ ಭೇಟಿ
ಎಸ್​ ಸುರೇಶ್​ ಕುಮಾರ್
Follow us
TV9 Web
| Updated By: ನಯನಾ ರಾಜೀವ್

Updated on:May 13, 2023 | 6:58 PM

ಬೆಂಗಳೂರಿನ ರಾಜಾಜಿನಗರದ ಶಾಸಕರಾಗಿ ಸುರೇಶ್ ಕುಮಾರ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಸುಮಾರು ಎಂಟು ಸಾವಿರಕ್ಕೂ ಅಧಿಕ ಅಂತರದಿಂದ ಗೆಲುವು ಕಂಡಿದ್ದಾರೆ. ರಾಜ್ಯದ ಉಳಿದ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ರಾಜಾಜಿನಗರದ ಕ್ಷೇತ್ರವೇ ಭಿನ್ನ. ಅಷ್ಟಕ್ಕೂ ಸರಳ ವ್ಯಕ್ತಿತ್ವದ ಸುರೇಶ್ ಕುಮಾರ್ ಮಾಡಿದ ಮ್ಯಾಜಿಕ್ ಏನು?

ಅಧಿಕಾರದಲ್ಲಿದ್ದ ಬಿಜೆಪಿ ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ಸುರೇಶ್ ಕುಮಾರ್ ಸಚಿವ ಸ್ಥಾನ ಕಳೆದುಕೊಂಡಿದ್ದರು. ಸಚಿವರಾಗಿದ್ದಾಗಲೂ, ಶಾಸಕರಾಗಿದ್ದಾಗಲೂ ಸರಳತೆಯಿಂದಲೇ ಇದ್ದವರು ಸುರೇಶ್ ಕುಮಾರ್. ಬಿಜೆಪಿಯ ಎಂಎಲ್ ಸಿಯಾಗಿದ್ದ ಪುಟ್ಟಣ್ಣ ಅವರನ್ನು ತನ್ನತ್ತ ಸೆಳೆದುಕೊಂಡ ಕಾಂಗ್ರೆಸ್ ಪುಟ್ಟಣ್ಣ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿತ್ತು.

‘ರಾಜಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಸುಮಾರು 8050 ಮತಗಳ ಅಂತರದಿಂದ ವಿಜಯಿಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಆಶೀರ್ವದಿಸಿರುವ ರಾಜಾಜಿನಗರದ ಆತ್ಮೀಯ ಮತದಾರರಿಗೆ ಹಾಗೂ ಈ ವಿಜಯಕ್ಕಾಗಿ ಶ್ರಮಿಸಿದ ನನ್ನ ಎಲ್ಲಾ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು’ ಇದು ಗೆದ್ದ ನಂತರ ಸುರೇಶ್ ಕುಮಾರ್ ಅವರ ಮಾತುಗಳು.

ರಾಜಾಜಿನಗರದ ಗೆಲುವನ್ನು ರಾಜಕಾರಣ ಮೀರಿದ ಗೆಲುವು ಎಂದು ಬೇಕಾದರೂ ವಿಶ್ಲೇಷಿಸಬಹುದು. ಸುರೇಶ್ ಕುಮಾರ್ 2022ರ ಜೂನ್ ನಿಂದಲೇ ಮನೆ ಮನೆ ಭೇಟಿ ಆರಂಭಿಸಿದ್ದರು. ಮನೆ ಮನೆಗೆ ಭೇಟಿ ನೀಡುವುದು, ಪ್ರತಿಯೊಬ್ಬರ ಸಮಸ್ಯೆ ಆಲಿಸುವುದು, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ, ಆರೋಗ್ಯ ಸಮಸ್ಯೆ ಇದ್ದವರಿಗೆ ನೆರವು, ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ನೆರವು.. ಹೀಗೆ ಸುರೇಶ್ ಕುಮಾರ್ ಜನಮಾನಸದಲ್ಲಿ ಹತ್ತಿರವಾಗುತ್ತಲೇ ಹೋದರು.

ಮನೆ ಮನೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜತೆ ಮಕ್ಕಳಾಗಿ ಬೆರತ ಸುರೇಶ್ ಕುಮಾರ್ ಮಕ್ಕಳ ವಿದ್ಯಾಭ್ಯಾಸದ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಮುಂಜಾನೆಯಿಂದ ಮನೆ ಮನೆ ಭೇಟಿ ಆರಂಭಿಸಿ ಬೆಳಗ್ಗೆ 10. 30ಕ್ಕೆ ಕೊನೆಮಾಡುತ್ತಿದ್ದರು. ಸಂಜೆ 4.30ಕ್ಕೆ ಗಂಟೆಯಿಂದ ಆರಂಭಿಸಿ ರಾತ್ರಿ ಒಂಭತ್ತು ಗಂಟೆಯವರೆಗೂ ಮನೆ ಮನೆಗೆ ಭೇಟಿ ನೀಡುತ್ತಿದ್ದರು.

ಇದೊಂದು ವಿಭಿನ್ನ ಹಾಗೂ ವೈಯಕ್ತಿಕವಾಗಿ ನನಗೆ ಬಲು ಹತ್ತಿರವಾದ ಅನುಭವವಾಗಿದೆ. ನಾನು ಸಮಾಜದ ಹಲವು ಸ್ತರಗಳಲ್ಲಿರುವ ಹಾಗೂ ಯಾವುದೇ ಪಕ್ಷದ ಭೇದ ಭಾವಗಳಿಲ್ಲದೆ ಹಲವು ಬಗೆಯ ಜನರನ್ನು ಭೇಟಿ ಮಾಡಿದ್ದೇನೆ. ದಿನಗೂಲಿ ಕಾರ್ಮಿಕನಿಂದ ಹಿಡಿದು ಉನ್ನತ ಮಟ್ಟದ ವಿಜ್ಞಾನಿಯವರೆಗೂ ನಾವು ಎಲ್ಲರನ್ನೂ ಭೇಟಿ ಮಾಡಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿಕೊಂಡೇ ಬಂದಿದ್ದರು.

ಕೆಲಸ ಮಾಡದ ಪುಟ್ಟಣ್ಣ ಪ್ರಭಾವ: ಬಿಜೆಪಿಯಿಂದ ಕಾಂಗ್ರೆಸ್​ಗೆ ಜಿಗಿದರೂ ಪುಟ್ಟಣ್ಣ ಅವರ ‘ಬಲ’ಗಳಿಗೆ ಏನೂ ಕಡಿಮೆ ಇರಲಿಲ್ಲ ಎನ್ನುವುದು ಕ್ಷೇತ್ರದಲ್ಲಿನ ಮಾತು. ಚುನಾವಣೆ ಸಂದರ್ಭದಲ್ಲಿ ತಮ್ಮೆಲ್ಲ ಸಂಪನ್ಮೂಲಗಳನ್ನು, ಶಕ್ತಿ-ಸಾಮರ್ಥ್ಯಗಳನ್ನು ಬಳಸಿಕೊಂಡಿದ್ದರು. ಒಂದು ಕಡೆ ಪುಟ್ಟಣ್ಣ ಅವರ ‘ಬಲ’ ಇನ್ನೊಂದು ಕಡೆ ಸುರೇಶ್ ಕುಮಾರ್ ಅವರ ಮನೆ ಮನೆ ಪ್ರಚಾರ. ಆದರೆ ಕೊನೆಗೆ ಜನ ಕೈ ಹಿಡಿದಿದ್ದು ಸರಳ ರಾಜಕಾರಣ, ಪ್ರೀತಿಯ ರಾಜಕಾರಣ. 2023ರ ಚುನಾವಣೆಯಲ್ಲಿ ಕರ್ನಾಟಕದ ಇನ್ಯಾವ ಕ್ಷೇತ್ರದಲ್ಲಿಯೂ ಇಂತಹ ಭಿನ್ನತೆ ಕಾಣಲು ಅಸಾಧ್ಯ ಎಂದೇ ಹೇಳಬಹುದು.

ಪ್ರೀತಿಯ ರಾಜಕಾರಣದಿಂದ ಗೆದ್ದಿದ್ದ ದತ್ತಾ: 2013ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಕಡೂರು ಕ್ಷೇತ್ರದಿಂದ ಜೆಡಿಎಸ್​ ನ ವೈಎಸ್​ವಿ ದತ್ತಾ ಗೆದ್ದಿದ್ದರು. ಅವರು ಸಹ ಇದೇ ರೀತಿ ಜನರ ಬಳಿಗೆ ತೆರಳಿ ಪ್ರತಿಯೊಂದನ್ನು ಆಲಿಸಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.

ನಗರ ಪ್ರದೇಶದಲ್ಲಿ ಜನಸಂಖ್ಯೆ ಜಾಸ್ತಿ ಇದ್ದರೂ ಮನೆಗಳು ಹತ್ತಿರದಲ್ಲಿ ಇರುತ್ತವೆ. ಹಾಗಾಗಿಯೇ ಜನರ ಹತ್ತಿರಕ್ಕೆ ಹೋಗಲು ಸುರೇಶ್ ಕುಮಾರ್ ಗೆ ಸಾಧ್ಯವಾಯಿತು. ವಾಕಿಂಗ್, ಜಾಗಿಂಗ್ ಬಂದ ಜನರ ಜತೆಯೂ ಮಾತನಾಡಿ ಅವರ ಮನದಾಳವನ್ನು ಅರಿತುಕೊಂಡರು. ಗ್ರಾಮೀಣ ಭಾಗದಲ್ಲಿ ಈ ರೀತಿ ಮನೆ ಮನೆ ಭೇಟಿ ಒಂದು ಸವಾಲಾಗಬಹುದು.

ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:56 pm, Sat, 13 May 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ