ಎಲೆಕ್ಷನ್ ಟೈಮು: ಸ್ಟಿಕ್ಕರ್ ಮಾತ್ರ ಬ್ರಾಂಡೆಡ್ ಲಿಕ್ಕರ್, ಒಳಗಡೆ ಪಕ್ಕಾ ಲೋಕಲ್ ಕಿಕ್ಕರ್! ಮತದಾರ ಪ್ರಭುವಿಗೆ ಜೈ ಜೈ!

ಮಹಾ ಚುನಾವಣೆಗಳು ಬರ್ತಿದ್ದಂತೆ ಅಕ್ರಮಗಳ ಸರಮಾಲೆಯೇ ಶುರುವಾಗಿಬಿಡುತ್ತೆ. ಆಂಧ್ರ-ತೆಲಂಗಾಣ ಗಡಿ ಭಾಗದ ಆ ಜಿಲ್ಲೆಯಲ್ಲಿ ಬ್ರಾಂಡೆಡ್ ಲಿಕ್ಕರ್ ಅನ್ನ ನಕಲು ಮಾಡಿ, ಫೇಕ್ ಕ್ಯಾಪ್, ಫೇಕ್ ಲೇಬಲ್ ಗಳನ್ನ ಅಂಟಿಸಿ ಮಾರಾಟ ಮಾಡುತ್ತಿದ್ದ ನಟೋರಿಯಸ್ ಜಾಲವೊಂದು ಅಬಕಾರಿ ಪೊಲೀಸರ ಖೆಡ್ಡಾಗೆ ಬಿದ್ದಿದೆ.

ಎಲೆಕ್ಷನ್ ಟೈಮು: ಸ್ಟಿಕ್ಕರ್ ಮಾತ್ರ ಬ್ರಾಂಡೆಡ್ ಲಿಕ್ಕರ್, ಒಳಗಡೆ ಪಕ್ಕಾ ಲೋಕಲ್ ಕಿಕ್ಕರ್! ಮತದಾರ ಪ್ರಭುವಿಗೆ ಜೈ ಜೈ!
ಸ್ಟಿಕ್ಕರ್ ಮಾತ್ರ ಬ್ರಾಂಡೆಡ್ ಲಿಕ್ಕರ್, ಒಳಗಡೆ ಪಕ್ಕಾ ಲೋಕಲ್ ಕಿಕ್ಕರ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 05, 2023 | 10:28 AM

ರಾಯಚೂರು: ಮಹಾ ಚುನಾವಣೆಗಳು (Karnataka Assembly Elections 2023) ಬರ್ತಿದ್ದಂತೆ ಅಕ್ರಮಗಳ ಸರಮಾಲೆಯೇ ಶುರುವಾಗಿಬಿಡುತ್ತೆ. ಆಂಧ್ರ-ತೆಲಂಗಾಣ ಗಡಿ ಭಾಗದ ಆ ಜಿಲ್ಲೆಯಲ್ಲಿ ಬ್ರಾಂಡೆಡ್ ಲಿಕ್ಕರ್ ಅನ್ನ ನಕಲು ಮಾಡಿ, ಫೇಕ್ ಕ್ಯಾಪ್, ಫೇಕ್ ಲೇಬಲ್ ಗಳನ್ನ (Fake Liquor) ಅಂಟಿಸಿ ಮಾರಾಟ ಮಾಡುತ್ತಿದ್ದ ನಟೋರಿಯಸ್ ಜಾಲವೊಂದು ಅಬಕಾರಿ ಪೊಲೀಸರ ಖೆಡ್ಡಾಗೆ ಬಿದ್ದಿದೆ. ಹೌದು.. ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಚುನಾವಣೆ ಹಿನ್ನೆಲೆ ಸದ್ದಿಲ್ಲದೇ ಆಕ್ಟಿವ್ ಆಗಿದ್ದ ಅಕ್ರಮ ಮದ್ಯ ತಯಾರಿಕಾ ಜಾಲ ಇದೀಗ ಖಾಕಿ ಖೆಡ್ಡಾಗೆ ಬಿದ್ದಿದೆ. ರಾಯಚೂರು (Raichur) ಜಿಲ್ಲೆಯ ಅಬಕಾರಿ ಇಲಾಖೆ (Excise) ಸಿಬ್ಬಂದಿ ಕಳೆದ ಎರಡು ದಿನಗಳಿಂದ ಒಂದೇ ನೆಟ್ ವರ್ಕ್ ನ ನಾಲ್ಕು ಕಡೆ‌‌ ದಾಳಿ ನಡೆಸಿದ್ದರು. ಆಂಧ್ರ-ತೆಲಂಗಾಣ ಗಡಿಯಲ್ಲಿರೊ ರಾಯಚೂರು ತಾಲ್ಲೂಕಿನ ಕಡಗಂದೊಡ್ಡಿ, ಎಲ್ ಕೆ ದೊಡ್ಡಿ, ಹೊಸೂರು‌ ಸೇರಿ ನಾಲ್ಕು ಕಡೆ‌‌ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ದಂಧೆಕೋರರೆಲ್ಲಾ ಎಸ್ಕೇಪ್ ಆಗಿದ್ರು. ಈ ವೇಳೆ ಬ್ರಾಂಡೆಡ್ ಲಿಕ್ಕರ್ ಬಾಟಲ್ ನಲ್ಲಿ ನಕಲಿ ಮದ್ಯ ಸಂಗ್ರಹಿಸಿ ಮಾರಾಟ ಮಾಡಲಾಗ್ತಿದ್ದ ವಿಷಯ ಬೆಳಕಿಗೆ ಬಂದಿದೆ. ನಾಲ್ಕು ಕಡೆ ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಒಟ್ಟು 500 ಕ್ಕು ಹೆಚ್ಚು ಬ್ರಾಂಡೆಡ್ ಲಿಕ್ಕರ್ ರೀತಿಯ ಬಾಟಲ್ ಕ್ಯಾಪ್ ಗಳು, 100 ಕ್ಕು ಹೆಚ್ಚು ಮದ್ಯದ ಬಾಟಲ್ ಗಳು, ಒಂದು ಆಟೋ ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದೆ ಎಂದು ರಾಯಚೂರು ಜಿಲ್ಲಾ ಅಬಕಾರಿ ಡಿಸಿ ಲಕ್ಷ್ಮೀ ನಾಯಕ್ ಮಾಹಿತಿ ನೀಡಿದ್ದಾರೆ.

ಚುನಾವಣೆ ಸಮ್ಮುಖದಲ್ಲಿ ಹಳ್ಳಿಗಳು ಸೇರಿದಂತೆ, ನಗರ ಪ್ರದೇಶಗಳ ಹೊರ ವಲಯಗಳಲ್ಲಿ ಪಾರ್ಟಿ, ಸಭೆಗಳು ನಡೆಯೋದು ಸಾಮಾನ್ಯ. ಜೊತೆಗೆ ಎಣ್ಣೆ, ಹೆಂಡ, ಲಿಕ್ಕರ್ ಮಾರಾಟ ಜೋರಾಗಿರತ್ತೆ.‌‌ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಈ‌ ಜಾಲ ತನ್ನದೇ ನೆಟ್ ವರ್ಕ್ ಮೂಲಕ ಅಕ್ರಮ ಮದ್ಯ ತಯಾರಿಕೆ ಮಾರಾಟದಲ್ಲಿ ತೊಡಗಿತ್ತು. ಸದ್ಯ ಅಬಕಾರಿ ಪೊಲೀಸರು ರಾಮಾಂಜನೇಯ ಅನ್ನೋ ಆರೋಪಿಯನ್ನ ಬಂಧಿಸಿದ್ದಾರೆ‌‌. ಅಬಕಾರಿ ಪೊಲೀಸರ ತನಿಖೆ ವೇಳೆ, ಈ‌ ದಂಧೆಕೋರರು ಮುಂಬೈ ನಿಂದ ಬ್ರಾಂಡೆಡ್ ಲಿಕ್ಕರ್ ನ‌ ಲೇಬಲ್ ಗಳು, ಕ್ಯಾಪ್ ಗಳನ್ನು ಅಕ್ರಮವಾಗಿ ತರಿಸಿಕೊಳ್ತಿದ್ರು.

ಇದನ್ನೂ ಓದಿ:

ರಾಯಚೂರು ಜಿಲ್ಲೆಯಲ್ಲಿ ಮಿತಿಮೀರಿದ ಸೇಂದಿ, ಮದ್ಯದ ಹಾವಳಿ: ಇದಕ್ಕೆ ಕಡಿವಾಣ ಹಾಕಿದವರಿಗಷ್ಟೇ ನಮ್ಮ ವೋಟ್ ಅಂತಿದ್ದಾರೆ ಮಹಿಳೆಯರು!

ಗುಜರಿ ಅಂಗಡಿಗಳಿಂದ ಖಾಲಿ ಲಿಕ್ಕರ್ ಬಾಟಲ್ ಗಳನ್ನ ಖರೀದಿಸಿಕೊಳ್ತಿದ್ರು. ನಂತರ ಹೆಚ್ಚಿನ ಬೆಲೆಯ ಬ್ರಾಂಡೆಡ್ ಲಿಕ್ಕರ್ ಖಾಲಿ ಬಾಟಲ್ ಗೆ ನಕಲಿ ಲೇಬಲ್, ಕ್ಯಾಪ್ ಗಳನ್ನು ಹಾಕಿ ಅದರೊಳಗೆ ಅತೀ ಕಡಿಮೆ ಬೆಲೆಯ ಮದ್ಯವನ್ನ ಹಾಕಿ ಪ್ಯಾಕ್ ಮಾಡುತಿದ್ದರು‌. ನಂತ್ರ ತಮ್ಮ ನೆಟ್ ವರ್ಕ್ ಮೂಲಕ ಡಾಬಾಗಳಿಗೆ, ವಿವಿಧ ಗ್ರಾಮಗಳ ಪೆಟ್ಟಿ ಅಂಗಡಿಗಳಿಗೆ ಈ ನಕಲಿ ಲಿಕ್ಕರ್ ಸರಬರಾಜು ಮಾಡ್ತಿದ್ದರು. ಇದು ಆಂಧ್ರ-ತೆಲಂಗಾಣದ ಮೂಲಕ ಆಪರೇಟ್ ಆಗುತ್ತಿದ್ದ ಶಂಕೆ ಇದ್ದು ಈ ಬಗ್ಗೆ ಅಬಕಾರಿ ಪೊಲೀಸರು ತನಿಖೆ ನಡೆಸ್ತಿದ್ದಾರೆ‌.‌

ಸದ್ಯ ಮದ್ಯ ದಾಳಿ ಸಂಬಂಧಿಸಿದಂತೆ ಅಬಕಾರಿ ಪೊಲೀಸರು ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಅದೇನೆ‌ ಇರಲಿ ನೀವು ಮದ್ಯ ಪ್ರೀಯರಾಗಿದ್ರೆ ಲಿಕ್ಕರ್ ಸೇವನೆ ವೇಳೆ ಅದು ಅಸಲಿಯೋ, ನಕಲಿಯೋ ಅನ್ನೋದನ್ನ ಪರಿಕ್ಷೀಸಿ ಕೊಳ್ಳಿ. ಇಲ್ಲವಾದಲ್ಲಿ ನೀವು ಮೋಸ ಹೋಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು‌

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್