AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ‘ಚುನಾವಣೆ ಪ್ರಚಾರ ವೇಳೆ ವಾಲುತ್ತಾ ನಡೆಯುವ ಡಿಕೆಶಿಯನ್ನು ನೋಡಿ’ ಎಂಬ ಶೀರ್ಷಿಕೆಯ ವೈರಲ್ ವಿಡಿಯೊ ಮೇಕೆದಾಟು ಪಾದಯಾತ್ರೆಯದ್ದು

DK Shivakumar: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಕರ್ನಾಟಕದ ಸಿಎಂ ಆಕಾಂಕ್ಷಿಯಾಗಿರುವ ಶಿವಕುಮಾರ್ ಮನೆ ಮನೆ ಪ್ರಚಾರದ ಸಮಯದಲ್ಲಿ ಮದ್ಯದ ಅಮಲಿನಲ್ಲಿರುವುದು ಎಂಬ ಬರಹದೊಂದಿಗೆ ವೈರಲ್ ಆಗಿರುವ ವಿಡಿಯೊದ ಫ್ಯಾಕ್ಟ್​​ಚೆಕ್ ಇಲ್ಲಿದೆ

Fact Check: 'ಚುನಾವಣೆ ಪ್ರಚಾರ ವೇಳೆ ವಾಲುತ್ತಾ ನಡೆಯುವ ಡಿಕೆಶಿಯನ್ನು ನೋಡಿ' ಎಂಬ ಶೀರ್ಷಿಕೆಯ ವೈರಲ್ ವಿಡಿಯೊ ಮೇಕೆದಾಟು ಪಾದಯಾತ್ರೆಯದ್ದು
ಡಿಕೆ ಶಿವಕುಮಾರ್
ರಶ್ಮಿ ಕಲ್ಲಕಟ್ಟ
|

Updated on: May 03, 2023 | 9:00 PM

Share

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka assembly elections) ಪ್ರಚಾರದ ವೇಳೆ ಮದ್ಯದ ಅಮಲಿನಲ್ಲಿರುವುದು ಎಂಬ ಬರಹದೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಾಲುತ್ತಾ ನಡೆಯುತ್ತಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯಂತೆ ಎಂಬ ಬರಹದೊಂದಿಗೆ ಹಲವಾರು ನೆಟ್ಟಿಗರು ಕಾಂಗ್ರೆಸ್​​ನ್ನು (Congress) ಟೀಕಿಸುತ್ತಾ ಈ ವಿಡಿಯೊ ಶೇರ್ ಮಾಡಿದ್ದಾರೆ. ಇನ್ನು ಕೆಲವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಕರ್ನಾಟಕದ ಸಿಎಂ ಆಕಾಂಕ್ಷಿಯಾಗಿರುವ ಶಿವಕುಮಾರ್ ಮನೆ ಮನೆ ಪ್ರಚಾರದ ಸಮಯದಲ್ಲಿ ಮದ್ಯದ ಅಮಲಿನಲ್ಲಿರುವುದು ಎಂದು ಬರೆದುಕೊಂಡಿದ್ದಾರೆ.ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೊದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಡೆದು ಬರುತ್ತಿರುವ ಡಿಕೆ ಶಿವಕುಮಾರ್ ಅವರನ್ನು ಕಾಣಬಹುದು. ಸುಸ್ತಾಗಿ ಹೆಜ್ಜೆ ಇಡಲು ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಅವರು ಇದ್ದಾರೆ. ಡಿಕೆಶಿಯವರ ಈ ವೈರಲ್ ವಿಡಿಯೊ ಕರ್ನಾಟಕ ಚುನಾವಣೆಯ ಪ್ರಚಾರದ್ದು ಅಲ್ಲ. ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ನಡೆಸಿ ವರದಿ ಮಾಡಿರುವ ಬೂಮ್ ಇದು 2022 ಜನವರಿಯಲ್ಲಿನ ವಿಡಿಯೊ ಎಂದು ಹೇಳಿದೆ.

ವಿಡಿಯೊದ ಫ್ರೇಮ್​​ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜನವರಿ 9, 2022ರಂದು ಮಾಡಿದ ಟ್ವೀಟೊಂದರಲ್ಲಿ ಈ ವಿಡಿಯೊ ಸಿಕ್ಕಿದೆ. ಈ ವಿಡಿಯೊ ನ್ಯೂಸ್‌ಫಸ್ಟ್ ‘ ಸುಸ್ತಾಗಿ ತಟ್ಟಾಡಿದ ಡಿಕೆಶಿ’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದೆ.

ಇದನ್ನೂ ಓದಿ: Fact Check: ಸೀರೆ ಹಂಚುವಾಗ ಹಿರಿಯ ಮಹಿಳೆ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ; ವೈರಲ್ ವಿಡಿಯೊ ಕರ್ನಾಟಕದ್ದಲ್ಲ

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಜಲಾಶಯದ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕೋವಿಡ್-19 ನಿರ್ಬಂಧಗಳನ್ನು ಕಡೆಗಣಿಸಿ  ಮೇಕೆದಾಟು ಪಾದಯಾತ್ರೆಯನ್ನು ಜನವರಿ 2021 ರಲ್ಲಿ ಆರಂಭಿಸಿತು. ವರದಿಗಳ ಪ್ರಕಾರ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆಶಿ ಸುಸ್ತಾಗಿ ವಾಲುತ್ತಾ ನಡೆಯುತ್ತಿರುವ ವಿಡಿಯೊ ಇದಾಗಿದ್ದು, ಕರ್ನಾಟಕ ಚುನಾವಣೆಗಾಗಿ ಮನೆ ಮನೆ ಪ್ರಚಾರ ಅಭಿಯಾನದ ವೇಳೆಯಲ್ಲಿನ ವಿಡಿಯೊ ಇದಲ್ಲ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು