ಗಾಂಧಿ ವಂಶಕ್ಕೆ ರಾಮನ ಬಗ್ಗೆ ಅಲರ್ಜಿ ಇದೆ ಎಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಗಾಂಧಿ ವಂಶಕ್ಕೆ ರಾಮನ ಬಗ್ಗೆ ಅಲರ್ಜಿ ಇದೆ. ಹೀಗಾಗಿ ಕಾಂಗ್ರೆಸ್ ಇದೀಗ ಬಜರಂಗದಳವನ್ನು ಬ್ಯಾನ್ ಮಾಡೋದಾಗಿ ಹೇಳುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ಮಾಡಿದ್ದಾರೆ.

ಗಾಂಧಿ ವಂಶಕ್ಕೆ ರಾಮನ ಬಗ್ಗೆ ಅಲರ್ಜಿ ಇದೆ ಎಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಸಚಿವೆ ಸ್ಮೃತಿ ಇರಾನಿ
Follow us
|

Updated on: May 06, 2023 | 7:08 PM

ಕಲಬುರಗಿ: ಗಾಂಧಿ ವಂಶಕ್ಕೆ ರಾಮನ ಬಗ್ಗೆ ಅಲರ್ಜಿ ಇದೆ. ಹೀಗಾಗಿ ಕಾಂಗ್ರೆಸ್ ಇದೀಗ ಬಜರಂಗದಳವನ್ನು ಬ್ಯಾನ್ ಮಾಡೋದಾಗಿ ಹೇಳುತ್ತಿದೆ. ರಾವಣ ಹನುಮಂತ ಬಾಲಕ್ಕೆ ಬೆಂಕಿ ಹಚ್ಚಿದ. ಹನುಮಂತ ಇಡೀ ರಾವಣನ ರಾಜ್ಯವನ್ನೇ ಸುಟ್ಟ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಸೇಡಂ ಕ್ಷೇತ್ರ ವ್ಯಾಪ್ತಿಯ ಸುಲೆಪೇಟ್​​ ಗ್ರಾಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ಪೊಲಿಟಿಕಲ್​ ವಾರಂಟಿಯೇ ಮುಗಿದಿದೆ. ಕಾಂಗ್ರೆಸ್​ನವರು ಹೇಳುತ್ತಲೇ ಇರ್ತಾರೆ, ಆದರೆ ಏನೂ ಮಾಡಲ್ಲ. ಕಾಂಗ್ರೆಸ್ ಗೊಂದಲದಲ್ಲಿದೆ, ಹೀಗಾಗಿ ಕಾಂಗ್ರೆಸ್ ಪ್ರೋಗ್ರೆಸ್ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ದೇಶದ ಜನತೆಗೆ ಕ್ಷಮೆ ಕೇಳಬೇಕು  

ಸಂಸದ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತ ದೇಶದ ವಿರುದ್ಧ ಮಾತನಾಡಿ ಅಪಮಾನ ಮಾಡಿದ್ದು, ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದು ಸ್ಮೃತಿ ಇರಾನಿ ಇತ್ತೀಚೆಗೆ ಆಗ್ರಹಿಸಿದ್ದರು. ಭಾರತ ಜನ್ಮ ಭೂಮಿ ಹೆಸರನ್ನು ಇಡೀ ವಿಶ್ವಕ್ಕೆ ಪಸರಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ವಿಜಯ ಸಂಕಲ್ಪ ಯಾತ್ರೆಯ ಮೂಲಕ ಜನತೆಗೆ ತಿಳಿಸುವ ಕಾರ್ಯಕ್ರಮ ಮಾಡುತ್ತಿರುವ ನಮಗೆ ಹೆಮ್ಮೆಯಾಗುತ್ತದೆ ಎಂದಿದ್ದರು.

ಇದನ್ನೂ ಓದಿ: ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್​ ಆರೋಪ, 70 ಇಲಿಗಳನ್ನು ತಿಂದ ಬೆಕ್ಕು ಹಜ್​ಗೆ ಹೋದಂತೆ: ಜೆಪಿ ನಡ್ಡಾ ವ್ಯಂಗ್ಯ

ನಾವು ಎಲ್ಲೆ ಹೋದರು ನಮ್ಮ ಬಾಯಿಯಲ್ಲಿ ಬರುವ ಒಂದೇ ಒಂದು ಘೋಷನೆಯಂದರೆ ಭಾರತ ಮಾತಾ ಕೀ ಜೈ. ವಿಜಯ ಸಂಕಲ್ಪ ಯಾತ್ರೆಯು ಮಂಡಲ, ಜಿಲ್ಲಾ, ವಿಧಾನಸಭಾ ಮಾತ್ರ ಸೀಮಿತವಲ್ಲದೆ ಇಡೀ ದೇಶದ ಶಕ್ತಿಯಾಗಿದೆ ಮತ್ತು ರಾಜ್ಯದ ಜನತೆಯ ಸ್ವಾಭಿಮಾನದ ಸಂಕೇತವಾಗಿದೆ ಎಂದು ಹೇಳಿದ್ದರು.

ಕಾಂಗ್ರೆಸ್​ಗೆ ಪ್ರಶ್ನೆ ಮಾಡಿದ ಸ್ಮೃತಿ ಇರಾನಿ 

ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಶ್ನೆ ಕೇಳುತ್ತೇನೆ ನಮ್ಮ ರಾಜ್ಯ ನೀತಿಯನ್ನು ವಿದೇಶಕ್ಕೆ ಹೋಗಿ ತೆಗೆಳುವ ಕೆಲಸ ಮಾಡುತ್ತಿರುವುದು ನಿಮ್ಮ ಸಂಸ್ಕಾರವೇ? ಸೋನಿಯಾಜಿಯವರೆ ಪ್ರತಿಯೊಬ್ಬ ತಾಯಿಯು ತನ್ನ ಮಗನಿಗೆ ಕಲಿಸುವ ಸಂಸ್ಕಾರ ಎಂದರೆ ಮನೆಯ ಜಗಳ ಮನೆಯಲ್ಲಿಯೇ ಇರಬೇಕು. ಅಣ್ಣ ತಮ್ಮಂದಿರ ಜಗಳ ಮನೆಯಲ್ಲಿಯೇ ಬಗೆ ಹರಿಸಿಕೊಳ್ಳಬೇಕು ಆದರೆ ನಿಮ್ಮ ಮಗ ರಾಹುಲ್ ಗಾಂಧಿ ವಿದೇಶದಲ್ಲಿ ಮಾತನಾಡುವುದು ಇದು ನಿಮ್ಮ ಸಂಸ್ಕಾರವೇ, ಇಂತಹ ಸಂಸ್ಕಾರವನ್ನು ನಿಮ್ಮ ಮಗನಿಗೆ ಕಲಿಸಿದ್ದಿರಾ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: Smriti Irani: ಮೋದಿ ವರ್ಚಸ್ಸು ಹಾಳು ಮಾಡಲು ರಾಹುಲ್ ಪಣ ತೊಟ್ಟಿದ್ದಾರೆ, ವಿದೇಶ, ಸಂಸತ್ತು ಎಲ್ಲೆಲ್ಲೂ ಸುಳ್ಳು ಸುಳ್ಳು: ಸ್ಮೃತಿ ಇರಾನಿ

ನಿಮ್ಮ ರಾಜಕೀಯ ಜೀವನದ ವಾರಂಟಿ ಮುಗಿದಿದೆ. ಈಗ ಜನತೆಗೆ ಗ್ಯಾರಂಟಿ ಕೊಡಲು ಹೋಗುತ್ತಿದ್ದೀರಿ. ಹಿಂದೂಸ್ಥಾನದ ಜನತೆಗೆ ಕೊಡುತ್ತಿರುವ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಎಂದರೇ ಒಂದು ಲೂಟಿ ಇನ್ನೊಂದು ಲಾಠಿ ಏಟು. ರೈತರು ಮಹದಾಯಿ ನೀರಿಗಾಗಿ ಹೋರಾಟ ಮಾಡುತ್ತಿರುವಾಗ ಸಿದ್ದರಾಮಯ್ಯ ಅವರು ಲಾಠಿ ಚಾರ್ಜ್ ಮಾಡಿರುವುದನ್ನು ಜನತೆ ಇನ್ನೂ ಮರೆತಿಲ್ಲ ಎಂದು ಕಿಡಿಕಾರಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ