ಕಾಂಗ್ರೆಸ್ನವರಿಗೆ ಧೈರ್ಯ ಇದ್ದರೆ ಲಿಂಗಾಯತ ಸಿಎಂ ಘೋಷಿಸಲಿ: ಜಿಎಂ ಸಿದ್ದೇಶ್ವರ್ ಸವಾಲು
ಕಾಂಗ್ರೆಸ್ನವರಿಗೆ ಧೈರ್ಯ ಇದ್ದರೆ ಲಿಂಗಾಯತ ಸಿಎಂ ಘೋಷಿಸಿ ಚುನಾವಣೆಗೆ ಹೋಗಲಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಸವಾಲು ಹಾಕಿದ್ದಾರೆ.
ದಾವಣಗೆರೆ: ಕಾಂಗ್ರೆಸ್ನವರಿಗೆ (Congress) ಧೈರ್ಯ ಇದ್ದರೆ ಲಿಂಗಾಯತ ಸಿಎಂ ಘೋಷಿಸಲಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ (GM Siddeshwar) ಸವಾಲು ಹಾಕಿದ್ದಾರೆ. ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಿಎಂ ಎಂದು ಘೋಷಣೆ ಮಾಡಿ ಚುನಾವಣೆಗೆ ಹೋಗಲಿ. ಈ ಹಿಂದೆ ಯಡಿಯೂರಪ್ಪರನ್ನ ಸಿಎಂ ಎಂದು ಘೋಷಣೆ ಮಾಡಿದ್ದರು. ಈಗಲೂ ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ಒಮ್ಮತವಾಗಿ ಹೇಳಲಾಗಿದೆ. ಕಾಂಗ್ರೆಸ್ನವರು ಮುಸ್ಲಿಂ ಸಿಎಂ ಎಂದು ಘೋಷಣೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಮುಸ್ಲಿಂ ಸಮುದಾಯ ಬಹಳ ವರ್ಷಗಳಿಂದ ಅವರಿಗೆ ಓಟ್ ಹಾಕಿಕೊಂಡು ಬರುತ್ತಿದ್ದಾರೆ. 24ರ ನಂತರ ದಾವಣಗೆರೆಯಲ್ಲಿ ರಾಷ್ಟ್ರೀಯ ನಾಯಕರ ಪ್ರವಾಸ ಇದೆ. 22 ರಂದು ಮುಸ್ಲಿಂರ ಹಬ್ಬ ಇರುವುದರಿಂದ ಮುಂದೂಡಲಾಗಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿಗೆ ಧಮ್ ಇದ್ದರೆ ಲಿಂಗಾಯತ ನಾಯಕರನ್ನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಿ: ಸಿಎಂ ಬೊಮ್ಮಾಯಿ
ಲಿಂಗಾಯತ ನಾಯಕರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬೀದರ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಹುಲ್ ಗಾಂಧಿಗೆ ಧಮ್ ಇದ್ದರೆ ಲಿಂಗಾಯತ ನಾಯಕರನ್ನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಿ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನಮ್ಮಲ್ಲಿ ಯಾವುದೇ ಡ್ಯಾಮೇಜ್ ಆಗಿಲ್ಲ, ಕಂಟ್ರೋಲ್ ಮಾಡೋದೆನಿದೆ. ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡುವಂತ ಕೆಲಸ ನಮ್ಮ ಸರ್ಕಾರ ಮಾಡಿದೆ. ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಮಾನ್ಯತೆ ನೀಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಿಂಗಾಯತರನ್ನು ಹಿಡಿಟ್ಟುಕೊಳ್ಳಲು ರಣತಂತ್ರ, ಯಡಿಯೂರಪ್ಪರನ್ನ ಮುಂದೆ ಬಿಟ್ಟ ಬಿಜೆಪಿ
ಲಿಂಗಾಯತ ಸಮಾಜವನ್ನ ಒಡೆಯುವಂತ ಕೆಲಸ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ 50 ವರ್ಷದಿಂದ ಲಿಂಗಾಯತರನ್ನ ಸಿಎಂ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಎಸ್.ನಿಜಲಿಂಗಪ್ಪ ಹೊರತುಪಡಿಸಿದರೇ ಲಿಂಗಾಯತ ಸಿಎಂ ಯಾರೂ ಕೂಡ ಆಗಿಲ್ಲ. ಇದರ ಜೊತೆ ಕಾಂಗ್ರೆಸ್ ವಿರೇಂದ್ರ ಪಾಟೀಲ್ರನ್ನ ಎಷ್ಟು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪರನ್ನು ಮುಂದೆ ಬಿಟ್ಟ ಬಿಜೆಪಿ
ಲಿಂಗಾಯತ ಸಮುದಾಯದಲ್ಲಿ ವ್ಯತಿರಿಕ್ತ ಭಾವನೆ ಸೃಷ್ಟಿಯಾಗದಂತೆ ತಡೆಯುವುದು, ಮಠಾಧಿಪತಿಗಳ ಸಂಪರ್ಕದ ಮೂಲಕ ಡ್ಯಾಮೇಜ್ ಕಂಟ್ರೋಲ್, ಲಿಂಗಾಯತ ಸಮುದಾಯದ ಯುವ ವೇದಿಕೆಗಳ ಮೂಲಕ ಡ್ಯಾಮೇಜ್ ಕಂಟ್ರೋಲ್, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಗೆ ಪಕ್ಷ ಸಾಕಷ್ಟು ಕೊಟ್ಟಿದೆ ಎಂದು ಸಮುದಾಯದೊಳಗೆ ಬಿಂಬಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Karnataka Polls: ಲಿಂಗಾಯತ ವಿರೋಧ ಎದುರಿಸಲು ಬಿಜೆಪಿಗೆ ಯಡಿಯೂರಪ್ಪ ಗುರಾಣಿ; ಬೆಳಗಾವಿ ಬಂಡಾಯ ತಣಿಸಿದ ಸಂತೋಷ್ ತಂತ್ರ
ಪಕ್ಷದಿಂದ ಇಬ್ಬರಿಗೂ ಯಾವುದೇ ಅನ್ಯಾಯ ಆಗಿಲ್ಲ ಎಂದು ಸಮುದಾಯದ ಮುಖಂಡರಿಂದಲೇ ಹೇಳಿಸುವುದು ಸೇರಿದಂತೆ ಹಲವು ಈ ರೀತಿಯ ವಿಚಾರಗಳ ಬಗ್ಗೆ ಈಗಾಗಲೇ ಬಿಜೆಪಿ ಯೋಜನೆ ರೂಪಿಸಿದ್ದು, ಮೊದಲ ಹಂತವಾಗಿ ಇಂದು ನಡೆಯುವ ಸಭೆಯಲ್ಲಿ ಈ ಅಂಶಗಳ ಚರ್ಚೆ ಮಾಡಲು ಯಡಿಯೂರಪ್ಪನವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Thu, 20 April 23