ಬೆಂಗಳೂರು: ಚುನಾವಣಾ (Karnataka Assembly Elections 2023) ಅಖಾಡದಲ್ಲಿ ಮಾತಿನ ಬಾಣಗಳು ದಿನಕ್ಕೊಂದು ಮಗ್ಗಲು ಬದಲಿಸುತ್ತಿವೆ. ಒಂದೆಡೆ ತಾಲಿಬಾನ್ ಯುದ್ಧ ತಾರಕ್ಕೇರದ್ರೆ, ಮತ್ತೊಂದೆಡೆ ಯಾತ್ರೆ ಫೈಟ್ ಜೋರಾಗಿದೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕೆಣಕುವ ಹೊತ್ತಲ್ಲೇ ಜೆಡಿಎಸ್‌ನ ಪಂಚರತ್ನ ಯಾತ್ರೆಯನ್ನೂ ಬಿಜೆಪಿ (BJP) ಕೆಣಕಿದೆ. ಇದರಿಂದ ಕೆಂಡಾಮಂಡಲರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy), ಬ್ರಾಹ್ಮಣ ಬಾಂಬ್ ಸಿಡಿಸಿ ಹೊಸ ಕಿಚ್ಚು ಹೊತ್ತಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಹೆಚ್‌ಡಿಕೆ, ಬ್ರಾಹ್ಮಣ ಸಿಎಂ ಕಿಡಿ ಹೊತ್ತಿಸುವ ಮೂಲಕ ಹಾಸನ ಟಿಕೆಟ್ ಫೈಟ್ ಸುದ್ದಿಯನ್ನು ಮರೆಮಾಚಲು ಪಯತ್ನಿಸಿದ್ದಾರೆ ಎನ್ನಲಾಗಿದೆ.
ಹೌದು… ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮಾತಿನ ಕಾಳಗ ದಿನಕ್ಕೊಂದು ವೇಷದಲ್ಲಿ ಕುಣಿಯೋಕೆ ಶುರು ಮಾಡಿದೆ. ರಾಜಕೀಯ ಕದನವಾಗಿದ್ದ ಇವರ ಸಿಟ್ಟು, ವೈಯಕ್ತಿಕ ದ್ವೇಷಕ್ಕೂ ಕಿಚ್ಚು ಹಚ್ಚಿಲ್ಲದೇ ನಾಯಿ, ನರಿ, ವೇಷ್ಯೆ, ವ್ಯಭಿಚಾರಿ ಅನ್ನೋ ಪದಪುಂಜಗಳ ಸುನಾಮಿಯನ್ನೇ ಎಬ್ಬಿಸಿತ್ತು. ಹೀಗಿರುವಾಗ ಇದೆಲ್ಲವೂ ತಣ್ಣಗಾಯ್ತು ಎನ್ನುವಷ್ಟರಲ್ಲಿ ಹಾಸನ ಟಿಕೆಟ್ ವಿಚಾರವಾಗಿ ದೇವೇಗೌಡ ಕುಟುಂಬದಲ್ಲಿ ಫೈಟ್ ಶುರುವಾಗಿದೆ. ಚಿಕ್ಕಪ್ಪ ಕುಮಾರಸ್ವಾಮಿ ವಿರುದ್ಧವೇ ಸೂರಜ್ ರೇವಣ್ಣ ತೊಡೆತಟ್ಟಿದ್ದರು. ಇದರೊಂದಿಗೆ ಕುಟುಂಬದಲ್ಲಿ ಟಿಕೆಟ್ ಕಿಡಿಹೊತ್ತಿಸಿದೆ. ಇದು ಮಾಧ್ಯಮಗಳ ಮೂಲಕ ಜಗಜ್ಜಾಹಿರಾಗಿದೆ. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಇದಕ್ಕೆ ಬ್ರೇಕ್ ಹಾಕಬೇಕೆಂದು ತಂತ್ರ ರೂಪಿಸಿದ ಹೆಚ್‌ಡಿಕೆ, ಕೊನೆಗೆ ಬ್ರಾಹ್ಮಣ ಸಿಎಂ ಎನ್ನುವ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರೊಂದಿಗೆ ತಮ್ಮ ಕುಟುಂಬದ ಸುದ್ದಿಯನ್ನು ಡೈವರ್ಟ್ ಮಾಡಲು ಯತ್ನಿಸಿದ್ದಾರೆ ಎಂದು ರಾಜ್ಯ ರಾಜಕಾರಣದಲ್ಲಿ ಚರ್ಚೆ ಆಗುತ್ತಿದೆ.
ಕೇವಲ ಬ್ರಾಹ್ಮಣ ಸಿಎಂ ಬಾಂಬ್‌ನಷ್ಟೇ ಹಾಕದ ಹೆಚ್‌ಡಿಕೆ, ಜಾತಿ ವಿಚಾರಕ್ಕೂ ಕೈ ಹಾಕಿದ್ದಾರೆ. ಜೋಶಿ ದಕ್ಷಿಣ ಕರ್ನಾಟಕ ಸಂಸ್ಕೃತಿಯ ಬ್ರಾಹ್ಮಣರಲ್ಲ, ಶೃಂಗೇರಿ ಮಠ ಒಡೆದ ವರ್ಗದವರು. ಮಹಾತ್ಮ ಗಾಂಧಿ ಕೊಂದ ವರ್ಗಕ್ಕೆ ಸೇರಿದವರು ಎಂದು ಡೈನಾಮೇಟ್ ಇಟ್ಟಿದ್ದಾರೆ. ಯೆಸ್… ಉತ್ತರ ಕರ್ನಾಟ ಭಾಗದಲ್ಲಿ ಲಿಂಗಾಯತ ಮತಗಳನ್ನ ಸೆಳೆಯಲು ಕುಮಾರಸ್ವಾಮಿ, ಆರ್ಎಸ್ಎಸ್ ಹಾಗೂ ಬಿಜೆಪಿ ಸೇರಿ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲು ಹೊರಟ್ಟಿದ್ದಾರೆ ಎಂದು ಡೈಲಾಗ್ ಹೊಡೆದಿದ್ದಾರೆ. ಈ ಮೂಲಕ ಲಿಂಗಾಯತ ಮತಗಳನ್ನು ಹೊಡೆಯುವ ತಂತ್ರವಿದು ಎನ್ನಲಾಗಿದೆ.
ಬ್ರಾಹ್ಮಣರನ್ನು ಸಿಎಂ ಮಾಡಲು ಹೊರಟ್ಟಿದ್ದಾರೆ ಎಂದು ಹೇಳಿದ್ರೆ ದೊಡ್ಡ ಸುದ್ದಿಯಾಗುತ್ತೆ. ಇದರಿಂದ ಲಿಂಗಾಯತ ಸಮುದಾಯ ಬಿಜೆಪಿಗೆ ಮತ ಹಾಕುವುದಿಲ್ಲ. ಆ ಮತಗಳು ಜೆಡಿಎಸ್ಗೆ ಅಥವಾ ಕಾಂಗ್ರೆಸ್ಗೆ ವರದಾನವಾಗಬಹುದು ಎನ್ನುವುದು ಹೆಚ್ಡಿಕೆಯ ಎನ್ನುವ ಲೆಕ್ಕಾಚಾರ. ಆ ಲೆಕ್ಕಾಚಾರದೊಂದಿಗೆ ರಾಜ್ಯ ರಾಜಕಾರಣದಲ್ಲಿ ಬ್ರಾಹ್ಮಣ ಸಿಎಂ ಸುದ್ದಿ ತೇಲಿಬಿಟ್ಟಿದ್ದಾರೆ.
ತಮ್ಮ ಕುಟುಂಬದ ಫೈಟ್ ಸುದ್ದಿ ಬೇರೆಡೆಗೆ ಸೆಳೆಯುವುದಕ್ಕೆ ಹಾಗೂ ಲಿಂಗಾಯತ ಮತಗಳ ಡಿವೈಡ್ ಮಾಡುವ ದೃಷ್ಟಿಯಿಂದಲೇ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಬಾಂಬ್ ಸಿಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗೆ ಅಖಾಡದಲ್ಲಿ ಹೊತ್ತಿಕೊಂಡಿರುವ ಬ್ರಾಹ್ಮಣ ಸಿಎಂ ಬೆಂಕಿ ಹೊಸ ಯುದ್ಧಕ್ಕೆ ಕಾರಣವಾಗಿದ್ದು, ದೇವೇಗೌಡ ಕುಟುಂಬದಲ್ಲಿ ಹೊತ್ತಿದ ಟಿಕೆಟ್ ಕಿಡಿ ಹಾರಿದೆ. ಯಾವುದೇ ಪುರಾವೆಗಳಿಲ್ಲದೇ ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸುವುದು ಇದು ಮೊದಲಲ್ಲ. ಬೇರೆ-ಬೇರೆ ಪಕ್ಷದ ನಾಯಕರೂ ಸಹ ಇದೇ ಕೆಲಸ ಮಾಡಿದ ಉದಾಹರಣೆಗಳು ಇವೆ. ಅಲ್ಲದೇ ಅದನ್ನು ಮರೆಸಲು ಪಕ್ಷಗಳು ಬೇರೆ ವಿಷಯಗಳನ್ನು ತೇಲಿಬಿಟ್ಟಿರುವುದು ಉಂಟು.
ಇನ್ನು ಕೌಂಟರ್ ಪ್ಲ್ಯಾನ್ ಮಾಡಿರುವ ಬಿಜೆಪಿ, ಬ್ರಾಹ್ಮಣ ಸಮುದಾಯವನ್ನ ಹೆಚ್‌ಡಿಕೆ ನಿಂದಿಸಿದ್ದಾರೆ ಎನ್ನುವ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಈ ಯುದ್ಧ ಇನ್ನೆಲ್ಲಿಗೋ ಹೋಗುತ್ತೆ ಎಂದು ಕಾದು ನೋಡಬೇಕು.
Published On - 9:12 pm, Sun, 5 February 23