ಯಶವಂತಪುರದಲ್ಲಿ ಗೆಲ್ಲದಿದ್ರೆ ನಾನು ರಾಜಕೀಯ ಬಿಟ್ಟು ಬಿಡ್ತೀನಿ, 3 ಬಾರಿ ಸೋತ ಅಭ್ಯರ್ಥಿಗೆ ಮತ್ತೆ ಸ್ಪರ್ಧಿಸುವಂತೆ ಹುರಿದುಂಬಿಸಿದ ಹೆಚ್ಡಿಕೆ
ಬೆಂಗಳೂರಿನ ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಹೆಚ್ಡಿ ಕುಮಾರಸ್ವಾಮಿ, ಯಶವಂತಪುರದಲ್ಲಿ ಗೆಲ್ಲದಿದ್ರೆ ನಾನು ರಾಜಕೀಯ ಬಿಟ್ಟು ಬಿಡ್ತೀನಿ ಎಂದು ಹೇಳುವ ಮೂಲಕ ಈಗಾಗಲೇ 3 ಬಾರಿ ಸೋತ ಅಭ್ಯರ್ಥಿಗೆ ಮತ್ತೆ ಚುನಾವಣೆಗೆ ನಿಲ್ಲುವಂತೆ ಹುರಿದುಂಬಿಸಿದ್ದಾರೆ.
ಬೆಂಗಳೂರು: ಯಶವಂತಪುರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲದಿದ್ರೆ ನಾನು ರಾಜಕೀಯ ಬಿಟ್ಟು ಬಿಡ್ತೀನಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿHD Kumaraswamy) ಹೇಳುವ ಮೂಲಕ 3 ಬಾರಿ ಸೋತ ಅಭ್ಯರ್ಥಿಗೆ ಮತ್ತೆ ಹುರಿದುಂಬಿಸಿದ್ದಾರೆ. ಹೌದು…ಜವರಾಯಿಗೌಡ ಅವರು ಮೂರು ಬಾರಿ ಯಶವಂತಪುರ ಕ್ಷೇತ್ರದಿಂದ(yeshwanthpur constituency) ಸ್ಪರ್ಧಿಸಿ ಸೋಲುಕಂಡಿದ್ದಾರೆ. ಇದರಿಂ ಅವರಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ಈ ಬಾರಿ ಸ್ಪರ್ಧೆಗೆ ಆಸಕ್ತಿ ತೋರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಇಂದು(ಫೆಬ್ರವರಿ 06) ಯಶವಂತಪುರ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜವರಾಯಿಗೌಡರೇ ನಿಮಗೆ ಉತ್ತಮ ಅಭ್ಯರ್ಥಿ ಯಶವಂತಪುರದಲ್ಲಿ ಗೆಲ್ಲುವುದು ಮುಖ್ಯ. ಜವರಾಯಿಗೌಡರು ಬೇರೆ ನಿರ್ಧಾರ ಮಾಡಬಾರದು. ನೀವು ಅಭ್ಯರ್ಥಿ ಆಗಲೇಬೇಕು . ನಾಳೆಯಿಂದ ನೀವು ಕ್ಷೇತ್ರ ಸಂಚಾರ ಮಾಡಿ. ಮೂರ್ನಾಲ್ಕು ಜನ ಬನ್ನಿ ನಾವು ಚರ್ಚೆ ಮಾಡೋಣ. ನಿನ್ನ ಉಳಿಸಿಕೊಡೋದು ನಮ್ಮ ಜವಾಬ್ದಾರಿ. ಕಾರ್ಯಕರ್ತರನ್ನು ಉಳಿಸಿಕೊಳ್ಳೋಣ ಎಂದು ಜಯರಾಯಿಗೌಡ ಅವರಿಗೆ ಈ ಬಾರಿ ಚುನಾವಣೆಗೆ ನಿಲ್ಲುವಂತೆ ಹುರಿದುಂಬಿಸಿದರು.
ಈಗಾಗಲೇ ಮನೆ ಹಾಳು ಮಾಡಿಕೊಂಡಿದ್ದೀಯಾ. ನಿಮ್ಮ ಮನೆ ಮಕ್ಕಳು ಮುಂದೆ ಬೀದಿಗೆ ಬರುವುದಕ್ಕ ಬಿಡಲ್ಲ. ಮುಂದೆ ಹಾಗೆ ಆಗುವುದಿಲ್ಲ. ಯಶವಂತಪುರ ಗೆಲ್ಲದಿದ್ದರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ. ಇನ್ನು ಮೂರು ತಿಂಗಳು ಓಡಾಡು, ಪ್ರಚಾರ ಮಾಡು. ಇದು ಕೊನೆಯ ಡಿಷಿಷನ್, ನೀವು ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಧೈರ್ಯ ತುಂಬಿಸದರು.
ಯಶವಂತಪುರ ಜೆಡಿಎಸ್ ಪಕ್ಷದ ಭದ್ರಕೋಟೆ. ನಮ್ಮ ಕೆಲವು ಸಮಸ್ಯೆಗಳಿಂದ ಈ ಹಿಂದೆ ನಮಗೆ ಹಿನ್ನಡೆಯಾಗಿದೆ. ಹಾಗಾಗಿ ನಾವು ಯಶವಂತಪುರ ಕ್ಷೇತ್ರದಲ್ಲಿ ಸೋತಿದ್ದೇವೆ ಅಷ್ಟೇ. ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತಾ ಹೇಳಿ ದಾರಿ ತಪ್ಪಿಸಿದ್ದರು. ಹಾಗಾಗಿ ಕಡಿಮೆ ಅಂತರದಲ್ಲಿ ಯಶವಂತಪುರದಲ್ಲಿ ಸೋಲು ಆಗಿದೆ. ಜವರಾಯಿಗೌಡಗೆ ಚುನಾವಣೆ ಹೇಗೆ ನಡೆಸಬೇಕು ಎಂಬುದು ಗೊತ್ತಾಗಿಲ್ಲ. ಮೂರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಆರ್ಥಿಕವಾಗಿ ಸುಸ್ತಾಗಿದ್ದಾರೆ. ಮೂರು ಬಾರಿ ನಮ್ಮ ಅಭ್ಯರ್ಥಿ ಸೋತರೂ ಜನರು ನಮ್ಮ ಕೈಬಿಟ್ಟಿಲ್ಲ. ಜವರಾಯಿಗೌಡರೇ ಯಶವಂತಪುರ ಕ್ಷೇತ್ರದ ಉತ್ತಮ ಅಭ್ಯರ್ಥಿ. ಜವರಾಯಿಗೌಡ ಅಭ್ಯರ್ಥಿ ಆಗಬೇಕು. ನಾಳೆಯಿಂದ ಸಂಚಾರ ಮಾಡಿ ಎಂದು ಕುಮಾರಸ್ವಾಮಿ ಯಶವಂತಪುರ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.
ನಿಷ್ಠಾವಂತ ಕಾರ್ಯಕರ್ತರು ಇಲ್ಲಿ ಇದ್ದಾರೆ. ಯಶವಂತಪುರದಲ್ಲಿ 2013 ರಲ್ಲಿ ಅಭ್ಯರ್ಥಿ ಆದರು. 2013 ರಲ್ಲಿ 15 ಸಾವಿರದಲ್ಲಿ ಸೋತಿದ್ದೇವೆ. ಶೋಭಾ ಕರಂದ್ಲಾಜೆ ರಾಜಾಜಿನಗರದಲ್ಲಿ ಅಭ್ಯರ್ಥಿ ಆದರು. ಬಿಜೆಪಿ ಅಂದು 30 ಸಾವಿರ ಮತ ಪಡೆದಿದ್ದರೆ, ಜವರಾಯಿಗೌಡ ಶಾಸಕರಾಗುತ್ತಿದ್ದರು. 2018 ರಲ್ಲಿ ಮುಸಲ್ಮಾನ ಬಂಧುಗಳಿಂದ ದೋಷ ಆಯ್ತು. ಅದಕ್ಕೆ ಕಾರಣ ಕಾಂಗ್ರೆಸ್ ನವರು. ಬಿಜೆಪಿ ಬಿ ಟೀಂ ಅಂತ ಹೇಳಿ ದಾರಿ ತಪ್ಪಿಸಿದ್ರು. ಇಡೀ ರಾಜ್ಯದಲ್ಲಿ ಅಪ ನಂಬಿಕೆ ಮೂಡಿಸಿದರು. ಹಾಗಾಗಿ ಕಡಿಮೆ ಅಂತರದಲ್ಲಿ ಸೋತರು. ಉಪ ಚುನಾವಣೆ ವೇಳೆ ಕಾಂಗ್ರೆಸ್ ಬಿಜೆಪಿ ಸೇರಿ ಮಾಡಿದ ಚುನಾವಣೆ ಅದು. ಸೋಮಶೇಖರ್ ಅವರಿಗೇ ಕಾಂಗ್ರೆಸ್ ಅವರು ಮತ ಹಾಕಿದ್ರು. ಈ ಕ್ಷೇತ್ರ ಇಂದಿಗೂ ಜೆಡಿಎಸ್ ನ ಭದ್ರಕೋಟೆ ಎಂದರು.
ಮೂರು ಸಲ ಸೋತರೂ ಜನ ನಿಮ್ಮ ಕೈ ಬಿಟ್ಟಿಲ್ಲ. ಅನೇಕರು ನಿಮ್ಮ ಬಗ್ಗೆ ಅನುಕಂಪ ಇದೆ ಅಂತ ಅಂತಿದ್ದರು. ದುಡ್ಡು ಖರ್ಚು ಮಾಡಿದರೆ ಚುನಾವಣೆ ಗೆಲ್ಲೋದಿಲ್ಲ. 2002ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಚಂದ್ರಶೇಖರ ಮೂರ್ತಿ ಯವರು ಅಕಾಲಿಕ ಮರಣ ಹೊಂದಿದರು. ಆಗ ಉಪ ಚುನಾವಣೆ ನಡೆಸಬೇಕಾಗಿ ಬಂತು. ಆ ಸಮಯದಲ್ಲಿ ನಾನು ರೇವಣ್ಣ, ದೇವೇಗೌಡರು ಎಲ್ಲರೂ ಸೋತಿದ್ರು. ಆಗ ನಾನು ನೀವು ಚುನಾವಣೆಗೆ ನಿಲ್ಲಿ ಅಂತ ದೇವೇಗೌಡರಿಗೆ ಮನವಿ ಮಾಡಿದ್ದೆ. ನನ್ನ ಮೇಲೂ ಒತ್ತಡ ಹಾಕಿದ್ರು. ಆಗ ನಮ್ಮ ಬಳಿ ಹಣ ಇರಲಿಲ್ಲ. ಜನರ ಪ್ರೀತಿ ವಿಶ್ವಾಸ ಮಾತ್ರ ಇತ್ತು. ಆ ಚುನಾವಣೆ ನಡೆಸುವಾಗ ಒಂದು ತಿಂಗಳು ನಾನು ನಿದ್ದೆ ಮಾಡಿಲ್ಲ. ಅನೇಕರು ದೇಣಿಕೆ ಕೊಟ್ಟರು. ಅಂದು ಕಾಂಗ್ರೆಸ್, ಕಾಂಗ್ರೆಸ್ ಮುಖಂಡರ ವಿರುದ್ಧ ಚುನಾವಣೆ ಅದು. ಅದೊಂದು ಸಿನಿಮಾ ರೀತಿ ಚುನಾವಣೆ ಆಯ್ತು. ಕಳ್ಳ ಮತದಾನ ಮಾಡೋಕೆ ಬಂದಿದ್ದು ಕೂಡ ನೆನಪಿದೆ. ಈಗ ರಾಜ್ಯದಲ್ಲಿ ಜನತಾದಳದ ಅಲೆ ಎದ್ದಿದೆ. ಜೆಡಿಎಸ್ ನಲ್ಲಿ ಯಾರೂ ಉಳಿಯುವುದೇ ಇಲ್ಲ ಅಂದ್ರು. ಕಾರ್ಯಗಾರ ಮಾಡಿದ ನಂತರ ಬಹಳ ಬದಲಾಗಿದೆ. 93 ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಿದೆ. 61 ಕ್ಷೇತ್ರದಲ್ಲಿ ಮತಯಾತ್ರೆ ಮುಗಿಸಲಾಗಿದೆ. ಈ ಮಧ್ಯೆ ನನ್ನ ಆರೋಗ್ಯ ಏನಾಗಿದೆ ಅಂತ ನಿಮಗೂ ಗೊತ್ತಿದೆ ಎಂದು ಕಾರ್ಯಕರ್ತರ ಸಭೆ ತಿಳಿಸಿದರು.
ಇದೇ ವೇಳೆ ಕಾರ್ಯಕರ್ತನೋರ್ವ ಯಶವಂತಪುರದಿಂದ ನೀವೇ (ಕುಮಾರಸ್ವಾಮಿ) ಸ್ಪರ್ಧೆ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ. ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಮದುವೆ ಆಗುವಾಗ ಅನಿತಾ ರಾಜಕೀಯಕ್ಕೆ ಹೋಗಬಾರದು ಅಂತ ಕಂಡೀಷನ್ ಹಾಕಿದ್ರು, ಅಂತಹವರನ್ನು ಸಹ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದೆ. ನಾನು ಯಶವಂತಪುರದಲ್ಲಿ ಸ್ಪರ್ಧಿಸಿ ತಪ್ಪು ಸಂದೇಶ ರವಾನೆ ಆಗುತ್ತೆ. ಜವರಾಯಿಗೌಡರೇ ಯಶವಂತಪುರ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿ ಎಂದು ಸ್ಪಷ್ಟನೆ ನೀಡಿದರು.