Hoskote Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ನ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದು ಎಂಟಿಬಿ ನಾಗರಾಜ್ಗೆ ಮುಖಭಂಗವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ (Hoskote Assembly Constituency) ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಸ್ಪರ್ಧಿಸುತ್ತಿದ್ದಾರೆ. ಮೊದಲಿಗೆ ಶರತ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಯಾವಾಗ ತಮಗೆ ಟಿಕಟ್ ಸಿಗೋದಿಲ್ಲ ಎಂದು ಗೊತ್ತಾಯ್ತೋ, ಆಗ ಶರತ್ ಬಚ್ಚೇಗೌಡ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಇನ್ನು ಮತ್ತೊಂದೆಡೆ ಕಾಂಗ್ರೆಸ್ನ ಎಂಟಿಬಿ ನಾಗರಾಜ್ ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಪಕ್ಷ ತೊರೆದ ಕಾರಣ ಕಾಂಗ್ರೆಸ್ಗೂ ಕೂಡಾ ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ್ಯತೆ ಇತ್ತು. ಹೀಗಾಗಿ, ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರು ತಮ್ಮ ಪತ್ನಿ ಪದ್ಮಾವತಿ ಅವರನ್ನು ಅಖಾಡಕ್ಕೆ ಇಳಿಸಿಲಾಗಿತ್ತು. ಉಪ ಚುನಾವಣೆ ಪ್ರಚಾರದ ವೇಳೆ ಸ್ವತಂತ್ರ್ಯ ಅಭ್ಯರ್ಥಿ ಶರತ್ ಅವರು ಸ್ವಾಭಿಮಾನಕ್ಕಾಗಿ ಮತ ಕೇಳಿದರೆ, ಕಾಂಗ್ರೆಸ್ನ ಪದ್ಮಾವತಿ ಅವರು ಪ್ರತೀಕಾರಕ್ಕಾಗಿ ಮತ ಯಾಚಿಸಿದರು. ಈ ಹಂತದಲ್ಲಿ ಎಂಟಿಬಿ ನಾಗರಾಜ್ ಪ್ರತಿಷ್ಠೆಗಾಗಿ ನಡೆಸಿದ ಹೋರಾಟ ಲೆಕ್ಕಕ್ಕೇ ಬರಲಿಲ್ಲ. ಶರತ್ ಬಚ್ಚೇಗೌಡರು ಗೆದ್ದು ಶಾಸಕರಾಗಿ ಆಯ್ಕೆಯಾಗಿದರು. ಸದ್ಯ ಈಗ ಮತ್ತೆ ಕಾಂಗ್ರೆಸ್ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ಕುರುಬರೇ ನಿರ್ಣಾಯಕ. ಹೀಗಾಗಿ, ಕುರುಬ ಸಮುದಾಯದ ಮತಗಳನ್ನೇ ಎಂಟಿಬಿ ನಾಗರಾಜು ನಂಬಿಕೊಂಡಿದ್ದಾರೆ. ಕುರುಬರ ವೋಟುಗಳ ಜೊತೆಯಲ್ಲೇ ಕಾಂಗ್ರೆಸ್ನ ಮತ ಬ್ಯಾಂಕ್ ನಂಬಿದ್ದ ಕಾರಣಕ್ಕೇ ಎಂಟಿಬಿ ನಾಗರಾಜ್ ಈ ಹಿಂದೆ ಸತತ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ಆಪರೇಷನ್ ಕಮಲ ಹಿನ್ನೆಲೆ ಎಂಟಿಬಿ ನಾಗರಾಜ್ ಬಿಜೆಪಿ ಸೇರ್ಪಡೆಗೊಂಡ ಬಳಿಕ ಅಲ್ಲಿನ ರಾಜಕೀಯ ಚಿತ್ರಣವೇ ಬದಲಾಗಿದೆ.
Published On - 1:23 am, Sat, 13 May 23