AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ ಕೊಲೆ, ಇಂದು ಬೋರ್ಡ್ ಧ್ವಂಸ: ಹೊಸಕೋಟೆಯಲ್ಲಿ ಮುಂದುವರಿದ ದ್ವೇಷ ಗಲಭೆ

ಪಾರ್ವತಿಪುರ ಸರ್ಕಲ್​ನಲ್ಲಿ ಅಳವಡಿಸಿದ್ದ ಎಂಟಿಬಿ ವೃತ್ತ ಅನ್ನೂ ಬೋರ್ಡ್ ಅನ್ನು ಕಳೆದ ರಾತ್ರಿ ಕೆಲ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ರಾಜಕೀಯ ವೈಷಮ್ಯದಿಂದ ಮಾಡ್ತಿದ್ದಾರೆ ಅಂತ ಎಂಟಿಬಿ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.

ನಿನ್ನೆ ಕೊಲೆ, ಇಂದು ಬೋರ್ಡ್ ಧ್ವಂಸ: ಹೊಸಕೋಟೆಯಲ್ಲಿ ಮುಂದುವರಿದ ದ್ವೇಷ ಗಲಭೆ
ಎಂಟಿಬಿ ವೃತ್ತ ಬೋರ್ಡ್ ಧ್ವಂಸ
ಆಯೇಷಾ ಬಾನು
|

Updated on:May 15, 2023 | 2:03 PM

Share

ಹೊಸಕೋಟೆ: ದಶಕಗಳಿಂದಲೂ ಎಂಟಿಬಿ ಮತ್ತು ಬಚ್ಚೇಗೌಡ ಕುಟುಂಬದ ನಡುವೆ ಪ್ರತಿಷ್ಠೆಯ ಕದನ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಈ ಭಾರಿ ಕೂಡ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ(Sharath Bache Gowda) ಅವರು ಎಂಟಿಬಿ ನಾಗರಾಜ್(MTB Nagaraj) ಅವರ ವಿರುದ್ದ ಎರಡನೆ ಭಾರಿಗೆ ಗೆದ್ದು ಬೀಗಿದ್ದಾರೆ. ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದೇ ತಡ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದ್ವೇಷ ಗಲುಬೆ ಶುರುವಾಗಿದೆ. ನಿನ್ನೆ ಇದೇ ವಿಚಾರದಲ್ಲಿ ಕೊಲೆಯೊಂದು ನಡೆದಿತ್ತು. ಈಗ ಪಾರ್ವತಿಪುರದಲ್ಲಿ ಎಂಟಿಬಿ ಬೋರ್ಡ್ ದ್ವಂಸ ಮಾಡಲಾಗಿದೆ.

ಪಾರ್ವತಿಪುರ ಸರ್ಕಲ್​ನಲ್ಲಿ ಅಳವಡಿಸಿದ್ದ ಎಂಟಿಬಿ ವೃತ್ತ ಅನ್ನೂ ಬೋರ್ಡ್ ಅನ್ನು ಕಳೆದ ರಾತ್ರಿ ಕೆಲ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ರಾಜಕೀಯ ವೈಷಮ್ಯದಿಂದ ಮಾಡ್ತಿದ್ದಾರೆ ಅಂತ ಎಂಟಿಬಿ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ. ನಿನ್ನೆಯಷ್ಟೆ ಪಟಾಕಿ ವಿಚಾರಕ್ಕೆ ಗಲಾಟೆಯಾಗಿ ಕೊಲೆ ಆಗಿತ್ತು. ಇದೀಗ ಮತ್ತೊಮ್ಮೆ ನಗರದಲ್ಲಿ ಬೋರ್ಡ್ ಧ್ವಂಸ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗಿದೆ: ದಿಂಗಾಲೇಶ್ವರ ಸ್ವಾಮೀಜಿ

ಫಲಿತಾಂಶದ ಬಳಿಕ ಬಡಿದಾಟ…ಮುಖಂಡನ ಮರ್ಡರ್‌

ಬೆಂಗಳೂರಿನ ಎಲ್ಲಾ ಕ್ಷೇತ್ರಗಳದ್ದು ಒಂದು ಲೆಕ್ಕವಾದ್ರೆ, ಹೊಸಕೋಟೆ ಲೆಕ್ಕವೇ ಬೇರೆ. ಇಲ್ಲಿ ದಶಕಗಳಿಂದಲೂ ಎಂಟಿಬಿ ಮತ್ತು ಬಚ್ಚೇಗೌಡ ಕುಟುಂಬದ ನಡುವೆ ಪ್ರತಿಷ್ಟೆ ಇದ್ದೇ ಇದೆ. ಈ ಬಾರಿಯೂ ಇಲ್ಲಿ ಇಬ್ಬರ ನಡುವೆ ಬಿಗ್‌ ಫೈಟ್‌ ಆಗಿತ್ತು. ಈ ಫೈಟ್‌ನಲ್ಲಿ ಎಂಟಿಬಿ ನಾಗರಾಜ್‌ ಸೋತಿದ್ರೆ, ಶರತ್‌ ಬಚ್ಚೇಗೌಡ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ಮೇ 13ರಂದು ರಿಸಲ್ಟ್‌ ಬರ್ತಿದ್ದಂತೆ ರಾತ್ರಿ ಇದೇ ವಿಚಾರವಾಗಿ ಹೊಸಕೋಟೆ ತಾಲೂಕಿನ ಡಿ ಶೆಟ್ಟಿಹಳ್ಳಿಯಲ್ಲಿ ಕೃಷ್ಣಪ್ಪ ಹಾಗೂ ಗಣೇಶಪ್ಪ ಅನ್ನೋ ಸಹೋದರರ ನಡುವೆ ಗಲಾಟೆಯಾಗಿತ್ತು. ನೀನು ಪಕ್ಷದಲ್ಲಿ ಇದ್ದುಕೊಂಡೇ ಬಿಜೆಪಿಗೆ ಮೋಸ ಮಾಡಿದ್ದೀ ಅಂತಾ ಎಂಟಿಬಿ ಬೆಂಬಲಿಗ ಕೃಷ್ಣಪ್ಪ ತನ್ನ ಸಹೋದರನನ್ನ ಪ್ರಶ್ನಿಸಿದ್ದ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿದ್ದು, ಗಣೇಶಪ್ಪನ ಮಗ ಆದಿತ್ಯಾ ಮತ್ತು ಕೆಲವರು ಕೃಷ್ಣಪ್ಪನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ರು. ಕುಡುಗೋಲಿನಿಂದ ಅಟ್ಯಾಕ್‌ ಮಾಡಿದ್ರು. ಇದ್ರಿಂದ ಗಾಯಗೊಂಡ ಕೃಷ್ಣಪ್ಪನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತಾದ್ರೂ ಬದುಕುಳಿಯಲಿಲ್ಲ.

ಇನ್ನು ಹೋಸಕೋಟೆ ತಾಲೂಕಿನ ಕೊಡಹಳ್ಳಿ ಕುರುಬರಹಳ್ಳಿ, ಶಿವನಾಪುರ, ತಮ್ಮರಸನಹಳ್ಳಿ, ನೆರಗನಹಳ್ಳಿ ಸೇರಿದಂತೆ ಹಲವಡೆ ಶರತ್ ಬಚ್ಚೇಗೌಡ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಾ ಎಂಟಿಬಿ ಬೆಂಬಲಿಗರ ಮನೆಗಳ ಮುಂದೆ ಪಟಾಕಿ ಸಿಡಿಸಿದ್ರು. ಈ ವೇಳೆ ಮನೆ ಕಾಂಪೌಂಡ್‌ ಒಳಗೆ ಪಟಾಕಿ ಹಾಕಿದ್ರಂತೆ. ಹೀಗಾಗಿ ಮನೆ ಮುಂದೆ ಪಟಾಕಿ ಸಿಡಿಸಬೇಡಿ ಅಂತ ಹೇಳಿದಕ್ಕೆ, ಗಲಾಟೆಯಾಗಿದೆ. ಇದ್ರಿಂದ ಕೆರಳಿದ ಎಂಟಿಬಿ ಬೆಂಬಲಿಗರು ನಂದಗುಡಿ ಪೊಲೀಸ್ ಠಾಣೆ ಮುಂದೆ ಕೃಷ್ಣಪ್ಪನ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:55 pm, Mon, 15 May 23

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?