Karnataka Assembly Election 2023: ರಾಜಕೀಯ ನಿಲುವು ಪ್ರಕಟಿಸಿದ ನಟ ಕಿಚ್ಚ ಸುದೀಪ್​

|

Updated on: Apr 05, 2023 | 2:55 PM

Kichcha Sudeep: ನಾನು ಚಿತ್ರರಂಗ ಪ್ರವೇಶಿಸುವಾಗ ಗಾಡ್ ಫಾದರ್ ಅಂತ ಯಾರು ಇರಲಿಲ್ಲ. ಆ ಟೈಮ್​ಲ್ಲಿ ಅವರು ನನ್ನ ಪರ ಇದ್ದರು. ಹೀಗಾಗಿ ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ ಎಂದು ನಟ ಕಿಚ್ಚ ಸುದೀಪ್​ ಹೇಳಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ (CM Basavaraj Bommai) ನನ್ನ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದು ನಟ ಕಿಚ್ಚ ಸುದೀಪ್​ (Kiccha Sudeep) ಘೋಷಿಸಿದ್ದಾರೆ. ಕಷ್ಟದ ದಿನಗಳಲ್ಲಿ ನನ್ನ ಜೊತೆಗೆ ನಿಂತಿದ್ದು ಸಿಎಂ ಬೊಮ್ಮಾಯಿಯವರು. ನಾನು ಚಿಕ್ಕವಯಸ್ಸಿನಿಂದ ಅವರನ್ನು ನೋಡಿದ್ದೇನೆ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನಪರ ನಿಂತಿದ್ದರು. ಅಂಥಹವರು ನನ್ನ ಮಾಮ ಸಿಎಂ ಬೊಮ್ಮಾಯಿ. ನಾನು ಅವರ ಪರವಾಗಿ ನಿಲ್ಲಲು ಬಂದೆ. ನಾನು ಚಿತ್ರರಂಗ ಪ್ರವೇಶಿಸುವಾಗ ಗಾಡ್ ಫಾದರ್ ಅಂತ ಯಾರು ಇರಲಿಲ್ಲ. ಆ ಟೈಮ್​ಲ್ಲಿ ಅವರು ನನ್ನ ಪರ ಇದ್ದರು. ಹೀಗಾಗಿ ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ. ಹಾಗೆ ಕೆಲ ಸ್ನೇಹಿತರು ಇದ್ದಾರೆ ನಾನು ಅವರ ಪರ ನಿಲ್ಲುತ್ತೇನೆ ಎಂದರು.

ಅವರು ಎಲ್ಲಿ ಹೇಳುತ್ತಾರೆ ಅಲ್ಲಿ ಕೆಲಸ ಮಾಡೋಕೆ ನಾನು ತಯಾರಿದ್ದೇನೆ

ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಟ ಕಿಚ್ಚ ಸುದೀಪ್​ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ನಟ ಸುದೀಪ್​, ನನ್ನ ಲೈಫ್ ನಲ್ಲಿ ಒಳ್ಳೆಯ ಜಾಗದಲ್ಲಿ ಅವರು ಇದ್ದಾರೆ. ಅವರು ಎಲ್ಲಿ ಹೇಳುತ್ತಾರೆ ಅಲ್ಲಿ ಕೆಲಸ ಮಾಡೋಕೆ ನಾನು ತಯಾರಿದ್ದೇನೆ. ಒಬ್ಬ ತಂದೆಯ ಮಾತು ಕೇಳುವ ರೀತಿ ಅವರ ಮಾತು ಕೇಳುತ್ತೇನೆ. ಪಕ್ಷ ಕರೆದಿರೋದು ನನಗೆ ಗೊತ್ತಿಲ್ಲ. ಬೊಮ್ಮಾಯಿ ಬೇರೆ ಪಕ್ಷದಲ್ಲಿದ್ದರೂ ಅವರ ಜೊತೆ ನಾನು‌ ನಿಲ್ಲುತ್ತಿದ್ದೆ. ನಾನು ಸಿಎಂ ಬೊಮ್ಮಾಯಿ ಅವರ ವಿಷಯದಲ್ಲಿ ಪಕ್ಷ ನೋಡುತ್ತಿಲ್ಲ, ವ್ಯಕ್ತಿ ನೋಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ‘ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, ಯಾರಿಗೂ ಟಿಕೆಟ್ ಕೇಳಿಲ್ಲ; ಸುದೀಪ್ ಸ್ಪಷ್ಟನೆ

ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ

ನನಗೆ ಎಲ್ಲ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಆಗಲ್ಲ. ಪಕ್ಷ ಅಂತಾ ಇಲ್ಲಿಗೆ ಬಂದಿಲ್ಲ, ವ್ಯಕ್ತಿಯ ಕಾಳಜಿಗೆ ಬಂದಿದ್ದೇನೆ.  ಹಣಕ್ಕಾಗಿ ನಾನು ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ ನನ್ನ ಬೆಂಬಲ.  ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ.  ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ​. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ ಎಂದು ರಾಜಕಾರಣಕ್ಕೆ ಬರುವ ವಂದತಿಗಳಿಗೆ ತೆರೆ ಎಳೆದಿದ್ದಾರೆ.

ಪ್ರಧಾನಿ ಮೋದಿಯವರ ನಿರ್ಣಯಗಳ ಬಗ್ಗೆ ನನಗೆ ಗೌರವವಿದೆ

ಪ್ರಧಾನಿ ನರೇಂದ್ರ ಮೋದಿಯವರ ನಿರ್ಣಯಗಳ ಬಗ್ಗೆ ನನಗೆ ಗೌರವವಿದೆ. ನಾನೊಬ್ಬ ಭಾರತೀಯನಾಗಿ ಪ್ರಧಾನಿ ಮೋದಿಯವರ ನಿರ್ಣಯಗಳ ಬಗ್ಗೆ ಹೆಮ್ಮೆ ಇದೆ. ಆದರೆ ನಾನು ಇಲ್ಲಿ ಸಂಪೂರ್ಣ ವಿಭಿನ್ನವಾಗಿಯೇ ಬಂದಿದ್ದೇನೆ. ನಾನು ಕೇವಲ ವ್ಯಕ್ತಿಗೋಸ್ಕರ ಬಂದಿದ್ದೇನೆ ಅಷ್ಟೇ. ನಾನು ಬಹಳ ವರ್ಷಗಳ ಪರಿಶ್ರಮದಿಂದ ಈ ಹಂತಕ್ಕೆ ಬಂದಿದ್ದೇನೆ. ಅದರಿಂದಲೇ ದೊಡ್ಡಮಟ್ಟದ ಅಭಿಮಾನಿಗಳನ್ನು ಸಂಪಾದಿಸಿದ್ದೇನೆ. ನಾನು ಕೇವಲ ಸಿಎಂ ಬೊಮ್ಮಾಯಿ ಪರ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Wed, 5 April 23