AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾನ ಮುಗಿದ ಬಳಿಕ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದೇಕೆ? ಮಾಜಿ ಸಿಎಂ ಕೊಟ್ರು ಸ್ಪಷ್ಟನೆ

ಕಳೆದ ಒಂದು ತಿಂಗಳಿಂದ ಕುಮಾರಸ್ವಾಮಿ ಅವರು ಪ್ರಚಾರದಲ್ಲಿ ಬ್ಯುಸಿ ಆಗಿದ್ದರು. ವಿವಿಧ ಕ್ಷೇತ್ರಗಳಿಗೆ ತೆರಳಿ ಅವರು ಮತಯಾಚನೆ ಮಾಡಿದ್ದರು. ಚುನಾವಣೆ ಪ್ರಚಾರದ ಮಧ್ಯೆಯೇ ಒಮ್ಮೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ರಾಜೇಶ್ ದುಗ್ಗುಮನೆ
|

Updated on:May 13, 2023 | 9:16 AM

Share

ಮಾಜಿ ಮುಖ್ಯಮಂತ್ರಿ ಎಚ್​​ಡಿ ಕುಮಾರಸ್ವಾಮಿ (HD Kumaraswamy) ಅವರು ಮತದಾನ ಮುಗಿದ ಬಳಿಕ ಸಿಂಗಾಪುರಕ್ಕೆ ತೆರಳಿದ್ದರು. ಮೇ 10ರ ರಾತ್ರಿ ಅವರು ವಿಮಾನ ಏರಿದ್ದರು. ಅವರು ಅಲ್ಲಿಗೆ ತೆರಳಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ತಾವು ಅಲ್ಲಿಗೆ ತೆರಳಿದ್ದು ಏಕೆ ಎಂಬುದನ್ನು ಅವರು ವಿವರಿಸಿದ್ದಾರೆ. ಇಂದು (ಮೇ 13) ಮತ ಎಣಿಕೆ ಆರಂಭ ಆಗಿದ್ದು, ಅದಕ್ಕೂ ಮೊದಲು ಅವರು ಬೆಂಗಳೂರಿಗೆ ಮರಳಿದ್ದಾರೆ.

ಕಳೆದ ಒಂದು ತಿಂಗಳಿಂದ ಕುಮಾರಸ್ವಾಮಿ ಅವರು ಪ್ರಚಾರದಲ್ಲಿ ಬ್ಯುಸಿ ಆಗಿದ್ದರು. ವಿವಿಧ ಕ್ಷೇತ್ರಗಳಿಗೆ ತೆರಳಿ ಅವರು ಮತಯಾಚನೆ ಮಾಡಿದ್ದರು. ಚುನಾವಣೆ ಪ್ರಚಾರದ ಮಧ್ಯೆಯೇ ಒಮ್ಮೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮತದಾನ ಪೂರ್ಣಗೊಂಡ ಬಳಿಕ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿದ್ದಾರೆ. ‘ಆರೋಗ್ಯ ತಪಾಸಣೆ ಮಾಡಬೇಕಿತ್ತು, ವಿಶ್ರಾಂತಿ ಪಡೆಯಬೇಕಿತ್ತು. ಎರಡು ದಿನ ಅದನ್ನು ಮಾಡಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ದೇವರಿಗೆ ಪೂಜೆ

ಬೆಂಗಳೂರಿಗೆ ಬರುತ್ತಿದ್ದಂತೆ ಕುಮಾರಸ್ವಾಮಿ ಅವರು ದೇವರ ಮೊರೆ ಹೋಗಿದ್ದಾರೆ. ಎಚ್ಎಸ್ಆರ್ ಲೇಔಟ್​​ನ ಬಸವೇಶ್ವರ ದೇವಸ್ಥಾನದಲ್ಲಿ ಎಚ್​​ಡಿಕೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಅಭಿಷೇಕ ಮಾಡುವಾಗ ಹೂವಿನ‌ ಪ್ರಸಾದ ಸಿಕ್ಕಿದೆ. ಇದು ಶುಭಶಕುನ ಎಂದು ಅವರು ಭಾವಿಸಿದ್ದಾರೆ.

ಮೈತ್ರಿಗೆ ಸಿದ್ಧ

ಕುಮಾರಸ್ವಾಮಿ ಅವರು ಇತ್ತೀಚೆಗೆ ಮೈತ್ರಿಗೆ ಸಿದ್ಧ ಎನ್ನುವ ಮಾತನ್ನು ಹೇಳಿದ್ದರು. ಅಲ್ಲದೆ ಮೂರು ಷರತ್ತುಗಳನ್ನು ಹಾಕಿದ್ದರು. ಮುಖ್ಯಮಂತ್ರಿ ಪೋಸ್ಟ್ ಕೊಟ್ಟ ನಂತರದಲ್ಲಿ ಯಾರೂ ಒತ್ತಡ ಹಾಕಬಾರದು ಎಂದಿದ್ದರು. ಇದಲ್ಲದೆ, ಜೆಡಿಎಸ್​ನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದಿದ್ದರು. ಜೆಡಿಎಸ್ ನೀಡಿದ ಪ್ರಣಾಳಿಕೆ ಭರವಸೆ ಈಡೇರಿಸಲು ಅವಕಾಶ ಕೊಡಬೇಕು ಎಂದು ಷರತ್ತು ಹಾಕಿದ್ದರು.

ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ –

ವಿಧಾನಸಭೆ ಚುನಾವಣೆ ತಾಜಾ ಸುದ್ದಿ –

Published On - 9:11 am, Sat, 13 May 23