ಮತದಾನಕ್ಕೂ ಮುನ್ನವೇ ಐಟಿ ಶಾಕ್​​, ಜೆಡಿಎಸ್​ ಅಭ್ಯರ್ಥಿ ಮನೆ ಮೇಲೆ ದಾಳಿ: ಪತ್ನಿ ವಶಕ್ಕೆ

|

Updated on: May 09, 2023 | 7:11 PM

ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೇ ಜಿಲ್ಲೆಯ ಹಿರಿಯೂರು ಕ್ಷೇತ್ರದ JDS ಅಭ್ಯರ್ಥಿ ರವೀಂದ್ರಪ್ಪ ಅವರ ಮೇಲೆ ಐಟಿ ದಾಳಿ ಮಾಡುವ ಮೂಲಕ ಶಾಕ್​ ನೀಡಿದೆ.

ಮತದಾನಕ್ಕೂ ಮುನ್ನವೇ ಐಟಿ ಶಾಕ್​​, ಜೆಡಿಎಸ್​ ಅಭ್ಯರ್ಥಿ ಮನೆ ಮೇಲೆ ದಾಳಿ: ಪತ್ನಿ ವಶಕ್ಕೆ
ಪತ್ನಿ ಲತಾ, ಡಿಎಸ್​ ಅಭ್ಯರ್ಥಿ ರವೀಂದ್ರಪ್ಪ
Follow us on

ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೇ ಜಿಲ್ಲೆಯ ಹಿರಿಯೂರು ಕ್ಷೇತ್ರದ JDS ಅಭ್ಯರ್ಥಿ ರವೀಂದ್ರಪ್ಪ ಅವರ ಮೇಲೆ ಐಟಿ ದಾಳಿ ಮಾಡುವ ಮೂಲಕ ಶಾಕ್​ ನೀಡಿದೆ. ಹಿರಿಯೂರಿನಲ್ಲಿರುವ ಮನೆ ಮೇಲೆ 6 ಜನ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ರವೀಂದ್ರಪ್ಪ ಪತ್ನಿ ಲತಾ ಅವರನ್ನು ಐಟಿ ವಶಕ್ಕೆ ಪಡೆದಿದೆ. ಸೊಸೆ ಶ್ವೇತಾರನ್ನು ಅಧಿಕಾರಿಗಳು ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಏಪ್ರಿಲ್ 28ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸಾಕಷ್ಟು ದಾಖಲೆಗಳು ಲಭ್ಯವಾಗಿದ್ದು, ಅಧಿಕಾರಿಗಳು ಸೀಜ್​ ಮಾಡಿದ್ದರು. ವಿಚಾರಣೆಗೆ ಬರುವಂತೆ ರವೀಂದ್ರಪ್ಪಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು.

ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಸಮಯ 2ಕ್ಕೆ 6 ಜನರ ಐಟಿ ಅಧಿಕಾಗಳ ತಂಡ ಮತ್ತೆ ಪರಿಶೀಲನೆ ಮಾಡಿದ್ದು, ವಶಕ್ಕೆ ಪಡೆದಿರುವ ಸಾಧ್ಯತೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೋಳಿ, ಮೂರು ಸಾವಿರ ರೂ. ನಗದು ಆಮಿಷ: ಜೆಡಿಎಸ್​ ವಿರುದ್ಧ ಬಿಜೆಪಿ ಅಭ್ಯರ್ಥಿ ಆರೋಪ

ಮತದಾರರಿಗೆ ಹಂಚಲು ಮನೆಯಲ್ಲಿ ಹಣ ಸಂಗ್ರಹಿಸಿಟ್ಟ ಶಂಕೆ: ಕಾಂಗ್ರೆಸ್​ ಅಭ್ಯರ್ಥಿ ಸಂಬಂಧಿ ಮನೆಯಲ್ಲಿ ಶೋಧ

ಚಿಕ್ಕಬಳ್ಳಾಪುರ: ಮತದಾರರಿಗೆ ಹಂಚಲು ಮನೆಯಲ್ಲಿ ಹಣ ಸಂಗ್ರಹಿಸಿಟ್ಟ ಶಂಕೆ ಹಿನ್ನೆಲೆ ಕಾಂಗ್ರೆಸ್​ ಅಭ್ಯರ್ಥಿ ಪ್ರದೀಪ್ ಈಶ್ವರ್ ಸಂಬಂಧಿ ಶ್ರೀಧರ್ ಮನೆಯಲ್ಲಿ ಪೊಲೀಸರು ಶೋಧ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿರುವ ಶ್ರೀಧರ್ ಮನೆಯಲ್ಲಿ ಸರ್ಚ್ ವಾರಂಟ್ ಪಡೆದು ಪೊಲೀಸರಿಂದ ಪರಿಶೀಲನೆ ಮಾಡಿದ್ದಾರೆ.

ದೇವಲಾಪುರ ಕಾಲೋನಿ ತೋಟದ ಮನೆಯಲ್ಲಿ 50 ಲಕ್ಷ ಹಣ ಜಪ್ತಿ

ಮೈಸೂರು: ಚುನಾವಣಾಧಿಕಾರಿಗಳ ತಂಡದ ಮಿಂಚಿನ ಕಾರ್ಯಾಚರಣೆ ಮಾಡಿದ್ದು, ತೋಟದ ಮನೆಯಲ್ಲಿ ದಾಖಲೆ ಇಲ್ಲದೆ ಮತದಾರರಿಗೆ ಹಂಚಲು ಇಟ್ಟಿದ್ದ 50 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ದೇವಲಾಪುರ ಕಾಲೋನಿ ತೋಟದ ಮನೆಯಲ್ಲಿ ಕಾರ್ಯಾಚರಣೆ ಮಾಡಿ ಬಚ್ಚಿಟ್ಟಿದ್ದ ಹಣ ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಬಿಡದಿ ಬಳಿಯ ವಂಡರ್ಲಾ ರೆಸಾರ್ಟ್​ ಮೇಲೆ ಐಟಿ ರೇಡ್: ಮತದಾರರಿಗೆ ಹಂಚಲು ಹಣ ಸಂಗ್ರಹಿಸಿಟ್ಟಿರುವ ಶಂಕೆ

ಈ ವೇಳೆ ಅಧಿಕಾರಿಗಳ‌ ಜೊತೆ ಮಾತಿನ ಚಕಮಕಿ ಉಂಟಾಗಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಣ ವಶಕ್ಕೆ ಪಡೆದುಕೊಂಡು ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲೇ ಇದ್ದ ಎಂ ಸ್ಯಾಂಡ್ ಒಳಗೆ ಮತ್ತಷ್ಟು ಹಣ ಬಚ್ಚಿಟ್ಟಿರುವ ಮಾಹಿತಿ ಹಿನ್ನೆಲೆ  ಜೆಸಿಬಿಯಿಂದ ಎಂ ಸ್ಯಾಂಡ್ ರಾಶಿ ತೆರವುಗೊಳಿಸಿ ಹುಡುಕಾಟ ಮಾಡಿದ್ದು, ಆದರೆ ಹಣ ಪತ್ತೆಯಾಗಿಲ್ಲ. ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ಐಟಿ ದಾಳಿ 

ಬೆಂಗಳೂರಿನ ಹಲವು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಐಟಿ ಕಾರ್ಯಾಚರಣೆ ಮಾಡಿದ್ದು, ಸುಮಾರು 15.53 ಕೋಟಿ ರೂ, ನಗದು, ಹಾಗೂ 7 ಕೋಟಿ ಮೌಲ್ಯದ 10.14 ಕೆಜಿ ಚಿನ್ನಾಭರಣ ಸೀಜ್​ ಮಾಡಲಾಗಿದೆ. ಶಿವಾಜಿನಗರ ವ್ಯಾಪ್ತಿಯಲ್ಲಿ 4.77, ಆರ್​ಆರ್ ನಗರ ವ್ಯಾಪ್ತಿಯಲ್ಲಿ 3.44, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 3.35, ಪುಲಿಕೇಶಿನಗರ ವ್ಯಾಪ್ತಿಯಲ್ಲಿ 2.30 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Tue, 9 May 23