ವರುಣಾ ಕಣದಲ್ಲಿ ನಡೆದಿದ್ಯಾ ಮ್ಯಾಚ್ ಫಿಕ್ಸಿಂಗ್ ಮಸಲತ್ತು? ಮರುಕಳಿಸುತ್ತಾ 2006ರ ಚಾಮುಂಡೇಶ್ವರಿ ಚುನಾವಣೆಯ ಚಮಕ್..?

ಚಾಮುಂಡೇಶ್ವರಿಯಲ್ಲಾದಂತೆ ವರುಣಾದಲ್ಲೂ ತಂತ್ರ . ವರುಣಾ ಕಣದಲ್ಲಿ ನಡೆದಿದ್ಯಾ ಮ್ಯಾಚ್ ಫಿಕ್ಸಿಂಗ್ ಮಸಲತ್ತು? ಮರುಕಳಿಸುತ್ತಾ ಚಾಮುಂಡೇಶ್ವರಿ ಕ್ಷೇತ್ರದ ಚಮಕ್..? ವರುಣಾದಲ್ಲಿ ಯಾವ ಸಮುದಾಯದ ಎಷ್ಟು ಮತದಾರರರು? ಇಲ್ಲಿದೆ ವರುಣಾ ಗ್ರೌಂಡ್ ರಿಪೋರ್ಟ್

ವರುಣಾ ಕಣದಲ್ಲಿ ನಡೆದಿದ್ಯಾ ಮ್ಯಾಚ್ ಫಿಕ್ಸಿಂಗ್ ಮಸಲತ್ತು? ಮರುಕಳಿಸುತ್ತಾ 2006ರ ಚಾಮುಂಡೇಶ್ವರಿ ಚುನಾವಣೆಯ ಚಮಕ್..?
Follow us
ರಮೇಶ್ ಬಿ. ಜವಳಗೇರಾ
|

Updated on:Mar 29, 2023 | 7:49 AM

ಸಿದ್ದರಾಮಯ್ಯ ಕಾಂಗ್ರೆಸ್​​ನ ಮಾಸ್​ ಲೀಡರ್. ಸಿದ್ದರಾಮಯ್ಯ(Siddaramaiah) ಕಣಕ್ಕಿಳಿಯುವುದಕ್ಕೆ ವರುಣಾ ಅಖಾಡ(varuna Assembly constituency) ರೆಡಿಯಾಗಿದೆ. ಟಗರುವನ್ನ ಹೇಗಾದರೂ ಮಾಡಿ ಹಣೆಯಲೇಬೇಕು ಎಂದು ವಿರೋಧಿಗಳು ಹೂಂಕರಿಸುತ್ತಿದ್ದಾರೆ.  ಕುರುಕ್ಷೇತ್ರದಲ್ಲಿ ಚಕ್ರವ್ಯೂಹ, ನಾನಾ ಚದುರಂಗದಾಟ ನಡೆಯುತ್ತಿರುವಾಗಲೇ ಸಿದ್ದು ಸಿಡಿಸಿರುವ ಮ್ಯಾಚ್ ಫಿಕ್ಸಿಂಗ್ ಬಾಂಬ್ ರಾಜ್ಯ ರಾಜಕಾರಣದಲ್ಲಿ ಮಹಾ ಕಂಪನವನ್ನೇ ಎಬ್ಬಿಸಿದೆ. ಸಿದ್ದು ಸಿಡಿಸಿದ್ದು ಒಂದೇ ಬಾಂಬ್ ಆದರೂ ಇದರ ಹಿಂದೆ ನೂರಾರು ತಂತ್ರ, ರಾಜಕೀಯ ಜಿದ್ದು, ವಿರೋಧಿಗಳ ಸ್ಕೆಚ್, ಸ್ವಪಕ್ಷದವರ ಗೇಮ್ ಪ್ಲ್ಯಾನ್, ಹೀಗೆ ದೊಡ್ಡ ಚಕ್ರವ್ಯೂಹವೇ ಎದ್ದು ಕಾಣುತ್ತಿದೆ. ಇದೇ ಕಾರಣಕ್ಕೆ ಅಳೆದು ತೂಗಿ ತವರು ಕ್ಷೇತ್ರವೇ ಸೇಫ್ ಎಂದು ದಿಕ್ಕು ಬದಲಿಸಿರುವಂತ ಸಿದ್ದರಾಮಯ್ಯರನ್ನ ಹಣಿಯೋದಕ್ಕೆ ದೊಡ್ಡ ಖೆಡ್ಡಾ ರೆಡಿಯಾಗಿದ್ಯಾ ಎನ್ನುವ ಮಾತುಗಳು ಎಲೆಕ್ಷನ್ ಹೊತ್ತಲ್ಲೇ ಮೇಲೆದ್ದು ಬಂದಿದೆ.

ಇದನ್ನೂ ಓದಿ: Siddaramaiah: ವರುಣಾ ಜೊತೆಗೆ ಕೋಲಾರದಿಂದಲೂ ಸ್ಪರ್ಧಿಸುತ್ತೇನೆ; ಸಿದ್ದರಾಮಯ್ಯ

ವರುಣಾ ಕಣದಲ್ಲಿ ನಡೆದಿದ್ಯಾ ‘ಮ್ಯಾಚ್ ಫಿಕ್ಸಿಂಗ್’ ಮಸಲತ್ತು?

ಆ ಕ್ಷೇತ್ರ ಈ ಕ್ಷೇತ್ರ ಎಂದು ಸುತ್ತಾಡಿ ಕೊನೆಗೆ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ರೆಡಿಯಾಗಿಯೇ ನಿಂತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯಗೆ ವರುಣಾ ಟಿಕೆಟ್ ಫೈನಲ್ ಮಾಡಿದೆ. ಹೀಗಿದ್ರೂ ಮಾಜಿ ಸಿಎಂ ಸಿದ್ದರಾಮಯ್ಯ ಈಗಲೂ, ಈ ಕ್ಷಣಕ್ಕೂ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಮಹದಾಸೆ ವ್ಯಕ್ತಪಡಿಸಿತ್ತಿದ್ದಾರೆ. ಆದರೆ ಈಗ ವರುಣಾದಲ್ಲಿ ತಮ್ಮನ್ನ ಕಟ್ಟಿ ಹಾಕಲು ವಿರೋಧಿ ಪಡೆ ಕಟ್ಟಿದ ಆಟ ಸಿದ್ದುಗೆ ಕಿವಿಗೆ ಬಿದ್ದಿರುವ ಸುಳಿವು ಸಿಕ್ಕಂತಾಗಿದೆ. ಸಿದ್ದರಾಮಯ ಹೇಳಿರುವ ಮ್ಯಾಚ್ ಫಿಕ್ಸಿಂಗ್ ಕಹಾನಿ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ವರುಣಾದಲ್ಲಿ ಮರುಕಳಿಸುತ್ತಾ ‘ಚಾಮುಂಡೇಶ್ವರಿ’ ಕ್ಷೇತ್ರದ ಚಮಕ್..?

2006ರ ವಿಧಾನಸಭೆ ಚುನಾವಣೆ ಸಿದ್ದು ಪಾಲಿಗೆ ಗೇಮ್​ಚೇಂಜರ್ ಆಗಿತ್ತು. ಚಾಮುಂಡೇಶ್ವರಿ ಕದನ ಕಣದಲ್ಲಿ ಸಿದ್ದು ಯಾವಾಗ ಕಣಕ್ಕೆ ಇಳಿದ್ರೋ ಅತ್ತ ಬಿಜೆಪಿ-ಜೆಡಿಎಸ್ ಒಳಗೊಳಗೆ ಒಂದಾಗಿ ಸಿದ್ದರಾಮಯ್ಯ ಮೇಲೆ ಮುಗಿಬಿದ್ದಿದ್ದರು. ಸಿದ್ದರಾಮಯ್ಯರನ್ನ ಸೋಲಿಸಲೇಬೇಕು ಎಂದುಕುದಿಯುತ್ತಿದ್ದ ಕುಮಾರಸ್ವಾಮಿ ಚಾಮುಂಡೇಶ್ವರಿಯಲ್ಲಿ ದಾಳವನ್ನೇ ಉರುಳಿಸಿದ್ದರು. ಹೀಗಿದ್ದರೂ, ಸಿದ್ದರಾಮಯ್ಯ ಜಸ್ಟ್ ಮಿಸ್ ಅನ್ನುವಂತೆ ಕೇವಲ 257 ಮತಗಳ ಅಂತರದಿಂದ ಗೆದ್ದಿದ್ದರು. ಆದ್ರೆ 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದುಗೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದದ ಹೊಡೆತ ಬಿದ್ದಿತ್ತು. ಇದೀಗ ತಮ್ಮ ಕೊನೇ ಚುನಾವಣೆ ಎಂದು ವರುಣಾದಲ್ಲಿ ಸ್ಪರ್ಧೆಗೆ ಇಳಿದಿರುವ ಸಿದ್ದುಗೆ 2018ರ ಚಾಮುಂಡೇಶ್ವರಿ ಸೋಲಿನ ನೆನಪು ಕಾಡುತ್ತಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ವರುಣಾದಲ್ಲೂ ಅದೇ ಒಳ ಒಪ್ಪಂದ ಆಗುತ್ತಾ ಎನ್ನುವ ಅನುಮಾನ ಕಾಡುತ್ತಿದೆ.

ಯಾಕಂದ್ರೆ ಸಿದ್ದುಗೆ ವರುಣಾ ಕ್ಷೇತ್ರ ಫೈನಲ್ ಆದ್ಮೇಲೆ, ಆ ಕ್ಷೇತ್ರದ ಗೇಮ್​ ಪ್ಲ್ಯಾನ್​ಗಳೇ ಬದಲಾಗಿವೆ ಎನ್ನುವ ಚರ್ಚೆ ಶುರುವಾಗಿದೆ. ಅದ್ರಲ್ಲೂ ಸಿದ್ದರಾಮಯ್ಯರನ್ನ ಸೋಲಿಸಲು ವರುಣಾದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಅನ್ನೋ ಚರ್ಚೆಯೂ ನಡೀತಿದೆ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನ ಸೋಲಿಸೋದಕ್ಕೆ ಮಾಡಿದ ತಂತ್ರದಂತೆ, ಈ ಬಾರಿ ವರುಣಾದಲ್ಲೂ ಮಾಡೋ ಲೆಕ್ಕಾಚಾರವನ್ನ ಹಾಕಿಕೊಳ್ಳಲಾಗಿದೆ ಎನ್ನಲಾಗಿದೆ. ಅದರ ಭಾಗವಾಗೇ ಬಿಜೆಪಿಯಿಂದ ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸೋ ಮಾತುಕತೆ ನಡೀತಿದೆ. ಸಿದ್ದು ವಿರುದ್ಧ ವರುಣಾದಲ್ಲಿ ಸ್ಪರ್ಧೆಗೆ ಬಿಎಸ್​ವೈ ಪುತ್ರ ವಿಜಯೇಂದ್ರ ಹೆಸರು ಕೇಳಿ ಬರ್ತಿದೆ. ಹೀಗಾಗಿ ಒಳ ಒಪ್ಪಂದ ಏನಾದ್ರೂ ನಡೆದ್ರೆ, ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್​ ಪರೋಕ್ಷ ಬೆಂಬಲ ನೀಡುವ ಸಾಧ್ಯತೆ ಇದೆ. ಇಷ್ಟೇ ಅಲ್ಲ, ವರುಣಾ ಆಯ್ಕೆ ಮಾಡಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ನಾನಾ ಲೆಕ್ಕಾಚಾರ, ನಮ್ಮೂರೇ ನಮಗೆ ಸೇಫ್ ಅನ್ನೋದನ್ನೇ ಹೇಳಿದ್ದಾರೆ. ಅಷ್ಟಕ್ಕೂ ವರುಣಾದಲ್ಲಿ ಇರುವ ಮತದಾರರರು ಎಷ್ಟು. ಯಾವ ಸಮುದಾಯ ಮತಗಳು ನಿರ್ಣಾಯವಾಗಿವೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ವರುಣಾದಲ್ಲಿ ಯಾವ ಸಮುದಾಯದ ಎಷ್ಟು ಮತದಾರರರು?

ವರುಣಾ ವಿಧಾನಸಾ ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 23ಸಾವಿರದ 7 ಮತದಾರರು ಇದ್ದಾರೆ. ಪುರುಷ ಮತದಾರರು 1ಲಕ್ಷದ 11 ಸಾವಿರದ 777 ಇದ್ದಾರೆ. ಇತ್ತ 1ಲಕ್ಷದ11ಸಾವಿರದ 230 ಮಹಿಳಾ ವೋಟರ್ಸ್ ಇದ್ದಾರೆ. ಅದರಲ್ಲೂ ವರುಣಾ ಕ್ಷೇತ್ರದಲ್ಲಿ ಲಿಂಗಾಯ ಮತಗಳು ಹೆಚ್ಚಿವೆ. ಅಲ್ಲದೇ, ದಲಿತ 48 ಸಾವಿರ ಮತಗಳಿವೆ. ಒಕ್ಕಲಿಗ 12 ಸಾವಿರ, ಕುರುಬ ಸಮುದಾಯದ 27 ಸಾವಿರ ಮತಗಳಿವೆ. ಅಲ್ಲದೇ ಉಪ್ಪಾರ ಸಮುದಾಯದ 14 ಸಾವಿರ ಮತದಾರರು ಇದ್ದರೆ, ಎಸ್​ಟಿ ಸಮುದಾಯದ 23 ಸಾವಿರ ಮತಳು ಇವೆ. ಮುಸ್ಲಿಮ್ ಸಮುದಾಯದ 15 ಸಾವಿರ ಮತಗಳಿದ್ರೆ, ಇತರೆ 35 ಸಾವಿರ ಮತಗಳಿವೆ.

ಜೆಡಿಎಸ್, ಬಿಜೆಪಿ ಒಂದಾದರೆ ಸಿದ್ದುಗೆ ಕಾದಿದ್ಯಾ ಶಾಕ್?

ವರುಣಾ ವಿಧಾನಸಭಾ ಕ್ಷೇತ್ರ ಲಿಂಗಾಯತ ಮತ ಪ್ರಾಬಲ್ಯ ಇರುವ ಕ್ಷೇತ್ರವಾಗಿದೆ. ಅಷ್ಟೇ ಪ್ರಮಾಣದಲ್ಲಿ ಕುರುಬ, ಒಕ್ಕಲಿಗ ಹಾಗೂ ಹಿಂದುಳಿದ ವರ್ಗದ ಮತಗಳು ಇಲ್ಲಿವೆ. ಹೀಗಾಗಿ ಹೈವೋಲ್ಟೇಜ್ ಕದನದಲ್ಲಿ ಸಂಗ್ರಾಮ ಜೋರಾಗಿರಲಿದೆ. ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿರೋದು ವಿರೋಧಿಗಳ ಕಣ್ಣರಳಿಸಿದೆ. ಬಿಜೆಪಿ ಪ್ರಬಲ ಅಭ್ಯರ್ಥಿ ವಿಜಯೇಂದ್ರರನ್ನು ಅಖಾಡಕ್ಕೆ ಇಳಿಸಬಹುದು. ಅಲ್ಲದೇ, ಈಗಾಗಲೇ ಜೆಡಿಎಸ್​ ಕದನಕಲಿ ಅಭಿಷೇಕ್ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು. ಇದರ ನಡುವೆ ಜೆಡಿಎಸ್ ಹಾಗೂ ಬಿಜೆಪಿ ಒಳಗೊಳಗಳೆ ಒಪ್ಪಂದವನ್ನ ಮಾಡಿಕೊಂಡು ಸಿದ್ದುಗೆ ಶಾಕ್ ಕೊಡಲು ಲೆಕ್ಕಾಚಾರವೂ ಈಗ ಸದ್ದು ಮಾಡುತ್ತಿದೆ.

ಒಟ್ಟಾರೆ ಸಿದ್ದರಾಮಯ್ಯ ಆಡಿದ ಮ್ಯಾಚ್ ಫಿಕ್ಸಿಂಗ್ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಎಬ್ಬಿಸಿದೆ. ಬೇರೆ ಪಕ್ಷದವರು, ಪಕ್ಷದೊಳಗಿನ ವಿರೋಧಿಗಳೆಲ್ಲ ಸೇರಿ ಸೋಲಿಸುವುದಕ್ಕೆ ಸ್ಕೆಚ್ ಹಾಕಿರುವ ಬಗ್ಗೆ ಸುಳಿವು ಸಿಕ್ಕಿರುವುದರಿಂದಲೇ ಸಿದ್ದು ಎರಡು ಕನಸು ಕಾಣುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:49 am, Wed, 29 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ