Doddaballapura: ಮೂರು ಬಾರಿ ಸೋತು, ನಾಲ್ಕನೇ ಭಾರಿ ಅಗ್ನಿ ಪರೀಕ್ಷೆಗಿಳಿದ ಜೆಡಿಎಸ್​ ಅಭ್ಯರ್ಥಿ; ಈ ಬಾರಿಯಾದರೂ ಗೆಲ್ಲಿಸಿ ಎಂದು ಪತ್ನಿಯಿಂದ ಕಣ್ಣೀರ ಪಾಲಿಟಿಕ್ಸ್

ಆತ ಒಂದಲ್ಲ ಎರಡಲ್ಲ ಸತತವಾಗಿ ಮೂರು ಭಾರಿ ಒಂದೇ ಪಕ್ಷ ಹಾಗೂ ಒಂದೇ ಕ್ಷೇತ್ರದಿಂದ ಸ್ವರ್ಧೆ ಮಾಡಿದ್ರು, ಗೆಲುವು ಅನ್ನೂ ಅದೃಷ್ಟ ಕೈಹಿಡಿದಿರಲಿಲ್ಲ. ಆದರೂ, ಛಲ ಬಿಡದೆ ಇದೀಗ ನಾಲ್ಕನೆ ಭಾರಿಯಾದ್ರು ಗೆಲ್ಲಲೇಬೇಕೆಂದು ಅಖಾಡಕ್ಕಿಳಿದಿದ್ದು, ಪತಿಯ ಪರ ಕಣ್ಣೀರು ಸುರಿಸುತ್ತಾ ಸೆರಗೊಡ್ಡಿ ಮತ ಕೇಳುವ ಮೂಲಕ ಪತ್ನಿ ಗಂಡನ ಪರ ಅನುಕಂಪದ ಪ್ರಚಾರಕ್ಕಿಳಿದಿದ್ದಾರೆ.

Doddaballapura: ಮೂರು ಬಾರಿ ಸೋತು, ನಾಲ್ಕನೇ ಭಾರಿ ಅಗ್ನಿ ಪರೀಕ್ಷೆಗಿಳಿದ ಜೆಡಿಎಸ್​ ಅಭ್ಯರ್ಥಿ; ಈ ಬಾರಿಯಾದರೂ ಗೆಲ್ಲಿಸಿ ಎಂದು ಪತ್ನಿಯಿಂದ ಕಣ್ಣೀರ ಪಾಲಿಟಿಕ್ಸ್
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ, ಜೆಡಿಎಸ್​ ಅಭ್ಯಥಿ ಬಿ.ಮುನೇಗೌಡ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 30, 2023 | 8:34 AM

ಬೆಂಗಳೂರು ಗ್ರಾಮಾಂತರ: ವಿಧಾನಸಭೆ ಚುನಾವಣಾ(Karnataka Assembly Election) ಕಣ ರಂಗೇರಿದ್ದು, ಇನ್ನು 10 ದಿನಗಳು ಬಾಕಿಯಿವೆ. ಅದರಂತೆ ಎಲ್ಲಾ ಪಕ್ಷಗಳು ಭರ್ಜರಿಯಾಗಿ ಮತಬೇಟೆಗೆ ಇಳಿದಿವೆ. ಇದೀಗ ಕಾರ್ಯಕರ್ತರ ಹಾಗೂ ದೇವೇಗೌಡರ ಮುಂದೆಯು ಕಣ್ಣೀರಾಕುತ್ತಾ, ಈ ಭಾರಿಯಾದರೂ ನನ್ನ ಗಂಡನ ಕೈಹಿಡಿಯಿರಿ ಎಂದು ಅಂಗಲಾಚುತ್ತಿರುವ ಇವರು ಜೆಡಿಎಸ್(JDS) ಅಭ್ಯರ್ಥಿಯ ಪತ್ನಿ. ಹೌದು ಅಂದಹಾಗೆ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ಭಾರಿಯಿಂದ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ಬಿ.ಮುನೇಗೌಡ(B Munegowda)ಗೆ ಕ್ಷೇತ್ರದ ಪ್ರಬಲ ಕಾಂಗ್ರೆಸ್​ ಅಭ್ಯರ್ಥಿ ಹಾಲಿ ಶಾಸಕ ಟಿ.ವೆಂಕಟರಮಣಯ್ಯ ವಿರುದ್ದ ಪ್ರತಿ ಭಾರಿಯು ಅಲ್ಪ ಮತಗಳ ಅಂತರದಿಂದ ಪರಾಜಯಗೊಳ್ಳುತ್ತಾ ಬಂದಿದ್ದಾರೆ. ಆದರೂ ಕೂಡ ಈ ಬಾರಿಯು ಜೆಡಿಎಸ್ ಪಕ್ಷದಿಂದಲೆ ಕಣಕ್ಕಿಳಿದಿದ್ದು, ಅದೇ ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ(T Venkataramanaiah) ಸ್ವರ್ಧೆಯಲ್ಲಿದ್ದಾರೆ. ಆದ್ರು, ಸಹ ಗೆಲ್ಲಲೆಬೇಕು ಎಂದು ಪಣತೊಟ್ಟಿರುವ ಅಭ್ಯರ್ಥಿ ಮುನೇಗೌಡ ಗೆಲುವಿನ ಆಸೆಗೆ ಈ ಭಾರಿ ಪತ್ನಿ ಕೈಜೋಡಿಸಿದ್ದು, ಪತಿ ಮುನೇಗೌಡ ಪರ ಅನುಕಂಪದ ಕ್ಯಾಂಪೇನ್ ಮಾಡ್ತಿದ್ದಾರೆ.

ಕಳೆದ 20 ನೇ ತಾರಿಕು ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಮುನೇಗೌಡ ಜೊತೆ ಬಂದಿದ್ದ ಪತ್ನಿ ಪದ್ಮಾವತಿ, ಸೆರಗುಚಾಚಿ ಈ ಭಾರಿಯಾದರೂ ಕೈಹಿಡಿಯಿರಿ ಎಂದು ಬಹಿರಂಗ ಸಭೆಯಲ್ಲೆ ಗೋಗರೆದಿದ್ರು. ಹೀಗಾಗಿ ಅಂದು ಗಳಗಳನೆ ಅತ್ತ ಮುನೇಗೌಡ ಪತ್ನಿಯ ಕಣ್ಣೀರನ್ನ ಕಂಡು ಈ ಭಾರಿ ಗೆಲ್ಲಿಸುತ್ತೇವೆ ಅಳಬೇಡಿ ಎಂದು ಕೂಗಿ ಕೂಗಿ ಹೇಳಿದ್ರು. ಇನ್ನು ನಾಮಪತ್ರ ಸಲ್ಲಿಕೆ ದಿನದಿಂದಲು ಹಗಲಿರುಳು ಗಂಡನ ಪರ ಗ್ರಾಮ ಗ್ರಾಮ, ಮನೆ ಮನೆ ಪ್ರಚಾರ ಮಾಡುತ್ತಿರುವ ಪದ್ಮಾವತಿ ಹೋದ ಕಡೆಯಲೆಲ್ಲ ಕಣ್ಣೀರಾಕುತ್ತಾ ಅನುಕಂಪದ ಮೇಲೆ ಮತ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ.

ಇದನ್ನೂ ಓದಿ:Narendra Modi: ಪ್ರಕಾಶ್ ಸಿಂಗ್ ಬಾದಲ್ ಮಹಾನ್ ರಾಜಕೀಯ ನಾಯಕ ಮಾತ್ರವಲ್ಲ, ಹೃದಯವಂತರು: ನರೇಂದ್ರ ಮೋದಿ ಪದ ನಮನ

ಜೊತೆಗೆ ನಿನ್ನೆ(ಏ.29) ಜೆಡಿಎಸ್ ಅಭ್ಯರ್ಥಿ ಪರ ಮತ ಕೇಳಲು ಬಂದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮಕ್ಕೆ ಆಗಮಿಸಿದ್ರು. ಈ ವೇಳೆ ದೇವೇಗೌಡರ ಮುಂದೆಯೂ ಕಣ್ನೀರಾಕುತ್ತಲೆ ಪತಿಯ ಪರ ಮತಯಾಚನೆ ಮಾಡಿದ್ರು. ದೇವೇಗೌಡರು ಕೂತಿದ್ದ ವೇದಿಕೆ ಮೇಲೆಯೆ ಮಾತನಾಡುತ್ತಾ ಸೆರಗೊಡ್ಡಿ ಮತಯಾಚಿಸಿದ ಪದ್ಮಾವತಿ. ಈ ಭಾರಿ ದೇವೇಗೌಡರು ಸಹ ನಮ್ಮ ಪರ ಮತಯಾಚನೆಗೆ ಬಂದಿದ್ದು, ಕೈಕೊಡಬೇಡಿ ನಮ್ಮನ್ನ ಗೆಲ್ಲಿಸಿ ಎಂದು ಅಂಗಲಾಚಿದ್ರು. ಇನ್ನು ಇದೇ ವೇಳೆ ಮೂರು ಬಾರಿ ಮುನೇಗೌಡ ಸೋತಿದ್ದು, ಈ ಭಾರಿಯಾದ್ರು ಗೆಲ್ಲಿಸಿ ಎಂದು ಅಭ್ಯರ್ಥಿ ಪರ ದೇವೇಗೌಡರು ಸಹ ಕ್ಯಾಂಪೇನ್ ನಡೆಸಿದ್ರು.

ಒಟ್ಟಾರೆ ಕಳೆದ ಮೂರು ಭಾರಿಯಿಂದ ಕೋಟಿ ಕೋಟಿ ಹಣ ಖರ್ಚು ಮಾಡಿ, ಸಾಕಷ್ಟು ಪ್ರಚಾರ ಮಾಡಿದ್ರು ಗೆಲುವಿನ ನಗೆ ಬೀರದ ಪತಿಯ ಪರವಾಗಿ ಇದೀಗ ಪತ್ನಿಯು ಅಖಾಡಕ್ಕಿಳಿದ್ದಿದ್ದು, ಪತಿ ಪರ ಕಣ್ಣೀರಿನ ಮೂಲಕ ಅನುಕಂಪದ ಮತ ಕೇಳುತ್ತಿದ್ದಾರೆ. ಇನ್ನು ಇದಕ್ಕೆಲ್ಲ ಕ್ಷೇತ್ರದ ಜನ ಮಣಿಯುತ್ತಾರ ಗೆಲುವಿನ ಮಾಲೇ ಕೊಡ್ತಾರ ಎನ್ನುವುದು ಮೇ 13 ಕ್ಕೆ ಗೊತ್ತಾಗಲಿದೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್