H D Kumaraswamy: ಜೆಡಿಎಸ್ ರಥಯಾತ್ರೆ ದಿನ 126 ಅಸೆಂಬ್ಲಿ ಚುನಾವಣೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ
JDS: ಹೆಚ್ ಡಿ ಕುಮಾರಸ್ವಾಮಿ ಅವರು ಎಲ್ಲಾ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳ ಜೊತೆ ಒನ್ ಟೂ ಒನ್ ಮಾತುಕತೆ ನೆಡೆಸಲಿದ್ದಾರೆ. ಈಗಾಗಲೇ 126 ಕ್ಷೇತ್ರಗಳ ಅಭ್ಯರ್ಥಿಗಳ ಪ್ರಗತಿ ವರದಿಗಳು ಹೆಚ್.ಡಿ.ಕೆ. ಕೈ ಸೇರಿವೆ.
ಮೈಸೂರು: ಮುಂದಿನ ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು ರಾಜ್ಯ ರಾಜಕೀಯದಲ್ಲಿ ತಕ್ಕಮಟ್ಟಿಗೆ ಅಲ್ಲಿ ರಾಜಕೀಯ ಚದುರಂಗದಾಟಗಳು ಶುರುವಾಗಿವೆ. ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್ ತಮ್ಮ ತಮ್ಮ ಯಾತ್ರೆಗಳನ್ನು ಕೈಗೊಂಡಿವೆ. ಈ ಮಧ್ಯೆ, ಮತ್ತೊಂದು ಪ್ರಮುಖ ಪಕ್ಷವಾದ ಜಾತ್ಯತೀತ ಜನತಾ ದಳ ಪಕ್ಷವೂ 2023ರ ಚುನಾವಣೆಗೆ (Karnataka Assembly Elections 2023) ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದೆ. ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ಜೆಡಿಎಸ್ ವತಿಯಿಂದ (JDS) ನಾಳೆ ಬುಧವಾರದಿಂದ ಎರಡು ದಿನಗಳ ಕಾಲ ಮಹತ್ವದ ಸಭೆ ಆಯೋಜಿಸಲಾಗಿದೆ. 126 ದಳಪತಿಗಳ (ಅಸೆಂಬ್ಲಿ ಚುನಾವಣೆ ಅಭ್ಯರ್ಥಿಗಳು) ಅಂತಿಮ ಪಟ್ಟಿಯನ್ನು ಪಕ್ಷದ ಹಿರಿಯ ನಾಯಕ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ಫೈನಲ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ 126 ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಆಕಾಂಕ್ಷಿಗಳ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ 126 ವಿಧಾನಸಭಾ ಅಭ್ಯರ್ಥಿಗಳ ಹೆಸರುಗಳನ್ನು ಜೆಡಿಎಸ್ ಅಂತಿಮಗೊಳಿಸಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತು ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಹೆಚ್ ಡಿ ಕುಮಾರಸ್ವಾಮಿ ಅವರು ಎಲ್ಲಾ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳ ಜೊತೆ ಒನ್ ಟೂ ಒನ್ ಮಾತುಕತೆ ನೆಡೆಸಲಿದ್ದಾರೆ. ಈಗಾಗಲೇ 126 ಕ್ಷೇತ್ರಗಳ ಅಭ್ಯರ್ಥಿಗಳ ಪ್ರಗತಿ ವರದಿಗಳು ಹೆಚ್.ಡಿ.ಕೆ. ಕೈ ಸೇರಿವೆ. ಸಕ್ರಿಯವಾಗಿ ಕೆಲಸ ಮಾಡದ ಆಕಾಂಕ್ಷಿಗಳ ಹೆಸರನ್ನ ಹೆಚ್ ಡಿ ಕೆ ಪಟ್ಟಿಯಿಂದ ಕೈಬಿಡಲಿದ್ದಾರೆ ಎಂದು ತಿಳಿದುಬಂದಿದೆ. ಪಂಚರತ್ನ ರಥಯಾತ್ರೆ ಕಾರ್ಯಕ್ರಮ ದಿನ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.