ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಮತದಾನ(Voting) ಮುಗಿದಿದ್ದು ಕೆಲವೇ ಗಂಟೆಗಳಲ್ಲಿ ರಾಜಕೀಯ ನಾಯಕರ ಭವಿಷ್ಯ ಹೊರಬೀಳಲಿದೆ. ಮತದಾನ ಮುಗಿಯುತ್ತಿದ್ದಂತೆ ನಾಯಕರು ರಿಲಾಕ್ಸ್ ಮೂಡಿಗೆ ಜಾರಿದ್ದು ಮತ್ತೊಂದೆಡೆ ಬಹುಮತ ಬರದಿದ್ದರೆ ಕಿಂಗ್ ಮೇಕರ್ ಜೆಡಿಎಸ್ ಪಕ್ಷದ ಮೊರೆ ಹೋಗಬೇಕೆಂದು ಬಿಜೆಪಿ, ಕಾಂಗ್ರೆಸ್ ಒಳಗೊಳಗೆ ಕಸರತ್ತು ಶುರು ಮಾಡಿದೆ. ಸದ್ಯ ನನಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಯಾವುದೇ ಅಸಮಾಧಾನವಿಲ್ಲ. ನಮ್ಮ ಷರತ್ತುಗಳನ್ನು ಯಾವ ಪಕ್ಷ ಪೂರೈಸುತ್ತದೆ ಎಂಬುದರ ಆಧಾರದ ಮೇಲೆ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ನಿರ್ಧರಿಸುತ್ತೇವೆ. ಮೈತ್ರಿಗೆ ನಾವು ಸಿದ್ಧ ಎಂದು ಹೆಚ್ಡಿ ಕುಮಾರಸ್ವಾಮಿ(HD Kumaraswamy) ತಿಳಿಸಿದ್ದಾರೆ.
ಬುಧವಾರ ಮತದಾನ ನಡೆದ ದಿನದಂದು 10 ಎಕ್ಸಿಟ್ ಪೋಲ್‌ಗಳು ಹೊರಬಿದ್ದಿದ್ದವು ಈ ಪೈಕಿ ಬಹುತೇಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸುತ್ತೆ ಎಂದು ಭವಿಷ್ಯ ಹೊರ ಬಿದ್ದಿದೆ. ಮತ್ತೊಂದೆಡೆ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲೇ ಬಿಜೆಪಿ ಕಾದು ಕುಳಿತಿದೆ. ಹೀಗಾಗಿ ಜೆಡಿಎಸ್ ಪಕ್ಷದ ಸಹಾಯ ಹಸ್ತದತ್ತ ಚಿತ್ತ ನೆಟ್ಟಿದ್ದು ಒಳಗೊಳಗೆ ಕಸರತ್ತು ಶುರುವಾಗಿದೆ. ಇನ್ನು ಮತ ಎಣಿಕೆಯ ದಿನ (ಮೇ 10) ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ತೆರಳುವ ಮೊದಲು ಹೆಚ್ಡಿ ಕುಮಾರಸ್ವಾಮಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಸಂದರ್ಶನ ನೀಡಿದ್ದು, ಕ್ಸಿಟ್ ಪೋಲ್ಗಳ ಬಗ್ಗೆ ಮಾತನಾಡಿದ್ದಾರೆ. ಹಾಗೂ ಅವುಗಳಲ್ಲಿ ಹಲವು ಸಮೀಕ್ಷೆಗಳು ಜೆಡಿಎಸ್ ಪಾರ್ಟಿಗೆ ಬಹಳ ಕಡಿಮೆ ಸೀಟ್ಗಳು ಸಿಗುತ್ತವೆ ಎಂದು ತಿಳಿಸಿವೆ. ಆದ್ರೆ ನನಗೆ 50 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ಬಾರಿ ನನ್ನ ಷರತ್ತುಗಳನ್ನು ಈಡೇರಿಸಲು ಒಪ್ಪುವ ಪಕ್ಷದೊಂದಿಗೆ ಹೋಗುತ್ತೇನೆ ಎಂದು ಹೆಚ್ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಈ ಮೂಲಕ ಮೈತ್ರಿಗೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್ ಮೂಡ್ಗೆ ಜಾರಿದ ಹೆಚ್ಡಿ ಕುಮಾರಸ್ವಾಮಿ, ಸಿಂಗಾಪೂರ್ಗೆ ಪ್ರಯಾಣ
ಸಮ್ಮಿಶ್ರ ಸರ್ಕಾರಗಳ ಅಡಿಯಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದಾಗ, ಒಮ್ಮೆ ಬಿಜೆಪಿ (2006) ಮತ್ತು ನಂತರ ಕಾಂಗ್ರೆಸ್ (2018) ನೊಂದಿಗೆ ಕುಮಾರಸ್ವಾಮಿ ಅವರು ಎದುರಿಸಿದ ಬಿಕ್ಕಟ್ಟುಗಳಿಂದಾಗಿ ಕುಮಾರಸ್ವಾಮಿ ಅವರು ಈ ಬಾರಿ ನಿಟ್ಟ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ಈ ಬಾರಿ ಮೈತ್ರಿಗೆ ಸಹಿ ಹಾಕುವ ಮೊದಲು ಅವರ ಕೆಲವು ಷರತ್ತುಗಳನ್ನು ಪೂರೈಸಲಾಗುತ್ತದೆಯೇ ಎಂದು ಖಚಿತಪಡಿಸಿಕೊಂಡ ನಂತರವೇ ಆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸ್ಥೂಲವಾಗಿ ಹೇಳುವುದಾದರೆ, ಮುಖ್ಯಮಂತ್ರಿಯಾಗಿ ಹೆಚ್ಡಿ ಕುಮಾರಸ್ವಾಮಿ ಅವರು ಸರ್ಕಾರವನ್ನು ನಡೆಸಲು ಅವರಿಗೆ ಸ್ವತಂತ್ರ ನೀಡಬೇಕು. ಯಾರ ಅಪ್ಪಣೆಯೂ ತೆಗೆದುಕೊಳ್ಳುವಂತಿರಬಾರದು. ಹಾಗೂ ಯಾರು ಹಿಡಿತಸಾಧಿಸಬಾರದು ಎಂಬುವುದು ಕುಮಾರಸ್ವಾಮಿಯವರ ಷರತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಜೆಡಿಎಸ್ ಶಾಸಕರು ಜಲಸಂಪನ್ಮೂಲ, ವಿದ್ಯುತ್ ಮತ್ತು ಸಾರ್ವಜನಿಕ ಕೆಲಸಗಳಂತಹ ಖಾತೆಗಳನ್ನು ಪಡೆಯಬೇಕೆಂದು ಕುಮಾರಸ್ವಾಮಿ ಬಯಸುತ್ತಾರೆ. ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಸಮ್ಮಿಶ್ರ ಪಕ್ಷದ ಪಾಲುದಾರರು ಅವಕಾಶ ನೀಡಬೇಕು ಎಂದು ಹೆಚ್ಡಿ ಕುಮಾರಸ್ವಾಮಿ ತಮ್ಮ ಷರತ್ತುಗಳ ಬಗ್ಗೆ ವಿವರಿಸಿದ್ದಾರೆ.
ಕುಮಾರಸ್ವಾಮಿ ಅವರಿಗೆ 2018ರಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದಾಗ ರಚನೆಯಾದ ಸಮ್ಮಿಶ್ರ ಸಮನ್ವಯ ಸಮಿತಿ ಬೇಕಿಲ್ಲವಂತೆ. ಹಾಗೂ ತಮ್ಮ ಸಮ್ಮಿಶ್ರ ಪಾಲುದಾರ ಪಕ್ಷವು ಮಂಡ್ಯ ಮತ್ತು ಹಾಸನ ಕ್ಷೇತ್ರಗಳಿಂದ ದೂರವಿರಬೇಕು. ಯಾವುದೇ ಸಿದ್ಧಾಂತಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಚರ್ಚೆಯಿಲ್ಲದೆ ಮಾಡಬಾರದು ಎಂದು ಕುಮಾರಸ್ವಾಮಿ ತಮ್ಮ ಷರತ್ತುಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಗೆದ್ರೆ ಮುಸ್ಲಿಮರ ಮೀಸಲಾತಿಯನ್ನು ಮತ್ತೆ ವಾಪಾಸ್ ಕೊಡುವ ಪ್ರಯತ್ನ ಮಾಡ್ತೇನೆ -ಹೆಚ್ಡಿ ಕುಮಾರಸ್ವಾಮಿ
ಜೆಡಿಎಸ್ ಮೂಲಗಳ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರು ಸಮ್ಮಿಶ್ರ ರಚನೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಒಂದೆರೆಡು ಬಾರಿ ಜನಾದೇಶ ಮುರಿದು ಬೀಳಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದಿದ್ದರು. 2022 ರ ಡಿಸೆಂಬರ್‌ನಲ್ಲಿ, 2023 ರ ಚುನಾವಣೆಯ ನಂತರ ಕೇಸರಿ ಪಕ್ಷವು ತನ್ನ ಬಳಿಗೆ ಹೋಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು.
ನಂತರ, ಮಾರ್ಚ್‌ನಲ್ಲಿ, ಕುಮಾರಸ್ವಾಮಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗಳಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ್ದರಂತೆ. ಇದನ್ನು ದೇವೇಗೌಡರು ಸಹ ದೃಢಪಡಿಸಿದ್ದಾರೆ. ಕರ್ನಾಟಕವು 2018, 2008 ಮತ್ತು 2004 ರಲ್ಲಿ ಜನಾದೇಶ ಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ, ಇದರ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರಕ್ಕೆ ಕಾರಣವಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ