ಬಿಜೆಪಿ ಮುಖಂಡ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿದ ಆರೋಪ: ಪಕ್ಷೇತರ ಅಭ್ಯರ್ಥಿ, ಬೆಂಬಲಿಗರಿಂದ ಆಕ್ರೋಶ
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಬರೊಬ್ಬರಿ 73.19 ಪ್ರತಿಶತ ಮತದಾನ ನಡೆದಿದ್ದು, ಇನ್ನು ಇವಿಎಂನಲ್ಲಿ ರಾಜ್ಯದ 2,615 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಜೊತೆಗೆ ಸ್ಟ್ರಾಂಗ್ ರೂಮ್ ಬಳಿ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಆದರೀಗ ಬಿಜೆಪಿ ಮುಖಂಡ ಮೋಹನ್ ಬಾಬು ಎಂಬಾತ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿದ ಆರೋಪ ಕೇಳಿ ಬಂದಿದೆ.
ಯಾದಗಿರಿ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election 2023) ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಬರೊಬ್ಬರಿ 73.19 ಪ್ರತಿಶತ ಮತದಾನ ನಡೆದಿದ್ದು, ಇನ್ನು ಇವಿಎಂನಲ್ಲಿ ರಾಜ್ಯದ 2,615 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಜೊತೆಗೆ ಸ್ಟ್ರಾಂಗ್ ರೂಮ್ ಬಳಿ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇಲ್ಲಿ ಯಾರಿಗೂ ಕೂಡ ಪ್ರವೇಶವಿರುವುದಿಲ್ಲ. ಆದರೀಗ ಬಿಜೆಪಿ ಮುಖಂಡ ಮೋಹನ್ ಬಾಬು ಎಂಬಾತ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿದ ಆರೋಪ ಕೇಳಿ ಬಂದಿದ್ದು, ಅವರೇ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿದ್ದಾರೆ ಎನ್ನಲಾದ ವಿಡಿಯೋ ಕೂಡ ವೈರಲ್ ಆಗಿದೆ. ಹೌದು ಯಾದಗಿರಿ(Yadagiri)ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಮತ ಎಣಿಕೆ ಕೇಂದ್ರದ ಬಳಿ ಪಕ್ಷೇತರ ಅಭ್ಯರ್ಥಿ ಹಾಗೂ ಬೆಂಬಲಿಗರ ಜಮಾವಣೆಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡನನ್ನು ಮತ ಎಣಿಕೆ ಕೇಂದ್ರಕ್ಕೆ ಬಿಟ್ಟಿದ್ದಕ್ಕೆ ಆಕ್ರೋಶ
ಘಟನೆ ಬಗ್ಗೆ ಪಕ್ಷೇತರ ಅಭ್ಯರ್ಥಿ ಹನಮೇಗೌಡ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಮುಖಂಡನನ್ನು ಮತ ಎಣಿಕೆ ಕೇಂದ್ರಕ್ಕೆ ಬಿಟ್ಟಿದ್ದಕ್ಕೆ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು RO ಶಾಲಂ ಹುಸೇನ್ ಸ್ಪಷ್ಟನೆ ನೀಡಿದ್ದು, ಸ್ಟ್ರಾಂಗ್ ರೂಂ ಬಳಿ ಅಭ್ಯರ್ಥಿಗಳು, ಏಜೆಂಟ್ ಹೋಗಬಹುದು. ನೀವು ಕೂಡ ಪರಿಶೀಲನೆ ನಡೆಸಬಹುದು. ಜೊತೆಗೆ ಸಿಸಿ ಟಿವಿ ವಿಡಿಯೋ ಕೂಡ ಕೊಡಿಸುವುದಾಗಿ RO ಶಾಲಂ ಹುಸೇನ್ ಹೇಳಿದರು. ಬಳಿಕ ಶಾಲಂ ಹುಸೇನ್ ಉತ್ತರದಿಂದ ಪಕ್ಷೇತರ ಅಭ್ಯರ್ಥಿ ಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ:Karnataka Assembly Election Result: ಠೇವಣಿ ಉಳಿಯಬೇಕಾದರೆ ಅಭ್ಯರ್ಥಿ ಎಷ್ಟು ಮತ ಪಡೆಯಬೇಕು?
ಕೆ.ಆರ್.ನಗರ ಪುರಸಭೆಯ ಜೆಡಿಎಸ್ ಸದಸ್ಯನ ಮೇಲೆ ಹಲ್ಲೆ ಆರೋಪ; ದೂರು ದಾಖಲು
ಮೈಸೂರು: ಜೆಡಿಎಸ್ ಪುರಸಭಾ ಸದಸ್ಯ ಸಂತೋಷ್ಗೌಡ ಮೇಲೆ ನಿನ್ನೆ ರಾತ್ರಿ(ಮೇ.11) ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಜಿಲ್ಲೆಯ ಕೆ.ಆರ್.ನಗರದ ಆಂಜನೇಯ ಬ್ಲಾಕ್ ಬಳಿ ಘಟನೆ ನಡೆದಿದೆ. ಸಂತೋಷ್ ಅವರನ್ನ ಕೆ.ಆರ್.ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
Gadag: ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆ ಜಾರಿ
ಗದಗ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯ ಮೇ 13 ರಂದು ನಗರದ ಮುಂಡರಗಿ ರಸ್ತೆಯಲ್ಲಿನ ಶ್ರೀ ಜಗದ್ಗುರು ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್‍ನಲ್ಲಿ ನಡೆಯಲಿದೆ. ಮತ ಎಣಿಕೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗದಗ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಪಾಲನೆ ಹಿತದೃಷ್ಟಿಯಿಂದ ಮೇ 13 ರ ಬೆಳಿಗ್ಗೆ 7 ಗಂಟೆಯಿಂದ ಮೇ 14 ಬೆಳಿಗ್ಗೆ 7 ಗಂಟೆಯವರೆಗೆ ಕೆಳಕಂಡ ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆ ಜಾರಿಗೊಳಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ಗೆ ಹಿನ್ನಡೆ; ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಚುನಾವಣಾ ಆಯೋಗ ಅನುಮತಿ
ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಟಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟುಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಕಲ್ಲುಗಳನ್ನು, ಕ್ಷಾರಪದಾರ್ಥ ಇಲ್ಲವೇ ಸ್ಪೋಟಕ ವಸ್ತುಗಳನ್ನು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:14 am, Fri, 12 May 23