
Athani Assembly Election Results 2023: ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ (Athani Assembly Constituency) ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ನಾಯಕ ಮಹೇಶ್ ಈರನಗೌಡ ಕುಮಟಳ್ಳಿ ಶಾಸಕರಾಗಿದ್ದರು. 2018 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದ ನಂತರ ಬಿಜೆಪಿಗೆ ಹಾರಿದ್ದ ಕಮಟಳ್ಳಿ 2019 ರ ಉಪಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗೂ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು.
ಅಥಣಿ ಕ್ಷೇತ್ರದ 24 ರೌಂಡ್‌ಗಳ ಮತಎಣಿಕೆ ಮುಕ್ತಾಯಕ್ಕೆ 75,893 ಮತಗಳ ಅಂತರದಿಂದ ಜಯಸಾಧಿಸಿದ ಲಕ್ಷ್ಮಣ್ ಸವದಿ. ಇನ್ನೂ 1994 ಅಂಚೆ ಮತಗಳ ಎಣಿಕೆ ಬಾಕಿಯಿದೆ.
Published On - 12:20 pm, Sat, 13 May 23