RV Deshpande Profile: ಹಳಿಯಾಳದಲ್ಲಿ ಭರ್ಜರಿ ಜಯ ಸಾಧಿಸಿರುವ ಆರ್​ವಿ ದೇಶಪಾಂಡೆ ವ್ಯಕ್ತಿಚಿತ್ರ

RV Deshpande: ಆರ್​ವಿ ದೇಶಪಾಂಡೆ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವುದು ಸಾಧಿಸಿದ್ದು, ಅವರ ವ್ಯಕ್ತಿಚಿತ್ರ ಇಲ್ಲಿದೆ.

RV Deshpande Profile: ಹಳಿಯಾಳದಲ್ಲಿ ಭರ್ಜರಿ ಜಯ ಸಾಧಿಸಿರುವ ಆರ್​ವಿ ದೇಶಪಾಂಡೆ ವ್ಯಕ್ತಿಚಿತ್ರ
ಆರ್​ವಿ ದೇಶಪಾಂಡೆ
Follow us
|

Updated on: May 13, 2023 | 12:46 PM

ಆರ್​ವಿ ದೇಶಪಾಂಡೆ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವುದು ಸಾಧಿಸಿದ್ದು, ಅವರ ವ್ಯಕ್ತಿಚಿತ್ರ ಇಲ್ಲಿದೆ.

ಆರ್‌ವಿ ದೇಶಪಾಂಡೆ ಎಂದೇ ಖ್ಯಾತ ಪಡೆದಿರುವ ರಘುನಾಥ ವಿ ದೇಶಪಾಂಡೆ ಅವರು ಈವರೆಗೆ 9 ಚುನಾವಣೆಗಳನ್ನು ಎದುರಿಸಿ, ಎಂಟು ಬಾರಿ ಗೆದ್ದಿದ್ದಾರೆ ಮತ್ತು ಒಂದು ಬಾರಿ ಸೋಲನ್ನು ಅನುಭವಿಸಿದ್ದಾರೆ. ರಾಜ್ಯದ ಅತ್ಯಂತ ಹಿರಿಯ ಶಾಸಕರಾಗಿರುವ ದೇಶಪಾಂಡೆಯವರ ಭದ್ರಕೋಟೆ ಹಳಿಯಾಳದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ತೀವ್ರ ಪೈಪೋಟಿ ಎದುರಾಗಿತ್ತು.

ಹಳಿಯಾಳ ವಿಧಾನಸಭಾ ಕ್ಷೇತ್ರದಿಂದಲೇ ಒಂಬತ್ತನೇ ಬಾರಿ ಸ್ಪರ್ಧಿಸುವ ಮೂಲಕ ದಾಖಲೆ ನಿರ್ಮಿಸಿರುವ ದೇಶಪಾಂಡೆ ಅವರಿಗೆ 2023ರ ವಿಧಾನಸಭೆ ಚುನಾವಣೆ ಅತ್ಯಂತ ವಿಶೇಷವಾಗಿದೆ. ಗುರ್ಮಿಟ್‌ಕಲ್‌ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಮೀರಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ನಂತರ ಖರ್ಗೆ ಅವರು ಚಿತ್ತಾಪುರದಿಂದ ಸ್ಪರ್ಧಿಸಿದ್ದರು.

ಹಾಗೆಯೇ ಜೆಡಿಎಸ್ ಅಭ್ಯರ್ಥಿ ಸುನಿಲ್ ಹೆಗಡೆ ಅವರ ವಿರುದ್ಧ 5,425 ಮತಗಳ ಅಂತರದಿಂದ ಸೋತಾಗ ಮೊದಲ ಬಾರಿ ಸೋಲಿನ ರುಚಿ ಕಂಡಿದ್ದರು.

ಆದರೆ ನಂತರ ನಡೆದ ಚುನಾವಣೆಯಲ್ಲಿ ಈ ಟ್ರೆಂಡ್ ಉಲ್ಟಾ ಹೊಡೆದು, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನೀಲ್ ಹೆಗಡೆ ವಿರುದ್ಧ ದೇಶಪಾಂಡೆ ಅವರು 5,939 ಮತಗಳಿಂದ ಗೆದ್ದಿದ್ದರು.

ಈ ಬಾರಿ ಹಳಿಯಾಳ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅನುಭವಿ ಇಬ್ಬರು ಪ್ರತಿಸ್ಪರ್ಧಿಗಳಾದ ಸುನೀಲ್ ಹೆಗ್ಡೆ ಮತ್ತು ಶ್ರೀಕಾಂತ್ ಎಲ್ ಘೋಟ್ನೇಕರ್ ಅವರು ದೇಶಪಾಂಡೆ ವಿರುದ್ಧ ಸ್ಪರ್ಧಿಸಿದ್ದಾರೆ. ಹೆಗಡೆ ಅವರು ಸಾಂಪ್ರದಾಯಿಕ ಪ್ರತಿಸ್ಪರ್ಧಿಯಾಗಿದ್ದರೂ, ಕಾಂಗ್ರೆಸ್ ನಲ್ಲಿ ಬಂಡಾಯ ಸಾರಿದ ಘೋಟ್ನೇಕರ್ ಅವರು ತನ್ನ ಗುರುವಿನ ವಿರುದ್ಧ ಸೆಡ್ಡು ಹೊಡೆದಿದ್ದರು.

ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ