ಕರ್ನಾಟಕ ಅಸೆಂಬ್ಲಿ ಚುನಾವಣೆ: ಸ್ಟಾರ್ ಪ್ರಚಾರಕರ ಮೇಲೆ ಕಣ್ಣಿಟ್ಟ ಬಿಜೆಪಿ, ಕಾಂಗ್ರೆಸ್ ನಡೆಸಿರುವ ತಯಾರಿ ಏನು?
Karnataka Aseembly Elections: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು ಹೇಳುವಂತೆ ಯೋಗಿ ಅವರ ಚುನಾವಣಾ ಸಮಾವೇಶಗಳ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಅವರು ಖಂಡಿತವಾಗಿಯೂ ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದೆ. ಇತ್ತ ಕರ್ನಾಟಕ ವಿದಾನಸಭೆ ಚುನಾವಣೆ (Karnataka Assembly Elections 2023) ವೇಳೆಗೆ ಮಂಗಳೂರು ಮತ್ತು ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲಿ ಸಾರ್ವಜನಿಕ ಸಮಾವೇಶಗಳನ್ನುದ್ದೇಶಿಸಿ ಮಾತನಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಆಹ್ವಾನಿಸುವ ಆಲೋಚನೆಯಲ್ಲಿದೆ ಕರ್ನಾಕ ಬಿಜೆಪಿ (Karnataka BJP). ಇದರಿಂದ ರಾಜ್ಯದಲ್ಲೂ ಹೈವೋಲ್ಟೇಜ್ ರ್ಯಾಲಿಗಳನ್ನು ಕಾಣು ನಿರೀಕ್ಷೆಯಿದೆ. ಮತ್ತೊಂದೆಡೆ, ಕಾಂಗ್ರೆಸ್ (Karnataka Congress) ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ರ್ಯಾಲಿಗಳ ಚುಕ್ಕಾಣಿ ನೀಡಲು ಆಲೋಚಿಸುತ್ತಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು ಹೇಳುವಂತೆ ಯೋಗಿ ಅವರ ಚುನಾವಣಾ ಸಮಾವೇಶಗಳ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಅವರು ಖಂಡಿತವಾಗಿಯೂ ಕರ್ನಾಟಕ ಚುನಾವಣೆ ಪ್ರಚಾರಕ್ಕೆ (Star Campaigner) ಬರುತ್ತಾರೆ ಎಂದು ಹೇಳಿದ್ದಾರೆ.
ಎಲ್ಲವೂ ಯೋಜಿಸಿದಂತೆ ನಡೆದರೆ… ಕೋಮು ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಯೋಗಿ ಅವರನ್ನು ಉದ್ದೇಶಿಸಿ ಮಾತನಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಅಲ್ಲಿ ಫೈರ್ ಬ್ರಾಂಡ್ ಮುಖ್ಯಮಂತ್ರಿ ಯೋಗಿ ಮಾತನಾಡಿದರೆ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸುವ ನಿರೀಕ್ಷೆಯಿದೆ. ಅವರು ಹಳೇ ಮೈಸೂರು ಭಾಗದದಲ್ಲಿಯೂ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜೊತೆಗೆ, ಹಿಂದುತ್ವದ ರಾಯಭಾರಿ ಯೋಗಿಯು ನಾಥಪಂಥದ ಸಂಪ್ರದಾಯಕ್ಕೆ ಸೇರಿದವರು. ಅದನ್ನು ರಾಜ್ಯದ ಪ್ರಭಾವಿ ಒಕ್ಕಲಿಗ ಮಠವಾದ ಆದಿಚುಂಚನಗಿರಿ ಮಠ ಅನುಸರಿಸುತ್ತದೆ. ಆದಿಚುಂಚನಗಿರಿ ಮಠವು ಗೋರಖಪುರದಲ್ಲಿರುವ ಗೋರಖನಾಥ ಮಠದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವುದು ಗಮನಾರ್ಹ. ಆದಿತ್ಯನಾಥ್ ಅವರು ಗೋರಖನಾಥ ದೇವಾಲಯದ ಪ್ರಧಾನ ಅರ್ಚಕರಾಗಿದ್ದವರು. ಎರಡೂ ಮಠಗಳು ಶೈವ ಧರ್ಮದ ಉಪ-ಸಂಪ್ರದಾಯವಾದ ನಾಥ ಪಂಥವನ್ನು ಅನುಸರಿಸುತ್ತವೆ.
ಇದನ್ನೂ ಓದಿ:
ಕೊವಿಡ್ ಲಸಿಕೆ ಬಗ್ಗೆ ಟೀಕಿಸಿದ್ದ ರಾಹುಲ್ ಗಾಂಧಿ ಗುಟ್ಟಾಗಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ರು; ಅಮಿತ್ ಶಾ ಗಂಭೀರ ಆರೋಪ
ಇನ್ನು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಗೆಲುವಿನ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಿಯಾಂಕಾ ಗಾಂಧಿ ಅವರನ್ನು ಜನವರಿ 1 ರಂದು ಚಿತ್ರದುರ್ಗದಲ್ಲಿ ತನ್ನ ಬೃಹತ್ ಎಸ್‌ಸಿ/ಎಸ್‌ಟಿ ರ್ಯಾಲಿಗೆ ಕರೆತರಲು ಕಾಂಗ್ರೆಸ್ ಯೋಜಿಸಿದೆ.
“ನಾವು ಅವರನ್ನು ಸಾಧ್ಯವಾದಷ್ಟು ಸಭೆ ಸಮಾರಂಭಗಳಲ್ಲಿ ಬಳಸಿಕೊಳ್ಳಲು ಬಯಸುತ್ತೇವೆ.” ಎಂದು ಕರ್ನಾಟಕ ಕಾಂಗ್ರೆಸ್ ನ ಸಂಪರ್ಕ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. “ಕರ್ನಾಟಕದ ಜನರು ಪ್ರಿಯಾಂಕಾ ಅವರೊಂದಿಗೆ ತುಂಬಾ ಗುರುತಿಸಿಕೊಳ್ಳುತ್ತಾರೆ. ಅವರು ಚುನಾವಣೆ ಸಮಾವೇಶಗಳಿಗೆ ಬರುವುದು ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಅವರು ತಮ್ಮ ಅಜ್ಜಿಯ (ಇಂದಿರಾ ಗಾಂಧಿ) ವರ್ಚಸ್ಸನ್ನು ಹೊಂದಿದ್ದಾರೆ. ಅದು ಇಂದಿಗೂ ಕರ್ನಾಟಕಕ್ಕೆ ಪ್ರಸ್ತುತವಾಗಿದೆ. 1978ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದನ್ನು ಉಲ್ಲೇಖಿಸಿ ಪ್ರಿಯಾಂಕ್ ವಿಶ್ಲೇಷಿಸುತ್ತಾರೆ.
ಇದನ್ನೂ ಓದಿ: ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲೂ ಪುನರಾವರ್ತನೆ: ಪ್ರಲ್ಹಾದ್ ಜೋಶಿ ವಿಶ್ವಾಸ
2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ಬೆಂಬಲವನ್ನು ಕ್ರೋಢೀಕರಿಸಲು ಬಿಜೆಪಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಲಂಬಿಸಿದೆ. ಮೊನ್ನೆ ಗುರುವಾರ ಗುಜರಾತ್ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ತಿಂಗಳಿಗೆ ಎರಡು ಬಾರಿ ಕರ್ನಾಟಕಕ್ಕೆ ಭೇಟಿ ನೀಡುವಂತೆ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗಿತ್ತು. ಮೋದಿ ಅವರೂ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:50 am, Sat, 10 December 22