Karnataka Assembly Election 2023 Highlights: ನಾಡಿದ್ದು ಜೆಡಿಎಸ್​ ಪಟ್ಟಿ ರಿಲೀಸ್​, 42 ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಟಿಕೆಟ್‌ ಘೋಷಿಸಲ್ಲ: ಕುಮಾರಸ್ವಾಮಿ

ಆಯೇಷಾ ಬಾನು
| Updated By: ಗಂಗಾಧರ​ ಬ. ಸಾಬೋಜಿ

Updated on:Apr 10, 2023 | 7:28 PM

Breaking News Today Highlights Updates:ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಒಂದೇ ಕ್ಲಿಕ್​​ನಲ್ಲಿ ನಿಮ್ಮ ಟಿವಿ9 ಡಿಜಿಟಲ್​ ಲೈವ್​ ಬ್ಲಾಗ್​ನಲ್ಲಿ ಲಭ್ಯ.

Karnataka Assembly Election 2023 Highlights: ನಾಡಿದ್ದು ಜೆಡಿಎಸ್​ ಪಟ್ಟಿ ರಿಲೀಸ್​, 42 ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಟಿಕೆಟ್‌ ಘೋಷಿಸಲ್ಲ: ಕುಮಾರಸ್ವಾಮಿ
ಕರ್ನಾಟಕ ವಿಧಾಸಭೆ ಚುನಾವಣೆ

ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023) ರಂಗೇರಿದ್ದು, ದಿನ ದಿನಕ್ಕೆ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್​ನಲ್ಲಿ(COngress) ಟಿಕೆಟ್​ ವಂಚಿತರ ಬಂಡಾಯ, ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ(BJP) ಕಸರತ್ತು, ಎರಡೂ ರಾಷ್ಟ್ರೀಯ ಪಕ್ಷಗಳ ಟಿಕೆಟ್​ ವಂಚಿತ ನಾಯಕರಿಗೆ ಜೆಡಿಎಸ್(JDS) ಗಾಳ ಸೇರಿದಂತೆ ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಒಂದೇ ಕ್ಲಿಕ್​​ನಲ್ಲಿ ನಿಮ್ಮ ಟಿವಿ9 ಡಿಜಿಟಲ್​ ಲೈವ್​ ಬ್ಲಾಗ್​ನಲ್ಲಿ ಲಭ್ಯ.

LIVE NEWS & UPDATES

The liveblog has ended.
  • 10 Apr 2023 06:59 PM (IST)

    Karnataka Assembly Election 2023 Live: ದೇಶದಲ್ಲಿ ಆಡಳಿತ ನಡೆಸಿದವರು ಬಡತನ ಬಗ್ಗೆ ಚರ್ಚಿಸುವುದಿಲ್ಲ

    ಬಳ್ಳಾರಿ: ಶ್ರೀಮಂತ ಹಾಗೂ ಬಡವರ್ಗದ ಜನರು ಇದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದರು. ಭಾರತದ ಪ್ರಗತಿ ಹಾಗೂ ಬಡತನದ ಕುರಿತು ವರದಿ ನೀಡಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ವರದಿ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಎದ್ದು ಕಾಣುತ್ತಿದೆ. ಆಡಳಿತ ನಡೆಸಿದವರು ದೊಡ್ಡ ವಿಚಾರದ ಬಗ್ಗೆ ಚರ್ಚಿಸುತ್ತಾರೆ. ಈ ಬಗ್ಗೆ ಚರ್ಚಿಸುವುದಿಲ್ಲ. ಬಡತನವನ್ನೂ ಎಲ್ಲರೂ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಣ ಕೊಟ್ಟು ದುರುಪಯೋಗಪಡಿಸಿಕೊಳ್ಳುವವರನ್ನು ದೂರವಿಡಿ ಎಂದರು.

  • 10 Apr 2023 06:20 PM (IST)

    Karnataka Assembly Election 2023 Live: ಟೆಂಡರ್​ ತಡೆಗೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ದೂರು

    ದೆಹಲಿ: ಬಿಜೆಪಿ ಸರ್ಕಾರದ 20 ಸಾವಿರ ಕೋಟಿ ರೂ. ಯೋಜನೆಗಳ ಟೆಂಡರ್​ಗೆ ತಡೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ನಿಂದ ದೂರು ನೀಡಲಾಗಿದೆ. ರಾಜ್ಯಸಭಾ ಸದಸ್ಯ ನಾಸೀರ್​ ಹುಸೇನ್​ ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ. ಚುನಾವಣೆಗೂ ಮುನ್ನ $20 ಸಾವಿರ ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಬಳಿಕ ಮಾತನಾಡಿದ ನಾಸೀರ್​ ಹುಸೇನ್​ ಈ ಟೆಂಡರ್ ಮೂಲಕ ಗುತ್ತಿಗೆದಾರರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಇದೇ ಹಣವನ್ನು ಚುನಾವಣೆಗೆ ಬಳಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ. ಕೂಡಲೇ ಟೆಂಡರ್​​ಗೆ ತಡೆ ನೀಡುವಂತೆ ಆಯೋಗಕ್ಕೆ ಮನವಿ ಮಾಡಿದ್ದೇವೆ. 6-7 ವರ್ಷದಿಂದ ಒಂದೇ ಕಡೆ ಇರುವ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದು ಹೇಳಿದರು.

  • 10 Apr 2023 05:45 PM (IST)

    Karnataka Assembly Election 2023 Live: ಇನ್ನೊಂದು ಗಂಟೆಯಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತೆ: ವಿ. ಸೋಮಣ್ಣ

    ತುಮಕೂರು: ವರುಣದಲ್ಲಿ ಸ್ಪರ್ಧಿಸುತ್ತೇನೆಂದು ಯಾರು ಹೇಳಿದ್ದು, ಆ ರೀತಿ ಯಾವುದು ಇಲ್ಲ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದರು. ಸಿದ್ಧಗಂಗಾ ಮಠದಲ್ಲಿ ಮಾತನಾಡಿದ ಅವರು, ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ನಮ್ಮ ಪಕ್ಷದ ವರಿಷ್ಠರಿಗೆ ಇದು ಒಂದು ರೀತಿ ಪ್ರತಿಷ್ಠಿತ ಚುನಾವಣೆ. ಯಾರನ್ನು ಎಲ್ಲಿ ಕಣಕ್ಕಿಳಿಸಬೇಕು ಎಂಬುದು ವರಿಷ್ಠರಿಗೆ ಬಿಟ್ಟಿದ್ದು. ಇನ್ನೊಂದು ಗಂಟೆಯಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತೆ ಎಂದು ಹೇಳಿದರು.

  • 10 Apr 2023 05:37 PM (IST)

    Karnataka Assembly Election 2023 Live: ಬಾಕಿಯಿರುವ 58 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ

    ದೆಹಲಿಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರ ಸಭೆ ಆರಂಭವಾಗಿದ್ದು, ಬಾಕಿಯಿರುವ 58 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಬಗ್ಗೆ, ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್, ಮತ್ತೊಂದೆಡೆ ಪುಲಿಕೇಶಿನಗರ ಟಿಕೆಟ್​ಗೆ ಎ.ಸಿ.ಶ್ರೀನಿವಾಸ್ ಬೇಡಿಕೆ, ದೇವನಹಳ್ಳಿ ಬದಲು ಪುಲಿಕೇಶಿನಗರ ಕ್ಷೇತ್ರದ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

  • 10 Apr 2023 05:29 PM (IST)

    Karnataka Assembly Election 2023 Live: ಈ ಹಿಂದೆ ಕಾಂಗ್ರೆಸ್​ ಸೋಲಲು ಅವರಿಬ್ಬರ ಪಾತ್ರವಿದೆ ಎಂದ ತಮ್ಮಯ್ಯ

    ಚಿಕ್ಕಮಗಳೂರು: ಹೆಚ್.ಡಿ.ತಮ್ಮಯ್ಯ ಬಿಜೆಪಿ ಏಜೆಂಟ್​ ಎಂದು ಅಪಪ್ರಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಎದುರೇ ಅಸಮಾಧಾನ ಹೊರಹಾಕಿದ್ದಾರೆ. H.D.ತಮ್ಮಯ್ಯನನ್ನು ನಾವೇ ಕಾಂಗ್ರೆಸ್​ಗೆ ಕಳಿಸಿದ್ದೇವೆಂದು ಹೇಳ್ತಾರೆ. ನನ್ನ ವಿರುದ್ಧ ಸಿ.ಟಿ.ರವಿ ಷಡ್ಯಂತ್ರ ಮಾಡಿ ಚುನಾವಣೆಗೆ ಸಿದ್ಧರಾಗಿದ್ದಾರೆ. ಶಾರದಾಂಬೆ ಸನ್ನಿಧಾನದಲ್ಲಿ ಸತ್ಯ ಹೇಳುವೆ, ಒಳಒಪ್ಪಂದ ಮಾಡಿಕೊಂಡಿಲ್ಲ. ಕಾಂಗ್ರೆಸ್​ನಲ್ಲೇ ಕೆಲವರು ಬಿಜೆಪಿ ಪ್ರಾಯೋಜಿತ ವ್ಯಕ್ತಿಗಳು ಇದ್ದಾರೆ. ಈ ಹಿಂದೆ ಕಾಂಗ್ರೆಸ್​ ಸೋಲಲು ಅವರಿಬ್ಬರ ಪಾತ್ರವಿದೆ ಎಂದು ತಮ್ಮಯ್ಯ ಹೇಳಿದರು.

    ಚಿಕ್ಕಮಗಳೂರು: ಡಿಕೆ ಶಿವಕುಮಾರ್ ಎದುರೇ ಅಸಮಾಧಾನ ಹೊರಹಾಕಿದ ಹೆಚ್​ಡಿ ತಮ್ಮಯ್ಯ

  • 10 Apr 2023 05:21 PM (IST)

    Karnataka Assembly Election 2023 Live: ಖರ್ಗೆ ರಾಜ್ಯ ರಾಜಕಾರಣಕ್ಕೆ ಬರಬಾರದು ಅಂತೇನು ಇಲ್ಲ: ಡಿ.ಕೆ.ಸುರೇಶ್

    ರಾಮನಗರ: ಖರ್ಗೆ ರಾಜ್ಯ ರಾಜಕಾರಣಕ್ಕೆ ಬರಬಾರದು ಅಂತೇನು ಇಲ್ಲ. ಕೆಪಿಸಿಸಿ ಅಧ್ಯಕ್ಷರು ಏನು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ. ಹೈಕಮಾಂಡ್ ಆದೇಶ ಪಾಲನೆ ಮಾಡುತ್ತೇವೆ ಎಂದು ಡಿ.ಕೆ.ಸುರೇಶ್​​ ಹೇಳಿದರು.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ: ಸಂಸದ ಡಿಕೆ ಸುರೇಶ್ ಏನಂದ್ರು ನೋಡಿ

  • 10 Apr 2023 05:17 PM (IST)

    Karnataka Assembly Election 2023 Live: ಬಿಜೆಪಿಗೆ ಐತಿಹಾಸಿಕ ಗೆಲುವು ನೀಡಲು ರಾಜ್ಯದ ಜನರು ಕಾತರರಾಗಿದ್ದಾರೆ

    ಮಂಗಳೂರು: ಬಿಜೆಪಿಗೆ ಐತಿಹಾಸಿಕ ಗೆಲುವು ನೀಡಲು ರಾಜ್ಯದ ಜನರು ಕಾತರರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್​ ಭಾಟಿಯಾ ಹೇಳಿದರು. ಡಬಲ್ ಇಂಜಿನ್ ಸರ್ಕಾರ, ಟ್ರಬಲ್​​ ಇಂಜಿನ್ ಪಕ್ಷ ನಡುವೆ ಚುನಾವಣೆ ನಡೆಯಲಿದೆ. ಡಬಲ್​ ಇಂಜಿನ್​ ಸರ್ಕಾರದಿಂದ ಮಾತ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ. PFI ಬ್ಯಾನ್ ಮಾಡಿದಾಗ ಅದನ್ನು ವಿರೋಧಿಸಿದ್ದು ಕಾಂಗ್ರೆಸ್ ನಾಯಕರು. ವೋಟ್ ಬ್ಯಾಂಕ್​​ಗಾಗಿ ರಾಷ್ಟ್ರ ವಿರೋಧಿ ಚುಟುವಟಿಕೆ ಸಮರ್ಥಿಸಿಕೊಳ್ತಾರೆ. ವೋಟ್​ ಬ್ಯಾಂಕ್​ಗಾಗಿ PFI ಮೇಲಿನ 700ಕ್ಕೂ ಅಧಿಕ ಕೇಸ್ ಹಿಂಪಡೆದ್ರು. ಈ ಹಿಂದೆ ಕಾಂಗ್ರೆಸ್​​ ನೀಡಿದ್ದ ಭರವಸೆಗಳನ್ನು ಈವರೆಗೂ ಈಡೇರಿಸಿಲ್ಲ ಎಂದು ಹೇಳಿದರು.

  • 10 Apr 2023 05:11 PM (IST)

    Karnataka Assembly Election 2023 Live: ದೆಹಲಿಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರ ಸಭೆ ಆರಂಭ

    ದೆಹಲಿಯ GRG ರಸ್ತೆಯ ಕಾಂಗ್ರೆಸ್ ವಾರ್​​ರೂಮ್​ನಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರ ಸಭೆ ಆರಂಭವಾಗಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಜಮೀರ್ ಅಹ್ಮದ್​ಖಾನ್​, ಮುಕುಲ್ ವಾಸ್ನಿಕ್​, ಸುರ್ಜೇವಾಲ ಭಾಗಿಯಾಗಿದ್ದಾರೆ.

  • 10 Apr 2023 04:40 PM (IST)

    Karnataka Assembly Election 2023 Live: ಕೆಲ ರಾಜಕೀಯ ಲೆಕ್ಕಾಚಾರದಿಂದ 3ನೇ ಪಟ್ಟಿ ವಿಳಂಬ: ಡಿ.ಕೆ.ಸುರೇಶ್

    ರಾಮನಗರ: ಜಿಲ್ಲೆಯವರೇ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ಕೆಪಿಸಿಸಿ ಅಧ್ಯಕ್ಷರು, ಸಿಎಲ್​ಪಿ ನಾಯಕರು ಹೆಸರು ಕಳುಹಿಸಿದ್ದಾರೆ. ಮೂರು ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗುತ್ತೆ. ಕೆಪಿಸಿಸಿ ಅಧ್ಯಕ್ಷರಿಗೆ ರಾಜ್ಯದ 224 ಕ್ಷೇತ್ರಗಳ ಜವಾಬ್ದಾರಿ ನೀಡಿದ್ದಾರೆ. ನನ್ನ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳ ಬಗ್ಗೆ ನಾನು ಗಮನಹರಿಸಿದ್ದೇನೆ. ಕೆಲ ರಾಜಕೀಯ ಲೆಕ್ಕಾಚಾರ ಆಗುತ್ತಿದೆ. ಹಾಗಾಗಿ 3ನೇ ಪಟ್ಟಿ ವಿಳಂಬವಾಗುತ್ತಿದೆ. ಕಾಂಗ್ರೆಸ್​​ ಪಕ್ಷದ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

  • 10 Apr 2023 04:15 PM (IST)

    Karnataka Assembly Election 2023 Live: ಸಚಿವ ಮುನಿರತ್ನ ಹೇಳಿಕೆಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಟಾಂಗ್

    ರಾಮನಗರ: ಸಚಿವ ಮುನಿರತ್ನರನ್ನು ನಾನು ಯಾಕೆ ಟಾರ್ಗೆಟ್ ಮಾಡಲಿ.​​ ಸಚಿವ ಮುನಿರತ್ನಗೆ ಏನು ಆಗಿದೆಯೋ ಗೊತ್ತಿಲ್ಲ, ಭ್ರಮೆಯಲ್ಲಿ ಇದ್ದಾರೆ. ನಾನು ಎಲ್ಲಾ ಕಡೆ ಕೆಲಸ ಮಾಡುತ್ತಿದ್ದೇನೆ, ಅದು ಅವರಿಗೆ ಕಾಣುತ್ತಿಲ್ಲ ಎಂದು ಸಂಸದ ಡಿಕೆ ಸುರೇಶ್​ ಹೇಳಿದರು.

  • 10 Apr 2023 03:59 PM (IST)

    Karnataka Assembly Election 2023 Live: ದೊಡ್ಡತುಮಕೂರು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

    ಬೆಂಗಳೂರು ಗ್ರಾಮಾಂತರ: ಗ್ರಾಮದ ಕೆರೆ ಸ್ವಚ್ಛಗೊಳಿಸುವಂತೆ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡಿಸಿ ಚುನಾವಣೆ ಬಹಿಷ್ಕಾರಕ್ಕೆ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕಲುಷಿತ ನೀರು ಸಂಗ್ರಹದಿಂದ ರೋಗಗಳಿಗೆ ಗ್ರಾಮಸ್ಥರು ತುತ್ತಾಗುತ್ತಿದ್ದಾರೆ. ಬಾಶೆಟ್ಟಹಳ್ಳಿ ಕೈಗಾರಿಕೆಯಿಂದ ಗ್ರಾಮದ ಕೆರೆ ಕಲುಷಿತಗೊಂಡಿದೆ ಎನ್ನಲಾಗುತ್ತಿದೆ.

  • 10 Apr 2023 03:58 PM (IST)

    Karnataka Assembly Election 2023 Live: ಕೆಸಿ ವ್ಯಾಲಿ ಯೋಜನೆ ಹೆಸರಿನಲ್ಲಿ ಜೇಬು ತುಂಬಿಸಿಕೊಂಡಿದ್ದಾರೆ: ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

    ಕೋಲಾರ: ಮುಳಬಾಗಿಲು ತಾಲೂಕಿನ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಶಿನಿಗೇನಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕೆಸಿ ವ್ಯಾಲಿ ಯೋಜನೆ ಹೆಸರಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಜೇಬು ತುಂಬಿಸಿಕೊಂಡಿದ್ದಾರೆ. ಆ ಹಣದಿಂದಲೇ ಅವರು ಚುನಾವಣೆಗೆ ಹೋಗುತ್ತಿದ್ದಾರೆ ಎಂದರು. ಯರಗೋಳ್ ನೀರಾವರಿ ಯೋಜನೆಗೆ ವಿಷಯುಕ್ತ ಕೆಸಿ ವ್ಯಾಲಿ ನೀರಾವರಿ ಯೋಜನೆ‌ ನೀರನ್ನು ಸೇರಿಸಲು ಹೊರಟಿದ್ದಾರೆ. ನಮ್ಮ ಸರ್ಕಾರ ಬಂದರೆ ಶುದ್ಧೀಕರಿಸಿ ಕುಡಿಯುವ ನೀರು ಕೊಡುತ್ತೇವೆ. ನಾನು ಶಪಥ ಮಾಡಿದ್ದೇನೆ ಮುಂದೆ ನಮ್ಮ ಸರ್ಕಾರ ಬಂದರೆ ಮೂರನೇ ಹಂತದ ಶುದ್ದೀಕರಣ ಮಾಡಿ ಶುದ್ದ ಕುಡಿಯುವ ನೀರು ಕೊಡುತ್ತವೆ ಎಂದರು.

  • 10 Apr 2023 03:51 PM (IST)

    Karnataka Assembly Election 2023 Live: ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ತಪ್ಪಲು ಡಿ.ಕೆ.ಶಿವಕುಮಾರ್ ಕಾರಣ

    ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆದ್ರೆ ಕೆಲಸ ಮಾಡಲು ಸಿದ್ಧ ಎಂಬ ಡಿಕೆಶಿ​ ಹೇಳಿಕೆಗೆ ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಟಾಂಗ್​ ನೀಡಿದ್ದು, ಕಾಂಗ್ರೆಸ್​ ನೆಲೆ ಕಳೆದುಕೊಂಡಿದ್ದು ಡಿಕೆಶಿ ಹೇಳಿಕೆಯಿಂದ ಗೊತ್ತಾಗುತ್ತೆ. ಮೈತ್ರಿ ವೇಳೆ ಖರ್ಗೆ ಸಿಎಂ ಮಾಡುವಂತೆ ಜೆಡಿಎಸ್​ನವ್ರು ಹೇಳಿದರು. ಆದರೆ ಕಾಂಗ್ರೆಸ್​​ನಲ್ಲೇ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ರು ಎಂದು ಹೇಳಿದರು.

  • 10 Apr 2023 03:44 PM (IST)

    Karnataka Assembly Election 2023 Live: ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ರೂ. ಅನುದಾನ: ಕುಮಾರಸ್ವಾಮಿ ಘೋಷಣೆ

    ಕೋಲಾರ: ರೈತ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ ಅನ್ನೋದಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದರೆ ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ರೂ. ಅನುದಾನ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಶಿನಿಗೇನಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿರುವ ಸ್ತ್ರೀ ಶಕ್ತಿ ಸಂಘಗಳ ಸಾಲ‌ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.

  • 10 Apr 2023 03:13 PM (IST)

    Karnataka Assembly Election 2023 Live: ಜೆಪಿ ನಡ್ಡಾ ಜೊತೆ ಬಿ ಎಸ್ ಯಡಿಯೂರಪ್ಪ ಬಿಸಿಬಿಸಿ ಚರ್ಚೆ

    ನವದೆಹಲಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಚರ್ಚಿಸಿ ತೆರಳಿದರು. ಬೆಳಗ್ಗೆ ಬಿಎಸ್ ಯಡಿಯೂರಪ್ಪ ಅವರನ್ನು ಬಿಟ್ಟು ಅಮಿತ್ ಶಾ ಸಭೆ ನಡೆಸಿದ್ದರು. ಬಳಿಕ ನಡ್ಡಾ ಅವರು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ್ದರು. ಇದಾದ ನಂತರ ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು. ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆದಿದೆ.

  • 10 Apr 2023 03:09 PM (IST)

    Karnataka Assembly Election 2023 Live: ಟಿಕೆಟ್​ ಘೋಷಣೆಗೂ ಮುನ್ನವೇ ನವಲಗುಂದದಲ್ಲಿ ರಾಜೀನಾಮೆ ಪರ್ವ

    ಧಾರವಾಡ: ಜಿಲ್ಲೆಯ ನವಲಗುಂದ ಕ್ಷೇತ್ರದ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಟಿಕೆಟ್​ ಘೋಷಣೆಗೂ ಮುನ್ನವೇ ನವಲಗುಂದದಲ್ಲಿ ರಾಜೀನಾಮೆ ಪರ್ವ ಶುರವಾಗಿದೆ. ನವಲಗುಂದ ಕಾಂಗ್ರೆಸ್​ ಟಿಕೆಟ್​​ ಆಕಾಂಕ್ಷಿ ಶಿವಾನಂದ ಕರಿಗಾರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ ಶಿವಾನಂದ ಕರಿಗಾರ, ನನ್ನನ್ನ ಪಕ್ಷ ಉಪಯೋಗಿಸಿಕೊಂಡು ಈಗ ಕೈಬಿಟ್ಟಿದೆ. ಪಕ್ಷಕ್ಕೆ ದುಡಿದವರನ್ನ ಬಿಟ್ಟು ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡುತ್ತಿದ್ದಾರೆ. ಆದ್ದರಿಂದ ನಾನು‌ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ. ಈ ಹಿಂದೆ ನಾನು ಎರಡು ಬಾರಿ ನವಲಗುಂದ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ಈ ಬಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.

  • 10 Apr 2023 02:48 PM (IST)

    Karnataka Assembly Election 2023 Live: ಚುನಾವಣೆಗೆ ಮೋದಿಯೇ ಬ್ರ್ಯಾಂಡ್ ಅಂಬಾಸಿಡರ್ ಅಂತಾರೆ

    ಬೆಂಗಳೂರು: ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯೇ ಬ್ರ್ಯಾಂಡ್ ಅಂಬಾಸಿಡರ್ ಅಂತಾರೆ. ಬಿಜೆಪಿ ಭರವಸೆಗಳಿಗೆ ಮೋದಿಯೇ ಅಂಬಾಸಿಡರ್ ಅನ್ನೋದಾದ್ರೆ, 40% ಕಮಿಷನ್, ಭ್ರಷ್ಟಾಚಾರಕ್ಕೂ ಮೋದಿಯೇ ಹೊಣೆಗಾರಿಕೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್​ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.

  • 10 Apr 2023 02:30 PM (IST)

    Karnataka Assembly Election 2023 Live: ಇಂದು ರಾತ್ರಿ ಅಥವಾ ನಾಳೆ ಬಿಜೆಪಿ ಪಟ್ಟಿ ಬಿಡುಗಡೆ: ಯಡಿಯೂರಪ್ಪ

    ನವದೆಹಲಿ: ಇಂದು ರಾತ್ರಿ ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ರಾಜ್ಯದ ಕೆಲವೊಂದು ಕ್ಷೇತ್ರಗಳ ಅಭ್ಯರ್ಥಿ ಬಗ್ಗೆ ಗೊಂದಲವಾಗಿತ್ತು. ಪಕ್ಷದ ಅಧ್ಯಕ್ಷರಿಗೆ ವಿವರ ನೀಡಿ ಬಂದಿದ್ದೇನೆ. ನಮ್ಮ ಎಲ್ಲಾ ಅಭಿಪ್ರಾಯಗಳನ್ನು ಪಕ್ಷದ ನಾಯಕರು ಕೇಳಿದ್ದಾರೆ. ಕೆಲವೊಂದು ಸ್ಟ್ರಾಟಜಿ ಮಾಡಲು ಪ್ರತ್ಯೆಕವಾಗಿ ಕರೆದಿದ್ದರು. ಜಾಹಿರಾತು ಸೇರಿದಂತೆ ಹಲವು ವಿಚಾರ ಚರ್ಚೆ ಮಾಡಿದ್ದಾರೆ ಎಂದರು.

  • 10 Apr 2023 01:40 PM (IST)

    Karnataka Assembly Election 2023 Live: ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಪುತ್ರನಿಂದ ಪ್ರಚಾರ

    ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಿಎಂ ಹೇಳಿಕೆ ಹಿನ್ನೆಲೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಂದ ಪ್ರಚಾರ ಶುರುವಾಘಿದೆ. ಕ್ಷೇತ್ರದ ಪ್ರತಿ ಹಳ್ಳಿಗೂ ಸಿಎಂ ಪುತ್ರ ಭರತ್ ಭೇಟಿ ನೀಡುತ್ತಿದ್ದಾರೆ. ಇಂದು ಕಾರಡಗಿ, ಮಾದಾಪುರ ಗ್ರಾಮದಲ್ಲಿ ಭರತ್ ಪ್ರಚಾರ ನಡೆಸಿದ್ದಾರೆ. ಭರತ್ ಬೊಮ್ಮಾಯಿಗೆ ಕ್ಷೇತ್ರದ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

  • 10 Apr 2023 01:36 PM (IST)

    Karnataka Assembly Election 2023 Live: ನಮಗೆ ಕುರುಡುಮಲೆ ಗಣೇಶನ ಆಶೀರ್ವಾದ ಸಿಕ್ಕಿದೆ -ಹೆಚ್​ಡಿ ಕುಮಾರಸ್ವಾಮಿ

    ಮುಳಬಾಗಿಲಿನಿಂದ ಪ್ರಾರಂಭವಾದ ಪಂಚರತ್ನ ಯಾತ್ರೆ ಯಶಸ್ವಿಯಾಯ್ತು ಎಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಶಿನಗೇನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದರು. ನಮಗೆ ಕುರುಡುಮಲೆ ಗಣೇಶನ ಆಶೀರ್ವಾದ ಸಿಕ್ಕಿದೆ. ಎದುರಾಳಿಗಳು ಆತಂಕಪಡುವ ರೀತಿ ಗಣೇಶನ ಆಶೀರ್ವಾದ ಸಿಕ್ಕಿದೆ. ಈ ಯಾತ್ರೆ ಮೂಲಕ ಜನರ ವಿಶ್ವಾಸ ಗಳಿಸಲು ಯಶಸ್ವಿಯಾಗಿದ್ದೇನೆ. ಇಂದು ಸಂಜೆ ಅಥವಾ ನಾಳೆ ಜೆಡಿಎಸ್​ 2ನೇ ಪಟ್ಟಿ ಬಿಡುಗಡೆ ಆಗುತ್ತೆ. ವರುಣ ಕ್ಷೇತ್ರದ ಅಭ್ಯರ್ಥಿ ಬಗ್ಗೆಯೂ ನಾನು ಚರ್ಚೆ ಮಾಡಿದ್ದೇನೆ. ಕಳೆದ ಬಾರಿ ಸ್ಪರ್ಧಿಸಿದ್ದ ಅಭಿಷೇಕ್​ ಜತೆಗೂ ಚರ್ಚೆ ಮಾಡುತ್ತೇನೆ. ಮತ್ತೆ ಸ್ಪರ್ಧಿಸಲು ಇಚ್ಛಿಸಿದ್ರೆ ಅಭಿಷೇಕ್​ ವರುಣ ಕ್ಷೇತ್ರದ ಅಭ್ಯರ್ಥಿ ಎಂದರು.

  • 10 Apr 2023 01:32 PM (IST)

    Karnataka Assembly Election 2023 Live: ಶೈಲೇಂದ್ರ ಬೆಲ್ದಾಳೆ ಗೆಲುವಿಗಾಗಿ ದೇವಸ್ಥಾನದ ಮೊರೆ ಹೋದ ಗ್ರಾಮಸ್ಥರು

    ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶೈಲೇಂದ್ರ ಬೆಲ್ದಾಳೆ ಗೆಲುವಿಗಾಗಿ ಗ್ರಾಮಸ್ಥರು ದೇವಸ್ಥಾನದ ಮೊರೆ ಹೋಗಿದ್ದಾರೆ. ಬೀದರ್ ತಾಲೂಕಿನ ಹೊನ್ನಿಕೇರಿ ಐತಿಹಾಸಿಕ ವೀರೇಶ್ವರ ದೇವಸ್ಥಾನಕ್ಕೆ ಅಣದೂರು ಗ್ರಾಮಸ್ಥರು ಪಾದಯಾತ್ರೆ ಮೂಲಕ ದೇವರ ಮೊರೆ ಹೋಗಿದ್ದಾರೆ. ಅಣದೂರು ಗ್ರಾಮದಿಂದ ಮಹಿಳೆಯರು ಪುರುಷರು ಯುವಕರು ಪಾದಯಾತ್ರೆಯಲ್ಲಿ‌ ಭಾಗಿಯಾಗಿದ್ದಾರೆ.

  • 10 Apr 2023 01:25 PM (IST)

    Karnataka Assembly Election 2023 Live: ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ

    ಇಂದು ಸಂಜೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ನಿವಾಸದಲ್ಲಿ ಸಂಜೆ 4ಕ್ಕೆ ಸಭೆ ನಡೆಯಲಿದೆ. ನಡ್ಡಾ ಜೊತೆ ರಾಜ್ಯ ಬಿಜೆಪಿ ನಾಯಕರ ಮತ್ತೊಂದು ಸುತ್ತಿನ ಸಭೆ ಇರಲಿದೆ. ಸಭೆ ನಂತರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಸಂಜೆ ನಡೆಯುವ ಸಭೆಯಲ್ಲಿ ಹೊಸ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಲಿದೆ.

  • 10 Apr 2023 01:19 PM (IST)

    Karnataka Assembly Election 2023 Live: ನಾಳೆ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಚಿವ ವಿ.ಸೋಮಣ್ಣ

    ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಸತಿ ಸಚಿವ ವಿ.ಸೋಮಣ್ಣ ನಾಳೆ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ರೈತ ಮೋರ್ಚಾ ಸಮಾವೇಶದಲ್ಲಿ ವಿ.ಸೋಮಣ್ಣ ಭಾಗಿಯಾಗಲಿದ್ದಾರೆ. ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

  • 10 Apr 2023 01:15 PM (IST)

    Karnataka Assembly Election 2023 Live: ರಾಜಕೀಯ ಅಂದ್ರೆ ತಂತ್ರ, ಕುತಂತ್ರ, ಮೋಸ -ಜನಾರ್ದನರೆಡ್ಡಿ

    ರಾಜಕೀಯ ಅಂದ್ರೆ ತಂತ್ರ, ಕುತಂತ್ರ, ಮೋಸ ಎಂದು ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಜನಾರ್ದನ ರೆಡ್ಡಿ ಹೇಳಿದರು. ಒಬ್ಬರ ಮೇಲೆ ಒಬ್ಬರು ಕಾಲಿಟ್ಟು ಬೆಳೆಯುವುದೇ ರಾಜಕೀಯ. ರಾಷ್ಟ್ರೀಯ ಪಕ್ಷಗಳು ರಾಜ್ಯಗಳ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ. ಬಿಎಸ್​ವೈ ಕಣ್ಣೀರಾಕಿ ಸಿಎಂ ಹುದ್ದೆ ತೊರೆಯುವಂತೆ ಮಾಡಿದರು. ರಾಜ್ಯದಲ್ಲಿ 30ಕ್ಕೂ ಹೆಚ್ಚು ಸ್ಥಾನಗಳು ನಮ್ಮ ಕೆಆರ್​ಪಿಪಿ ಗೆಲ್ಲಲಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಹೆಲಿಕಾಪ್ಟರ್ ಚಿಹ್ನೆ ​ಕೇಳಿದ್ದೆ. ನನಗೆ ಹೆಲಿಕಾಪ್ಟರ್ ಚಿಹ್ನೆ ಕೊಡಲಿಲ್ಲ. ನಾನು ಹೆಲಿಕಾಪ್ಟರ್​​ನಲ್ಲಿ ಓಡಾಡುವಾಗ ಅಪಪ್ರಚಾರ ಮಾಡಿದರು ಎಂದು ಗಾಲಿ ಜನಾರ್ದನರೆಡ್ಡಿ ಹೇಳಿದರು.

  • 10 Apr 2023 12:22 PM (IST)

    Karnataka Assembly Election 2023 Live: ಕುರಿ ಚರ್ಬಿ ತಿಂದು ತಿಂದು ಕೊಬ್ಬು ಜಾಸ್ತಿಯಾಗಿದೆ, ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

    ಕುರಿ ಚರ್ಬಿ ತಿಂದು ತಿಂದು ಕೊಬ್ಬು ಜಾಸ್ತಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದರು. ಘನತೆಯಿಂದ ಮಾತನಾಡುವುದು ಕಲಿಯಬೇಕು. ಹುಲಿ ಯೋಜನೆಗೆ 50 ವರ್ಷ ತುಂಬಿದ ಕಾರಣಕ್ಕೆ ಮೋದಿ ಬಂಡೀಪುರಕ್ಕೆ ಬಂದು ಹೋಗಿದ್ದಾರೆ. ಬೇಸಿಗೆ ಇರುವ ಕಾರಣಕ್ಕೆ ಹುಲಿ ಕಾಣಿಸಿಲ್ಲ. ಅದಕ್ಕೂ ಕೊಂಕು ಮಾತನಾಡುವುದು ಯಾಕೆ? ಎಂದರು.

  • 10 Apr 2023 12:19 PM (IST)

    Karnataka Assembly Election 2023 Live: ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್​ ರೆಡ್ಡಿ ನೇತೃತ್ವದಲ್ಲಿ ಸಭೆ

    ಮೇ 10ರಂದು ಕರ್ನಾಟಕದ 224 ಕ್ಷೇತ್ರಗಳಿಗೆ ಮತದಾನ ಹಿನ್ನೆಲೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್​ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸಭೆ ಇದೆ.

  • 10 Apr 2023 12:16 PM (IST)

    Karnataka Assembly Election 2023 Live: ರಾಜ್ಯದ 224 ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿ ಹಾಕೇ ಹಾಕುತ್ತೇವೆ -ಕೆ.ಎಸ್.ಈಶ್ವರಪ್ಪ

    ನಮ್ಮ ಕಾರ್ಯಕರ್ತರ ಅಪೇಕ್ಷೆಗೆ ತಕ್ಕಂತೆ ಅಭ್ಯರ್ಥಿ ಹಾಕುತ್ತಾರೆ. ರಾಜ್ಯದ 224 ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿ ಹಾಕೇ ಹಾಕುತ್ತೇವೆ. 224 ಕ್ಷೇತ್ರಗಳ ಬಗ್ಗೆಯೂ ಕೋರ್​ ಕಮಿಟಿಯಲ್ಲಿ ಚರ್ಚೆ ಆಗಿದೆ. ಒಂದೊಂದು ಕ್ಷೇತ್ರಕ್ಕೆ ಮೂವರ ಹೆಸರನ್ನು ಕಳುಹಿಸಿಕೊಟ್ಟಿದ್ದಾರೆ. ಯಾವುದೇ ಗೊಂದಲವಿಲ್ಲದೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತೆ. ಕೇವಲ ಚುನಾವಣೆಗೋಷ್ಕರ ನಾವು ತಯಾರಿ ಮಾಡ್ತಿಲ್ಲ. 4 ವರ್ಷವೂ ನಮ್ಮ ಕಾರ್ಯಕರು ಫೀಲ್ಡ್​​ನಲ್ಲೇ ಇರುತ್ತಾರೆ ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

  • 10 Apr 2023 12:07 PM (IST)

    Karnataka Assembly Election 2023 Live: ಟಿಕೆಟ್ ಕೈ ತಪ್ಪಿದ್ದಕ್ಕೆ ಪೂಜಾರಿ ಅಸಮಾಧಾನ

    ಗೋಕಾಕ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಪೂಜಾರಿ ಅಸಮಾಧಾನ ಹೊರ ಹಾಕಿದ್ದಾರೆ, ಇಂದು ಗೋಕಾಕ್‌ನಲ್ಲಿ ಸಭೆ ಕರೆಯಲಾಗಿದೆ. ಜ್ಞಾನಮಂದಿರಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ಅನುಮತಿ ನೀಡದ ಹಿನ್ನೆಲೆ ಗೋಕಾಕ ಸಮುದಾಯ ಭವನದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಚುನಾವಣಾ ಅಧಿಕಾರಿಗಳ ಅನುಮತಿಗಾಗಿ ಅಶೋಕ್ ಪೂಜಾರಿ ಕಾಯುತ್ತಿದ್ದಾರೆ. ಹೀಗಾಗಿ ಅಶೋಕ್ ಪೂಜಾರಿ ನಿವಾಸಕ್ಕೆ ತಂಡೋಪತಂಡವಾಗಿ ಬೆಂಬಲಿಗರು ಆಗಮಿಸುತ್ತಿದ್ದಾರೆ.

  • 10 Apr 2023 11:51 AM (IST)

    Karnataka Assembly Election 2023 Live: ಬಂಡೀಪುರದಲ್ಲಿ ಪ್ರಧಾನಿಗೆ ಹುಲಿ ಕಾಣಲಿಲ್ಲ ಎಂದು ವಿಪಕ್ಷಗಳ ಟೀಕೆ

    ಬಂಡೀಪುರದಲ್ಲಿ ಪ್ರಧಾನಿಗೆ ಹುಲಿ ಕಾಣಲಿಲ್ಲ ಎಂದು ವಿಪಕ್ಷಗಳ ಟೀಕೆ ಸಂಬಂಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ. ಗುಜರಾತ್​​ ಸಿಂಹ ಬಂದಾಗಲೆಲ್ಲಾ ಯಾಕೆ ಕಾಂಗ್ರೆಸಿಗರು ಭಯಪಡ್ತಾರೆ. ಸಿದ್ದರಾಮಯ್ಯನವರೇ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಈ ಭಯ ಮೇ 10ರಂದು ಮತ್ಯಾವ ರೀತಿ ಗೋಚರವಾಗುತ್ತೆ ನೋಡಿ? ವನ್ಯಜೀವಿಗಳ ಮೇಲಿನ ಕಾಳಜಿಯಿಂದ ಮೋದಿ ಬಂಡೀಪುರಕ್ಕೆ ಬಂದ್ರು. ಸಿದ್ದರಾಮಯ್ಯ ಒಂದು ದಿನವೂ ಬಂಡೀಪುರ, ನಾಗರಹೊಳೆಗೆ ಹೋಗ್ಲಿಲ್ಲ. ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗ್ತಿದ್ದವರು ನೀವು. ಸಿದ್ದರಾಮಯ್ಯರಿಂದ ಹುಲಿ ಬಗ್ಗೆ ಪಾಠ ಕೇಳಿಬೇಕಿಲ್ಲ. 3 ಹೆಲಿಕಾಪ್ಟರ್​ಗಳು​ ಬಂದಿದ್ದಕ್ಕೆ ಪ್ರಾಣಿಗಳು ಅರಣ್ಯದೊಳಗೆ ಹೋಗಿವೆ ಎಂದು ವಗ್ದಾಳಿ ನಡೆಸಿದ್ದಾರೆ.

  • 10 Apr 2023 11:47 AM (IST)

    Karnataka Assembly Election 2023 Live: ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಮುಖಂಡರ ಬೆಂಬಲಿಗರು

    ರಾಯಚೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಬೆಂಬಲಿಗರ ನಡುವೆ ಹೊಡೆದಾಟವಾಗಿದೆ. ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗ ಆರಿಫ್ ಮತ್ತು​​ ಕಾರ್ಪೊರೇಟರ್​ ತಿಮ್ಮಾರೆಡ್ಡಿ ಆಪ್ತ ಮೊಹಮ್ಮದ್ ನಡುವೆ ಗಲಾಟೆಯಾಗಿದೆ. ಮುಖಂಡರ ಬೆಂಬಲಿಗರು ರಾಯಚೂರು ನಗರದ ಅಂದ್ರೂನ್ ಖಿಲ್ಲಾ‌ ಬಡಾವಣೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡರು. ಘಟನೆಯಲ್ಲಿ ಬಿಜೆಪಿ ಮುಖಂಡ ಆರಿಫ್​ನ ಮೂರು ಬೆರಳು ಕಟ್​​ ಆಗಿದೆ. ಕಾಂಗ್ರೆಸ್​ ಮುಖಂಡ ಮೊಹಮ್ಮದ್​ಗೂ ಗಾಯ, ರಿಮ್ಸ್​​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • 10 Apr 2023 11:37 AM (IST)

    Karnataka Assembly Election 2023 Live: ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಘೋಷಣೆ

    ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹೆಲಿಪ್ಯಾಡ್​​ನಲ್ಲಿ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಘೋಷಣೆ ಕೂಗಲಾಯಿತು. ಡಿ.ಕೆ.ಶಿವಕುಮಾರ್​ ಮುಂದಿನ ಸಿಎಂ ಎಂದು ಬೆಂಬಲಿಗರು ಘೋಷಣೆ ಕೂಗಿದರು.

  • 10 Apr 2023 11:33 AM (IST)

    Karnataka Assembly Election 2023 Live: ಕಾಂಗ್ರೆಸ್ ಅಭ್ಯರ್ಥಿ ಪಾಲ್ಗೊಂಡ ಸಮಾವೇಶದಲ್ಲಿ ಮಕ್ಕಳ ದುರ್ಬಳಕೆ, ಫೋಟೋ ವೈರಲ್

    ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರಖುರ್ದ್ ಕಾಂಗ್ರೆಸ್ ಅಭ್ಯರ್ಥಿ ಪಾಲ್ಗೊಂಡ ಸಮಾವೇಶದಲ್ಲಿ ಮಕ್ಕಳ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಉಗಾರಖುರ್ದ್‌ದಲ್ಲಿ ನಿನ್ನೆ ನಡೆದ ಕಾಗವಾಡ ಕ್ಷೇತ್ರದ ಹಾಲುಮತ ಸಮಾಜದ ಸಮಾವೇಶ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಕರೆದಿದ್ದ ಮಕ್ಕಳ ಕೊರಳಲ್ಲಿ ಕಾಂಗ್ರೆಸ್ ಶಾಲು ಕಾಣಿಸಿಕೊಂಡಿದೆ. ಏನೂ ಅರಿಯದ ಮಕ್ಕಳ ಕೊರಳಲ್ಲಿ ಕಾಂಗ್ರೆಸ್ ಶಾಲು ಹಾಕಿದ್ದ ಫೋಟೋ ವೈರಲ್ ಆಗಿದೆ.

  • 10 Apr 2023 11:22 AM (IST)

    Karnataka Assembly Election 2023 Live: ಮಹಾಲಕ್ಷ್ಮೀ ಲೇಔಟ್​​ ವೈದ್ಯ ಪ್ರಸನ್ನ ಜೆಡಿಎಸ್​ ಸೇರ್ಪಡೆ

    ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಮಹಾಲಕ್ಷ್ಮೀ ಲೇಔಟ್​​ ವೈದ್ಯ ಪ್ರಸನ್ನ ಜೆಡಿಎಸ್​ ಸೇರ್ಪಡೆಯಾಗಿದ್ದು ಮಹಾಲಕ್ಷ್ಮೀ ಲೇಔಟ್​ ಅಭ್ಯರ್ಥಿ ಪ್ರಸನ್ನ ಹೆಸರು ಘೋಷಣೆಯಾಗಿದೆ.

  • 10 Apr 2023 11:17 AM (IST)

    Karnataka Assembly Election 2023 Live: ಪ್ರಚಾರಕ್ಕೆ ಬಂದ ನಿಖಿಲ್ ಕುಮಾರಸ್ವಾಮಿಗೆ ಮಹಿಳೆ ತರಾಟೆ

    ಮೂಲಭೂತ ಸೌಕರ್ಯ ಒದಗಿಸದೇ ಪ್ರಚಾರಕ್ಕೆ ಬಂದ್ರೆ ಓಟ್ ಕೊಡಲ್ಲ ಎಂದು ನಿಖಿಲ್ ಕುಮಾರಸ್ವಾಮಿಗೆ ಮಹಿಳೆ ತರಾಟೆಗೆ ತೆಗೆದುಕೊಂಡ ಘಟನೆ ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ ತಾಲೂಕಿನ ದೊಡ್ಡಬಾದಿಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಪ್ರಚಾರ ಮಾಡ್ತಿದ್ದ ನಿಖಿಲ್​ಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡರು. ನಮಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ. ನಿಮ್ಮ ತಾಯಿ ಬಂದು ಗುದ್ದಲಿ ಪೂಜೆ ಮಾಡಿದ್ದರು. ಆದರೆ ಕೆಲಸ ಪೂರ್ಣ ಆಗಿಲ್ಲ. ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಹಾಗಾಗಿ ನಾವು ಮತ ಹಾಕಲ್ಲ ಎಂದ ಮಹಿಳೆಯರು ವಾಗ್ದಾಳಿ ನಡೆಸಿದರು.

  • 10 Apr 2023 11:12 AM (IST)

    Karnataka Assembly Election 2023 Live: ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡುವಂತೆ ಮನವಿ

    ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡುವಂತೆ ಸ್ವಾಮೀಜಿಗಳ ನಿಯೋಗ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ನೀಡಲೇಬೇಕು ಎಂದು ಬೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರಶ್ರೀ ನೇತೃತ್ವದ ನಿಯೋಗ ಮನವಿ ಮಾಡಿದೆ.

  • 10 Apr 2023 10:58 AM (IST)

    Karnataka Assembly Election 2023 Live: ಪೂಜೆ ಮಾಡಿ ಪ್ರಚಾರ ಶುರು ಮಾಡಿದ ಕೆಹೆಚ್ ಮುನಿಯಪ್ಪ

    ಕಾಂಗ್ರೆಸ್ ಟಿಕೆಟ್ ಘೋಷಣೆಯಾದ 20 ದಿನಗಳ ಬಳಿಕ ಮಾಜಿ ಕೇಂದ್ರ ಸಚಿವ ಕೆಹೆಚ್ ಮುನಿಯಪ್ಪರಿಂದ ಪ್ರಚಾರಕ್ಕೆ ಚಾಲನೆ ಸಿಕ್ಕಿದೆ. ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಹೆಚ್ ಮುನಿಯಪ್ಪ ಭಿನ್ನಮತ ಶಮನಗೊಳಿಸಿಕೊಂಡು ಸ್ಥಳೀಯ ಮುಖಂಡರ ಜೊತೆ‌ ಪೂಜೆ ಸಲ್ಲಿಸಿದ್ದಾರೆ. ದೇವನಹಳ್ಳಿ ತಾಲೂಕಿನ ಐಬಸಾಪುರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ.

  • 10 Apr 2023 10:49 AM (IST)

    Karnataka Assembly Election 2023 Live: ರಾಜಕಾರಣದಲ್ಲಿ ಯಾರೇ ಬಂದರೂ ಎದುರಿಸಬೇಕು, ಹೋರಾಡಬೇಕು -ಡಿಕೆ ಶಿವಕುಮಾರ್

    ಡಿ.ಕೆ.ಶಿವಕುಮಾರ್​ ವಿರುದ್ಧ ಸಚಿವ ಆರ್​.ಅಶೋಕ್ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ರಾಜಕಾರಣದಲ್ಲಿ ಯಾರೇ ಬಂದರೂ ಎದುರಿಸಬೇಕು, ಹೋರಾಡಬೇಕು. ರಾಜಕಾರಣದಲ್ಲಿ ಯಾರು ಯಾರ ವಿರುದ್ಧವಾದರೂ ನಿಲ್ಲಬಹುದು. ಅಶೋಕ್ ಸ್ಪರ್ಧೆ ಮಾಡುವುದಾದರೆ ಅವರಿಗೆ ನನ್ನ ಸ್ವಾಗತವಿದೆ. ಬಿಜೆಪಿಯವರ ಈ ದೊಡ್ಡ ನಿರ್ಧಾರವನ್ನು ನಾನು ಸ್ವಾಗತಿಸುವೆ. ಶೀಘ್ರದಲ್ಲೇ ಕಾಂಗ್ರೆಸ್​ ಪಕ್ಷದ 3ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

  • 10 Apr 2023 10:08 AM (IST)

    Karnataka Assembly Election 2023 Live: ಶೃಂಗೇರಿ ಶಾರದಾಂಬೆ ದರ್ಶನ ಪಡೆದ ಡಿ‌ಕೆ ಶಿವಕುಮಾರ್

    ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಡಿ‌ಕೆ ಶಿವಕುಮಾರ್ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಆದರೆ ಧರ್ಮಸ್ಥಳ ಭೇಟಿ ರದ್ದು ಮಾಡಿ ದೆಹಲಿಗೆ ಹಾರಿದ್ದಾರೆ. ಕಾಂಗ್ರೆಸ್ ನಾಯಕರ ಸಭೆ ಹಿನ್ನೆಲೆ ದೆಹಲಿಗೆ ತೆರಳಿದ್ದಾರೆ.

  • Published On - Apr 10,2023 9:57 AM

    Follow us
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ