Kolar Assembly Election 2023 Winner: ಕಾಂಗ್ರೆಸ್​​ ಅಭ್ಯರ್ಥಿ ಕೋತೂರು.ಜಿ. ಮಂಜುನಾಥ ಭರ್ಜರಿ ಗೆಲುವು, ವರ್ತೂರ್ ಪ್ರಕಾಶ್ ಸೋಲು

Kolar Assembly Election Result 2023 Winner : ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಕೋತೂರು.ಜಿ. ಮಂಜುನಾಥ, ಬಿಜೆಪಿ ಅಭ್ಯರ್ಥಿ ಆರ್ವರ್ತೂರು ಪ್ರಕಾಶ್ ಅವರನ್ನು ಹಿಂದಿಕ್ಕಿ ಭಾರೀ ಮನ್ನಡೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈಬಾರಿ ಆವರ್ತೂರ್ ಪ್ರಕಾಶ್​ ಬಿಜೆಪಿ ಸೇರ್ಪಡೆಯಾಗಿದ್ದು, ಗೆಲವಿನ ನಿರೀಕ್ಷೆಯಲ್ಲಿದ್ದರು, ಆದರೆ ಇವರ ಸೋಲು ಬಿಜೆಪಿಗೆ ಶಾಕ್​ ನೀಡಿದೆ.

Kolar Assembly Election 2023 Winner: ಕಾಂಗ್ರೆಸ್​​ ಅಭ್ಯರ್ಥಿ ಕೋತೂರು.ಜಿ. ಮಂಜುನಾಥ ಭರ್ಜರಿ ಗೆಲುವು, ವರ್ತೂರ್ ಪ್ರಕಾಶ್ ಸೋಲು
Follow us
|

Updated on:May 13, 2023 | 4:42 PM

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ (Kolar Assembly Constituency) ಕಾಂಗ್ರೆಸ್​​ ಅಭ್ಯರ್ಥಿ ಕೋತೂರು.ಜಿ. ಮಂಜುನಾಥ ಭಾರೀ ಮನ್ನಡೆಯಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್ವರ್ತೂರು ಪ್ರಕಾಶ್ ಹಾಗೂ ಜೆಡಿಎಸ್​​​​​​​ ಆಭ್ಯರ್ಥಿ ಸಿಎಂಆರ್ ಶ್ರೀನಾಥ್ ಸೋಲು ಅನುಭವಿಸಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರಾಬಲ್ಯ ಈ ಕ್ಷೇತ್ರದಲ್ಲಿದೆಯಾದರೂ, ಕಾಂಗ್ರೆಸ್‌ನಲ್ಲಿನ ಸಂಘಟಿತ ಶ್ರಮದ ಕೊರತೆ, ಒಳಜಗಳದಿಂದ ಗೆಲುವು ಸಾದಿಸಲು ಹಲವು ವರ್ಷಗಳಿಂದ ಸಾಧ್ಯವಾಗಿಲ್ಲ, ಕಾಂಗ್ರೇಸ್​ ಅಧಿಕಾರ ಕಳೆದುಕೊಂಡು 20 ವರ್ಷಗಳಾಗಿದೆ. ಇದೀಗಾ 20 ವರ್ಷಗಳ ನಂತರ ಕಾಂಗ್ರೆಸ್​​​ ಗೆಲುವು ಸಾಧಿಸಿದೆ. ಇನ್ನು ಜೆಡಿಎಸ್​ ಪಕ್ಷವೂ ಕಳೆದ ಬಾರಿ ಅಧಿಕಾರ ಪಡೆಯಿತಾದರೂ ಅದು ಕಾಂಗ್ರೇಸ್​ ಪಾಲಾಗಿ ಹೋಗಿದೆ, ಇನ್ನು ಎರಡು ಬಾರಿ ಪಕ್ಷೇತರ ಅಭ್ಯರ್ಥಿ ವರ್ತೂರ್ ಪ್ರಕಾಶ್​ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಬೆಳೆಸಿಕೊಂಡಿದ್ದಾರೆ. ಈಬಾರಿ ಆವರ್ತೂರ್ ಪ್ರಕಾಶ್​ ಬಿಜೆಪಿ ಸೇರ್ಪಡೆಯಾಗಿದ್ದು, ಗೆಲವಿನ ನಿರೀಕ್ಷೆಯಲ್ಲಿದ್ದರು, ಆದರೆ ಇವರ ಸೋಲು ಪಕ್ಷಕ್ಕೆ ಶಾಕ್​ ನೀಡಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

Published On - 4:15 pm, Sat, 13 May 23