Kudachi Election Result: ಕುಡಚಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಮಹೇಂದ್ರ ಕೆ ತಮ್ಮಣ್ಣನವರ್ಗೆ ಗೆಲುವು
Kudachi Assembly Election Result 2023 Live Counting Updates: ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ರಾಜೀವ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇವರ ಪ್ರತಿಸ್ಪರ್ಧಿಗಳಾಗಿ ಜೆಡಿಎಸ್ ನಿಂದ ಆನಂದ್ ಮಾಳಗಿ, ಕಾಂಗ್ರೆಸ್ ಪಕ್ಷದ ಮಹೇಂದ್ರ ಕೆ ತಮ್ಮಣ್ಣನವರ್ ಚುನಾವಣಾ ಕಣದಲ್ಲಿದ್ದಾರೆ

Kudachi Assembly Election Results 2023: ಕುಡಚಿಯನ್ನು ಸೂಫಿ ಸಂತರ ನಾಡು ಎಂದು ಕರೆಯಲಾಗುತ್ತದೆ. ಕುಡಚಿ ಕ್ಷೇತ್ರದಲ್ಲಿ (Kudachi Assembly Constituency ) ಕಾಂಗ್ರೆಸ್ ಪಕ್ಷದ ಮಹೇಂದ್ರ ಕೆ ತಮ್ಮಣ್ಣನವರ್ ಗೆದ್ದಿದ್ದಾರೆ. ಇದು ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದರೂ, ಕ್ಷೇತ್ರದಲ್ಲಿ ದಲಿತರ ಪ್ರಾಬಲ್ಯವಿಲ್ಲ. ದಲಿತ ಅಭ್ಯರ್ಥಿಗಳು ಗೆಲ್ಲಲು ಪ್ರಬಲ ಸಮುದಾಯಗಳು ಅತ್ಯಗತ್ಯ. ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಮತಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ.ರಾಯಭಾಗ ಕ್ಷೇತ್ರದಿಂದ ಬೇರ್ಪಟ್ಟು 2008ರಲ್ಲಿ ರಚನೆಯಾದ ಕುಡಚಿ ವಿಧಾನಸಭಾ ಕ್ಷೇತ್ರ ಇದುವರೆಗೆ ಮೂರು ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ತಲಾ ಒಂದು ಬಾರಿ ಗೆಲುವು ಸಾಧಿಸಿವೆ.
2008ರಲ್ಲಿ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆದಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಪಿ ರಾಜೀವ್ ನಡುವೆ ನೇರ ಹಣಾಹಣಿ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಘಾಟಗೆ ಶಾಮ ಭೀಮ ಗೆದ್ದಿದ್ದರು. ಪಿ ರಾಜೀವ್ ಮೂರನೇ ಸ್ಥಾನಗಳಿಸಿದ್ದರು. 2013ರ ಚುನಾವಣೆ ವೇಳೆಗೆ ಬಿಜೆಪಿಯಿಂದ ಬಂಡೆದ್ದ ಶ್ರೀರಾಮುಲು ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ರಚಿಸಿದ್ದು, ಪಿ ರಾಜೀವ್ ಬಿಎಸ್‌ಆರ್ ಸಿಪಿ ಸೇರ್ಪಡೆಯಾದರು. ಅಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಘಾಟಗೆ ಶಾಮ ಭೀಮ ಅವರನ್ನು ಪರಾಭವಗೊಳಿಸಿ ಶಾಸಕರಾದರು. 2018ರ ಚುನಾವಣೆ ಹೊತ್ತಿಗೆ ಬಿಎಸ್‌ಆರ್ ಕಾಂಗ್ರೆಸ್ ಬಿಜೆಪಿಯೊಂದಿಗೆ ವಿಲೀನವಾಯಿತು. ಬಿಜೆಪಿಯಿಂದ ಸ್ಪರ್ಧಿಸಿದ ರಾಜೀವ್ 67,781 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಈ ಬಾರಿಯೂ ರಾಜೀವ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇವರ ಪ್ರತಿಸ್ಪರ್ಧಿಗಳಾಗಿ ಜೆಡಿಎಸ್ ನಿಂದ ಆನಂದ್ ಮಾಳಗಿ, ಕಾಂಗ್ರೆಸ್ ಪಕ್ಷದ ಮಹೇಂದ್ರ ಕೆ ತಮ್ಮಣ್ಣನವರ್ ಚುನಾವಣಾ ಕಣದಲ್ಲಿದ್ದರು.
Published On - 1:54 am, Sat, 13 May 23



