ತುಮಕೂರು: ತುಮಕೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಭೇಟಿ ಹಿನ್ನೆಲೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿ ಡಿಸಿ Y.S.ಪಾಟೀಲ್ ಆದೇಶ ಹೊರಡಿಸಿದ್ದಾರೆ. ತುಮಕೂರಿನ ಬಟವಾಡಿ ಜಂಕ್ಷನ್‌ನಿಂದ ಬಿಜಿಎಸ್ ಸರ್ಕಲ್‌ವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಬೆಂಗಳೂರಿಂದ ತುಮಕೂರು ನಗರ ಪ್ರವೇಶ ಮಾಡುವ ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಬಟವಾಡಿ, ಹನುಮಂತಪುರ, ಸತ್ಯಮಂಗಲ, ಅಂತರಸನಹಳ್ಳಿಯಿಂದ ಬಂದು ಶಿರಾ ಗೇಟ್ ಮೂಲಕ ನಗರಕ್ಕೆ ಎಂಟ್ರಿ ಪಡೆಯಬಹುದಾಗಿದೆ.
ಶಿರಾ ಕಡೆಯಿಂದ ಬರುವ ವಾಹನ ಲಿಂಗಾಪುರದ ಸರ್ವೀಸ್ ರಸ್ತೆಯಿಂದ ಹಳೇ ಶಿರಾ ರಸ್ತೆ ಮೂಲಕ ಶ್ರೀದೇವಿ ಕಾಲೇಜು ಮುಂದೆ ಹೋಗಬೇಕು. ಕುಣಿಗಲ್ ಕಡೆಯಿಂದ ಬರುವವರು ರಿಂಗ್‌ರಸ್ತೆಯ ಕುಣಿಗಲ್ ಸರ್ಕಲ್‌ನಿಂದ ಲಕ್ಕಪ್ಪ ಸರ್ಕಲ್‌ಗೆ ಆಗಮಿಸಿ ತುಮಕೂರು ನಗರಕ್ಕೆ ಎಂಟ್ರಿಯಾಗಬೇಕು. ತಿಪಟೂರಿನಿಂದ ತುಮಕೂರು, ಬೆಂಗಳೂರು ಕಡೆ ಹೋಗುವ ವಾಹನಗಳು ಲಕ್ಕಪ್ಪ ಸರ್ಕಲ್‌ನಿಂದ ಕುಣಿಗಲ್ ರಸ್ತೆಯ ಮೂಲಕ ಅಥವಾ ಗುಬ್ಬಿ ಗೇಟ್ ರಿಂಗ್‌ರಸ್ತೆಯ ಮೂಲಕ ಕುಣಿಗಲ್ ಜಂಕ್ಷನ್‌ನಿಂದ ಪ್ರವೇಶ ಮಾಡಬಹುದಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಹಿನ್ನಡೆ; ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಚುನಾವಣಾ ಆಯೋಗ ಅನುಮತಿ
ಕುಣಿಗಲ್ ಜಂಕ್ಷನ್‌ನಿಂದ ಹೆದ್ದಾರಿ ಮೂಲಕ ತುಮಕೂರಿಗೆ ಬರಬಹುದಾಗಿದೆ. ತಿಪಟೂರು ಪಟ್ಟಣದಿಂದ ಕುಣಿಗಲ್ ಕಡೆ ತೆರಳುವ ವಾಹನಗಳು ರಿಂಗ್ ರೋಡ್ ಗುಬ್ಬಿ ಗೇಟ್ ಮೂಲಕ ಕುಣಿಗಲ್ ಜಂಕ್ಷನ್‌ನಿಂದ ಎಂಟ್ರಿ ನೀಡಬಹುದಾಗಿದೆ. ಬೆಂಗಳೂರು ನಗರದ ಕಡೆಯಿಂದ ಕುಣಿಗಲ್ ಕಡೆ ತೆರಳುವ ವಾಹನಗಳು ಕ್ಯಾತ್ಸಂದ್ರದ ರಿಂಗ್ ರೋಡ್ ಮೂಲಕ ಕುಣಿಗಲ್ ಜಂಕ್ಷನ್ ಕಡೆ ತೆರಳುವಂತೆ ಸವಾರರಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಉಚಿತ ಕೊಡುಗೆಗಳು ಅಂತಿಮವಲ್ಲ ಎಂದ ಬರಗೂರು ರಾಮಚಂದ್ರಪ್ಪ; ಏನಿದರ ಮರ್ಮ?
ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ತುಮಕೂರು ನಗರದಲ್ಲಿ ನಾಳೆ ಪೊಲೀಸ್ ಸರ್ಪಗಾವಲು ವಹಿಸಲಾಗಿದೆ. ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದ್ದು, ಎಸ್‌ಪಿ ರಾಹುಲ್‌ಕುಮಾರ್ ಶಹಪುರ್‌ವಾಡ್ ಸೇರಿ ನಾಲ್ವರು ಎಎಸ್‌ಪಿ, 13 ಡಿವೈಎಸ್‌ಪಿಗಳು, 39 ಸಿಪಿಐ, 84 ಪಿಎಸ್‌ಐ
93 ಎಎಸ್‌ಐ, 650 ಹೆಡ್‌ಕಾನ್ಸ್‌ಟೇಬಲ್ ಹಾಗೂ ಪೊಲೀಸ್ ಸಿಬ್ಬಂದಿ, 40 ಮಹಿಳಾ ಪೊಲೀಸ್, 134 ಹೋಮ್‌ಗಾರ್ಡ್ ಸಿಬ್ಬಂದಿ, 7 ಕೆಎಸ್‌ಆರ್‌ಪಿ ತುಕಡಿ ಪ್ರಧಾನಿ ಕಾರ್ಯಕ್ರಮದ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಹೈಅಲರ್ಟ್ ಆಗಿರಲಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 pm, Thu, 4 May 23