ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಇದಕ್ಕೆಲ್ಲ ರಾಜಕೀಯ ಒತ್ತಡವೇ ಕಾರಣ ಎಂದ ಕಾಂಗ್ರೆಸ್ ಅಭ್ಯರ್ಥಿ
ರಾಜಕೀಯ ಒತ್ತಡದಿಂದ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಆರೋಪಿಸಿದ್ದಾರೆ.
ಬೆಳಗಾವಿ: ರಾಜಕೀಯ ಒತ್ತಡದಿಂದ ಸವದತ್ತಿ (Savadatti) ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ (Ratna Mamani) ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ (VISHWAS VAIDYA) ಆರೋಪಿಸಿದ್ದಾರೆ. ರತ್ನಾ ಮಾಮನಿ ನಾಮಪತ್ರ ಅಂಗೀಕಾರ ಬೆನ್ನಲ್ಲೇ ವಿಶ್ವಾಸ ವೈದ್ಯ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಅವರು, ಫಾರ್ಮ್ ನಂಬರ್ 26 ಅಡಿ ಸರಿಯಾಗಿ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ನಾವು ಆಕ್ಷೇಪಣೆ ಸಲ್ಲಿಸಿದ್ದೇವು ಎಂದು ಸ್ಪಷ್ಟಣೆ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ಅದನ್ನ ಅಂಗೀಕಾರ ಮಾಡಿದ್ದಾರೆ. ವಕೀಲರು ಮತ್ತು ನಮ್ಮ ಕಾನೂನು ತಂಡದ ಗಮನಕ್ಕೆ ತಂದಿದ್ದೇವೆ. ನಮಗೇನು ಅವರ ಮೇಲೆ ವೈಯಕ್ತಿಕ ದ್ವೇಷ ಇಲ್ಲ. ಬೆನ್ನಿಗೆ ಚೂರಿ ಹಾಕಿದರು ಅಂತೆಲ್ಲ ಏಕೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಅವರು ಮಾಡಿದ ತಪ್ಪು ಎತ್ತಿ ತೋರಿಸಲಿಲ್ಲ ಅಂದರೆ ನಾನು ನನ್ನ ಜನತೆಗೆ ಮೋಸ ಮಾಡಿದ ಹಾಗೆ ಎಂದು ಹೇಳಿದರು.
ಎರಡು ಬಾರಿ ಅಫಿಡೆವಿಟ್ ಸಲ್ಲಿಸಿದಾಗ ಸರಿಯಾಗಿಲ್ಲವೆಂದು ಚುನಾವಣಾ ಅಧಿಕಾರಿ ನೋಟಿಸ್ ನೀಡಿದರು. ಬಳಿಕ ಮೂರನೇ ಬಾರಿ ಸಂಜೆ 7 ಗಂಟೆ 38 ನಿಮಿಷಕ್ಕೆ ಬಾಂಡ್ ಖರೀದಿಸಿದ್ದಾರೆ. ಚುನಾವಣಾ ಆಯೋಗದವರು ಮಾಡಿದ್ದು ಸರಿ ಎನಿಸಿಲ್ಲ. ನಾಮಪತ್ರ ಪರಿಶೀಲನೆ ವೇಳೆ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿದರು. ರಾಜಕೀಯ ಒತ್ತಡದಿಂದ ಚುನಾವಣಾ ಅಧಿಕಾರಿ ನಾಮಪತ್ರ ಸ್ವೀಕಾರ ಮಾಡಿದ್ದಾರೆ. ಇನ್ನು 20 ದಿನಗಳಲ್ಲಿ ಜನ ತೀರ್ಮಾನ ಕೊಡುತ್ತಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರದಲ್ಲಿ ಗೊಂದಲ, ವಿಚಾರಣೆಗೆ ಹಾಜರಾಗುವಂತೆ ಚುನಾವಣಾಧಿಕಾರಿಗಳ ನೋಟಿಸ್
ಇದರ ಹಿಂದೆ ರಾಜಕೀಯ ಕೈವಾಡ
ನಾನು ಇಂದು ತಪ್ಪು ಎತ್ತಿ ಹಿಡಿಯಲಿಲ್ಲ ಅಂದರೆ ನನ್ನ ಜನರಿಗೆ ಮೋಸ ಮಾಡಿದಂಗಾಗುತ್ತೆ. ನಮ್ಮ ಲೀಗಲ್ ಸೆಲ್‌ನ ಸಂಕೇತ್ ಏಣಗಿ ಜೊತೆ ಮಾತನಾಡಿದ್ದೇನೆ. ಒಂದು ಲೈನ್ ಮಿಸ್ಟೇಕ್ ಆಗಿದ್ದಕ್ಕೆ ಇಂಡಿಪೆಂಡೆಂಟ್ ಅಭ್ಯರ್ಥಿಯನ್ನ ಸ್ಕೂಟ್ನಿಯಲ್ಲಿ ತೆಗೆದರು. ಇವರದ್ದು ಇಷ್ಟು ತಪ್ಪುಗಳು ಇದ್ದರೂ ಸಹ ಅಂಗೀಕಾರ ಆಗಿದೆ. ಇದರ ಹಿಂದೆ ರಾಜಕೀಯ ಕೈವಾಡವಿದ್ದು, ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದರು.
ಚುನಾವಣೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ
ಚುನಾವಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ ವೈದ್ಯ, 2018ರ ಫಾರ್ಮೆಟ್ ಬೇರೆ ಇದೆ. ಅಮೆಂಡ್ಮೆಂಟ್ ಆದ 2019ರಲ್ಲಿ ಇರುವ ಫಾರ್ಮೆಟ್ ಬೇರೆ ಇದೆ. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ. ರತ್ನಾ ಮಾಮನಿಯವರ ನಾಮಪತ್ರದಲ್ಲಿ ದೋಷ ಇದ್ದಾಗಲೇ ಇಷ್ಟು ಸಮಯ ತೆಗೆದುಕೊಂಡಿದೆ. ಇನ್ನೇನಿದ್ದರೂ ಕಣದಲ್ಲಿಯೇ ಯುದ್ದ ಚುನಾವಣೆಗೆ ಹೋಗುತ್ತೇವೆ ಎಂದರು.
ಇದನ್ನೂ ಓದಿ: ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾದ ಕಾಂಗ್ರೆಸ್ ಅಭ್ಯರ್ಥಿ
ತಪ್ಪು ಯಾರು ಮಾಡಿದರೂ ಸಹ ತಪ್ಪೆ
ಒಬ್ಬ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆಂಬ ರತ್ನಾ ಮಾಮನಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅವರು ಒಬ್ಬ ಮಹಿಳೆ, ನಮ್ಮ ತಾಯಿಯೂ ಸಹ ಒಬ್ಬ ಮಹಿಳೆ ಎಲ್ಲರಿಗೂ ಗೌರವ ಕೊಡೋಣ. ಅನುಕಂಪ ಸೃಷ್ಟಿಸಿಕೊಳ್ಳಲು ಆ ರೀತಿ ಹೇಳಿಕೆ ನೀಡುತ್ತಿದ್ದಾರೆ. ತಪ್ಪು ಯಾರು ಮಾಡಿದರೂ ಸಹ ತಪ್ಪೆ ನಾನೇ ತಪ್ಪಿ ಮಾಡಿದರು ತಪ್ಪು ಒಪ್ಪಿಕೊಳ್ಳಬೇಕಲ್ಲ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Sat, 22 April 23