AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಹೈಕೋರ್ಟ್​ ಮೆಟ್ಟಿಲೇರಲು ಸಜ್ಜಾದ ಕಾಂಗ್ರೆಸ್​ ಅಭ್ಯರ್ಥಿ

ಸಾಕಷ್ಟು ಕುತೂಹಲ ಮೂಡಿಸಿದ್ದ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಗೊಂದಲ ತೆರೆಕಂಡಿದ್ದು, ಬಿಗ್​ ರಿಲಿಫ್ ಸಿಕ್ಕಿದೆ.

ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಹೈಕೋರ್ಟ್​ ಮೆಟ್ಟಿಲೇರಲು ಸಜ್ಜಾದ ಕಾಂಗ್ರೆಸ್​ ಅಭ್ಯರ್ಥಿ
ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Apr 22, 2023 | 2:22 PM

Share

ಬೆಳಗಾವಿ: ಸಾಕಷ್ಟು ಕುತೂಹಲ ಮೂಡಿಸಿದ್ದ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ (Savdatti Yellamma Constituency) ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ (Ratna Mamani) ನಾಮಪತ್ರ ಗೊಂದಲ ತೆರೆಕಂಡಿದ್ದು, ರತ್ನಾ ಮಾಮನಿ ಅವರಿಗೆ ಬಿಗ್​ ರಿಲಿಫ್ ಸಿಕ್ಕಿದೆ. ​​ರತ್ನಾ ಮಾಮನಿಯವರು ಸಲ್ಲಿಸಿದ ಅಫಿಡವಿಟ್​ಗೆ ಕಾಂಗ್ರೆಸ್​, ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇಂದು (ಏ.22) ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದು, ಪರ, ವಿರುದ್ಧದ ವಕೀಲರ ವಾದ ಆಲಿಸಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸ್ವೀಕರಿಸಿದ್ದಾರೆ.

ರತ್ನಾ ಮಾಮನಿ ಅಫಿಡವಿಟ್​ ಆಕ್ಷೇಪಣೆಗೆ ಕಾರಣ

ರತ್ನಾ ಮಾಮನಿ ಅವರು ಅಫಿಡೆವಿಟ್ ಸಲ್ಲಿಕೆ ವೇಳೆ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಸಿದ್ದಾರೆಂದು ಸವದತ್ತಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಬಾಪುಗೌಡ ಪಾಟೀಲ್ ನಿನ್ನೆ (ಏ.21) ನಾಮಪತ್ರ ಪರಿಶೀಲನೆ ವೇಳೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು.

ರತ್ನಾ ಮಾಮನಿ ಅವರು ಏ.18 ಹಾಗೂ ಏ.19ರಂದು ಎರಡು ಬಾರಿ ನಾಮಪತ್ರ ಸಲ್ಲಿಸಿದ್ದರು. ಎರಡೂ ಬಾರಿಯೂ ಪ್ರಜಾಪ್ರತಿನಿಧಿ ಕಾಯ್ದೆ 2019ರ ತಿದ್ದುಪಡಿ ಪ್ರಕಾರ ಪರಿಷ್ಕೃತ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸದೆ, 2018ರ ಮಾದರಿಯ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷದ​ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ವಿಪಕ್ಷಗಳು ಆಗ್ರಹಿಸಿದ್ದವು.

ಇದನ್ನೂ ಓದಿ: Karnataka Polls: ಲಿಂಗಾಯತ ವಿರೋಧ ಎದುರಿಸಲು ಬಿಜೆಪಿಗೆ ಯಡಿಯೂರಪ್ಪ ಗುರಾಣಿ; ಬೆಳಗಾವಿ ಬಂಡಾಯ ತಣಿಸಿದ ಸಂತೋಷ್ ತಂತ್ರ

ಅಲ್ಲದೇ ಚುನಾವಣಾಧಿಕಾರಿಗಳ ನೋಟಿಸ್ ಬಳಿಕವೂ ರತ್ನಾ ಮಾಮನಿ ಅವರು ಎರಡೂ ಬಾರಿ ಹಳೆಯ ಮಾದರಿ ಫಾರ್ಮ್ ಸಂಖ್ಯೆ 26 ಸಲ್ಲಿಕೆ ಮಾಡಿದ್ದಾರೆಂದು ಆರೋಪವಿತ್ತು. ನೋಟಿಸ್ ನೀಡಿದ ನಂತರ ನಾಮಪತ್ರ ಪರಿಶೀಲನೆ ಅವಧಿ ಮುಕ್ತಾಯವಾದ ಬಳಿಕ ಅಫಿಡೆವಿಟ್ ಸಲ್ಲಿಕೆ ಮಾಡಿದ್ದಾರೆ. ಇದೂ ಸಹ ಕಾನೂನು ಬಾಹಿರ ಎಂದು ಕಾಂಗ್ರೆಸ್, ಆಮ್​ ಆದ್ಮಿ ಪಕ್ಷಗಳು ಆರೋಪ ಆರೋಪ ಮಾಡಿದ್ದವು.

ಈ ಹಿನ್ನೆಲೆ ಇಂದು (ಏ.22) ಬೆಳಿಗ್ಗೆ 10ಕ್ಕೆ ಆಕ್ಷೇಪಣೆಗಳ ವಿಚಾರಣೆಗೆ ಲಿಖಿತ ಹೇಳಿಕೆಯೊಂದಿಗೆ ಹಾಜರಾಗುವಂತೆ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರಿಗೆ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಚುನಾವಣಾಧಿಕಾರಿ ಡಾ.ರಾಜೀವ್ ಕೂಲೇರ್ ನೋಟಿಸ್ ನೀಡಿದ್ದರು. ರತ್ನಾ ಮಾಮನಿ ಅವರು ವಿಚಾರಣೆಗೆ ಹಾಜಾರಾಗಿದ್ದು, ಚುನಾವಾಣಾ ಅಧಿಕಾರಿಗಳು ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸ್ವೀಕರಿಸಿದ್ದಾರೆ.

ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರವಾದ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್​ ಅಭ್ಯರ್ಥಿ ವಿಶ್ವಾಸ ವೈದ್ಯ ಪರ ವಕೀಲ ಮುರುಘೇಂದ್ರ ವಂಟಮೂರಿ ಸಜ್ಜಾಗಿದ್ದಾರೆ. ನಾವು ಹೈಕೋರ್ಟ್‌ನಲ್ಲಿ ಫೈಟ್ ಮಾಡುತ್ತೇವೆ. ಯಾವ ಕಾರಣಕ್ಕೆ ಅಂಗೀಕಾರ ಆಗಿದೆ ಮಾಡಿದ್ದಾರೆ ಎಂದು ನಮಗೆ ತಿಳಿಸಿಲ್ಲ. ಕೇವಲ ಅಂಗೀಕಾರ ಆಗಿದೆ ಅಂತ ಮಾತ್ರ ಹೇಳಿದ್ದಾರೆ. ನಾವು ಚುನಾವಣಾಧಿಕಾರಿಗಳ ಬಳಿ ತೀರ್ಪಿನ ಪ್ರತಿ ಪಡೆದು ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಅವರೇ ಇಣುಕಿ ನೋಡಿ ತಮ್ಮ ಕಾಲಿನಲ್ಲಿ ಹಾವು ಬಿಟ್ಟುಕೊಂಡಿದ್ದಾರೆ

ಇಂದು ಬೆಳಗ್ಗೆ ಸಂಕಷ್ಟದಿಂದ ಪಾರು ಮಾಡಿ ಎಂದು ಮೊದಲು ಯಲ್ಲಮ್ಮ ಗುಡ್ಡಕ್ಕೆ ಹೋಗಿದ್ದೆ. ಇಂದು ಮನಸ್ಸಿಗೆ ಬಹಳ ಕೆಟ್ಟ ಅನಿಸಿತ್ತು. ನಮಗೆ ಯಾವುತ್ತೂ ನೇರಾನೇರ ರಾಜಕೀಯ ಮಾಡಿ ಗೊತ್ತು. ಈ ರೀತಿ ಹೊಲಸು ರಾಜಕಾರಣ ಮಾಡಲ್ಲ. ಅವರೇ ಇಣುಕಿ ನೋಡಿ ತಮ್ಮ ಕಾಲಿನಲ್ಲಿ ಹಾವು ಬಿಟ್ಟುಕೊಂಡಿದ್ದಾರೆ. ಎಲ್ಲರೂ ನನಗೆ ಫೋನ್ ಮಾಡಿ ಕಣ್ಣೀರು ಹಾಕಿದರು. ನಮ್ಮ ಯಜಮಾನರು ಮೂರು ಅವಧಿ ರಾಜಕಾರಣ ಮಾಡಿದ್ದರೂ ಹೀಗೆ ಆಗಿರಲಿಲ್ಲ. ಆದರೆ ಹೀಗೇಕೆ ಆಯ್ತು ಅಂತಾ ನನಗೂ ಅನಿಸಿತು. ಧರ್ಮ, ಸಮಯ ನಿರ್ಣಯ ಕೊಡುತ್ತೆ. ನಾವು ಸಮಾಧಾನದಿಂದ ಚುನಾವಣೆ ಮಾಡೋಣ. ಯಾರೂ ಸಹ ಕೆಟ್ಟ ಕಮೆಂಟ್ಸ್ ಮಾಡೋದು ಬೇಡ. ವಿರೋಧಿಗಳ ಪ್ರಚಾರ ನಾವು ಮಾಡೋದು ಬೇಡ, ನಮ್ಮ ಪ್ರಚಾರ ಅವರು ಮಾಡಲಿ. ಶಾಂತಿಯುತವಾಗಿ ಎಲೆಕ್ಷನ್ ಮಾಡಿ ಬಳಿಕ ಗುಲಾಲ್ ಹಚ್ಚಿಕೊಳ್ಳಿ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ನಾಮಪತ್ರ ಅಂಗೀಕಾರ ಬಳಿಕ ಬೆಂಬಲಿಗರ ಜೊತೆ ನಡೆಸಿದ ಸಭೆಯಲ್ಲಿ ರತ್ನಾ ಮಾಮನಿ ಅವರು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:00 pm, Sat, 22 April 23

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ