ಬೆಂಗಳೂರು: ಕಾರ್ಪೊರೇಟರ್ ಆಗಿ ರಾಜಕೀಯ ಜೀವನ ಆರಂಭಿಸಿ 8 ಬಾರಿ ಶಾಸಕರಾಗಿ, ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ರಾಮಲಿಂಗಾರೆಡ್ಡಿ(Ramalinga Reddy) ಅವರು ಈಗ ಮತ್ತೊಮ್ಮೆ ಸಿದ್ದರಾಮಯ್ಯ(Siddaramaiah) ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಾಜಿ ಗೃಹ ವ್ಯವಹಾರಗಳ ಸಚಿವರು, ಸಾರಿಗೆ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರು ಮತ್ತು ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೂ ಆಗಿದ್ದ ರಾಮಲಿಂಗಾರೆಡ್ಡಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಒಲಿದುಬಂದಿದೆ. ಅವರ ರಾಜಕೀಯ ಜೀವನ ನಿಮ್ಮ ಮುಂದೆ.
ಜೂನ್ 12, 1953 ರಂದು ಬೆಂಗಳೂರಿನಲ್ಲಿ ಬಿ. ವೆಂಕಟರೆಡ್ಡಿ ಮತ್ತು ಪಿಳ್ಳಮ್ಮ ದಂಪತಿಗೆ ಜನಿಸಿದ ರಾಮಲಿಂಗಾರೆಡ್ಡಿಯವರು ಚಾಮುಂಡೇಶ್ವರಿ ರೆಡ್ಡಿ ಅವರನ್ನು ವಿವಾಹವಾಗಿದ್ದು ಇವರಿಗೆ ಸೌಮ್ಯ ರೆಡ್ಡಿ ಮತ್ತು ಶ್ರೀರಾಜ್ ರೆಡ್ಡಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು ಆಗಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಮುಖ್ಯಮಂತ್ರಿಗಳಾದ ಡಿ ದೇವರಾಜ ಅರಸು ಅವರ ಬಡವರ ಪರವಾದ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ವಿದ್ಯಾರ್ಥಿ ದಿಸೆಯಿಂದಲೂ ಸಂಘಟನೆಯಲ್ಲಿ ಆಸಕ್ತಿ ಹೊಂದಿದ್ದ 1973ರಲ್ಲಿ ತಿರುವನಂತಪುರದಲ್ಲಿ ನಡೆದ ಎನ್ಎಸ್ಯುಐ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ರಾಜಕೀಯ ಪ್ರವೇಶ ಮಾಡಿದರು.
ಸಣ್ಣ ಉಳಿತಾಯ ಹೂಡಿಕೆಯಲ್ಲಿ ಅತಿ ಹೆಚ್ಚು ಶೇಖರಣೆಗೆ ಆದ್ಯತೆ, ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ, Industrial Reforms High Power Committeeಯ ಅಧ್ಯಕ್ಷರಾಗಿ ಹಲವಾರು ಮಹತ್ವರ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ಹಾಗೂ ಈ ಪೈಕಿ ಐಟಿಪಿಎಲ್ ಯೋಜನೆಯು ಸಹ ಒಂದು. ಕೃಷಿ ಮಾರುಕಟ್ಟೆ ಪ್ರಾಂಗಣಗಳ ನವೀಕರಣ, ರೈತ ಭವನಗಳ ನಿರ್ಮಾಣ, ಕೃಷಿ ಹಮಾರಿಗಳಿಗೆ ವಿವಿಧ ಸೌಲಭ್ಯ, ಬೆಂ.ನಗರ ಜಿಲ್ಲಾ ವ್ಯಾಪ್ತಿಯ ಹುಸ್ಕೂರು ಸಮೀಪದಲ್ಲಿ ಸುಮಾರು 8ಎಕರೆ ವಿಸ್ತೀರ್ಣದಲ್ಲಿ ಅತಿ ದೊಡ್ಡ ಹಣ್ಣಿನ ಮಾರುಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ನಗರ ಪ್ರದೇಶದ ಬಡವರಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ, ಸಚಿವರ Quasi-Judicial ಅಧಿಕಾರ ವ್ಯಾಪ್ತಿಯ ಸುಮಾರು 20 ವರ್ಷಗಳ ಹಳೆಯ 5೦೦ಕ್ಕೂ ಹೆಚ್ಚು ಪ್ರಕರಣಗಳನ್ನು ಒಂದೇ ವರ್ಷದ ಅವಧಿಯಲ್ಲಿ ಇತ್ಯರ್ಥ ಮಾಡಿರುವ ಸಾಧನೆ ಇವರಿಗೆ ಸಲ್ಲುತ್ತದೆ.
ಎಸ್ಎಂ ಕೃಷ್ಣರವರ ಮಾರ್ಗದರ್ಶನದಲ್ಲಿ ಬೆಂಗಳೂರು ನಗರವನ್ನು ಅತ್ಯಂತ ಸುಂದರವಾಗಿ ರೂಪಿಸಲು ಹಾಗೂ ನಗರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಂಡರ್ ಪಾಸ್, ಫೈ ಓವರ್, ಆಧುನಿಕ ಮಾದರಿ ರಸ್ತೆ ನಿರ್ಮಾಣ, ಉದ್ಯಾನವನ, ಆಟದ ಮೈದಾನಗಳ ಅಭಿವೃದ್ಧಿ, ಸ್ವಷ್ಟ ಬೆಂಗಳೂರು ಅಭಿಯಾನ, Self-Assessment Scheme, ನಮ್ಮ ಬೆಂಗಳೂರು ನಗರವನ್ನು – ಸಿಲಿಕಾನ್ ಸಿಟಿಯನ್ನಾಗಿ ರೂಪಿಸಲು ಪ್ರತಿಯೊಂದು ಹಂತದಲ್ಲೂ ಸಂಪೂರ್ಣ ಸಹಕಾರ, 07 ಸಿಎಂಸಿ ಮತ್ತು 02 ಟಿಎಂಸಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವಲ್ಲಿ ಪರಿಶ್ರಮವಹಿಸಿದ್ದಾರೆ.
ದಶಕಗಳಿಂದ ಇದ್ದ ಅನಧಿಕೃತ ಶಾಲೆಗಳ ತೆರವು, ಸಕಾಲದಲ್ಲಿ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳ ವಿತರಣೆ, 6 ಮತ್ತು 7 ತರಗತಿವರೆಗೂ ಬಿಸಿ ಊಟದ ವ್ಯವಸ್ಥೆ, ವಯಸ್ಕರಿಗೆ ಹಲವಾರು ಸಾಕ್ಷರತಾ ಕಾರ್ಯಕ್ರಮಗಳು, ಮಕ್ಕಳನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಲು ನಿರ್ಭಂಧ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೂತನ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮಂಜೂರಾತಿ, ಸುಮಾರು 700ಕ್ಕೂ ಹೆಚ್ಚು ಸಿಬಿಎಸ್ಇ ಮತ್ತು ಸ್ಟೇಟ್ ಪಠ್ಯಕ್ರಮದ ಶಾಲೆಗಳಿಗೆ ಅನುಮತಿ, 01ನೇ ತರಗತಿಯಿಂದಲೇ ಇಂಗ್ಲೀಶ್ ವಿಷಯ ಪ್ರಾರಂಭಿಸಲು ಕ್ರಮ, 2004 – 05 ಮತ್ತು 2005 – 08ನೇ ಸಾಲಿನಲ್ಲಿ 15667 ಶಾಲಾ ಶಿಕ್ಷಕರ ನೇಮಕ – 20,000 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ, ಬೆಂಗಳೂಲಿನ ಸಾಕ್ಷಾರತಾ ಕೇಂದ್ರಗಳಲ್ಲಿ 200 ಗ್ರಂಥಾಲಯ ಮತ್ತು 600 ವಚನಾಲಯಗಳ ಪ್ರಾರಂಭ. ಸಾರ್ವಜನಿಕ ಗ್ರಂಥಾಲಯ ಪುಸ್ತಕ ಅಯ್ದೆಗೆ ಹೊಸ ನೀತಿ ನಿರೂಪಣೆ ಮತ್ತು ಹೊಸ ಗ್ರಂಥಾಲಯಗಳ ಸ್ಥಾಪನೆಗೆ ಕ್ರಮ, ಕಾಲಕಾಲಕ್ಕೆ ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಬಡ್ತಿ ಪ್ರಕ್ರಿಯೆಗಳಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:06 pm, Sat, 20 May 23