Shimoga Rural Election Results: ಶಿವಮೊಗ್ಗ ಗ್ರಾಮೀಣದಲ್ಲಿ ಹಾಲಿ, ಮಾಜಿಗಳ ಕದನ ಕುತೂಹಲ

Shivamogga Rural Assembly Election Results 2023 Live: ಕ್ಷೇತ್ರ ಪುನರಚನೆ ಬಳಿಕ ಸೃಷ್ಟಿಯಾದ ಶಿವಮೊಗ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರವು ಇಲ್ಲಿಯವರೆಗೆ ಮೂರು ಚುನಾವಣೆಗಳನ್ನು ಕಂಡಿದೆ. ಇದರಲ್ಲಿ ಎರಡು ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರೆ ಒಮ್ಮೆ ಜೆಡಿಎಸ್ ಗೆಲುವು ದಾಖಲಿಸಿದೆ.

Shimoga Rural Election Results: ಶಿವಮೊಗ್ಗ ಗ್ರಾಮೀಣದಲ್ಲಿ ಹಾಲಿ, ಮಾಜಿಗಳ ಕದನ ಕುತೂಹಲ
ಅಶೋಕ್ ನಾಯಕ್, ಶಾರದಾ ಪೂರ್ಯಾ ನಾಯಕ್
Edited By:

Updated on: May 13, 2023 | 1:49 AM

Shimoga Rural Assembly Election Results 2023: ಕ್ಷೇತ್ರ ಪುನರಚನೆ ಬಳಿಕ ಸೃಷ್ಟಿಯಾದ ಶಿವಮೊಗ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರವು ಇಲ್ಲಿಯವರೆಗೆ ಮೂರು ಚುನಾವಣೆಗಳನ್ನು ಕಂಡಿದೆ. ಇದರಲ್ಲಿ ಎರಡು ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರೆ ಒಮ್ಮೆ ಜೆಡಿಎಸ್ ಗೆಲುವು ದಾಖಲಿಸಿದೆ. ಈ ಬಾರಿ ಹಾಲಿ ಶಾಸಕ ಅಶೋಕ್​ ನಾಯಕ್​ಗೆ ಮತ್ತೆ ಬಿಜೆಪಿ ಟಿಕೆಟ್​ ನೀಡಿದ್ದರೆ, ಜೆಡಿಎಸ್​ನಿಂದ ಶಾರದಾ ಪೂರ್ಯ ನಾಯಕ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್​ನಿಂದ ಡಾ. ಶ್ರೀನಿವಾಸ್ ಕರಿಯಣ್ಣ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
2008 ರಲ್ಲಿ ಬಿಜೆಪಿ ಅಭ್ಯರ್ಥಿ ಕೆಜಿ ಕುಮಾರಸ್ವಾಮಿ ಸುಮಾರು 32 ಸಾವಿರ ಮತಗಳಿಂದ ಗೆದ್ದಿದ್ದರೆ, 2013ರಲ್ಲಿ ಶಾರದಾ ಪೂರ್ಯ ನಾಯಕ್ 278 ಮತಗಳ ಅಲ್ಪ ಮುನ್ನಡೆಯಿಂದ ಗೆಲುವು ಸಾಧಿಸಿದ್ದರು. ಇನ್ನು 2018ರಲ್ಲಿ ಅಶೋಕ್ ನಾಯಕ್ ಸುಮಾರು 4 ಸಾವಿರ ಮತಗಳಿಂದ ವಿಜಯಿಯಾಗಿದ್ದರು.

ಮೇ 10 ರಂದು ಚುನಾವಣೆ ನಡೆದಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

ವಿಧಾನಸಭೆ ಚುನಾವಣೆ ಲೈವ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:18 am, Sat, 13 May 23