Sira Election Results: ಶಿರಾ ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಕಾಂಗ್ರೆಸ್ ಜೆಡಿಎಸ್ ನಡುವೆ ಜಿದ್ದಾಜಿದ್ದಿ
Sira Assembly Election Result 2023 Live Counting Updates: ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಇದ್ದು, 2020ರ ಉಪಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿ ಕ್ಷೇತ್ರ ಗೆದ್ದುಕೊಂಡಿತ್ತು.

Sira Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ತುಮಕೂರು ಜಿಲ್ಲೆಯ ಶಿರಾ (ಸಿರಾ) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ನಿಂದ ಟಿಬಿ ಜಯಚಂದ್ರ ಹಾಗೂ ಜೆಡಿಎಸ್ನಿಂದ ಆರ್ ಉಗ್ರೇಶ್ ಕಣದಲ್ಲಿದ್ದಾರೆ. ಇವರ ನಡುವೆ ಆಮ್ ಆದ್ಮಿ ಪಕ್ಷದ ಶಶಿ ಕುಮಾರ್ ಅವರು ಹೋರಾಟ ನಡೆಸುತ್ತಿದ್ದಾರೆ.
ದಶಕಗಳಿಂದ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿ ಇದ್ದು, 2020ರಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿ ಕ್ಷೇತ್ರವನ್ನು ಗೆದ್ದುಕೊಂಡಿತ್ತು. 1999ರಲ್ಲಿ ಕಾಂಗ್ರೆಸ್ನ ಪಿಎಂ ರಂಗನಾಥ್ ಅವರು ಜೆಡಿಎಸ್ನ ಬಿ ಸತ್ಯನಾರಾಯಣ ಅವರನ್ನು 25ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದರು. 2004ರ ಚುನಾವಣೆಯಲ್ಲಿ ಸತ್ಯನಾರಾಯಣ ಅವರು ಕಾಂಗ್ರೆಸ್ನ ಶ್ರೀನಿವಾಸಯ್ಯ ಅವರನ್ನು ಸೋಲಿಸಿದ್ದರು.
2008ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಟಿಬಿ ಜಯಚಂದ್ರ ಅವರು ಜೆಡಿಎಸ್ನ ಸತ್ಯನಾರಾಯಣ ಅವರನ್ನು 26 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಟಿಬಿ ಜಯಚಂದ್ರ ಅವರು ಸತತ 2ನೇ ಬಾರಿ ಚುನಾಯಿತರಾಗಿದ್ದರು. ಸತ್ಯನಾರಾಯಣ ಅವರು ಸೋಲು ಅನುಭವಿಸಿದ್ದರು.
2018ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಡಾ ಸಿ ಎಂ ರಾಜೇಶ್ ಗೌಡ ಅವರು ಕಾಂಗ್ರೆಸ್ನ ಜಯಚಂದ್ರ ಅವರನ್ನು 10ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ನಂತರ ಶಾಸಕ ಸ್ಥಾನಕ್ಕೆ ರಾಜೇಶ್ ಗೌಡ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಅದರಂತೆ 2020ರಲ್ಲಿ ನಡೆದ ಉಪಚುನಾವಣೆಯಲ್ಲಿ ರಾಜೇಶ್ ಗೌಡ ಅವರು ಬಿಜೆಪಿಯಿಂದ ಆರಿಸಿಬಂದರು. ಕಾಂಗ್ರೆಸ್ನ ಜಯಚಂದ್ರ ಅವರನ್ನು 13414 ಮತಗಳ ಅಂತರದಲ್ಲಿ ರಾಜೇಶ್ ಗೌಡ ಅವರು ಸೋಲಿಸಿದ್ದರು.