ಪಕ್ಷ ದ್ರೋಹ ಮಾಡಿದ ಆ ನನ್ನ ಮಕ್ಕಳಿಗೆ ಜೋಡಲ್ಲಿ ಹೊಡೆಯಿರಿ; ಸಭೆಯಲ್ಲಿ ಸೋಮಣ್ಣ ಮಾತುಗಳಿಗೆ ಕಾರ್ಯಕರ್ತರು ಕಕ್ಕಾಬಿಕ್ಕಿ

|

Updated on: May 17, 2023 | 12:51 PM

ಚಾಮರಾಜನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಜತೆ ಇಂದು (ಮೇ.17) ವಿ. ಸೋಮಣ್ಣ ಕೃತಜ್ಞತಾ ಸಭೆ ನಡೆಸಿದ್ದು, ಈ ವೇಳೆ ಸೋಮಣ್ಣ ಬೆಂಬಲಿಗರು ಗಲಾಟೆ ಮಾಡಿ, ಜಿಲ್ಲಾ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪಕ್ಷ ದ್ರೋಹ ಮಾಡಿದ ಆ ನನ್ನ ಮಕ್ಕಳಿಗೆ ಜೋಡಲ್ಲಿ ಹೊಡೆಯಿರಿ; ಸಭೆಯಲ್ಲಿ ಸೋಮಣ್ಣ ಮಾತುಗಳಿಗೆ ಕಾರ್ಯಕರ್ತರು ಕಕ್ಕಾಬಿಕ್ಕಿ
ಕೃತಜ್ಞತೆ ಸಭೆಯಲ್ಲಿ ವಿ ಸೋಮಣ್ಣ ಬೆಂಬಲಿಗರ ಗಲಾಟೆ
Follow us on

ಚಾಮರಾಜನಗರ: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Election Result) ಪ್ರಕಟಗೊಂಡಿದ್ದು, ಬಿಜೆಪಿ (BJP) 66 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತೃಪ್ತಿಪಟ್ಟಿದೆ. ಬಿಜೆಪಿಯ ಘಟಾನುಘಟಿ ನಾಯಕರೇ ಈ ಚುನಾವಣೆಯಲ್ಲಿ ಸೋತಿದ್ದಾರೆ. ಅದರಲ್ಲಿ ವಿ. ಸೋಮಣ್ಣ (V Somanna) ಕೂಡ ಒಬ್ಬರು. ಮಾಜಿ ಸಚಿವ ವಿ ಸೋಮಣ್ಣ ರಾಜಧಾನಿ ಹೃದಯ ಭಾಗದ ಸ್ವಕ್ಷೇತ್ರ ಗೋವಿಂದರಾಜನಗರವನ್ನು ಬಿಟ್ಟು ಚಾಮರಾಜನಗರ (Chamrajnagar) ಕ್ಷೇತ್ರದಲ್ಲಿ ಕಮಲ ಅರಳಿಸಲು ಮಾಜಿ ಸಚಿವ ವಿ ಸೋಮಣ್ಣ ಅಖಾಡಕ್ಕಿಳಿದಿರುವುದು ದಿಢೀರ್‌ ಪರಿವರ್ತನೆಯ ಕೇಂದ್ರ ಬಿಂದುವಾಗಿತ್ತು. ಅಲ್ಲದೇ ವಿ ಸೋಮಣ್ಣ ವರುಣಾದಿಂದಲೂ ಸ್ಪರ್ಧಿಸಿದ್ದು, ಅಲ್ಲಿಯೂ ಕೂಡ ಸೋಲಾಗಿದೆ. ಇದರಿಂದ ಅತೀವ ಬೇಸರಗೊಂಡಿದ್ದು, ನಾನು ನಿರುದ್ಯೋಗಿಯಾಗಿದ್ದೇನೆ ಎಂದು ಹೇಳಿದ್ದರು. ಇನ್ನು ಚಾಮರಾಜನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಜತೆ ಇಂದು (ಮೇ.17) ವಿ. ಸೋಮಣ್ಣ ಕೃತಜ್ಞತಾ ಸಭೆ ನಡೆಸಿದ್ದು, ಈ ವೇಳೆ ಸೋಮಣ್ಣ ಬೆಂಬಲಿಗರು ಗಲಾಟೆ ಮಾಡಿದ್ದಾರೆ.

ಸೋಮಣ್ಣ ಬೆಂಬಲಿಗರು ಜಿಲ್ಲಾ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಜಿಲ್ಲಾ ಬಿಜೆಪಿ ಏನು ಕೆಲಸ ಮಾಡಿಲ್ಲ. ಸೋಮಣ್ಣ ಅವರನ್ನು ಬೇಕು ಅಂತ ಸೋಲಿಸಿದ್ದಾರೆ ಎಂದು ಸಭೆಯಲ್ಲಿ ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸತೀಶ್​ ಜಾರಕಿಹೊಳಿ, ಲಕ್ಷ್ಮಣ ಸವದಿ ತಮ್ಮೊಂದಿಗೆ ಶಿಷ್ಯರನ್ನು ಗೆಲ್ಲಿಸಿದ್ದು ಹೇಗೆ? ಇಲ್ಲಿದೆ ಬೆಳಗಾವಿ ಸಾಹುಕಾರರ ರಣತಂತ್ರ

ಪಕ್ಷ ದ್ರೋಹ ಮಾಡಿದ ಆ ನನ್ನ ಮಕ್ಕಳಿಗೆ ಜೋಡಲ್ಲಿ ಹೊಡೆಯಿರಿ

ಕಾರ್ಯಕರ್ತರನ್ನು ಸಮಾಧಾನಪಡಿಸಿ ಭಾಷಣ ಆರಂಭಿಸಿದ ವಿ. ಸೋಮಣ್ಣ ಅವರು ಪಕ್ಷ ದ್ರೋಹ ಮಾಡಿದ ಆ ನನ್ನ ಮಕ್ಕಳಿಗೆ ಜೋಡಲ್ಲಿ ಹೊಡೆಯಿರಿ. ನಾನೇನು ದಡ್ಡ ಅಲ್ಲ, 45 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ.
ಇಲ್ಲಿರುವ ಒಬ್ಬೊಬ್ಬರು 10 ವೋಟು ಹಾಕಿಸಿದ್ದರೇ ಸಾಕಿತ್ತು. ಆ ಒಬ್ಬ ಲೋಫರ್​ಗಾಗಿ ನನ್ನ ಸೋಲಿಸಿದ್ದೀರಿ ಎಂದು ಪರೋಕ್ಷವಾಗಿ ರುದ್ರೇಶ್ ವಿರುದ್ಧ ಹರಿಹಾಯ್ದರು.

ಆವಾಗಲೇ ಅವರಿಗೆ ಚಪ್ಪಲಿ ತಗೆದುಕೊಂಡು ಹೊಡಿಬೇಕಿತ್ತು. ಈಗ ಮಾತನಾಡಿದರೆ ಏನು ಪ್ರಯೋಜನ. ಈ ಪೌರುಷವನ್ನು ಆವಾಗಲೆ ತೊರಿಸಬೇಕಿತ್ತು ನೀವು. ಸುರಿವ ಮಳೆಯಲ್ಲಿ ಪ್ರಚಾರ ಮಾಡಿದ್ದೆ, ನಮಗೋಸ್ಕರ ಹೊಡೆದಾಡಿದರಲ್ಲ ಅವರ ಗತಿ ಏನೀಗ ? ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಬರಲ್ಲ ಅಂದವನು ಎಷ್ಟು ದಿನ ಬಂದ. ನಟರನ್ನು ಕರ್ಕೊಂಡು ಪ್ರಚಾರ ಮಾಡಿದ ಗೊತ್ತಾ? ಅದು ಸೋಮಣ್ಣ ಪವರ್ ಅಂದರೇ. ನಿಮಗೆ ಸ್ವಾಭಿಮಾನ, ಗೌರವ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ನನಗೆ ಎಂತಹ ಬಳುವಳಿ ಕೊಟ್ಟರಿ ನೀವು ಎಂದು ಬೇಸರ ವ್ಯಕ್ತಪಸಿದರು.

ಎಲ್ಲಿಯವರೆಗೆ ಮನೆಹಾಳು ಬುದ್ದಿ ಇರುತ್ತೆ, ಅಲ್ಲಿಯವರೆಗೆ ಉದ್ದಾರ ಆಗಲ್ಲ. ಚಂದಕವಾಡಿ ಮಹದೇವಂಗೆ ಎನ್ ತೀಟೆ ಇತ್ತು. ನನ್ನ ಪರವಾಗಿ ಹೋರಾಡಿದರಲ್ಲ ಅವರು ಯಾತಕ್ಕಾಗಿ. ಈ ಕೃಪಾಪೋಷಿತ ನಾಟಕದಲ್ಲಿ ಮೋಸ ಮಾಡಿದವರು ನನ್ನ ಸಮುದಾಯದವರು ಎಂದು ಬಹಿರಂಗ ಸಮಾವೇಶದಲ್ಲಿ ಲಿಂಗಾಯತ ಸಮುದಾಯದ ಮುಖಂಡರ ವಿರುದ್ಧ ಸೋಮಣ್ಣ ಆಕ್ರೋಶ ಹೊರಹಾಕಿದ್ದಾರೆ.

ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಜಿಲ್ಲಾಧ್ಯಕ್ಷ

ಚಾಮರಾಜನಗರದಿಂದ ವಿ ಸೋಮಣ್ಣ ಸ್ಪರ್ಧಿಸುವುದು ಬಹುತೇಕ ಫಿಕ್ಸ್​​​ ಆದಾಗ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಸೋಮಣ್ಣ ಅವರು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಪಕ್ಷದ ಕಾರ್ಯಕರ್ತರಿಗೆ ಸಹಕಾರ ನೀಡಿಲ್ಲ. ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಶಕ್ತಿ ಇಲ್ಲ. ಅವರನ್ನು ಲಿಂಗಾಯತ ಸಮುದಾಯ ಅಥವಾ ಇತರ ಯಾವುದೇ ಸಮುದಾಯದವರು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದರು. ಇದಾದ ಬಳಿಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಕರೆಸಿ ಮಾತನಾಡಿ ರುದ್ರೇಶ ಅವರನ್ನು ಶಾಂತಗೊಳಿಸಿದ್ದರು.

ಇದಾದ ಬಳಿಕ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ವಿ ಸೋಮಣ್ಣ ಪರ ರುದ್ರೇಶ್​​ ಕೆಲಸ ಮಾಡಿಲ್ಲ ಎಂದು ವಿ ಸೋಮಣ್ಣ ಬೆಂಬಲಿಗರು ಆರೋಪ ಮಾಡುತ್ತಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Wed, 17 May 23