AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಾಯತ ಡ್ಯಾಮ್​ನಲ್ಲಿದ್ದ ಕಾಂಗ್ರೆಸ್​​ ನೀರು ಸಮುದ್ರ ಸೇರಿದ ನೀರು ಉಪ್ಪು ಇರುತ್ತೆ, ಉಪಯೋಗಕ್ಕೆ ಬರಲ್ಲ; ಡಿಕೆ ಶಿವಕುಮಾರ್​ಗೆ ಪ್ರಹ್ಲಾದ್ ಜೋಶಿ ತಿರುಗೇಟು

ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿದ್ದು, ಉಭಯ ಪಕ್ಷಗಳ ನಾಯಕರುಗಳು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಅದರಂತೆ ಲಿಂಗಾಯತ ಡ್ಯಾಮ್ ನೀರು ಕಾಂಗ್ರೆಸ್​​ಗೆ ಬರುತ್ತಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ‘ಲಿಂಗಾಯತ ಡ್ಯಾಮ್​ನಲ್ಲಿದ್ದ ಕಾಂಗ್ರೆಸ್​​ ನೀರು ಸಮುದ್ರ ಸೇರಿದೆ. ಸಮುದ್ರದ ನೀರು ಉಪ್ಪು ಇರುತ್ತೆ, ಆ ನೀರು ಉಪಯೋಗಕ್ಕೆ ಬರಲ್ಲ ಎನ್ನುವ ಮೂಲಕ ಡಿಕೆ ಶಿವಕುಮಾರ್​ಗೆ ತಿರುಗೇಟು ನೀಡಿದ್ದಾರೆ.

ಲಿಂಗಾಯತ ಡ್ಯಾಮ್​ನಲ್ಲಿದ್ದ ಕಾಂಗ್ರೆಸ್​​ ನೀರು ಸಮುದ್ರ ಸೇರಿದ ನೀರು ಉಪ್ಪು ಇರುತ್ತೆ, ಉಪಯೋಗಕ್ಕೆ ಬರಲ್ಲ; ಡಿಕೆ ಶಿವಕುಮಾರ್​ಗೆ ಪ್ರಹ್ಲಾದ್ ಜೋಶಿ ತಿರುಗೇಟು
ಪ್ರಹ್ಲಾದ್​ ಜೋಶಿ
ಕಿರಣ್ ಹನುಮಂತ್​ ಮಾದಾರ್
|

Updated on: Apr 23, 2023 | 2:41 PM

Share

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ(Karnataka Assembly Election)ಗೆ ಕೆಲವೇ ದಿನಗಳಿದ್ದು, ಉಭಯ ಪಕ್ಷಗಳ ನಾಯಕರುಗಳು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಅದರಂತೆ ಲಿಂಗಾಯತ ಡ್ಯಾಮ್ ನೀರು ಕಾಂಗ್ರೆಸ್​​ಗೆ ಬರುತ್ತಿದೆ ಎಂಬ ಡಿಕೆ ಶಿವಕುಮಾರ್(D. K. Shivakumar) ಹೇಳಿಕೆಗೆ ‘ಲಿಂಗಾಯತ ಡ್ಯಾಮ್​ನಲ್ಲಿದ್ದ ಕಾಂಗ್ರೆಸ್​​ ನೀರು ಸಮುದ್ರ ಸೇರಿದೆ. ಸಮುದ್ರದ ನೀರು ಉಪ್ಪು ಇರುತ್ತೆ, ಆ ನೀರು ಉಪಯೋಗಕ್ಕೆ ಬರಲ್ಲ. ಸಮುದ್ರದ ನೀರನ್ನು ಕಾಂಗ್ರೆಸ್​ನವರೇ ಇಟ್ಟುಕೊಳ್ಳಲಿ. ಬಿಜೆಪಿ ಮಲಪ್ರಭಾ, ಕಾವೇರಿ ನದಿಯಂತೆ ಶುದ್ಧ, ಪವಿತ್ರವಾಗಿದ್ದು, ಜನ ಸ್ವೀಕಾರ ಮಾಡುತ್ತಾರೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್​​ ಪಕ್ಷ ಲಿಂಗಾಯತರ ಬಗ್ಗೆ ಸಿಂಪಥಿ ತೋರಿಸುತ್ತಿದೆ. ಇವತ್ತು ರಾಹುಲ್ ಗಾಂಧಿ ಅವರು ಲಿಂಗಾಯತ ಸಿಎಂ ಎಂದು ಘೋಷಣೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ. ನಮ್ಮ ಇಗಿರುವ ಸಿಎಂ ಕೂಡ ಲಿಂಗಾಯತರೇ, ಕಳೆದ ಬಾರಿ ಲಿಂಗಾಯತ ಸಮಾಜದ ಜೊತೆ ಯಾವ ರೀತಿ ನಡೆದುಕೊಂಡರು ಅನ್ನೋದು ಜನರಿಗೆ ಗೊತ್ತಿದೆ. ಹಿಂದೆ ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲ್​, ನಿಜಲಿಂಗಪ್ಪ ಜೊತೆ ಕಾಂಗ್ರೆಸ್​ ಹೇಗೆಲ್ಲ ನಡೆಸಿಕೊಂಡ್ರು, ಇವರ ತುಷ್ಟೀಕರಣ ಜನರಿಗೆ ಅರ್ಥವಾಗಿದೆ. ಕಾಂಗ್ರೆಸ್​ನವರು ತುಕಡೆ ತುಕಡೆ ಗ್ಯಾಂಗ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದು ಜನರಿಗೆ ಗೊತ್ತಿದೆ. ಜನ ಇದ್ಯಾವುದಕ್ಕೂ ಮರುಳಾಗಲ್ಲ. ಜನರಿಗೆ ಎಲ್ಲ ಗೊತ್ತಿದೆ ಎಂದು ಪ್ರಹ್ಲಾದ್ ಜೋಶಿ ಕಾಂಗ್ರೆಸ್​ ವಿರುದ್ದ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಚುನಾವಣೆ ಅಖಾಡಕ್ಕಿಳಿದ PSI ಅಕ್ರಮ ಪ್ರಮುಖ ಆರೋಪಿ: ಪೊಲೀಸ್​ ಭದ್ರತೆಯಲ್ಲಿಯೇ ಆಗಮಿಸಿ ನಾಮಪತ್ರ ಸಲ್ಲಿಸಿದ ರುದ್ರಗೌಡ ಪಾಟೀಲ್

ಹುಬ್ಬಳ್ಳಿಯಲ್ಲಿ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಚುನಾವಣಾ ಕಚೇರಿಯನ್ನ ಕೇಂದ್ರ ಸಚಿವ ಜೋಶಿ ಉದ್ಘಾಟಿಸಿದರು. ಈ ವೇಳೆ ಜೋಶಿಗೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಸಾಥ್ ನೀಡಿದರು.

ಏ.29ರಂದು ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋದಿ ಪ್ರಚಾರ

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿ ‘ ಇದೆ ತಿಂಗಳು 29ರಂದು ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋದಿ ಪ್ರಚಾರ ಮಾಡಲಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕುಡಚಿ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯ ಆಂಕೋಲಾದಲ್ಲಿ ಮೋದಿ ಚುನಾವಣಾ ಱಲಿ ಹಮ್ಮಿಕೊಳ್ಳಲಿದ್ದಾರೆ. ನಾಳೆ(ಏ.24) ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ನಾಳೆಯಿಂದ ರಾಜ್ಯದಲ್ಲಿ 3-4 ದಿನ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಸಚಿವೆ ಸ್ಮೃತಿ ಇರಾನಿ ಇವರುಗಳಿಂದ ಪ್ರಚಾರ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ