Vijaynagar Election Results: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಂ​​​​ ಕೃಷ್ಣಪ್ಪಗೆ ಗೆಲುವು

 Vijaynagar Assembly Election Result 2023 Live Counting Updates: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ​​​​ ಕೃಷ್ಣಪ್ಪಗೆ ಗೆಲುವು

Vijaynagar Election Results: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಂ​​​​ ಕೃಷ್ಣಪ್ಪಗೆ ಗೆಲುವು
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ​​​​ ಕೃಷ್ಣಪ್ಪಗೆ ಗೆಲುವು

Updated on: May 13, 2023 | 6:27 PM

Vijaynagar Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದೆ.  ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ​​​​  ಎಂ ಕೃಷ್ಣಪ್ಪಗೆ ಗೆಲುವು ದಕ್ಕಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ (Vijaynagar Assembly Elections 2023) ಶೇ. 45.65ರಷ್ಟು ಮತದಾನವಾಗಿತ್ತು. ವಿಜಯನಗರ ಕ್ಷೇತ್ರದಲ್ಲಿ ಒಟ್ಟು ಮತದಾರರು 305835, 158862 ಪುರುಷರು, 146804 ಮಹಿಳೆಯರು- ಕಣದಲ್ಲಿರುವ ಅಭ್ಯರ್ಥಿಗಳು 15

ಸತತ ಮೂರು ಚುನಾವಣೆಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ವಿಜಯನಗರ ವಿಧಾನಸಭಾ ಕ್ಷೇತ್ರ ಈ ಬಾರಿ ನೇರ ಹಣಾಹಣಿಗೆ ವೇದಿಕೆಯಾಗಿದೆ. ‘ಹ್ಯಾಟ್ರಿಕ್‌’ ಗೆಲುವಿನೊಂದಿಗೆ ಪ್ರಬಲ ಹಿಡಿತ ಸಾಧಿಸಿರುವ ಕಾಂಗ್ರೆಸ್‌ನ ಎಂ. ಕೃಷ್ಣಪ್ಪ ಎದುರು ಬಿಜೆಪಿಯ ಎಚ್‌. ರವೀಂದ್ರ ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಕೈಜಾರಿದ್ದ ಗೆಲುವನ್ನು ಕಸಿದುಕೊಳ್ಳಲು ಬಿಜೆಪಿ ಅಭ್ಯರ್ಥಿ ಶತಪ್ರಯತ್ನ ಮಾಡುತ್ತಿದ್ದಾರೆ.

ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಮಿಶ್ರಣವಾದ ವಿಜಯನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಬಾಹುಳ್ಯವಿದೆ. ಕುರುಬರು ಮತ್ತು ಮುಸ್ಲಿಮರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. 15 ವರ್ಷಗಳಿಂದ ಕಾಂಗ್ರೆಸ್‌ ತೆಕ್ಕೆಯಲ್ಲಿದೆ. 2008ರ ಚುನಾವಣೆಯಲ್ಲಿ ಕೃಷ್ಣಪ್ಪ ಅವರು ಬಿಜೆಪಿಯ ಪ್ರಮೀಳಾ ನೇಸರ್ಗಿ ವಿರುದ್ಧ ಗೆಲುವು ಸಾಧಿಸಿದ್ದರು. 2013ರಲ್ಲಿ ಬಿಜೆಪಿಯ ವಿ. ಸೋಮಣ್ಣ ಅವರನ್ನು ಪರಾಭವಗೊಳಿಸಿದ್ದರು. 2018ರಲ್ಲಿ ಬಿಜೆಪಿಯ ಎಚ್‌.ರವೀಂದ್ರ ಎದುರು 2,775 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೃಷ್ಣಪ್ಪ ಮತ್ತು ರವೀಂದ್ರ ಈ ಚುನಾವಣೆಯಲ್ಲಿ ಮತ್ತೆ ಮುಖಾಮುಖಿಯಾಗಿದ್ದಾರೆ.

ಜೆಡಿಎಸ್‌ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಜೆಡಿಎಸ್‌ ಅಭ್ಯರ್ಥಿ 2018ರ ಚುನಾವಣೆಯಲ್ಲಿ 8,174 ಮತ ಪಡೆದಿದ್ದರು. ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್‌ ಅವರು ಕೃಷ್ಣಪ್ಪ ಸಹೋದರನ ಕುಟುಂಬದ ರೇವತಿ ಅವರನ್ನು ವರಿಸಿದ್ದಾರೆ. ಆ ಬಳಿಕ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಅದು ಕೂಡ ಈ ಕ್ಷೇತ್ರದ ಚುನಾವಣೆ ಮೇಲೆ ಪ್ರಭಾವ ಬೀರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಆಮ್‌ ಆದ್ಮಿ ಪಕ್ಷದ ರಮೇಶ್‌ ಬೆಲ್ಲಮ್‌ಕೊಂಡ, ಬಹುಜನ ಸಮಾಜ ಪಕ್ಷದ ಗುಲ್ಶನ್‌ ಬಾನು, ಕರ್ನಾಟಕ ರಾಷ್ಟ್ರ ಸಮಿತಿಯ ನರಸಿಂಹ ರೆಡ್ಡಿ ಕೆ.ಎಲ್‌. ಸೇರಿದಂತೆ ಒಟ್ಟು 15 ಮಂದಿ ಕಣದಲ್ಲಿದ್ದಾರೆ. ಸಮಾಜವಾದಿ ಜನತಾ ಪಕ್ಷದಿಂದ (ಕರ್ನಾಟಕ) ಮತ್ತು ಪಕ್ಷೇತರರಾಗಿ ರವೀಂದ್ರ ಹೆಸರಿನ ಇಬ್ಬರು ಸ್ಪರ್ಧಿಸಿದ್ದಾರೆ. ಎಂ. ಕೃಷ್ಣಪ್ಪ ಹೆಸರಿನ ಪಕ್ಷೇತರರೊಬ್ಬರು ಕಣದಲ್ಲಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ ಅವರು ಪ್ರತಿನಿಧಿಸುತ್ತಿದ್ದ ಹಿಂದಿನ ಬಿನ್ನಿಪೇಟೆ ಕ್ಷೇತ್ರದ ಭಾಗವಾಗಿತ್ತು ಇಂದಿನ ವಿಜಯನಗರ ಅಸೆಂಬ್ಲಿ ಕ್ಷೇತ್ರ. ಇಲ್ಲಿ ಸೋಮಣ್ಣ ಕೂಡ ಹಿಡಿತ ಹೊಂದಿದ್ದರು. ಈ ಕ್ಷೇತ್ರವೂ ಕೃಷ್ಣಪ್ಪ ಮತ್ತು ಸೋಮಣ್ಣ ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿಯ ಕಣವಾಗಿತ್ತು. ಬಿಜೆಪಿ ವರಿಷ್ಠರ ಆಣತಿಯಂತೆ ವರುಣ ಹಾಗೂ ಚಾಮರಾಜನಗರದತ್ತ ಸೋಮಣ್ಣ ಹೆಜ್ಜೆ ಹಾಕಿರುವುದು ವಿಜಯನಗರ ಕ್ಷೇತ್ರದ ಮೇಲೂ ತುಸು ಪ್ರಭಾವ ಬೀರಿದೆ.

‘ಕ್ಷೇತ್ರದಲ್ಲಿ 15 ವರ್ಷದಿಂದ ಅಭಿವೃದ್ಧಿಯೇ ಆಗಿಲ್ಲ. ಈ ಬಾರಿ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಕೊಡಿ’ ಎಂದು ರವೀಂದ್ರ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದಾರೆ. ಸ್ವತಃ ತಾವು ಹಾಗೂ ಮಗಳು ಮಹಾಲಕ್ಷ್ಮಿ ಬಿಬಿಎಂಪಿ ಸದಸ್ಯರಾಗಿ ಮಾಡಿದ ಕೆಲಸ ಮತ ಗಳಿಕೆಗೆ ನೆರವಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಲ್ಲಿ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಕೂಡ ನಡೆದಿದೆ. ಇದರಿಂದ ಗೆಲುವಿನ ದಡ ಸೇರಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 4:20 am, Sat, 13 May 23