AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yellapura Election Results: ಯಲ್ಲಾಪುರ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಶಿವರಾಮ್​ ಹೆಬ್ಬಾರ್​, ವಿಎಸ್​ ಪಾಟೀಲ್​ ಮಧ್ಯೆ ಪೈಪೋಟಿ

Yellapur Assembly Election Result 2023 Live Counting Updates: ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಮ್​ ಹೆಬ್ಬಾರ್​, ಕಾಂಗ್ರೆಸ್​ನಿಂದ ವಿಎಸ್​ ಪಾಟೀಲ್​​ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Yellapura Election Results: ಯಲ್ಲಾಪುರ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಶಿವರಾಮ್​ ಹೆಬ್ಬಾರ್​, ವಿಎಸ್​ ಪಾಟೀಲ್​ ಮಧ್ಯೆ ಪೈಪೋಟಿ
ಶಿವರಾಮ್​ ಹೆಬ್ಬಾರ್​, ವಿಎಸ್​ ಪಾಟೀಲ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on:May 13, 2023 | 11:33 AM

Yellapura Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ (Yellapur Assembly Constituency)ಬಿಜೆಪಿ​ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​ ಸ್ಪರ್ಧಿಸಿದ್ದಾರೆ. ಇನ್ನು ಕಳೆದ ಸಲ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ಗೆದ್ದು, ಬಳಿಕ ಬೆಜೆಪಿ ಸೇರುವ ಮೂಲಕ ಸರ್ಕಾರವನ್ನ ಬಿಳಿಸಿದ್ದರು, ಬಳಿಕ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಬರೊಬ್ಬರಿ 80,442 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು. ಈ ಬಾರಿ ಕೂಡ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಇವರು ಮತ್ತೊಮ್ಮೆ ಗೆಲ್ಲುವ ಭರವಸೆಯಲ್ಲಿದ್ದಾರೆ. ಸದ್ಯ ಮುನ್ನಡೆ ಕೂಡ ಸಾಧಿಸಿದ್ದಾರೆ.

ಕಾಂಗ್ರೆಸ್​ನಿಂದ ವಿಎಸ್​ ಪಾಟೀಲ್​ ಸ್ಪರ್ಧಿಸಿದ್ದಾರೆ. ಇನ್ನು ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ಇವರು ಬಿಜೆಪಿ​ ಪರವಾಗಿ ಕಣದಲಿದ್ದು, ಇದೇ ಹೆಬ್ಬಾರ್​ ವಿರುದ್ದ ಸೋತಿದ್ದರು. ಬಳಿಕ ಬಿಜೆಪಿ ಟಿಕೆಟ್​ ಕೈ ತಪ್ಪಿದ್ದರಿಂದ ಇದೀಗ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದಾರೆ. ಈ ಬಾರಿ ಇಬ್ಬರು ಪಕ್ಷ ಬದಲಿಸಿಕೊಂಡವರ ನಡುವೆ ಬಿಗ್​ ಪೈಟ್​ ನಡೆಯಲಿದೆ. ಇನ್ನು ಕ್ಷೇತ್ರದಲ್ಲಿ ಜೆಡಿಎಸ್​ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಇನ್ನು ಕ್ಷೇತ್ರದಲ್ಲಿ ಶಿವರಾಮ್​ ಹೆಬ್ಬಾರ್​ಗೆ ಉತ್ತಮ ಪ್ರತಿಕ್ರಿಯೆ ಇದ್ದು, ಇತ್ತ ವಿಎಸ್​ ಪಾಟೀಲ್​ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಮತದಾರ ಯಾರ ಕೈಹಿಡಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 4:25 am, Sat, 13 May 23

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ