ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ವಿರುದ್ದ ವಂಚನೆ ಆರೋಪ: ಆಡಿಯೋ ವೈರಲ್

ಯಲಹಂಕ ಜೆಡಿಎಸ್​ ಅಭ್ಯರ್ಥಿ ಮುನೇಗೌಡ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಲಕ್ಷ ಲಕ್ಷ ಹಣ ನೀಡದೆ ಅಶ್ಲೀಲ‌ ಪದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ.

ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ವಿರುದ್ದ ವಂಚನೆ ಆರೋಪ: ಆಡಿಯೋ ವೈರಲ್
ಜೆಡಿಎಸ್ ಅಭ್ಯರ್ಥಿ ಮುನೇಗೌಡ
Follow us
ಗಂಗಾಧರ​ ಬ. ಸಾಬೋಜಿ
|

Updated on:May 05, 2023 | 9:10 PM

ದೇವನಹಳ್ಳಿ: ಯಲಹಂಕ ಜೆಡಿಎಸ್​ ಅಭ್ಯರ್ಥಿ ಮುನೇಗೌಡ (Munegowda) ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಲಕ್ಷ ಲಕ್ಷ ಹಣ ನೀಡದೆ ಅಶ್ಲೀಲ‌ ಪದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ. ಜೆಡಿಎಸ್​ ಅಭ್ಯರ್ಥಿ ಮುನೇಗೌಡ ಮಾತನಾಡಿದ್ದಾರೆ ಎನ್ನಲಾದ ಕೆಲ ಆಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಆ ಮೂಲಕ ಇದೀಗ ಕ್ಷೇತ್ರದಲ್ಲಿ ಆಡಿಯೋ ವಾರ್​ ಶುರುವಾಗಿದೆ. ಬಿಜಾಪುರ ಮೂಲದ ಉದ್ಯಮಿಗೆ ಹಣ ನೀಡುವ ವಿಚಾರಕ್ಕೆ ದಮ್ಕಿ ಹಾಕಿ ಬೈಗುಳ ಆರೋಪ ಮಾಡಲಾಗಿದೆ. 69 ಲಕ್ಷ ರೂ. ಹಣ ನೀಡದೆ ಮೋಸ ಮಾಡಿ ಬೆದರಿಕೆ ಹಾಕಿದ್ದಾರೆನ್ನಲಾಗುತ್ತಿದ್ದು, ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಕ್ಷೇತ್ರದಲ್ಲಿ ಆರೋಪ  ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ.

ಬೆಂಗಳೂರು ನಗರ ಜಿಲ್ಲೆ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿ ಆಗಿ ಮುನೇಗೌಡ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಎಸ್​ಆರ್ ವಿಶ್ವನಾಥ್​ ಸ್ಪರ್ಧಿಸಿದ್ದು, ಇಬ್ಬರ ನಡುವೆ ಎಲೆಕ್ಷನ್​ ಫೈಟ್​ ಜೋರಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Fact Check: ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರಾ ಮೋದಿ?; ವೈರಲ್ ವಿಡಿಯೊ ಎಡಿಟ್ ಮಾಡಿದ್ದು

ತಮ್ಮನ್ನು ತಾವೇ ಕಿಡ್ನಾಪ್​ ಮಾಡಲು ಪ್ಲಾನ್

ಇತ್ತೀಚೆಗೆ ಮುನೇಗೌಡ ಅವರದ್ದು ಎನ್ನಲಾದ ತಮ್ಮನ್ನು ತಾವೇ ಕಿಡ್ನಾಪ್​ ಮಾಡಲು ಪ್ಲಾನ್​ ಹೆಣೆದಿರುವ ವಿಡಿಯೋ ಒಂದನ್ನು ವೈರಲ್​ ಆಗಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಕುರಿತಾಗಿ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್​ ಅವರು ಮೇ.3 ರಂದು ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು.

ಬಿಜೆಪಿ ಅಭ್ಯರ್ಥಿ ಪರ ಕುತಂತ್ರದಿಂದ ಪ್ರಚಾರ ಮಾಡಲು ಹುನ್ನಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇನ್ನು ಇದೇ ವೇಳೆ ಪೊಲೀಸ್ ಠಾಣೆ ಮುಂದೆ ವಿಶ್ವನಾಥ್ ಕಾರ್ಯಕರ್ತರು‌ ಜಮಾಯಿಸಿದ್ದರು.

ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿ ಕಿಡ್ನಾಪ್ ಆರೋಪ ಪಟ್ಟ; ಪೊಲೀಸರಿಗೆ ದೂರು ನೀಡಿದ ಬಿಜೆಪಿ ಅಭ್ಯರ್ಥಿ

ನನ್ನ ಗ್ರಹಚಾರಕ್ಕೆ ಪ್ರತಿ ಬಾರಿ ಹೀಗೆ ಆಗುತ್ತಿದೆ: ವಿಶ್ವನಾಥ್

ಈ ಕುರಿತು ಮಾತನಾಡಿದ್ದ ಬಿಜೆಪಿ ಅಭ್ಯರ್ಥಿ ವಿಶ್ವನಾಥ್​, ಚುನಾವಣೆ ಪ್ರಚಾರ ಮುಗಿಸಿ ಬರುವಾಗ ಮುನೇಗೌಡರು ಸಂಚು ಮಾಡಿರುವುದು ಗೊತ್ತಾಗಿದೆ. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗೂ ಚರಣ್​ರವರು ಸಂಚು ಮಾಡಿರೋದು ನೋಡಿದೆ. ಕಳೆದ 4 ಮತ್ತು 5 ನೇ ತಾರೀಕಿನಂದು ಅವರನ್ನೇ ಅವರೇ ಕಿಡ್ನ್ಯಾಪ್ ಮಾಡಿ ವಿಶ್ವನಾಥ್ ಅವರು ಕಿಡ್ನ್ಯಾಪ್ ಮಾಡಿದ್ದಾರೆಂದು ಆರೋಪಿಸೋಕೆ ಪ್ಲಾನ್ ಮಾಡಿದ್ದರು. ಸಿಂಗನಾಯಕನಹಳ್ಳಿ ಹೋಗುವಾಗ ಅವರ ಮೇಲೆ ಅವರೇ ಹಲ್ಲೆ ಮಾಡಿಕೊಂಡು ನನ್ನ ಮೇಲೆ ಎಫ್​ಐಆರ್ ಮಾಡುವ ತರ ಪ್ಲಾನ್ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಲು ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಗ್ರಹಚಾರಕ್ಕೆ ಪ್ರತಿ ಬಾರಿ ಹೀಗೆ ಆಗುತ್ತಿದೆ. ಪ್ರತಿಬಾರಿ ಬಚಾವ್ ಆಗಿದ್ದೇನೆ. ಆದ್ರೀಗ ಈ ತರ ಗಲಾಟೆಗಳನ್ನ ಸೃಷ್ಟಿ ಮಾಡೋದು ಮಾತ್ರ ಮಾಡುತ್ತಿದ್ದಾರೆ. ನಾನು ಆ ಅಭ್ಯರ್ಥಿಯನ್ನ ನೋಡಿದ್ದು ಒಂದೇ ಬಾರಿ. ಆದರೆ ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ನಾಳೆ ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡುತಿದ್ದೇನೆ ಎಂದು ಹೇಳಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:08 pm, Fri, 5 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ