Lok Sabha Election 2024 Exit Poll Results: ಒಟ್ಟು 7 ಹಂತಗಳಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19ರಂದು ಶುರುವಾದ ಮತದಾನದ ಉತ್ಸವ 59 ದಿನಗಳನ್ನು ಪೂರೈಸಿದೆ. ಈಗಾಗಲೇ 6 ಹಂತಗಳ ಮತದಾನ ಯಶಸ್ವಿಯಾಗಿ ಮುಗಿದಿದ್ದು, ಇಂದು 7ನೇ ಹಾಗೂ ಕಟ್ಟ ಕಡೆಯ ಹಂತದ ಮತದಾನ ನಡೆಯುತ್ತಿದೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಒಳಗೊಂಡು ಒಟ್ಟು 57 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದೆ. ಪಂಜಾಬ್‌ನ ಎಲ್ಲಾ 13 ಲೋಕಸಭಾ ಕ್ಷೇತ್ರಗಳು, ಉತ್ತರಪ್ರದೇಶದ 13 ಕ್ಷೇತ್ರಗಳು, ಪಶ್ಚಿಮ ಬಂಗಾಳ 09, ಬಿಹಾರ 08, ಒಡಿಶಾ06, ಹಿಮಾಚಲ ಪ್ರದೇಶ04, ಜಾರ್ಖಂಡ್03, ಕೇಂದ್ರಾಡಳಿ ಪ್ರದೇಶದ ಚಂಡೀಗಢ 01 ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಇದಲ್ಲದೆ ಒಡಿಶಾ ವಿಧಾನಸಭೆ ಚುನಾವಣೆಯ ಬಾಕಿಯಿರುವ 42 ಕ್ಷೇತ್ರಗಳು ಮತ್ತು ಹಿಮಾಚಲದ ಪ್ರದೇಶ 06 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಮತದಾನದ ಕ್ಷಣ ಕ್ಷಣದ ಸುದ್ದಿಗಾಗಿ ಟಿವಿ9 ಲೈವ್.
ಮತ್ತಷ್ಟು ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಟಿವಿ9, ಆಜ್ತಕ್, ಅಬಿಪಿ ನ್ಯೂಸ್, ಝೀ ನ್ಯೂಸ್, ಇಂಡಿಯಾ ಟಿವಿ ಸೇರಿದಂತೆ ಅನೇಕ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ.
ಲೋಕಸಭಾ ಚುನಾವಣೆಯ ಅಂತಿಮ ಹಂತದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 58.34ರಷ್ಟು ಮತದಾನವಾಗಿದೆ. ಬಿಹಾರ 48.86%, ಚಂಡೀಗಢ 62.80%, ಒಡಿಶಾ 62.46%, ಹಿಮಾಚಲ ಪ್ರದೇಶ 66.56%, ಜಾರ್ಖಂಡ್ 67.95%, ಪಂಜಾಬ್ 55.20%, ಯುಪಿಯಲ್ಲಿ ಶೇ.54ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇಕಡಾ 69.89ರಷ್ಟು ಮತದಾನವಾಗಿದೆ. 8 ರಾಜ್ಯ, ಕೇಂದ್ರಾಡಳಿತ ಪ್ರದೇಶ ಸೇರಿ 57 ಕ್ಷೇತ್ರಗಳಲ್ಲಿ ನಡೆದ ಮತದಾನ ನಡೆದಿದೆ.
ಲೋಕಸಭೆ ಚುನಾವಣೆಯ 7ನೇ ಹಂತದ ಮತದಾನ ಮುಕ್ತಾಯವಾಗಿದೆ. ಕೆಲವೇ ಕ್ಷಣಗಳಲ್ಲಿ ಎಕ್ಸಿಟ್ ಪೋಲ್ ಪ್ರಕಟವಾಗಲಿದೆ.
ಇಂಡಿಯಾ ಮೈತ್ರಿಕೂಟ 295ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ದೆಹಲಿಯಲ್ಲಿ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಇಂಡಿಯಾ ಮೈತ್ರಿಕೂಟವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯ ನಂತರ ಮಾತನಾಡಿದ ಅವರು, ನಿರುದ್ಯೋಗ, ಬೆಲೆ ಏರಿಕೆ, ಜಿಎಸ್‌ಟಿಯ ಭೂಕಂಪ ಸಂಭವಿಸಿದೆ ಎಂದು ಅವರು ಹೇಳಿದರು.
ಟಿವಿ9, ಆಜ್ತಕ್, ಅಬಿಪಿ ನ್ಯೂಸ್, ಝೀ ನ್ಯೂಸ್, ಇಂಡಿಯಾ ಟಿವಿ ಸೇರಿದಂತೆ ಅನೇಕ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ.
ಇಂಡಿಯಾ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ 295 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಬಗ್ಗೆ ಚರ್ಚಿಸಿದ್ದೇವೆ. ಎರಡೂವರೆ ಗಂಟೆ ಕಾಲ ಮೈತ್ರಿಕೂಟದ ನಾಯಕರು ಚರ್ಚಿಸಿದ್ದೇವೆ. ಇಂಡಿಯಾ ಮೈತ್ರಿಕೂಟ 295 ಕ್ಷೇತ್ರ ಗೆಲ್ಲಲಿದೆ. ಇದು ಜನತೆ ಮಾಡಿರುವ ಸರ್ವೆ, ಜನರು ನಮಗೆ ಮಾಹಿತಿ ನೀಡಿದ್ದಾರೆ. ಆಡಳಿತದಲ್ಲಿರುವ ಸರ್ಕಾರಗಳು ಸರ್ವೆ ನಡೆಸುತ್ತಿರುತ್ತವೆ. ಆದರೆ ನಮ್ಮದು ಸತ್ಯದ ಸರ್ವೆ, ನಾವು 295 ಸ್ಥಾನ ಗೆಲ್ಲುತ್ತೇವೆ ಎಂದರು.
ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಬಹುತೇಕ ಮುಕ್ತಾಯದ ಹಂತದಲ್ಲಿದೆ. 7ನೇ ಹಾಗೂ ಕೊನೆಯ ಹಂತದ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ವಿವಿಧ ಏಜೆನ್ಸಿಗಳ ಮತಗಟ್ಟೆ ಸಮೀಕ್ಷೆ ಪ್ರಕಟಗೊಳ್ಳಲಿದೆ. ಎಕ್ಸಿಟ್ ಪೋಲ್ನ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿ ದೊರೆಯಲಿದೆ.
ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ಅಂತ್ಯವಾಗಿದೆ. ಸಭೆಯ ನಂತರ ಖರ್ಗೆ ನಿವಾಸದಿಂದ ನಾಯಕರು ಹೊರನಡೆದರು. ಕೆಲವೇ ಕ್ಷಣಗಳಲ್ಲಿ ಮೈತ್ರಿಕೂಟದ ನಾಯಕರು ಮಾತನಾಡಲಿದ್ದಾರೆ.
ಜೂನ್ 4ರಂದು ಲೋಕಸಭೆ ಚುನಾವಣಾ ಫಲಿತಾಂಶ ಹಿನ್ನೆಲೆ ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ಮಾಡಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮೀಟಿಂಗ್ ನಡೆದಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಅರವಿಂದ ಕೇಜ್ರಿವಾಲ್, ಭಗವಂತ್ ಮಾನ್, ರಾಘವ್ ಚಡ್ಡಾ, ಪ್ರಿಯಾಂಕಾ ಗಾಂಧಿ, ಟಿ.ಆರ್.ಬಾಲು, ಚಂಪೈ ಸೊರೇನ್ ಭಾಗಿ ಆಗಿದ್ದಾರೆ.
ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇಕಡಾ 49.68ರಷ್ಟು ಮತದಾನವಾಗಿದೆ. ಬಿಹಾರ 42.95%, ಚಂಡೀಗಢ 52.61%, ಒಡಿಶಾ 49.77%, ಹಿಮಾಚಲ ಪ್ರದೇಶ 58.41%, ಜಾರ್ಖಂಡ್ 60.14%, ಪಂಜಾಬ್ 46.38%, ಯುಪಿಯಲ್ಲಿ ಶೇ.46.83, ಪಶ್ಚಿಮ ಬಂಗಾಳದಲ್ಲಿ ಈವರೆಗೆ ಶೇ.58.46.
ಹಿಮಾಚಲ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.48.63ರಷ್ಟು ಮತದಾನವಾಗಿದೆ. ಬಿಹಾರ- ಶೇ.35.65, ಚಂಡೀಗಢ-ಶೇ.40.14, ಜಾರ್ಖಂಡ್-ಶೇ.46.80, ಒಡಿಶಾ-ಶೇ.37.64, ಪಂಜಾಬ್-ಶೇ.37.80, ಉತ್ತರ ಪ್ರದೇಶ-39.31 ಮತ್ತು ಪಶ್ಚಿಮ ಬಂಗಾಳ–ಶೇ.45.07.
40.09 % voter turnout recorded in Phase 7 till 1 pm, Himachal Pradesh leads with 48.63 % turnout
Read @ANI Story | https://t.co/rLgWFjUVAT#VoterTurnout #LokSabhaPolls #HimachalPradesh pic.twitter.com/s1VZuw0ocu
— ANI Digital (@ani_digital) June 1, 2024
ಮತ ಚಲಾಯಿಸಿದ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ
Lok Sabha Elections 2024: Ayushmann casts his vote in hometown Chandigarh, stresses importance of duty to country
Read @ANI Story | https://t.co/fbNlwYyJzG#AyushmannKhurrana #Vote #LokSabhaElections #Chandigarh pic.twitter.com/aeH8nC7GUH
— ANI Digital (@ani_digital) June 1, 2024
7ನೇ ಹಂತದ ಮತದಾನ ಮುಗಿದ ಬಳಿಕ ಇಂದು ಸಂಜೆ ನಡೆಯಲಿರುವ ಎಕ್ಸಿಟ್ ಪೋಲ್ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಘೋಷಿಸಿದೆ. ಜೂನ್ 4 ರಂದು ನಿಜವಾದ ಫಲಿತಾಂಶ ಹೊರಬೀಳುವ ಮುನ್ನ ಊಹಾಪೋಹಗಳಿಗೆ ಒಳಗಾಗದಿರಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ನಿನ್ನೆ ಹೇಳಿದ್ದಾರೆ. ನಾವು ಜೂನ್ 4ರಿಂದ ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೇ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಆದರೆ ಜಾದವ್‌ಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭಾಂಗಾರ್‌ನ ಸತುಲಿಯಾ ಪ್ರದೇಶದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಮತ್ತು ಸಿಪಿಐ(ಎಂ) ಬೆಂಬಲಿಗರ ನಡುವೆ ಘರ್ಷಣೆಗಳು ಉಂಟಾಗಿ ಹಿಂಸಾಚಾರ ನಡೆದಿದೆ. ಈ ಘರ್ಷಣೆ ವೇಳೆ ಹಲವರಿಗೆ ಗಾಯಗಳಾಗಿದ್ದು ಪರಿಸ್ಥಿತಿ ಉಲ್ಬಣಗೊಂಡಿದೆ. ಕಿಡಿಗೇಡಿಗಳು ಬಾಂಬ್ ದಾಳಿ ನಡೆಸಿ ಮತಗಟ್ಟೆಗೆ ನುಗ್ಗಿ, ಎಲೆಕ್ಟ್ರಾನಿಕ್ ಮತಯಂತ್ರವನ್ನು (ಇವಿಎಂ) ಕೊಳಕ್ಕೆ ಎಸೆದಿದ್ದಾರೆ.
West Bengal: EVM machine was seen floating in water during voting in South 24 Parganas. pic.twitter.com/HInj1D7gLe
— IANS (@ians_india) June 1, 2024
ಹಿಮಾಚಲ ಪ್ರದೇಶ ಮಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ತನ್ನ ತಾಯಿ ಜೊತೆ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
#WATCH | Congress candidate from Mandi Lok Sabha seat Vikramaditya Singh along with his mother and Himachal Pradesh Congress chief Pratibha Singh offer prayers at Shani Mandir in Rampur before casting their votes for the seventh phase of #LokSabhaElections2024 pic.twitter.com/XDVE7STIBb
— ANI (@ANI) June 1, 2024
ಮತ ಚಲಾವಣೆ ಬಳಿಕ ಮಾತನಾಡಿದ ಪ್ರತಾಪ್ ಸಿಂಗ್ ಬಾಜ್ವಾ
#WATCH | Partap Singh Bajwa says, "…70% of the population of Punjab lives in rural areas, there is anti-Modi and anti-BJP sentiment there. Congress, AAP and Akali Dal are the alternatives against Modi. Akali Dal is considered close to PM Modi…That is why, people in rural… https://t.co/U3fclrrKOk pic.twitter.com/WO15ZJCrgc
— ANI (@ANI) June 1, 2024
ಬೆಳಗ್ಗೆ 9 ಗಂಟೆವರೆಗಿನ ಮತದಾನದ ವಿವರ.
ಬಿಹಾರ – 10.58%, ಚಂಡಿಗಢ- 11.64%, ಹಿಮಾಚಲ ಪ್ರದೇಶ- 14.35%, ಜಾರ್ಖಾಂಡ್ – 12.15%, ಒರಿಸ್ಸಾ – 7.69%, ಪಂಜಾಬ್- 9.64%, ಉತ್ತರಪ್ರದೇಶ – 12.94%, ಪಶ್ಚಿಮ ಬಂಗಾಳ – 12.63%.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂದು ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ನಡೆಯಲಿದೆ. ಇಂಡಿಯಾ ಮೈತ್ರಿಕೂಟ ನಾಯಕರು ಮಧ್ಯಾಹ್ನ 3 ಗಂಟೆಗೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ. ಪ್ರತಿ ರಾಜ್ಯಗಳಲ್ಲಿ ಗೆಲ್ಲಬಹುದಾದ ಕ್ಷೇತ್ರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಸೋಲು, ಗೆಲುವಿನ ಲೆಕ್ಕಾಚಾರ ಹಾಕಲಿದ್ದಾರೆ.
#WATCH | On the counting of votes of #LokSabhaElections2024, BJP national president JP Nadda says "…People are going to bless PM Modi and NDA will cross the mark of 400 seats…The entire country is having a discussion about '400 paar' but the people who have done negative… pic.twitter.com/GYGxzpUPYC
— ANI (@ANI) June 1, 2024
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಮತ ಚಲಾಯಿಸಿದರು. ದಿವಂಗತ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಕಾಂಗ್ರೆಸ್ ಭದ್ರಕೋಟೆಯಾದ ಮಂಡಿ ಕ್ಷೇತ್ರದಲ್ಲಿ ಕಂಗನಾ ಸ್ಪರ್ಧಿಸುತ್ತಿದ್ದಾರೆ.
#WATCH | Himachal Pradesh: BJP candidate from Mandi Lok Sabha, Kangana Ranaut casts her vote at a polling station in Mandi, for the seventh phase of #LokSabhaElections2024
Congress has fielded Vikramaditya Singh from Mandi Lok Sabha seat. pic.twitter.com/6cggbpGYPV
— ANI (@ANI) June 1, 2024
ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದ್ದು ಪಾಟ್ನಾದಲ್ಲಿ ಲಾಲು ಯಾದವ್ ಕುಟುಂಬ ಮತ ಚಲಾಯಿಸಿದರು. ಪತ್ನಿ ರಾಬ್ರಿ ದೇವಿ, ಪುತ್ರಿ ರೋಹಿಣಿ ಆಚಾರ್ಯ ಮತದಾನ ಮಾಡಿದರು.
#WATCH | Bihar: RJD chief Lalu Prasad Yadav, Rabri Devi and their daughter & party candidate from Saran Lok Sabha seat Rohini Acharya leave from a polling booth in Patna after casting their vote. #LokSabhaElections2024 pic.twitter.com/LTmGnXM4BH
— ANI (@ANI) June 1, 2024
ಜೂನ್ 1, ಶನಿವಾರ ಸಂಜೆ 7 ಗಂಟೆ ಬಳಿಕ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಳ್ಳಲಿವೆ. ಮತದಾನ ಪೂರ್ಣವಾಗಿ ಮುಗಿಯುವವರೆಗೂ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂಬ ಚುನಾವಣಾ ಆಯೋಗದ ಆದೇಶ ಇದೆ. ಇಂದು ಕೊನೆಯ ಹಂತದ ಮತದಾನ ಇದ್ದು ಮತದಾನದ ನಂತರ ಮತಗಟ್ಟೆ ಸಮೀಕ್ಷೆ ಪ್ರಕಟವಾಗಲಿದೆ.
ಪಾಟಲಿಪುತ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್ ಕೃಪಾಲ್ ಯಾದವ್ ಅವರು ಪಾಟ್ನಾದ ಗೋಶಾಲೆಗೆ ಭೇಟಿ ಹಸುಗಳಿಗೆ ಧಾನ್ಯ, ಬಾಳೆಹಣ್ಣು ತಿನ್ನಿಸಿದ್ದಾರೆ. ಬಿಹಾರದ ಪಾಟಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ರಾಮ್ ಕೃಪಾಲ್ ಯಾದವ್, ಮಿಸಾ ಭಾರ್ತಿ ವಿರುದ್ಧ ಸ್ಪರ್ಧೆ ನಡೆಯುತ್ತಿದೆ.
#WATCH | Bihar: BJP candidate from Pataliputra Lok Sabha seat Ram Kripal Yadav visits a gaushala in Patna to feed cows.
The Pataliputra seat sees a contest amid BJP's Ram Kripal Yadav and RJD's Misa Bharti. #LokSabhaElections2024 pic.twitter.com/BKxmNvXCeL
— ANI (@ANI) June 1, 2024
ಪಶ್ಚಿಮ ಬಂಗಾಳದ ಬೆಲ್ಗಾಚಿಯಾದ ಮತಗಟ್ಟೆಯಲ್ಲಿ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಮತ ಚಲಾಯಿಸಿದರು.
#WATCH | Kolkata, West Bengal: After casting his vote at a polling booth in Belgachia, BJP leader Mithun Chakraborty says, "…I am a BJP cadre, I have done my duty…"#LokSabhaElections2024 pic.twitter.com/jn7DPXT8i4
— ANI (@ANI) June 1, 2024
ಗೋರಖ್‌ಪುರದ ಗೋರಖ್‌ನಾಥ್‌ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ ಚಲಾಯಿಸಿದರು.
UP Chief Minister Yogi Adityanath casts vote in Gorakhpur
Read @ANI Story | https://t.co/L7OTieA5v6#UP #YogiAdityanath #Gorakhpur #loksabhaelections2024 pic.twitter.com/8LiqccIVOe
— ANI Digital (@ani_digital) June 1, 2024
ಬಿಹಾರದ ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರಿ ಮಿಸಾ ಭಾರ್ತಿ ಆರ್‌ಜೆಡಿ ಪಕ್ಷದಿಂದ ಕಣದಲ್ಲಿದ್ದಾರೆ. 2014 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ರಾಮ್ ಕೃಪಾಲ್ ಯಾದವ್, ಮಿಸಾ ಭಾರ್ತಿ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ.
ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 6 ಗಂಟೆಯ ವರಗೆ ನಡೆಯಲಿದ್ದು 6-30ರ ಬಳಿಕ ಚುನಾವಣಾ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ. ಯಾರು ದೆಹಲಿ ಗದ್ದುಗೆ ಹಿಡಿಯುತ್ತಾರೆ ಎಂಬ ಹಿಂಟ್ ಎಕ್ಸಿಟ್ ಪೋಲ್ ನಲ್ಲಿ ಗೊತ್ತಾಗಲಿದೆ.
ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವ್ರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಕಣಕ್ಕಿಳಿಸಿದೆ. ಡೈಮಂಡ್ ಹಾರ್ಬರ್ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅಭಿಷೇಕ್ ಬ್ಯಾನರ್ಜಿ, ಸಿಪಿಐ(ಎಂ)ನ ಪ್ರತೀಕುರ್ ರಹಮಾನ್ ಮತ್ತು ಬಿಜೆಪಿಯ ಅಭಿಜಿತ್ ದಾಸ್ ಕಣದಲ್ಲಿದ್ದಾರೆ.
ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಿಂದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. 2008 ರ ಉಪಚುನಾವಣೆಯಲ್ಲಿ ಅನುರಾಗ್ ಮೊದಲ ಬಾರಿಗೆ ಗೆದಿದ್ದು, ನಿರಂತರವಾಗಿ ಕ್ಷೇತ್ರದಿಂದ ಅನುರಾಗ್ ಠಾಕೂರ್ ಸ್ಪರ್ಧೆ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದಲ್ಲಿ ನಟ ರವಿ ಕಿಶನ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಸ್ಪರ್ಧಿಸಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ, ರವಿ ಕಿಶನ್ ಮೊದಲ ಬಾರಿಗೆ ಸ್ಪರ್ಧಿಸಿ ಜಯಗಳಿಸಿದ್ದರು.
ಪಂಜಾಬ್‌ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಚನ್ನಿ, ಜಲಂಧರ್ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಪವನ್ ಕುಮಾರ್ ಟಿನು ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ನಟಿ ಕಂಗನಾ ರಣಾವತ್ ಅವರನ್ನು ಬಿಜೆಪಿ ಮೊದಲ ಬಾರಿಗೆ ಕಣಕ್ಕಿಳಿಸಿದೆ. ದಿವಂಗತ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಕಾಂಗ್ರೆಸ್ ಭದ್ರಕೋಟೆಯಾದ ಮಂಡಿ ಕ್ಷೇತ್ರದಲ್ಲಿ ಕಂಗನಾ ಸ್ಪರ್ಧಿಸುತ್ತಿದ್ದಾರೆ.
85 ವರ್ಷ ಮೇಲ್ಪಟ್ಟ ಮತದಾರರಿಗೆ ಹಾಗೂ ದಿವ್ಯಾಂಗರಿಗೆ ಮನೆಯಲ್ಲೇ ಕುಳಿತು ಮತದಾನ ಮಾಡುವ ಆಯ್ಕೆಯನ್ನು ಒದಗಿಸಲಾಗಿದೆ. ಮತಗಟ್ಟೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾನ ಕೇಂದ್ರಗಳಲ್ಲಿ ನೀರು, ಶೆಡ್‌ಗಳು, ಶೌಚಾಲಯಗಳು, ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ವಿದ್ಯುತ್‌ನಂತಹ ಸೌಲಭ್ಯ ಮಾಡಲಾಗಿದೆ.
ಲೋಕಸಭಾ ಚುನಾವಣಾ ಸಮರ ಅಂತಿಮ ಘಟಕ್ಕೆ ಬಂದಿದೆ. ಲೋಕಸಭಾ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನ ಇಂದು ಆರಂಭವಾಗಿದೆ. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು, 5.24 ಕೋಟಿ ಪುರುಷ, 4.82 ಮಹಿಳೆಯರು ಸೇರಿ 10.06 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ಸತತ ಎರಡು ಬಾರಿ ದಿಗ್ವಿಜಯ ಸಾಧಿಸಿರುವ ಪ್ರಧಾನಿ ಮೋದಿ ಅವರು ಕಣದಲ್ಲಿರೋ ವಾರಾಣಸಿ ಕ್ಷೇತ್ರಕ್ಕೂ ಇಂದು ವೋಟಿಂಗ್ ನಡೀತಿದೆ. ಈ ಬಾರಿಯೂ ಗೆಲುವು ಸಾಧಿಸುವ ನೀರೀಕ್ಷೆಯಲ್ಲಿ ಮೋದಿ ಇದ್ದಾರೆ.
ಪಂಜಾಬ್‌ನ ಎಲ್ಲಾ 13 ಲೋಕಸಭಾ ಕ್ಷೇತ್ರಗಳು, ಉತ್ತರಪ್ರದೇಶದ 13 ಕ್ಷೇತ್ರಗಳು, ಪಶ್ಚಿಮ ಬಂಗಾಳ 09, ಬಿಹಾರ 08, ಒಡಿಶಾ06, ಹಿಮಾಚಲ ಪ್ರದೇಶ04, ಜಾರ್ಖಂಡ್03, ಕೇಂದ್ರಾಡಳಿ ಪ್ರದೇಶದ ಚಂಡೀಗಢ 01 ಕ್ಷೇತ್ರಕ್ಕೆ ಇಂದು ಮತದಾನ ನಡೀತಿದೆ. ಇದಲ್ಲದೆ ಒಡಿಶಾ ವಿಧಾನಸಭೆ ಚುನಾವಣೆಯ ಬಾಕಿಯಿರುವ 42 ಕ್ಷೇತ್ರಗಳು ಮತ್ತು ಹಿಮಾಚಲದ ಪ್ರದೇಶ 06 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
Published On - 5:00 pm, Sat, 1 June 24