ಮಂಡಿ: 2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಮಂಡಿಯಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) ಗೆಲುವು ಸಾಧಿಸಿದ್ದಾರೆ. ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಗೆ ಹಾಕಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸ್ಥಾನವನ್ನು ಗೆದ್ದಿದ್ದಾರೆ. ಕಂಗನಾ ರಣಾವತ್ 516382 ಮತಗಳನ್ನು ಪಡೆಯುವ ಮೂಲಕ 71663 ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಐಎನ್‌ಸಿಯ ವಿಕ್ರಮಾದಿತ್ಯ ಸಿಂಗ್ ಅವರು 444719 ಮತಗಳೊಂದಿಗೆ ಹಿಂದುಳಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್, ಮಂಡಿಯು ಹೆಣ್ಣುಮಕ್ಕಳ ಅವಮಾನಗಳನ್ನು ಸಹಿಸುವುದಿಲ್ಲ. ಇದು (ಹಿಮಾಚಲ ಪ್ರದೇಶ) ನನ್ನ ‘ಜನ್ಮಭೂಮಿ’. ನಾನು ಪ್ರಧಾನಿ ನರೇಂದ್ರ ಮೋದಿಯ ಹೆಸರಿನಲ್ಲೇ ಗೆಲುವು ಕಂಡಿದ್ದೇನೆ. ನಾನು ಇಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಹಾಗಾಗಿ, ನಾನು ಗೆದ್ದ ಬಳಿಕ ಮುಂಬೈಗೆ ಹೋಗುತ್ತಿಲ್ಲ. ನಾನು ಎಲ್ಲಿಯೂ ಹೋಗುವುದಿಲ್ಲ. ನನ್ನ ಪ್ರತಿಸ್ಪರ್ಧಿ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುವ ಮೂಲಕ ಇಲ್ಲಿಂದ ಹೊರಡಬಹುದು ಎಂದು ಹೇಳುವ ಮೂಲಕ ಬಾಲಿವುಡ್ಗೆ ಗುಡ್ಬೈ ಹೇಳುವ ಸೂಚನೆ ನೀಡಿದ್ದಾರೆ.
Queen Kangana Ranaut won from Mandi, Himachal Pradesh.
He defeated one of the biggest leader of Congress Vikramaditya Singh.
Queen for a reason 🙏🚩 pic.twitter.com/35s3oNHBK2
— Sunanda Roy 👑 (@SaffronSunanda) June 4, 2024
ಇದನ್ನೂ ಓದಿ: LS Exit Poll Results 2024 Highlights: ಲೋಕಸಭೆ ಚುನಾವಣೆ ಎಕ್ಸಿಟ್ ಪೋಲ್ ಹೈಲೈಟ್ಸ್
ಕಂಗನಾ ಬಿಜೆಪಿ ಪಕ್ಷಕ್ಕೆ ಸೇರಿದಾಗಿನಿಂದ ಅವರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸನಾತನ ಮೌಲ್ಯಗಳನ್ನು ರಕ್ಷಿಸಲು ಮೋದಿ ಸರ್ಕಾರದ ಬದ್ಧತೆಯ ಬಗ್ಗೆ ಅವರು ಮತದಾರರಿಗೆ ಭರವಸೆ ನೀಡಿದ್ದರು. ನರೇಂದ್ರ ಮೋದಿ ಅಧಿಕಾರದಲ್ಲಿರುವವರೆಗೂ ಧರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಅವರು ಹೇಳಿದ್ದರು.
#WATCH | Mandi, HP | BJP candidate from Mandi and actor Kangana Ranaut says, “We fought this election in the name of Narendra Modi. It is the result of his credibility and his guarantee and the faith of people in him that we are going to form the government for the third… pic.twitter.com/rPFWjkSw3c
— ANI (@ANI) June 4, 2024
37 ವರ್ಷದ ಬಾಲಿವುಡ್ ತಾರೆಯಾಗಿರುವ ಕಂಗನಾ ರಣಾವತ್ ಅವರು ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರು ಈಗ “ತನ್ನ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಹೊರಡಬೇಕಾಗಬಹುದು” ಎಂದು ಗೇಲಿ ಮಾಡಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಈ ಹಿಂದೆ ಚುನಾವಣೆಯ ವೇಳೆ ಹೇಳಿಕೆ ನೀಡುವಾಗ ಕಂಗನಾ ರಣಾವತ್ ಮಂಡಿಯನ್ನು ಬಿಟ್ಟು ಚುನಾವಣೆ ಮುಗಿದ ನಂತರ ಪ್ಯಾಕ್ ಅಪ್ ಮಾಡಿ ಮುಂಬೈಗೆ ಹಿಂತಿರುಗುತ್ತಾರೆ ಎಂದು ಲೇವಡಿ ಮಾಡಿದ್ದರು. ಅದಕ್ಕೆ ಇದೀಗ ಕಂಗನಾ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಹಾಸನ ಲೋಕಸಭಾ ಚುನಾವಣೆ 2024 ಫಲಿತಾಂಶ: ಪ್ರಜ್ವಲ್ ರೇವಣ್ಣಗೆ ಸೋಲು, ಕಾಂಗ್ರೆಸ್ಗೆ ಗೆಲುವು
ಹೆಣ್ಣಿನ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದರೆ ಅದರ ಪರಿಣಾಮವನ್ನು ಅವರೇ ಅನುಭವಿಸಬೇಕಾಗುತ್ತದೆ. ಅದು ಇಂದು ನಾವು ಮುನ್ನಡೆ ಸಾಧಿಸಿದ ರೀತಿಯಿಂದ ಸ್ಪಷ್ಟವಾಗುತ್ತಿದೆ. ಮಂಡಿ ಹೆಣ್ಣುಮಕ್ಕಳ ಅವಮಾನಗಳನ್ನು ಸಹಿಸುವುದಿಲ್ಲ ಎಂದು ಕಂಗನಾ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Tue, 4 June 24