ಕಾಂಗ್ರೆಸ್, ಅಭಿವೃದ್ಧಿಯ ಬಾಗಿಲುಗಳನ್ನು ಮುಚ್ಚಿದೆ: ಮಂಡಿಯಲ್ಲಿ ಪ್ರಧಾನಿ ಮೋದಿ
"ನನಗೆ ಒಂದು ಉಪಕಾರ ಮಾಡಿ, ಎಲ್ಲಾ ಗ್ರಾಮಗಳ ಎಲ್ಲಾ ದೇವಸ್ಥಾನಗಳಿಗೆ ಹೋಗಿ ಮತ್ತು ಅಭಿವೃದ್ಧಿ ಹೊಂದಿದ ದೇಶಕ್ಕಾಗಿ ಎಲ್ಲಾ ದೇವತೆಗಳ ಆಶೀರ್ವಾದವನ್ನು ಪಡೆಯಿರಿ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, "ಕಂಗನಾ ನಿಮ್ಮ ಧ್ವನಿಯಾಗುತ್ತಾರೆ, ಮಂಡಿ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ಮಂಡಿ ಮೇ 24: ಹಿಮಾಚಲ ಪ್ರದೇಶದ (Himachal Pradesh) ಕಾಂಗ್ರೆಸ್ (Congress) ಸರ್ಕಾರವು ಕಳೆದ ವರ್ಷದ ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ನೆರವನ್ನು ಆಯ್ದ ಮಂದಿಗಷ್ಟೇ ವಿತರಿಸಿದೆ ಎಂದು ಶುಕ್ರವಾರ ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ(Narendra Modi) ನಾವು ಅಧಿಕಾರಕ್ಕೆ ಬಂದ ನಂತರ ಹಣ ಎಲ್ಲಿಗೆ ಹೋಯಿತು ಎಂಬುದನ್ನು ಕಂಡುಹಿಡಿಯುವುದಾಗಿ ಭರವಸೆ ನೀಡಿದರು. ತನ್ನ ಸ್ವಂತ ಬೊಕ್ಕಸದಿಂದ ಪ್ರವಾಹ ಸಂತ್ರಸ್ತರಿಗೆ ವಿಶೇಷ ನೆರವಿನ ಭಾಗವಾಗಿ ₹ 4,500 ಕೋಟಿ ನೀಡಿದ್ದೇವೆ, ಕೇಂದ್ರವು ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿಲ್ಲ. ವಿಪತ್ತನ್ನು “ರಾಷ್ಟ್ರೀಯ ವಿಪತ್ತು” ಎಂದು ಘೋಷಿಸಿಲ್ಲ ಎಂದು ಇಲ್ಲಿನ ಕಾಂಗ್ರೆಸ್ ಪದೇ ಪದೇ ಆರೋಪಿಸಿದೆ. 2,300 ರಸ್ತೆಗಳು ಮತ್ತು 11,000 ಮನೆಗಳ ನಿರ್ಮಾಣಕ್ಕೆ ಹಣವನ್ನು ಹೊರತುಪಡಿಸಿ ಸಂತ್ರಸ್ತರಿಗೆ ಕೇಂದ್ರವು ₹ 1,762 ಕೋಟಿ ಬಿಡುಗಡೆ ಮಾಡಿದೆ ಎಂದು ಬಿಜೆಪಿ ಈ ಹಿಂದೆ ಹೇಳಿದ್ದು, ಕಾಂಗ್ರೆಸ್ ಆಯ್ದ ಜನರಿಗೆ ಹಣ ನೀಡುವುದರಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ಪ್ರವಾಹ ಪೀಡಿತ ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರನ್ನು ಬೆಂಬಲಿಸಿ ಬಿಜೆಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯು ಜೂನ್ 1989 ರಲ್ಲಿ ಪಾಲಂಪುರ್ ಸಭೆಯಲ್ಲಿ ದೇವಾಲಯವನ್ನು ನಿರ್ಮಿಸುವ ನಿರ್ಣಯವನ್ನು ಅಂಗೀಕರಿಸಿದುದನ್ನು ಉಲ್ಲೇಖಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹಿಮಾಚಲ ಪ್ರದೇಶವನ್ನು ಸಂಕಲ್ಪ ಭೂಮಿ ಎಂದು ಕರೆದರು.
ಕಂಗನಾ ಯುವಕರು ಮತ್ತು “ನಮ್ಮ ಹೆಣ್ಣುಮಕ್ಕಳ” ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ. ನಟಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಕಾಂಗ್ರೆಸ್‌ಗೆ ಮತದಾರರು ತಕ್ಕ ಉತ್ತರವನ್ನು ನೀಡಬೇಕೆಂದು ಮೋದಿ ಒತ್ತಾಯಿಸಿದ್ದಾರೆ.
“ನನಗೆ ಒಂದು ಉಪಕಾರ ಮಾಡಿ, ಎಲ್ಲಾ ಗ್ರಾಮಗಳ ಎಲ್ಲಾ ದೇವಸ್ಥಾನಗಳಿಗೆ ಹೋಗಿ ಮತ್ತು ಅಭಿವೃದ್ಧಿ ಹೊಂದಿದ ದೇಶಕ್ಕಾಗಿ ಎಲ್ಲಾ ದೇವತೆಗಳ ಆಶೀರ್ವಾದವನ್ನು ಪಡೆಯಿರಿ” ಎಂದು ಮೋದಿ ಹೇಳಿದ್ದು, “ಕಂಗನಾ ನಿಮ್ಮ ಧ್ವನಿಯಾಗುತ್ತಾರೆ, ಮಂಡಿ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ಇದಕ್ಕೂ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ಕಂಗನಾ, “ಬಾಲಿವುಡ್ ನನ್ನನ್ನು ಹೊರಗಿನವರು ಎಂದು ಪರಿಗಣಿಸಿದಾಗ ಮತ್ತು ನನ್ನ ಇಂಗ್ಲಿಷ್ ಅನ್ನು ಅಪಹಾಸ್ಯ ಮಾಡಿದಾಗ, ಬಿಜೆಪಿ ಮತ್ತು ಅದರ ದೊಡ್ಡ ನಾಯಕ ಪಿಎಂ ಮೋದಿ, ಮಂಡಿಯ ಜನರ ಸೇವೆ ಮತ್ತು ಅವರ ಕಲ್ಯಾಣಕ್ಕಾಗಿ ಕೆಲಸ ಮಾಡಲು ನನ್ನನ್ನು ಆಯ್ಕೆ ಮಾಡಿದರು. ಈ ಕೆಲಸಕ್ಕೆ ಅವರು ‘ಪಹಾಡಿ ಬೇಟಿಯನ್ನು (ಬೆಟ್ಟಗಳ ಮಗಳು)’ ಆಯ್ಕೆ ಮಾಡಿಕೊಂಡರು. ಇದು ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತದೆ. ಹಿಮಾಚಲ ಪ್ರದೇಶದ ಎಲ್ಲಾ ಮಹಿಳೆಯರು ಮತ್ತು ನಾಗರಿಕರ ಪರವಾಗಿ ನಾನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ.
ಹಿಮಾಚಲ ಪ್ರದೇಶಕ್ಕೆ ಮೋದಿ ಅವರ ಆದ್ಯತೆಗಳನ್ನು ಎತ್ತಿ ಹಿಡಿದ ಕಂಗನಾ, “ಇದೀಗ, ಪ್ರಧಾನಿ ಮೋದಿ ಹಿಮಾಚಲದ ಜನರಿಗೆ ಮೂರು ಮುಖ್ಯ ಅಜೆಂಡಾಗಳನ್ನು ಹೊಂದಿದ್ದಾರೆ. ಅದರಲ್ಲಿ ರಸ್ತೆಗಳು, ಶಿಕ್ಷಣ ಮತ್ತು ಆರೋಗ್ಯ ಸೇರಿವೆ. ನಮ್ಮ ಮಾಜಿ ಸಿಎಂ ಜೈರಾಮ್ ಠಾಕೂರ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಜಿ ಮತ್ತು ವಿವಿಧ ನಾಯಕರು ಕೆಲಸ ಮಾಡಿದ್ದಾರೆ. ನಾನು ಆಯ್ಕೆಯಾದರೆ, ನಾನು ಈ ಮೂರು ಅಜೆಂಡಾಗಳು ಮತ್ತು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಅಧಿಕಾರಾವಧಿಯಲ್ಲಿ ನನ್ನ ಸಾಮರ್ಥ್ಯದ ಆಧಾರದ ಮೇಲೆ ನಾನು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ನಾನು ನಿಮಗೆ ಭರವಸೆ ನೀಡುತ್ತೇನೆ, ನಾನು ಈ ಚುನಾವಣೆಯಲ್ಲಿ ಗೆದ್ದರೆ, ನಾನು ಮೊದಲ ವರ್ಷವೇ ಮಂಡಿಯ ಜನರಿಗೆ ವರ್ಷದ ಸಂಸದೀಯ ಪ್ರಶಸ್ತಿಯನ್ನು ತರುತ್ತೇನೆ ಎಂದಿದ್ದಾರೆ
ಈ ಹಿಂದೆ ಹಿಮಾಚಲ ಪ್ರದೇಶದ ಯುವಕರಿಗೆ 1 ಲಕ್ಷ ಉದ್ಯೋಗ ನೀಡುವ ಭರವಸೆಯನ್ನು ಕಾಂಗ್ರೆಸ್ ಈಡೇರಿಸಿಲ್ಲ ಎಂದು ಮೋದಿ ಆರೋಪಿಸಿದ್ದು, ಪಕ್ಷದ “ತಲಾಬಾಜ್ ಸರ್ಕಾರ್” ರಾಜ್ಯ ಸಿಬ್ಬಂದಿ ಆಯ್ಕೆ ಆಯೋಗಕ್ಕೆ ಬೀಗ ಹಾಕಿದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರತಿ ಬೂತ್‌ನ ಒಟ್ಟು ಮತಗಳ ಡೇಟಾ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಸುಪ್ರೀಂ ಕೋರ್ಟ್ ನಕಾರ
ಶಿಮ್ಲಾ ಬಿಜೆಪಿ ಅಭ್ಯರ್ಥಿ ಸುರೇಶ್ ಕಶ್ಯಪ್‌ಗೆ ಬೆಂಬಲ ಸೂಚಿಸಲು ಸಿರ್ಮೌರ್ ಜಿಲ್ಲೆಯ ನಹಾನ್‌ನಲ್ಲಿ ನಡೆದ ವಿಜಯ್ ಸಂಕಲ್ಪ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಲ್ಲಿ ಕೋಮುವಾದ, ಜಾತಿವಾದ ಮತ್ತು ಕುಟುಂಬ ರಾಜಕೀಯ ಸಾಮಾನ್ಯವಾಗಿದೆ ಎಂದು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಜೂನ್ 1 ರಂದು ಚುನಾವಣೆ ನಡೆಯಲಿದೆ. ನಾಲ್ಕು ಸ್ಥಾನಗಳಿಂದ ಲೋಕಸಭಾ ಸದಸ್ಯತ್ವಕ್ಕಾಗಿ ಸ್ಪರ್ಧಿಸುವ ಅಭ್ಯರ್ಥಿಗಳಲ್ಲದೆ, ಭಿನ್ನಮತೀಯ ಕಾಂಗ್ರೆಸ್ ಶಾಸಕರ ರಾಜೀನಾಮೆ ಮತ್ತು ಬದಲಾವಣೆಯ ನಂತರ ಖಾಲಿಯಾದ ಆರು ವಿಧಾನಸಭಾ ಸ್ಥಾನಗಳಿಗೆ ಮತದಾರರು ಸದಸ್ಯರನ್ನು ಆಯ್ಕೆ ಮಾಡುತ್ತಾರೆ. 2019ರ ಚುನಾವಣೆಯಲ್ಲಿ ರಾಜ್ಯದ ನಾಲ್ಕೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ