ಭಾರತದಲ್ಲಿ ಲೋಕಸಭಾ ಚುನಾವಣೆ(Lok Sabha Election)ಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಪ್ರಜಾಪ್ರಭುತ್ವ ಹಬ್ಬವನ್ನು ಗೂಗಲ್(Google) ಡೂಡಲ್ ಮೂಲಕ ವಿಶೇಷವಾಗಿ ಆಚರಿಸಿದೆ. ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಗೂಗಲ್ನಲ್ಲಿ ‘ಓ’ ಬದಲಿಗೆ ಶಾಯಿ ಹಚ್ಚಿರುವ ಕೈ ಬೆರಳನ್ನು ಇರಿಸುವ ಮೂಲಕ ಅತಿ ದೊಡ್ಡ ಪ್ರಜಾಪ್ರಭುತ್ವದ ಹಬ್ಬವನ್ನು ವಿಶ್ವದ ಜನತೆಗೆ ಪರಿಚಯಿಸುವ ಕೆಲಸ ಮಾಡಿದೆ.
ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ, ಸುಮಾರು 8.4 ಕೋಟಿ ಪುರುಷರು ಮತ್ತು 8.23 ಕೋಟಿ ಮಹಿಳೆಯರು ಸೇರಿದಂತೆ 16.63 ಕೋಟಿಗೂ ಹೆಚ್ಚು ಮತದಾರರು ಇಂದು 1.87 ಲಕ್ಷ ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ.
ಗೂಗಲ್ನಲ್ಲಿ ಆ ಚಿತ್ರವನ್ನು ಕ್ಲಿಕ್ ಮಾಡಿದರೆ ಗೂಗಲ್ನಲ್ಲಿ ಇತ್ತೀಚೆಗೆ ಪಬ್ಲಿಷ್ ಆಗಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಯನ್ನು ಕಾಣಬಹುದಾಗಿದೆ.
ಈ ವರ್ಷ, ದೇಶದ 18 ನೇ ಲೋಕಸಭೆಯ 543 ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಏಪ್ರಿಲ್ 19 ರಿಂದ ಪ್ರಾರಂಭವಾಗಿದ್ದು, ಜೂನ್ 1 ರವರೆಗೆ 7 ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಏಪ್ರಿಲ್ 26 ರಂದು ಎರಡನೇ ಹಂತ, ಮೇ 7 ರಂದು ಮೂರನೇ ಹಂತ, ಮೇ 13 ರಂದು ನಾಲ್ಕನೇ ಹಂತ, ಮೇ 20 ರಂದು ಐದನೇ ಹಂತ, ಮೇ 25 ರಂದು ಆರನೇ ಹಂತ ಮತ್ತು ಜೂನ್ 1 ರಂದು ಏಳನೇ ಹಂತಕ್ಕೆ ಮತದಾನ ನಡೆಯಲಿದೆ.
ಮತ್ತಷ್ಟು ಓದಿ: ಲೋಕಸಭಾ ಚುನಾವಣೆ: ಮೊದಲ ಹಂತದ ಮತದಾನ ಇಂದು; 102 ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ನಿರ್ಧಾರ
ಜೂನ್ 4 ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಲೋಕಸಭೆಯಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ, ಅದರ ಅತಿದೊಡ್ಡ ಸದಸ್ಯ ಬಿಜೆಪಿಯಾಗಿದೆ.
ಈ ಬಾರಿ 400 ದಾಟುತ್ತೇವೆ ಎಂಬ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಎತ್ತಿದ್ದಾರೆ. ಅದೇ ಸಮಯದಲ್ಲಿ, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಇಂಡಿಯಾ ಬಣವನ್ನು ರಚಿಸಿದ್ದು, ಅದರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ