ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ಉತ್ತರಾಖಂಡದ (Uttarakhand) ಎಲ್ಲಾ 5 ಲೋಕಸಭಾ ಸ್ಥಾನಗಳನ್ನು (Lok Sabha Elections 2024) ಗೆದ್ದುಕೊಂಡಿದೆ. ಅಜಯ್ ಭಟ್ ಅವರು ನೈನಿತಾಲ್-ಉದಮ್ಸಿಂಗ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಜೋಶಿ ಅವರನ್ನು ಸೋಲಿಸುವ ಮೂಲಕ 3,34,548 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಅಜಯ್ ಭಟ್ 7,72,671 ಮತಗಳನ್ನು ಪಡೆದರೆ, ಪ್ರಕಾಶ್ ಜೋಶಿ 4,38,123 ಮತಗಳನ್ನು ಪಡೆದಿದ್ದಾರೆ.
ಅಲ್ಮೋರಾದಲ್ಲಿ ಬಿಜೆಪಿಯ ಅಜಯ್ ತಮ್ತಾ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ತಮ್ತಾ ಅವರನ್ನು 2,25,893 ಮತಗಳಿಂದ ಸೋಲಿಸಿದ್ದಾರೆ. ಅಜಯ್ 4,17,535 ಮತಗಳನ್ನು ಪಡೆದರೆ, ಪ್ರದೀಪ್ 1,91,642 ಮತಗಳನ್ನು ಪಡೆದಿದ್ದಾರೆ. ತೆಹ್ರಿ ಗರ್ವಾಲ್‌ನಲ್ಲಿ ಬಿಜೆಪಿಯ ಮಾಲಾ ರಾಜ್ಯಲಕ್ಷ್ಮಿ ಶಾ ಅವರು ಕಾಂಗ್ರೆಸ್ ಅಭ್ಯರ್ಥಿ ಜೋತ್ ಸಿಂಗ್ ಗುನ್ಸೋಲಾ ಅವರನ್ನು ಸೋಲಿಸಿ 2,68,347 ಮತಗಳ ಅಂತರದಿಂದ ಗೆದ್ದಿದ್ದಾರೆ. ಮಾಲಾ ರಾಜ್ಯಲಕ್ಷ್ಮಿ ಶಾ 4,55,949 ಮತಗಳನ್ನು ಪಡೆದರೆ, ಗುನ್ಸೋಲಾ 1,87,602 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಕಲ್ಯಾಣ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಕಾಂಗ್ರೆಸ್
ಹರಿದ್ವಾರದಲ್ಲಿ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಅವರು 1,61,092 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವೀರೇಂದ್ರ ರಾವತ್ ಅವರನ್ನು ಸೋಲಿಸಿದ್ದಾರೆ. ತ್ರಿವೇಂದ್ರ 6,48,498 ಮತಗಳನ್ನು ಪಡೆದರೆ, ವೀರೇಂದ್ರ 4,87,406 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
2014 ಮತ್ತು 2019ರ ಸಂಸತ್ ಚುನಾವಣೆಗಳಲ್ಲಿ ಬಿಜೆಪಿ ಎಲ್ಲಾ 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹರಿದ್ವಾರದಿಂದ ಮುನ್ನಡೆ ಸಾಧಿಸಿದ್ದರೆ, ಗರ್ವಾಲ್ ಕ್ಷೇತ್ರದಲ್ಲಿ ಅನಿಲ್ ಬಲುನಿ ಮುಂದಿದ್ದಾರೆ.
ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸಿದ್ದ ಸಿನಿಮಾ ಸೆಲೆಬ್ರಿಟಿಗಳಲ್ಲಿ ಗೆದ್ದವರೆಷ್ಟು? ಸೋತವರೆಷ್ಟು?
ಉತ್ತರಾಖಂಡ ರಾಜ್ಯದಲ್ಲಿ ಐದೂ ಸ್ಥಾನ ಗೆದ್ದು ಹ್ಯಾಟ್ರಿಕ್ ಸಾಧಿಸುತ್ತೇವೆ. ಅಭಿವೃದ್ಧಿ ಕಾರ್ಯಗಳು ಮತ್ತು ಮೋದಿಯವರ ಜನಪ್ರಿಯತೆಯ ಆಧಾರದ ಮೇಲೆ ಕೇಂದ್ರದಲ್ಲಿ ಎನ್‌ಡಿಎ ತನ್ನ ಸರ್ಕಾರವನ್ನು ರಚಿಸಲಿದೆ. ಅಂತಿಮ ಫಲಿತಾಂಶಕ್ಕಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ